ಬಿಗ್ ಬಾಸ್ ಕನ್ನಡ 6 ; ಸದ್ದಿಲ್ಲದೇ ಸಂಕೇತ್ ಜೊತೆ ಸಪ್ತಪದಿ ತುಳಿದ ಸೋನು ಪಾಟೀಲ್
ಬಿಗ್ ಬಾಸ್ ಮೂಲಕ ಬೆಳಕಿಗೆ ಬಂದವರು ಸೋನು ಪಾಟೀಲ್. ಬಿಗ್ ಬಾಸ್ ಕನ್ನಡ ಸೀಸನ್ ಆರರಲ್ಲಿ ''ನಿಮ್ಮ ಉತ್ತರ ಕರ್ನಾಟಕದ ಮನೆಮಗಳು ಸೋನು ಪಾಟೀಲ್'' ಎಂದು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತನಾಡುತ್ತಾ ಜನಮನ ಗೆದ್ದ ಸೋನು ಪಾಟೀಲ್, ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ. ಸಪ್ತಪದಿ ತುಳಿದಿದ್ದಾರೆ.
ಸಂಕೇತ್, ಸೋನು ಪಾಟೀಲ್ ಅವರನ್ನ ಮದುವೆಯಾಗಿರುವ ಹುಡುಗ. ಸಂಕೇತ್ ಎಲ್ಲಿಯವರು, ಅವರ ಹಿನ್ನೆಲೆ ಏನು ಎಂಬ ವಿಚಾರವನ್ನ ಸೋನು ಪಾಟೀಲ್ ಬಹಿರಂಗಗೊಳಿಸಿಲ್ಲ. ಇನ್ನೂ ಸಂಕೇತ್ ಹಾಗೂ ಸೋನು ಅವರ ಮದುವೆ ಹಿರಿಯರು ನೋಡಿ ನಿಶ್ಚಯಿಸಿದ್ದಾ ಅಥವಾ ಇಬ್ಬರದ್ದು ಲವ್ ಮ್ಯಾರೇಜಾ ಅನ್ನುವ ಗುಟ್ಟನ್ನೂ ಕೂಡ ಸೋನು ಪಾಟೀಲ್ ರಟ್ಟು ಮಾಡಿಲ್ಲ.

ಸೋನು ಪಾಟೀಲ್ ಹಿನ್ನೆಲೆ
ಬಿಗ್ ಬಾಸ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಮುನ್ನ ಸೋನು ಪಾಟೀಲ್ ಮೊಗ್ಗಿನ ಮನಸು, ಗಾಂಧಾರಿ, ಅಮೃತ ವರ್ಷಿಣಿ ಸೇರಿ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನೂ ಬೆಳ್ಳಿ ತೆರೆಗೂ ಕಾಲಿಟ್ಟಿದ್ದ ಸೋನು ಪಾಟೀಲ್ ಧರ್ಮಸ್ಯ, ಗೋಸಿ ಗ್ಯಾಂಗ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಮಿಕ್ಕಂತೆ ಬೈಕ್ ಮೇಲೆ ಸೋನುಗೆ ಎಲ್ಲಿಲ್ಲದ ಪ್ರೀತಿ. ರೀಲ್ಸ್ ಮಾಡುವುದು ಇವರ ಹವ್ಯಾಸ.
ಎಂಟು ಜನ ಪ್ರಪೋಸ್ ಮಾಡಿದ್ದರು ಎಂದಿದ್ದ ಸೋನು
ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸೋನು ಪಾಟೀಲ್ ಭಾಗಿಯಾದಾಗ, ಮೊದಲ ಪ್ರೀತಿಯ ನೆನಪನ್ನ ಹಂಚಿಕೊಳ್ಳುವಂತೆ ಸ್ಫರ್ಧಿಗಳಿಗೆ ಬಿಗ್ ಬಾಸ್ ಆದೇಶಿಸಿದ್ದರು. ಆಗ ಬಿಗ್‍ಬಾಸ್ ನೀಡಿದ ಈ ಚಟುವಟಿಕೆಯಲ್ಲಿ ಸೋನು ಅವರು ನಾನು ಹುಡುಗರನ್ನು ಇಷ್ಟಪಡುವುದಿಲ್ಲ.

ನನಗೆ ಈವರೆಗೂ ಎಂಟು ಜನ ಪ್ರಪೋಸ್ ಮಾಡಿದ್ದಾರೆ. ಅಲ್ಲದೇ ಅದರಲ್ಲಿ ನಾಲ್ಕು ಮಂದಿ 'ಸೋನು' ಎಂದು ಅಚ್ಚೆ ಹಾಕಿಸಿದ್ದಾರೆ. ಆದರೆ ನಾನು ಯಾರನ್ನು ಪ್ರೀತಿಸಿಲ್ಲ ಎಂದು ಹೇಳಿದ್ದರು. ಪ್ರೀತಿ ಹಾಗೂ ಮದುವೆ ಎಂದರೆ ನನಗೆ ಇಷ್ಟ ಇಲ್ಲವೆಂದಿದ್ದರು.
ಸದ್ಯಕ್ಕೆ ಸೋನು ಪಾಟೀಲ್ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಸಂಕೇತ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ನವ ಜೋಡಿಗೆ ನಿಮ್ಮದು ಒಂದು ಶುಭ ಹಾರೈಕೆ ಇರಲಿ


Click it and Unblock the Notifications











