ಇನ್‌ಸ್ಟಾಗ್ರಾಮ್‌ನಲ್ಲಿ 300 ಜನ ಸಬ್‌ಸ್ಕ್ರೈಬರ್ಸ್; ಸೋನು ಶ್ರೀನಿವಾಸ್ ಗೌಡ ಗಳಿಸೋ ಆದಾಯ ಎಷ್ಟು?

'ಕೇಕೆ' ಚಿತ್ರದ 'ಗುಂಟೂರು ಅಮ್ಮಾಯಿ' ಸ್ಪೆಷಲ್ ಸಾಂಗ್‌ಗೆ ಸೋನು ಶ್ರೀನಿವಾಸ್ ಗೌಡ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಸಾಂಗ್ ರಿಲೀಸ್ ಕಾರ್ಯಕ್ರಮ ನಡೀತು. ಸೋನು ಶ್ರೀನಿವಾಸ್ ಗೌಡ ಕೂಡ ಹಾಜರಾಗಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಷನ್ ಬಟನ್ ಓಪನ್ ಮಾಡಿದ್ದಾರೆ. 399 ರೂ. ಕೊಟ್ಟು 288 ಜನ ಆಕೆಯ ಇನ್‌ಸ್ಟಾ ಅಕೌಂಟ್ ಅನ್ನು ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇನ್‌ಸ್ಟಾಗ್ರಾಮ್‌ ಸಬ್‌ಸ್ಕ್ರಿಪ್ಷನ್ ಆದಾಯದ ಹೊಸ ಮೂಲವಾಗಿದೆ. ತೆಲುಗು ನಟಿ, ನಿರೂಪಕಿ ವಿಷ್ಣುಪ್ರಿಯ ಸೇರಿದಂತೆ ಹಲವರು ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಷನ್ ಆಪ್ಷನ್ ಕೊಟ್ಟಿದ್ದಾರೆ. ಹಣ ಕೊಟ್ಟು ಸಬ್‌ಸ್ಕ್ರಿಪ್ಷನ್ ಪಡೆದುಕೊಂಡವರಿಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡುವ ಅವಕಾಶ ಸಿಗುತ್ತಿದೆ. ನಟಿಯರಾದ ನೇಹಾ ಶರ್ಮಾ, ವೇದಿಕಾ ಸೇರಿದಂತೆ ಕೆಲವರು ಸಾವಿರಾರು ಮಂದಿ ಸಬ್‌ಸ್ಕ್ರೈಬರ್ಸ್ ಗಳಿಸಿದ್ದಾರೆ.

Sonu Srinivas Gowda Reveals Instagram Subscription Earnings Says It s Not Even 30 000

ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಇನ್‌ಸ್ಟಾ ಸಬ್‌ಸ್ಕ್ರಿಪ್ಷನ್ ಮೂಲಕ ಎಷ್ಟು ಹಣ ಬರ್ತಿದೆ ಎನ್ನುವ ಲೆಕ್ಕ ಕೊಟ್ಟಿದ್ದಾರೆ. ಅದೇ ರೀತಿ ಕಿಯಾ ಕಾರ್ ಖರೀದಿಸಿದ್ದು ಇಎಂಐ ಕಟ್ಟುತ್ತಿದ್ದೇನೆ ಎಂದು ತಿಳಿಸಿದ್ದಾರೆ. 30 ಲಕ್ಷದ ಕಾರಿಗೆ 5 ಲಕ್ಷ ಮಾತ್ರ ಡೌನ್‌ ಪೇಮೆಂಟ್ ಮಾಡಿದ್ದೀನಿ. ಇನ್ನು 6 ವರ್ಷ ಸಾಲ ಕಟ್ಟಬೇಕು ಎಂದು ಆಕೆ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಆಗಿ ಗಮನ ಸೆಳೆದ ಸೋನು ಒಂದು ಖಾಸಗಿ ವೀಡಿಯೋ ವೈರಲ್ ಆಗಿ ಸುದ್ದಿ ಆಗಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಜನಪ್ರಿಯತೆಯಿಂದ ಬಿಗ್‌ಬಾಸ್ ಶೋಗೂ ಹೋಗಿ ಬಂದಿದ್ದರು. ಕೆಲ ವಿವಾದಗಳಿಂದ ಕೂಡ ಆಕೆ ಸುದ್ದಿ ಆಗಿದ್ದರು. ಟಿವಿ9 ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಸೋನು ಮಾತನಾಡಿದ್ದಾರೆ. "ಓಡಾಡೋಕೆ ಕಾರ್ ಬೇಕಲ್ವಾ? ಕ್ಯಾಬ್‌ಗೆ ಹಣ ಸುರಿದು ಸಾಕಾಯ್ತು. ಅದಕ್ಕೆ ಕಾರ್ ತಗೊಂಡೆ. ನಮ್ಮ ಮನೆಯಲ್ಲಿ ಕಾರ್ ಇದೆ. ಆದ್ರೆ ನನ್ನದು ಅಂತ ಒಂದು ಬೇಕಲ್ವಾ. ಕಿಯಾ ಕಾರ್ ತಗೊಳ್ಳೊ ಆಸೆ ಇತ್ತು. ಹಾಗಾಗಿ ತಗೊಂಡೆ. ಹೆಚ್ಚು ಕಮ್ಮಿ 30 ಲಕ್ಷ ರೂಪಾಯಿ. 5 ಲಕ್ಷ ಕಟ್ಟಿ ತಗೊಂಡಿದ್ದೀನಿ. ಇನ್ನು 6 ವರ್ಷ ಇಎಂಐ ಕಟ್ಟಬೇಕು" ಎಂದಿದ್ದಾರೆ.

Sonu Srinivas Gowda Reveals Instagram Subscription Earnings Says It s Not Even 30 000

ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ಮೂಲಕ ಒಳ್ಳೆ ಆದಾಯ ಬರುತ್ತಾ ಎನ್ನುವ ಪ್ರಶ್ನೆಗೆ ಸೋನು ಮಾತನಾಡಿ "ನನಗೆ ಇರುವುದು 300 ಜನ ಪೇಯ್ಡ್ ಸಬ್‌ಸ್ಕ್ರೈಬರ್ಸ್.. 300‍‍ X 300 ಅಂದುಕೊಂಡ್ರು, 300 ರೂ. ನನಗೆ ಬರಲ್ಲ. 100 ರೂಪಾಯಿ ಇನ್‌ಸ್ಟಾಗ್ರಾಮ್ ಅವ್ರು ತಗೋತ್ತಾರೆ. ಆ ಲೆಕ್ಕದಲ್ಲಿ ನನಗೆ 30 ಸಾವಿರ ಕೂಡ ಬರಲ್ಲ.. ತಿಂಗಳ ಆದಾಯ ಎಷ್ಟು ಅಂತ ಹೇಳಲ್ಲ. ಮೊದ್ಲೆ ಹೇಳಿ ಎಲ್ಲರ ಕಣ್ಣು ಬಿದ್ದುಬಿಟ್ಟಿದೆ" ಎಂದು ನಕ್ಕಿದ್ದಾರೆ.

ಒಂದೆರಡು ಸಿನಿಮಾ ಅವಕಾಶ ಕೂಡ ಸಿಕ್ಕಿತ್ತು. ಕಾರಣಾಂತರಗಳಿಂದ ಆ ಸಿನಿಮಾಗಳು ನಿಂತು ಹೋಯಿತು ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಇನ್ನು ಹಳೇ ಬಾಯ್‌ಫ್ರೆಂಡ್ ನೆನಪಿನಿಂದ ಹೊರಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಮರೆತ್ತಿದ್ದರೂ ನೆನಪು ಕಾಡುತ್ತಲೇ ಇದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಮ್ಮನ್ನು ಬೆಳೆಸುವುದಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ಹಿಂದೆ ಒಮ್ಮೆ ಹೇಳಿದ್ದರು. ಈಗ ಕನ್ನಡ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರಲ್ಲ, ಎನ್ನುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. 'ಕೇಕೆ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಕಿರಣ್ ತೋಟಂಬೈಲು ಮ್ಯೂಸಿಕ್ ಮಾಡಿ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದಾರೆ.

Read more about: social media sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X