ಸೋನು ಗೌಡ ಕಾರು ಅಪಘಾತಕ್ಕೀಡಾಗಿದ್ದು ನಿಜಾನಾ ; ಹೇಗಿದ್ದಾರೆ ಸೋಶಿಯಲ್ ಮೀಡಿಯಾ ಸ್ಟಾರ್ ?
ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದ ಸೋನು ಗೌಡ, ಮೊನ್ನೆ ಕಾರು ಓಡಿಸಲು ಹೋಗಿ ಆಕ್ಸಿಡೆಂಟ್ ಮಾಡಿಕೊಂಡಿದ್ದಾರೆ. ಬ್ರೇಕ್ ತುಳಿಯುವ ಬದಲು, ಗಾಬರಿಯಲ್ಲಿ ಎಕ್ಸಿಲೇಟರ್ ತುಳಿದು ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ ಎಂಬ ಸುದ್ದಿ ಸೋನು ಗೌಡ ಅವರ ಅಸಂಖ್ಯಾತ ಅಭಿಮಾನಿಗಳ ಚಿಂತೆಯನ್ನ ಹೆಚ್ಚಿಸಿತ್ತು. ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಚಾರ ಪ್ರೀತಿಯ ಅಭಿಮಾನಿಗಳ ಆತಂಕವನ್ನೂ ಹೆಚ್ಚಿಸಿತ್ತು. #GetWellSoonSonu ಎಂಬ ಹ್ಯಾಶ್ ಟ್ಯಾಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿತ್ತು.
ಇನ್ನೇನೂ ಸೋನು ಗೌಡ ಆರೋಗ್ಯದಲ್ಲಿ ಚೇತರಿಕೆಗಾಗಿ ಅಭಿಮಾನಿಗಳು ಹರಕೆ ಹೊರಬೇಕು ಅನ್ನುವಷ್ಟರಲ್ಲಿ ಸೋನು ಗೌಡ, ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರತ್ಯಕ್ಷಗೊಂಡಿದ್ದಾರೆ. ಸುಳ್ ಸುದ್ದಿ ಹಬ್ಬಿಸಬೇಡಿ ಪ್ಲೀಸ್ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ. ನನಗೇನೂ ಆಗಿಲ್ಲ. ಐ ಆಮ್ ಫೈನ್. ನನಗೆ ಆಕ್ಸಿಡೆಂಟ್ ಆಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಬರ್ತಿರೋದೆಲ್ಲಾ ಸುಳ್ಳು. ನಾನು ಚೆನ್ನಾಗಿದ್ದೀನಿ. ನಾನು ಆರಾಮಾಗಿದ್ದೀನಿ. ಈಗ ಜಿಮ್‌ಗೆ ಹೋಗ್ತಿದ್ದೀನಿ' ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸೋನು ಶ್ರೀನಿವಾಸ್ ಗೌಡ ಸಷ್ಟನೆಯನ್ನ ನೀಡಿದ್ದಾರೆ.

ಸೋನು ಗೌಡ ಅವರ ಈ ಸ್ಪಷ್ಟೀಕರಣದಿಂದ, ಆತಂಕದಲ್ಲಿ ಇದ್ದ ಅಭಿಮಾನಿಗಳ ಮನಸಿಗೆ ಈಗ ಸಮಾಧಾನ ಆಗಿದೆ. ಹೀಗಾಗಿಯೇ ನಿಟ್ಟುಸಿರು ಬಿಟ್ಟಿರುವ ಅನೇಕರು ಸೊಶಿಯಲ್ ಮೀಡಿಯಾ ಮೂಲಕ ಸೋನು ಗೌಡ ಅವರಿಗೆ ಹರಸಿ ಹಾರೈಸುತ್ತಿದ್ದಾರೆ. ಹೀಗೆ ರೀಲ್ಸ್ ಮೂಲಕ ನಮ್ಮೆಲ್ಲರನ್ನ ಮನರಂಜಿಸುತ್ತೀರಿ ಎನ್ನುತ್ತಿದ್ದಾರೆ.
ಹಬ್ಬಿದ್ದ ವದಂತಿ ಏನು..?
ಸೋನುಗೌಡ ಚಲಾಯಿಸುತ್ತಿದ್ದ ಕಾರು ಅಪಾರ್ಟ್‌ಮೆಂಟ್ ಒಂದರ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಸೋನುಗೌಡಗೆ ಪೆಟ್ಟಾಗಿದೆ ಎಂಬ ಸುದ್ದಿ ನಿನ್ನೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇನ್ನೊಂದು ವರದಿ ಪ್ರಕಾರ, ಸೋನು ಗೌಡ ಹೊಸದಾಗಿ ಕಾರು ಕಲಿಯುತ್ತಿದ್ದರು. ಹೀಗಾಗಿ ಸೋದರನ ಕಾರನ್ನು ತಾವೇ ಚಲಾಯಿಸುವಾಗ ಗಾಬರಿಯಲ್ಲಿ ಬ್ರೇಕ್ ತುಳಿಯುವ ಬದಲು ಎಕ್ಸಿಲೇಟರ್ ತುಳಿದಿದ್ದಾರೆ. ಇದರ ಪರಿಣಾಮ ಅಪಘಾತ ಸಂಭವಿಸಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿತ್ತು. ಗುದ್ದಿದ ರಭಸಕ್ಕೆ ನುಜ್ಜು ಗುಜ್ಜಾದ ಕಾರೊಂದರ ಫೋಟೋ ಕೂಡ ವೈರಲ್ ಆಗಿತ್ತು. ಈಗ ಈ ಎಲ್ಲ ಅಂತೆ-ಕಂತೆಗಳಿಗೆ ಸೋನು ಗೌಡ ಪೂರ್ಣ ವಿರಾಮ ಹಾಕಿದ್ದಾರೆ. ಐ ಆಮ್ ಫೈನ್ ಅಂದಿದ್ದಾರೆ.


Click it and Unblock the Notifications











