ಐಫೋನ್ ವಿಚಾರ ಕೆದಕಿದ್ದಕ್ಕೆ ಸೋನು ಶ್ರೀನಿವಾಸ್ ಗೌಡ ಕೆಂಡ ಕೆಂಡ; ಎಫ್‌ಐಆರ್ ದಾಖಲು

ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ವಿರೋಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗೆ ಸೋನು ಹೆಜ್ಜೆ ಹಾಕಿರುವ ಸ್ಪೆಷಲ್ ಸಾಂಗ್ ರಿಲೀಸ್ ಆಗಿತ್ತು. ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ಮಾಧ್ಯಮಗಳ ಸಂದರ್ಶನದಲ್ಲಿ ಕೂಡ ಭಾಗಿ ಆಗಿದ್ದರು. ಇದೆಲ್ಲದರ ನಡುವೆ ಹುಡುಗರ ಬಗ್ಗೆ ಸೋನು ಹೇಳಿಕೆವೊಂದು ವೈರಲ್ ಆಗ್ತಿದೆ.

ಸಂದರ್ಶನವೊಂದರಲ್ಲಿ ಪುರುಷ ಸಮುದಾಯದ ಬಗ್ಗೆ ಆಕೆ ಆಡಿದ್ದ ಮಾತು ಚರ್ಚೆ ಹುಟ್ಟಾಕ್ಕಿದೆ. "ಎಲ್ಲಾ ಹುಡುಗ್ರು ಕಳ್ ನನ್ ಮಕ್ಕಳೇ" ಎಂದು ಹೇಳಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿವಿಧ ಸಂಘಟನೆಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ನನ್ನ ವೈಯಕ್ತಿಕ ವಿಚಾರ ಎಳೆದು ತಂದಿದ್ದಾರೆ ಎಂದು ಸೋನು ಶ್ರೀನಿವಾಸ್ ಗೌಡ ಈಗ ಗರಂ ಆಗಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ.

Sonu Srinivas Gowda Files Police Complaint Amid All Men Remark Controversy

ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಸೋನು ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. "ಹುಡುಗ್ರು ಕಳ್ ನನ್ ಮಕ್ಳು" ಎಂದು ನಾನು ಹೇಳಿದ್ದು ನಿಜ.. ನನ್ನನ್ನು ಟಿಗರ್ ಮಾಡಿದ್ದಕ್ಕೆ ನನ್ನ ವೈಯಕ್ತಿಯ ಅನುಭವದ ಮೇರೆಗೆ ನಾನೂ ಆ ರೀತಿ ಹೇಳಿದ್ದೀನಿ. ನನಗೆ ಯಾರು ತೊಂದ್ರೆ ಕೊಟ್ರು ಅವ್ರಿಗೆ ಹೇಳಿದ್ದೀನಿ. ಮಿಸ್ ಆಗಿ ನಿಮ್ಮನ್ನು ಸೇರಿ ಎಂದು ಹೇಳಿದ್ದೀನಿ. ಹುಡುಗ್ರು ಸರಿಯಿದ್ರೆ, ಹುಡ್ಗೀರು ಸರಿ ಇರಲ್ಲ, ಹುಡ್ಗೀರು ಸರಿಯಿದ್ರೆ, ಹುಡುಗ್ರು ಸರಿ ಇರಲ್ಲ, ಇಬ್ಬರೂ ಸರಿಯಿದ್ರೆ ದೇವರ ಸರಿಯಿರಲ್ಲ ಅಂತ ಕೂಡ ಹೇಳ್ದೆ.. ಆದ್ರೆ ಅದನ್ನು ತಪ್ಪಾಗಿ ಬಿಂಬಿಸಲಾಗಿದೆ" ಎಂದಿದ್ದಾರೆ.

ನಾನು ತಮಾಷೆಗೆ ಹೇಳಿದ ವಿಷಯವನ್ನಿಟ್ಟುಕೊಂಡು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅದು ನನಗೆ, ನನ್ನ ಕುಟುಂಬಕ್ಕೆ ನೋವು ತಂದಿದೆ. ಹಾಗಾಗಿ ಅಂತಹವರ ವಿರುದ್ಧ ದೂರು ಕೊಟ್ಟಿದ್ದೀನಿ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ನನ್ನ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು ನೀಡಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ 15 ಜನರ ವಿರುದ್ಧ ದೂರು ನೀಡಿದ್ದೀನಿ, ಎಫ್‌ಐಆರ್ ಹಾಕಿಸಿದ್ದೀನಿ. ನಾನು ಎಲ್ಲರಿಗೂ ಗೌರವ ಕೊಟ್ಟು ಮಾತನಾಡ್ತೀನಿ ಎಂದಿದ್ದಾರೆ.

ನಾನು ತಪ್ಪು ಮಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಮಾತೇಯಿಲ್ಲ. ನಾನು ತಮಾಷೆಯಾಗಿ ಆಡಿದ ಮಾತಿಗೆ ಕ್ಷಮೆ ಕೇಳಿಸಬೇಕು ಎಂದು ಕೆಲವರು ಹಠಕ್ಕೆ ಬಿದ್ದಿದ್ದಾರೆ. ಅದು ಸಾಧ್ಯವಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದವರ ಆಡಿಯೋವನ್ನು ಮಾಧ್ಯಮಗಳಿಗೆ ಕೇಳಿಸಿದ್ದಾರೆ. ಮುರಳಿ ಶಿರಾ ಟಾಕ್ಸ್, ಕಾರ್ತಿಕ್ ವರ್ಮಾ, ಮಧುಸೂಧನ್, ಅರ್ಜುನ್, ದೇವ್ರು ಸ್ಮಾಲ್ ರೋಸ್ಟರ್, ಆಕಾಶ್ ಪಿಕೆ ಕಾಮಿಡಿ, ಚಂದ್ರು ಒಣಜಿಗ, ಸಂಧ್ಯಾ ನಾಗರಾಜ್ ಸೇರಿ ಕೆಲ ಸೋಶಿಯಲ್ ಮೀಡಿಯಾ ಅಕೌಂಟ್ ಮೇಲೆ ಸೋನು ದೂರು ನೀಡಿದ್ದಾರೆ.

ಸಂಧ್ಯಾ ನಾಗರಾಜ್ ನನಗೆ ಬೆದರಿಕೆ ಕೂಡ ಹಾಕಿದ್ದಾರೆ. ಕಾನೂನು ಮೂಲಕವೇ ಕ್ಷಮೆ ಕೇಳುತ್ತೇನೆ. "ಹುಡುಗ್ರು ಕಳ್ ನನ್ ಮಕ್ಳು" ಎಂದು ಹೇಳಿರುವ ವೀಡಿಯೋ ಇಟ್ಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅದನ್ನು ನಾನು ಸಹಿಸಲ್ಲ. ನಮ್ಮ ಕುಟುಂಬದವರ ಬಗ್ಗೆ ಬೈದಿದ್ದಾರೆ. ನನ್ನ ವೈಯಕ್ತಿಕ ವಿಷಯ ಇಟ್ಟುಕೊಂಡು ಐಫೋನ್ ಅಂತ ಹೇಳಲು ಇವನು ಯಾರು? ಇವನಿಗೆ ಏನು ಅಧಿಕಾರ ಇದೆ? ನಾನು ಸುಮ್ಮನಿರಲ್ಲ ಎಂದು ಸೋನು ಎಚ್ಚರಿಕೆ ನೀಡಿದ್ದಾರೆ. 'ಕೇಕೆ' ಚಿತ್ರದ 'ಗುಂಟೂರು ಅಮ್ಮಾಯಿ' ಎಂಬ ಹಾಡಿಗೆ ಸೋನು ಹೆಜ್ಜೆ ಹಾಕಿದ್ದು ವೈರಲ್ ಆಗ್ತಿದೆ.

Read more about: actress social media bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X