For Quick Alerts
  ALLOW NOTIFICATIONS  
  For Daily Alerts

  ಇವರನ್ನೆಲ್ಲಾ ನಾವು 'ಬಿಗ್ ಬಾಸ್' ಮನೆಯಲ್ಲಿ ನೋಡ್ಬಹುದಾ?

  By Harshitha
  |

  ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೂರನೇ ಆವೃತ್ತಿ ಶುರುವಾಗುವುದಕ್ಕೆ ಕೆಲವೇ ಕ್ಷಣಗಳು ಬಾಕಿ. ಇಂದು ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ಗ್ರ್ಯಾಂಡ್ ಪ್ರೀಮಿಯರ್ ಪ್ರಸಾರವಾಗಲಿದೆ.

  ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ 'ಬಿಗ್ ಬಾಸ್-3' ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ. ಈಗಾಗಲೇ 'ಬಿಗ್ ಬಾಸ್-3' ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಬೆಂಗಳೂರಿನ ಇನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಆಗಿದೆ. [ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]

  ಹಾಗಾದ್ರೆ, ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಯಾರ್ಯಾರು ಇರಲಿದ್ದಾರೆ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವುದು ಇಂದು ಸಂಜೆ 6 ಗಂಟೆ ನಂತರ. ಆದ್ರೆ, ಕಲರ್ಸ್ ಕನ್ನಡ (ಈಟಿವಿ ಕನ್ನಡ) ಮೂಲಗಳ ಪ್ರಕಾರ 'ಇವರೆಲ್ಲಾ' ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದು ಆಗಿದೆ.

  ಹಾಗಾದ್ರೆ, ಅವರೆಲ್ಲಾ ಯಾರು? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

  ಹುಚ್ಚ ವೆಂಕಟ್

  ಹುಚ್ಚ ವೆಂಕಟ್

  ''ಬಿಗ್ ಬಾಸ್' ಮನೆಗೆ ನನ್ನ ಎಕ್ಕಡ ಕೂಡ ಹೋಗಲ್ಲ' ಅಂತ ಹುಚ್ಚ ವೆಂಕಟ್ ಹೇಳಿದ್ರೂ, ಕಲರ್ಸ್ ಕನ್ನಡ ವಾಹಿನಿ ಮೂಲಗಳ ಪ್ರಕಾರ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದು ಆಗಿದೆ. [ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

  ಟಿವಿ 9 ರೆಹಮಾನ್

  ಟಿವಿ 9 ರೆಹಮಾನ್

  ಕನ್ನಡದ ಖ್ಯಾತ ಸುದ್ದಿ ವಾಹಿನಿ ಟಿವಿ9 ನಲ್ಲಿ ನಿರೂಪಕರಾಗಿದ್ದ ರೆಹಮಾನ್ 'ಬಿಗ್ ಬಾಸ್' ಗೆ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗಿದೆ. ['ಬಿಗ್ ಬಾಸ್' ಮನೆ ಕದ ತಟ್ಟುತ್ತಾರಾ ಟಿವಿ 9 ರೆಹಮಾನ್?]

  ಪೂಜಾ ಗಾಂಧಿ

  ಪೂಜಾ ಗಾಂಧಿ

  ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಲೇ ಇದ್ದ ನಟಿ ಪೂಜಾ ಗಾಂಧಿ ಕೂಡ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದಾರಂತೆ.

  ಮಾಸ್ಟರ್ ಆನಂದ್

  ಮಾಸ್ಟರ್ ಆನಂದ್

  ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಮಾಸ್ಟರ್ ಆನಂದ್ ಕೂಡ ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರಂತೆ.

   ಸುನಾಮಿ ಕಿಟ್ಟಿ

  ಸುನಾಮಿ ಕಿಟ್ಟಿ

  ರಿಯಾಲಿಟಿ ಶೋ ಇಂದ ಈಗಾಗಲೇ ಎಲ್ಲರ ಮನೆ ಮನ ಗೆದ್ದಿರುವ ಸುನಾಮಿ ಕಿಟ್ಟಿ ಕೂಡ ಈ ಬಾರಿ 'ಬಿಗ್ ಬಾಸ್' ಸ್ಪರ್ಧಿಯಂತೆ.

   ಭಾವನಾ ಬೆಳಗೆರೆ

  ಭಾವನಾ ಬೆಳಗೆರೆ

  ಪತ್ರಕರ್ತ ರವಿ ಬೆಳಗೆರೆ ಪುತ್ರಿ, ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ಕೂಡ 'ಬಿಗ್ ಬಾಸ್' ಮನೆಯಲ್ಲಿ ವಾಸ ಪ್ರಾರಂಭಿಸಿದ್ದಾರಂತೆ. ['ಬಿಗ್ ಬಾಸ್' ಮನೆಗೆ ರವಿ ಬೆಳಗೆರೆ ಪುತ್ರಿ ಭಾವನಾ?]

  ಶೃತಿ

  ಶೃತಿ

  ವೈಯುಕ್ತಿಕ ಜೀವನದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ನಟಿ ಶೃತಿ ಕೂಡ 'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆಗಿದ್ದಾರೆ ಎನ್ನಲಾಗಿದೆ. [ನಟಿ ಶ್ರುತಿ, ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ತಾರಾ?]

  ಚಂದನ್

  ಚಂದನ್

  'ಬಿಗ್ ಬಾಸ್' ಶೋಗಾಗಿ ಮೊದಲಿನಿಂದಲೂ ಕಿರುತೆರೆಯ ಸ್ಟಾರ್ ನಟ ಚಂದನ್ ಹೆಸರು ಕೇಳಿಬರುತ್ತಲೇ ಇದೆ. ಅದರಂತೆ ಚಂದನ್ 'ಬಿಗ್ ಬಾಸ್' ಮನೆಗೆ ಬಿಲ್ಕುಲ್ ನೋ ಅನ್ನದೇ ಹೋಗಿದ್ದಾರಂತೆ.

   'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ

  'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ

  ಪ್ರಸಿದ್ಧ ಧಾರಾವಾಹಿ 'ರಾಧಾಕಲ್ಯಾಣ' ಖ್ಯಾತಿಯ ಕೃತಿಕಾ ಈ ಬಾರಿ 'ಬಿಗ್ ಬಾಸ್' ಮನೆ ಕದ ತಟ್ಟಿದ್ದು ಆಗಿದ್ಯಂತೆ.

  ನೇಹಾ ಗೌಡ

  ನೇಹಾ ಗೌಡ

  ಗಗನ ಸಖಿ ನೇಹಾ ಗೌಡ ಕೂಡ 'ಬಿಗ್ ಬಾಸ್'ನಲ್ಲಿ ಸ್ಪರ್ಧಿಯಾಗಿದ್ದಾರಂತೆ.

  ಆರ್.ಜೆ.ನೇತ್ರ

  ಆರ್.ಜೆ.ನೇತ್ರ

  ಎಫ್.ಎಂನಲ್ಲಿ ಪಟಪಟ ಅಂತ ಮಾತನಾಡುವ ಆರ್.ಜೆ. ನೇತ್ರ ಕೂಡ 'ಬಿಗ್ ಬಾಸ್' ಮನೆ ಸೇರಿದ್ದಾರಂತೆ.

  ರವಿ ಮುರೂರು

  ರವಿ ಮುರೂರು

  ಶಿರಸಿ ಮೂಲದ ಶಾಸ್ತ್ರೀಯ ಸಂಗೀತ ಗಾಯಕ ರವಿ ಮುರೂರು ಕೂಡ 'ಬಿಗ್ ಬಾಸ್' ಮನೆಯಲ್ಲಿ ಗಾನ ಸುಧೆ ಹರಿಸಲಿದ್ದಾರಂತೆ.

  ಬರೀ 12 ಜನ?

  ಬರೀ 12 ಜನ?

  ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಲಿಸ್ಟ್ ನಲ್ಲಿ ಈ 12 ಮಂದಿಯ ಹೆಸರು ಇದೆ. ಇವರ ಜೊತೆ ಇನ್ನೂ ಮೂವರು ಯಾರಿರಲಿದ್ದಾರೆ ಅನ್ನೋದು ಗುಟ್ಟಾಗಿದೆ.

  ಎಲ್ಲಿ ಹೋದರು ಮೈತ್ರಿಯಾ ಗೌಡ

  ಎಲ್ಲಿ ಹೋದರು ಮೈತ್ರಿಯಾ ಗೌಡ

  ಆರಂಭದಿಂದಲೂ ಮೈತ್ರಿಯಾ ಗೌಡ 'ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ ಅಂತ ಹೇಳಲಾಗ್ತಿತ್ತು. ಆದರೆ, ಈ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಮೈತ್ರಿಯಾ ಗೌಡ 'ಬಿಗ್ ಬಾಸ್' ಸ್ಪರ್ಧಿ ಆಗ್ತಾರಾ ಇಲ್ವಾ ಅನ್ನೋದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

  ಇದೇ ಫೈನಲ್ ಲಿಸ್ಟ್?

  ಇದೇ ಫೈನಲ್ ಲಿಸ್ಟ್?

  ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, 'ಇವರೆಲ್ಲಾ ' ಬಿಗ್ ಬಾಸ್ ಮನೆಯಲ್ಲಿ ಬಂಧಿಯಾಗಿದ್ದು ಆಗಿದೆ. ಈ ಪಟ್ಟಿ ಖಚಿತ ಅಂತ ಗೊತ್ತಾಗೋದು ಇಂದು ಸಂಜೆ 6 ಗಂಟೆ ನಂತರ. ಅಲ್ಲಿವರೆಗೂ ಯಾವುದೇ ನಿರೀಕ್ಷೆ ಬೇಡ.

  English summary
  'Bigg Boss' is back in Kannada. 'Bigg Boss-3' will be aired in 'Colours Kannada Channel' from today (October 25th). According to the sources, Huccha Venkat, Pooja Gandhi, Shruthi, to participate as contestants. Check out the leaked list of Bigg Boss Kannada Season 3 contestants here.
  Monday, October 26, 2015, 10:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X