ಶೀಘ್ರದಲ್ಲೇ ಸೋನು ಶ್ರೀನಿವಾಸ್ ಗೌಡ ಮದುವೆ; ಹುಡುಗ ಯಾರು ಅಂದ್ರೆ?

ರೀಲ್ಸ್ ರಾಣಿ, ಬಿಗ್‌ಬಾಸ್ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿಂದಾಸ್ ಪೋಸ್ಟ್‌ಗಳಿಂದ ಸದ್ದಿ ಮಾಡಿದ್ದ ಸೋನು ವಿವಾದಗಳಿಂದ ಕೂಡ ಸುದ್ದಿ ಆಗಿದ್ದರು.

ಸೋಶಿಯಲ್ ಮೀಡಿಯಾ ಕಂಟೆಂಟ್‌ಗಾಗಿ ಸೋನು ಮಾಡುವ ಸರ್ಕಸ್ ಒಂದೆರಡಲ್ಲ. ತಮ್ಮ ದೈನಂದಿನ ಜೀವನದ ವಿಚಾರಗಳನ್ನು ಯೂಟ್ಯೂಬ್ ವ್ಲಾಗ್‌ ವೀಡಿಯೋಗಳಲ್ಲಿ ಸೋನು ಹಂಚಿಕೊಳ್ಳುತ್ತಾರೆ. ನಾಲ್ಕು ದಿನಕ್ಕೊಂದು ವೀಡಿಯೋವನ್ನು ಯೂಟ್ಯೂಬ್‌ ಚಾನಲ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಪ್ರವಾಸಕ್ಕೆ ಹೋಗುವುದು, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವ ವೀಡಿಯೋಗಳನ್ನು ಸೋನು ಅಪ್‌ಲೋಡ್ ಮಾಡುತ್ತಾರೆ.

Sonu Srinivas Gowda interesting comments about her Marriage

ಬಿಗ್‌ಬಾಸ್ ಮನೆಯಲ್ಲಿ ಕೂಡ ಸೋನು ಸಖತ್ ಸುದ್ದಿ ಮಾಡಿದ್ದರು. ಇನ್ನು ಮಗುವೊಂದನ್ನು ದತ್ತು ಪಡೆದುಕೊಂಡ ವಿಚಾರಕ್ಕೆ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಪೊಲೀಸ್ ಕೇಸ್ ದಾಖಲಾಗಿ ಆಕೆ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ 11 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ಇರುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು.

ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆಯಲು ಮುಂದಾಗಿದ್ದೇ ಸೋನು ಶ್ರೀನಿವಾಸ್ ಗೌಡಗೆ ಮುಳುವಾಗಿತ್ತು. ಇನ್ನು ಸೋನು ಶ್ರೀನಿವಾಸ್ ಗೌಡ ಪೋಸ್ಟ್‌ಗಳು ಟ್ರೋಲ್‌ಗಳಿಗೆ ಆಹಾರವಾಗುತ್ತಲೇ ಇರುತ್ತದೆ. ಆದರೆ ಅದಕ್ಕೆಲ್ಲಾ ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೆಟ್ಟಿಗರು ಎಷ್ಟೇ ಟ್ರೋಲ್ ಮಾಡಿದರೂ, ಕೆಟ್ಟದಾಗಿ ಕಾಮೆಂಟ್ ಹಾಕಿದರೂ ತಲೆ ಕೆಡಿಸಿಕೊಳ್ಳದೇ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಿರುತ್ತಾರೆ.

Sonu Srinivas Gowda interesting comments about her Marriage

ತಮ್ಮ ಸಾಕು ನಾಯಿಗಳಿಗಾಗಿ ಚಿಕ್ಕಪೇಟೆಯಲ್ಲಿ ಶಾಪಿಂಗ್ ಮಾಡಿರುವ ವ್ಲಾಗ್ ವೀಡಿಯೋವನ್ನು ಸೋನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದಾರೆ. ಸ್ನೇಹಿತರೇ ಸದ್ಯದಲ್ಲೇ ನನ್ನ ಮದುವೆ ಅನೌನ್ಸ್ ಮಾಡ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅನ್ನಿಸಿಬಿಟ್ಟಿದೆ. ಹುಡುಗ ಯಾರು? ಏನು? ಎನ್ನುವ ಡಿಟೈಲ್ಸ್ ಬೇಕಂದ್ರೆ ಕಾಮೆಂಟ್ ಮಾಡಿ ಎಂದು ಸೋನು ಹೇಳಿದ್ದಾರೆ.

ಸೋನು ವೀಡಿಯೋಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಮದುವೆ ಫಿಕ್ಸ್ ಆಯ್ತಾ? ಯಾವಾಗ ಮದುವೆ? ಹುಡುಗ ಯಾರು? ಎಂದು ಕೇಳಿದ್ದಾರೆ. ಒಟ್ಟಾರೆ ಸೋನು ತಮಾಷೆಗೆ ಹೇಳಿದ್ರೋ ನಿಜವಾಗಿಯೂ ಮದುವೆ ಫಿಕ್ಸ್ ಆಗಿದ್ಯಾ? ಎನ್ನುವ ಗೊಂದಲ ಅಭಿಮಾನಿಗಳಲ್ಲಿ ಇದೆ.

ಟಿಕ್‌ ಟಾಕ್ ವೀಡಿಯೋಗಳನ್ನು ಮಾಡುತ್ತಾ ಸೋನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಟಿಕ್‌ಟಾಕ್ ಬ್ಯಾನ್ ಆದ ಬಳಿಕ ರೀಲ್ಸ್ ವೀಡಿಯೋಗಳನ್ನು ಮಾಡಲು ಶುರು ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ ಲಕ್ಷ ಲಕ್ಷ ಫಾಲೋವರ್ಸ್ ಇದ್ದಾರೆ. ಜೊತೆಗೆ ಯೂಟ್ಯೂಬ್ ಚಾನಲ್ ಸಹ ಆರಂಭಿಸಿ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲ ಆಲ್ಬಮ್‌ ಹಾಗೂ ಜಾಹೀರಾತುಗಳಲ್ಲಿ ಕೂಡ ಸೋನು ಶ್ರೀನಿವಾಸ್ ಗೌಡ ಮಿಂಚಿದ್ದಾರೆ. ಶಾರ್ಟ್‌ ಫಿಲ್ಮ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸುವುದಾಗಿ ಸುದ್ದಿ ಆಗಿತ್ತು. ಟ್ರೋಲ್ ಆಗಿಯೇ ಸೋನು ಹೆಚ್ಚು ಜನಪ್ರಿಯತೆ ಸಾಧಿಸಿದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋನು ತಿಂಗಳಿಗೆ ಸೋಶಿಯಲ್ ಮೀಡಿಯಾದಿಂದ 50 ಸಾವಿರ ದುಡಿಯಬಹುದು ಎಂದಿದ್ದರು. ಇನ್ನು ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾಗ ಕೆಟ್ಟ ಪದಗಳನ್ನು ಬಳಸಿದಾಗಿ ಮನಸ್ಸಿಗೆ ನೋವಾಗುತ್ತದೆ ಎಂದಿದ್ದರು.

ಡಿಪ್ಲೋಮಾ ಮುಗಿಸುವವರೆಗೂ ನಾನು ಪಾಕೆಟ್ ಮನಿಗಾಗಿ ಕೈ ಚಾಚುತ್ತಿದ್ದೆ. ಆದರೆ ಆ ಬಳಿಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟೆ. ಆ ಬಳಿಕ ಮನೆಯಲ್ಲಿ ಹಣ ಕೇಳುವ ಪ್ರಮೇಯ ಬರಲಿಲ್ಲ ಎಂದು ಸೋನು ವಿವರಿಸಿದ್ದರು.

More from Filmibeat

English summary
Bigg Boss Kannada ott contestant Sonu Srinivas Gowda Opens Up About Her Marriage Plans;
Read more about: bigg boss tv ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X