ಬಿಗ್‌ ಬಾಸ್‌ ಓಟಿಟಿಯಲ್ಲಿ ಸೋನುಗೆ ಸಿಕ್ಕ ಸಂಭಾವನೆ ಎಷ್ಟು..? ರೀಲ್ಸ್‌ ಕ್ವೀನ್‌ ಹೇಳಿದ್ದೇನು..?

ಕನ್ನಡ ಬಿಗ್‌ ಬಾಸ್‌ ಓಟಿಟಿಯ ಸೆನ್ಸೇಷನಲ್‌ ಸ್ಫರ್ಧಿ ಸೋನು ಶ್ರೀನಿವಾಸ್‌ ಗೌಡ ಬಿಗ್‌ ಬಾಸ್‌ ಮನೆನಿಂದ ಹೊರ ಬಂದ ಬಳಿಕವೂ ಆಕೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ. ಬಿಗ್‌ ಬಾಸ್‌ ಓಟಿಟಿಯ ಮನೆಗೆ ಸೋನು ಶ್ರೀನಿವಾಸ್‌ ಗೌಡ ಎಂಟ್ರಿ ಕೊಡುತ್ತಿದ್ದಂತೆ ಆಕೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಪರ ವಿರೋಧದ ಚರ್ಚೆಗಳು ನಡೆದಿದ್ದವು.

ಸೋನು ಶ್ರೀನಿವಾಸ್‌ ಗೌಡ ಅವರನ್ನು ಬಿಗ್ ಬಾಸ್‌ ಮನೆಯೊಳಗೆ ಕಳುಹಿಸಿರುವುದು ತಪ್ಪು ಎಂದು ಹಲವು ಜನ ವಾದಿಸಿದ್ದು, ಇನ್ನು ಕೆಲವರು ಆಕೆಯನ್ನು ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸಿ ಕನ್ನಡ ಬಿಗ್‌ ಬಾಸ್‌ ಹಾಗೂ ಕಿಚ್ಚ ಸುದೀಪ್‌ ಅವರಿಗೆ ಅವಮಾನ ಮಾಡಿದ್ದೀರಿ ಎಂದು ವಾಹಿನಿ ವಿರುದ್ಧ ಕಿಡಿಕಾರಿದ್ದರು. ಅದೇನೆ ಇದ್ದರೂ ಸೋನು ಬಿಗ್‌ ಬಾಸ್‌ ಮನೆಯೊಳಗೆ ಎಲ್ಲಾ ಸ್ಫರ್ಧಿಗಳ ಪ್ರೀತಿಗಳಿಸಿಕೊಂಡರು. ಅಲ್ಲದೇ ಉತ್ತಮವಾಗಿ ಆಟ ಆಡಿ ಫೈನಲಿಸ್ಟ್‌ ಕೂಡ ಆಗಿದ್ದಾರೆ.

ಬಿಗ್‌ ಬಾಸ್‌ ಓಟಿಟಿ ಮನೆಯೊಳಗೆ ಸೋನು ಯಾರ ಜೊತೆ ಹೆಚ್ಚಾಗಿ ಸಮಯ ಕಳೆದರು, ಆಕೆಗೆ ಅಲ್ಲಿ ಒಂಟಿತನ ಕಾಡಿತ್ತಾ ಎನ್ನುವುದರ ಬಗ್ಗೆ ಸೋನು ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ. ನನಗೆ ಯಾವತ್ತೂ ಬಿಗ್‌ ಬಾಸ್‌ ಮನೆಯಲ್ಲಿ ಒಂಟಿತನ ಕಾಡಿಲ್ಲ. ನಾನು ಮೊದಲ ಎರಡು ವಾರ ಗುರೂಜಿ ಅವರ ಜೊತೆ ಆತ್ಮೀಯವಾಗಿದ್ದೆ. ಆಮೇಲೆ ಮೂರನೇ ವಾರದಲ್ಲಿ ರಾಕೇಶ್‌ ಜೊತೆ ಉತ್ತಮ ಬಾಂಧವ್ಯ ಬೆಳೆಯಿತು. ಏನೇ ಮಾತಾಡಿದ್ದರೂ ರಾಕಿ ಜೊತೆನೆ ಏನೇ ಬೈದರೂ ರಾಕಿ ಜೊತೆನೆ, ಅವನಿಗೆ ತುಂಬಾ ಇರಿಟೇಟ್‌ ಮಾಡಿದ್ದೀನಿ. ತುಂಬಾ ಪ್ರೀತಿ ಕೊಟ್ಟಿರುವುದು ಅವನಿಗೇನೆ ಎಂದು ತಮ್ಮ ಹಾಗೂ ರಾಕೇಶ್‌ ಅಡಿಗ ನಡುವಿನ ಬಾಂಧವ್ಯದ ಬಗ್ಗೆ ಹೇಳಿಕೊಂಡರು.

Sonu Srinivas Gowda Opens Up About Her Bigg Boss Ott Payment

ಇನ್ನು ಬಿಗ್‌ ಬಾಸ್‌ ಓಟಿಟಿಯಲ್ಲಿ ಭಾಗವಹಿಸಿದ್ದಕ್ಕೆ ಸಿಕ್ಕಿರುವ ಸಂಭಾವನೆ ಬಗ್ಗೆ ಮಾತನಾಡಿದ ಸೋನು, ಅದು ಹೇಳಲಾಗುವುದಿಲ್ಲ. ಒಂದು ವೇಳೆ ಹೇಳಿಕೊಂಡರೆ ಅದು ನನಗೆ ನೆಗೆಟಿವ್‌ ಆಗಬಹುದು ಎಂದು ತಮ್ಮ ಸಂಭಾವನೆಯ ಗುಟ್ಟನ್ನು ಬಿಟ್ಟುಕೊಡದೆ ಕಾಪಾಡಿಕೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಜಯಶ್ರೀ ಜೊತೆ ನಡೆದ ಘಟನೆಯೊಂದನ್ನು ಫಿಲ್ಮಿಬೀಟ್‌ ಜೊತೆ ಶೇರ್‌ ಮಾಡಿಕೊಂಡ ಸೋನು ಗೌಡ, ಅಷ್ಟು ವಾರಗಳಿಂದ ದೂರ ಇದ್ದ ಜಯಶ್ರಿ, ನಾನು ರಾಕಿ ಜೊತೆ ಕ್ಲೋಸ್‌ ಆಗುತ್ತಿದ್ದಂತೆ, ತಾನೂ ಅವನ ಜೊತೆ ಕ್ಲೋಸ್‌ ಆಗೋಕೆ ಶುರು ಮಾಡಿದ್ದಳು. ಅದರರಿಂದ ನನಗೆ ಕೋಪ ಬಂತು. ನಾನು ಅವಳಿಗೆ ನೀನು ರಾಕಿ ಜೊತೆ ಹಾಗೆ ಇರಬೇಡ ನನಗೆ ಪೊಸೆಸಿವ್‌ ಆಗ್ತಿದೆ ಅಂತಾ ಹೇಳೋಕೇನೆ ಕರದುಕೊಂಡು ಹೋದೆ. ಆಗ ಮೈಕ್‌ ತೆಗೆದಿಟ್ಟೆ. ಅಲ್ಲೂ ಕೂಡ ಮೈಕಿತ್ತು ಆದರೆ ಬಿಗ್‌ ಬಾಸ್‌ ಮೈಕ್‌ ಧರಿಸುವಂತೆ ಹೇಳಿದರು. ಹೀಗಾಗಿ ಮೈಕ್‌ ಹಾಕಿಕೊಂಡು ಆ ವಿಚಾರನಾ ಆಕೆಗೆ ಹೇಳಿದೆ. ಅವಳು ಹೋಗಿ ಅದನ್ನು ಬೇರೆ ರೀತಿ ಹೇಳಿದಳು. ಹಾಗಾಗಿ ಅದು ಬೇರೆ ರೀತಿನೇ ಕಾಣಿಸಿತು ಎಂದರು.

ನನಗೆ ಚಿಕ್ಕವಯಸ್ಸಿನಿಂದಲೂ ಹಿರೋಯಿನ್‌ ಆಗಬೇಕು ಎನ್ನುವ ಆಸೆ ತಲೆಯಲ್ಲಿ ತುಂಬಿ ತುಳುಕುತ್ತಿದೆ. ಬಿಗ್‌ ಬಾಗ್‌ಗೆ ಹೋಗುವ ಮುನ್ನವೇ ಅನೇಕ ಆಫರ್‌ಗಳು ಬಂದಿದೆ. ಆದರೆ ನನಗೆ ಅದ್ಯಾವುದೋ ಸಿನಿಮಾ ಮಾಡಿ ನನ್ನ ಇಮೇಜ್‌ನ ಕಡಿಮೆ ಮಾಡಿಕೊಳ್ಳೋದಕ್ಕೆ ಇಷ್ಟ ಇಲ್ಲ. ನಾನು ಯಾವುದಾರೂ ದೊಡ್ಡ ಬ್ಯಾನರ್‌ ಅಲ್ಲಿ ನಾಯಕಿಯಾಗಬೇಕು ಅಂತಾ ಕಾಯುತ್ತಿದ್ದೇನೆ. ದೊಡ್ಡ ಪೊಡಕ್ಷನ್‌ನಿಂದ ಆಫರ್‌ ಬಂದರೆ ಕಂಡಿತವಾಗಿ ನಾನು ಮಾಡೇ ಮಾಡುತ್ತೇನೆ. ಸದ್ಯ ಆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದರು.

More from Filmibeat

English summary
Bigg Boss ott contestant Sonu Srinivas Gowda opens up about her Bigg Boss OTT remuneration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X