ಪ್ರೀತಿ ಉಳಿಸಿಕೊಳ್ಳಲು ಹೋದೆ, ಅವನು ಆ ವಿಡಿಯೋನ ಪಬ್ಲಿಶ್ ಮಾಡಿದ ; ಬಾಯ್‌ಫ್ರೆಂಡ್ ವಿಕೃತಿ ನೆನೆದು ಸೋನು ಗೌಡ ಕಣ್ಣೀರು

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ ಮತ್ತು ವಿಶ್ವಾಸ ಇರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಉಳಿಯಲು ಸಾಧ್ಯ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರತಿಯೊಂದು ಮೋಸ ಈ ನಂಬಿಕೆಯಿಂದಲೇ ಶುರುವಾಗುತ್ತಿದೆ. ನಂಬಿಕೆಯ ಹೆಸರಿನಲ್ಲಿ ಇಲ್ಲಿ ಹಲವರು ಹಲವರ ಮಾನ ಹರಾಜು ಹಾಕಿದ್ದಾರೆ. ಮತ್ತೂ ಕೆಲವರು ಪ್ರಾಣವನ್ನು ಬಲಿ ಪಡೆದಿದ್ದಾರೆ.

ಇನ್ನೂ ಪ್ರೀತಿಯಲ್ಲಿ ನಂಬಿದವರೇ ಬೆನ್ನಿಗೆ ಚೂರಿ ಹಾಕಿದಾಗ ಆಗುವ ನೋವು ವಿವರಿಸಲಾಗದ್ದು. ಅದರಲ್ಲೂ ಒಬ್ಬ ವ್ಯಕ್ತಿಯ ಖಾಸಗಿ ಕ್ಷಣಗಳನ್ನು ಜಗತ್ತಿನ ಮುಂದೆ ಹರಾಜು ಹಾಕುವ ಮಟ್ಟಕ್ಕೆ ಆ ದ್ರೋಹ ಬೆಳೆದರೆ, ಅದು ಕೇವಲ ಅವಮಾನವಲ್ಲ, ಅದು ಆ ವ್ಯಕ್ತಿಯ ಆತ್ಮಗೌರವದ ಮೇಲೆ ಮಾಡಲಾದ ಕೊಲೆಗಡುಕ ದಾಳಿ. ಈ ಡಿಜಿಟಲ್ ಕಾಲದಲ್ಲಿ, ಪ್ರೀತಿಯ ಹೆಸರಲ್ಲಿ ನಡೆಯುವ ಇಂತಹ ಬ್ಲ್ಯಾಕ್‌ಮೇಲ್ ತಂತ್ರಗಳು ಅನೇಕ ಬದುಕುಗಳನ್ನು ಕತ್ತಲಿಗೆ ತಳ್ಳುತ್ತಿವೆ. ಉದಾಹರಣೆಗೆ ಸೋನು ಶ್ರೀನಿವಾಸ್ ಗೌಡ ಅವರ ಬದುಕನ್ನೇ ತೆಗೆದುಕೊಳ್ಳಿ.

sonu-srinivas-gowda-leaked-video-truth-boyfriend-blackmail

ಹೌದು, ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು, ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದ ಸೋನು ಗೌಡ ಅವರ ಖಾಸಗಿ ವಿಡಿಯೋವೊಂದು ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು.

ಇನ್ನೂ ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಹಲವರು ಆ ವಿಡಿಯೋ ನನ್ನದಲ್ಲ ಎಂಬ ವಾದ ಮಾಡುತ್ತಾರೆ. ತಂತ್ರಜ್ಞಾನದ ದುರ್ಬಳಕೆ ಎನ್ನುತ್ತಾರೆ. ಆದರೆ.. ಸೋನು ಗೌಡ ಆ ವಿಡಿಯೋ ತನ್ನದೇ ಎಂದು ಹಿಂದೆ ಒಪ್ಪಿಕೊಂಡಿದ್ದರು. ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಆ ವಿಡಿಯೋ ಹೊರ ಬಂದಿದ್ಹೇಗೆ ಎಂದು ಹೇಳಿ ಕಣ್ಣೀರನ್ನು ಕೂಡ ಹಾಕಿದ್ದರು.

ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಒಮ್ಮೆ ಆತ ನನ್ನ ವಿಡಿಯೋ ಕಳಿಸಲು ಹೇಳಿದ. ನಾನೂ ಸಹ ನನ್ನ ಬೆತ್ತಲೆ ವಿಡಿಯೋ ಕಳಿಸಿಬಿಟ್ಟೆ. ಆದರೆ ಅದನ್ನು ಅವನು ವೈರಲ್ ಮಾಡಿಬಿಟ್ಟ ಎಂದು ಹೇಳಿ ''ಬಿಗ್ ಬಾಸ್'' ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಬಿಕ್ಕಿದ್ದರು.

ಇನ್ನು ಅನೇಕರಿಗೆ ಗೊತ್ತಿರುವಂತೆ ನಮ್ಮ ಸಮಾಜದಲ್ಲಿ ಇಂತಹ ಘಟನೆಗಳು ನಡೆದಾಗ ಜನರು ಸುಲಭವಾಗಿ ಹೆಣ್ಣಿನ ಚಾರಿತ್ರ್ಯವನ್ನು ಪ್ರಶ್ನಿಸುತ್ತಾರೆ. ಆದರೆ ಆ ವಿಡಿಯೋವನ್ನು ಅಕ್ರಮವಾಗಿ ಹಂಚಿಕೊಂಡವನ ಕ್ರಿಮಿನಲ್ ಮನಸ್ಥಿತಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ.

sonu-srinivas-gowda-leaked-video-truth-boyfriend-blackmail

ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಇವತ್ತು ಕೂಡ ಸೋನು ಗೌಡ ಅವರನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ರೋಲ್ ಮಾಡುತ್ತಾರೆ. ಮಾತನಾಡಬಾರದ ಮಾತುಗಳನ್ನೆಲ್ಲ ಆಡುತ್ತಾರೆ. ಸದ್ಯ ತಮ್ಮ ಇದೇ ವಿಡಿಯೋ ಕುರಿತು ಸೋನು ಶ್ರೀನಿವಾಸ್ ಗೌಡ ಈಗ ಇನ್ನೊಮ್ಮೆ ಮಾತನಾಡಿದ್ದಾರೆ. ಆ ದಿನ, ಆ ಕ್ಷಣ ನೆನೆದು ಕಣ್ಣೀರು ಹಾಕಿದ್ದಾರೆ.

ತಮ್ಮ ಮಾಜಿ ಬಾಯ್‌ಫ್ರೆಂಡ್‌ನ ವಿಕೃತಿಯನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನು ಶ್ರೀನಿವಾಸ್ ಗೌಡ, ನಾನು ಅವನಿಗೆ ಕಂಪ್ಲೇಂಟ್ ಕಾಪಿ ಕಳುಹಿಸಿದ ತಕ್ಷಣ, ಅವನು ನನಗೆ ಫುಲ್ ವಿಡಿಯೋ ಕಳುಹಿಸಿಬಿಟ್ಟ ಎಂದು ಹೇಳಿದ್ದಾರೆ.

ಆ ವಿಡಿಯೋ ನೋಡಿ ನನಗೆ ನಡುಕ ಶುರುವಾಯ್ತು. ಒಂದ್ ಸೆಕೆಂಡ್‌ ಫೋನ್ ಕೆಳಗೆ ಬಿದ್ದು ಹೋಯ್ತು ಎಂದು ಹೇಳಿರುವ ಸೋನು ಗೌಡ, ನನ್ನ ಲವ್‌ನ ಉಳಿಸಿಕೊಳ್ಳಲು ನಾನು ಈ ತರಹ ಮಾಡಿದ್ದು ತಪ್ಪಾ ಅಂತ ಅನಿಸಿತು, ಆ ಕ್ಷಣ ಇದನ್ನೆಲ್ಲಾ ಯಾರ ಬಳಿಯೂ ಹೇಳಿಕೊಂಡು ಅಳಲು ನನಗೆ ಶಕ್ತಿ ಇರಲಿಲ್ಲ. ತುಂಬಾ ಹಿಂಸೆ ಆಗ್ಬಿಡ್ತು ಎಂದು ಹೇಳಿದ್ದಾರೆ.

ಒಂದು ರೀತಿಯಲ್ಲಿ ನನ್ನ ಬಿಸಿ ತುಪ್ಪ ಇದ್ದಂತೆ ಆಗಿತ್ತು ಎಂದು ಹೇಳಿರುವ ಸೋನು ಗೌಡ, ಬಾಯಲ್ಲಿ ಇಟ್ಟುಕೊಳ್ಳಲೂ ಆಗುತ್ತಿರಲಿಲ್ಲ. ಹೊರಗೆ ಉಗಿಯೋಕೂ ಆಗ್ತಿರಲಿಲ್ಲ, ನನ್ನ ಪರಿಸ್ಥಿತಿ ಒಂಥರಾ ಆಗಿತ್ತು ಎಂದು ಹೇಳಿದ್ದಾರೆ. ಪ್ರತಿ ದಿನ ಅವನ ಮೆಸೇಜ್ ಬಂದಾಗೆಲ್ಲಾ ಕುಗ್ಗಿ ಕುಗ್ಗಿ ಸಾಯುತ್ತಿದ್ದೆ ಎಂದು ಕಣ್ಣೀರು ಹಾಕಿದ್ದಾರೆ.

ಮುಂದುವರೆದು ನನಗೆ ಪ್ರೀತಿ ಬೇಕು ಅಂತ ಹಂಬಲಿಸುತ್ತಿದ್ದೆ. ಆ ಟೈಮ್‌ನಲ್ಲಿ ನನ್ನ ಮನೆಗೆ ಬಂದ್ದಿದ್ದೇ ಬ್ರೀಝರ್ (ಶ್ವಾನ). ಇವನಿಂದ ನಾನು ಅಳುವನ್ನ ಕಂಟ್ರೋಲ್ ಮಾಡಿಕೊಂಡೆ ಎಂದು ಹೇಳಿರುವ ಸೋನು ಗೌಡ , ಆಮೇಲೆ ಅವನ (ಬಾಯ್‌ಫ್ರೆಂಡ್) ನಂಬರ್‌ನ ನಾನು ಬ್ಲಾಕ್ ಮಾಡಿದೆ. ಇನ್ನೊಂದು ನಂಬರ್‌ನಿಂದ ಮೆಸೇಜ್ ಮಾಡಲು ಶುರು ಮಾಡಿದ ಎಂದು ಹೇಳಿದ್ಧಾರೆ. ನನ್ನನ್ನೇ ಬ್ಲಾಕ್ ಮಾಡ್ತೀಯಾ ಅಂತ ಅವನು ಕೊನೆಗೂ ಆ ವಿಡಿಯೋನ ಪಬ್ಲಿಶ್ ಮಾಡಿಬಿಟ್ಟ ಎಂದು ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ.

English summary
Sonu Srinivas Gowda breaks her silence on the betrayal that changed her life. From blackmail to public scrutiny, discover the dark reality behind the viral video leak and her path to survival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X