ಬಿಗ್ ಬಾಸ್ ಮನೆಗೆ ರವಿ ಬೆಳಗೆರೆ 'ಹಾಯ್' ಹೇಳುವುದು ಕನ್ಫರ್ಮ್
ಬಿಗ್ ಬಾಗ್ ಸೀಸನ್-7ಗೆ ದಿನಗಣನೆ ಪ್ರಾರಂಭವಾಗಿದೆ. ಬಿಗ್ ಬಾಸ್ ಪ್ರಾರಂಭವಾಗುತ್ತಿದ್ದಂತೆ ಬಿಗ್ ಮನೆಗೆ ಯಾರೆಲ್ಲ ಹೋರಬಹುದು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಈ ಬಾರಿ ಬಿಗ್ ಮನೆಗೆ ಸೆಲೆಬ್ರಿಟಿಗಳು ಮಾತ್ರ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೆ ಸಾಕಷ್ಟು ಸೆಲೆಬ್ರಿಟಿಗಳ ಪಟ್ಟಿ ವೈರಲ್ ಆಗಿದೆ.
ಈ ಪಟ್ಟಿಯಲ್ಲಿ ಖ್ಯಾತ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೆಸರು ಕೂಡ ಕೇಳಿ ಬರುತ್ತಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ರವಿ ಬೆಳಗೆರೆ ಕಾಣಸಿಗಲಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಕೆಲವು ದಿನಗಳ ಹಿಂದೆ "ಫಿಲ್ಮಿ ಬೀಟ್ ಕನ್ನಡ" ಸ್ವತಃ ರವಿ ಬೆಳಗೆರೆ ಅವರನ್ನು ಸಂಪರ್ಕಿಸಿತ್ತು. ಆದ್ರೆ ಆಗ ಬೆಳಗೆರೆ 'ಇಲ್ಲ' ಎನ್ನುವ ಪ್ರತಿಕ್ರಿಯೆ ನೀಡಿದ್ದರು. ಆದ್ರೀಗ ಅವರ ಆಪ್ತ ಮೂಲಗಳ ಪ್ರಕಾರ ಬೆಳಗೆರೆ ಬಿಗ್ ಬಾಸ್ ಮನೆಗೆ ಹೋಗುವುದು ಖಚಿತವಾಗಿದೆ.

ಬಿಗ್ ಮನೆಯಲ್ಲಿ ಬೆಳಗೆರೆ: ಖಚಿತ ಪಡಿಸಿದ ಆಪ್ತ ಮೂಲಗಳು
ಈ ಬಾರಿಯ ಬಿಗ್ ಬಾಸ್ ಆಟದಲ್ಲಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಈ ಬಗ್ಗೆ ರವಿ ಬೆಳಗೆರೆ ಆಪ್ತ ಮೂಲಗಳು "ಫಿಲ್ಮಿ ಬೀಟ್ ಕನ್ನಡ"ಗೆ ಸ್ಪಷ್ಟಪಡಿಸಿವೆ. ಫಿಲ್ಮಿ ಬೀಟ್ ನಲ್ಲಿ ಪ್ರಕಟವಾದ ಸಂಭಾವ್ಯ ಪಟ್ಟಿಯಲ್ಲಿಯೂ ರವಿ ಬೆಳಗೆರೆ ಹೆಸರು ಇದೆ. ಅದೇ ರೀತಿ ಬಿಗ್ ಮನೆಗೆ ರವಿ ಬೆಳಗೆರೆ ಹೋಗುವುದು ಕನ್ಫರ್ಮ್ ಆಗಿದೆ.

ವೈಲ್ಡ್ ಕಾರ್ಡ್ ಎಂಟ್ರಿನಾ?
ಬಿಗ್ ಬಾಸ್ ಮನೆಗೆ ರವಿ ಬೆಳಗೆರೆ ಎಂಟ್ರಿ ಕೊಡುವುದು ಖಚಿತವಾಗಿದೆ. ಆದ್ರೆ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಾರಾ ಅಥವಾ ವೈಲ್ಡ್ ಕಾರ್ಡ್ ಎಂಟ್ರಿನಾ ಎನ್ನುವುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೆ ಇದ್ರು, ಬೆಳಗೆರೆ ಎಷ್ಟು ದಿನಗಳು ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನುವುದು ಪ್ರೇಕ್ಷಕರ ಸದ್ಯದ ಕುತೂಹಲ.

ಸೀಸನ್ 3 ನಲ್ಲಿದ್ದರು ಭಾವನ ಬೆಳಗೆರೆ
'ಬಿಗ್ ಬಾಸ್ ಕಾರ್ಯಕ್ರಮದ ಸೀಸನ್ 3' ನಲ್ಲಿ ರವಿ ಬೆಳೆಗೆರೆ ಪುತ್ರಿ ಭಾವನ ಬೆಳಗೆರೆ ಭಾಗಿಯಾಗಿದ್ದರು. ಮಾಸ್ಟರ್ ಆನಂದ್, ರೆಹಮಾನ್, ಪೂಜಾ ಗಾಂಧಿ, ಚಂದನ್ ಜೊತೆಗೆ ಸ್ಪರ್ಧಿಗೆ ಇಳಿದಿದ್ದರು. ಕಾರ್ಯಕ್ರಮದ 10ನೇ ವಾರ ಭಾವನ ಬೆಳೆಗೆರೆ ಬಿಗ್ ಮನೆಯಿಂದ ಹೊರ ಬಂದಿದ್ದರು.

ಪ್ರಬಲ ಸ್ಪರ್ಧಿಗಳ ಅಗತ್ಯ ವಾಹಿನಿಗೂ ಇದೆ
'ಬಿಗ್ ಬಾಸ್' ಕಾರ್ಯಕ್ರಮ ಕಳೆದ ಎರಡ್ಮೂರು ಸೀಸನ್ ಗಳು ಹಿನ್ನಡೆ ಅನುಭವಿಸಿವೆ. ಹಿಂದಿನ ಆವೃತ್ತಿಗಳಲ್ಲಿ ಪ್ರಬಲವಾದ ಸ್ಪರ್ಧಿಗಳ ಕೊರತೆ ಕಾಡುತ್ತಿತ್ತು. ಟಿ ಆರ್ ಪಿ ಕಡಿಮೆ ಆಗಲು ಇದು ಕೂಡ ಒಂದು ಕಾರಣ ಆಗಿತ್ತು. ಹೀಗಾಗಿ ಈ ಬಾರಿ ರವಿ ಬೆಳಗೆರೆ ತರಹ ಖ್ಯಾತಿಗಳಿಸಿರುವ ವ್ಯಕ್ತಿಗಳ ಅವಶ್ಯಕತೆ ಕಾರ್ಯಕ್ರಮಕ್ಕೂ ಇದೆ. ಆ ಕಾರಣ ಇಂತಹ ಪ್ರಯತ್ನಕ್ಕೆ ವಾಹಿನಿ ಮುಂದಾಗಿರಬಹುದು ಎಂಬುದು ಮಾರುಕಟ್ಟೆಯ ವಿಶ್ಲೇಷಣೆ.

ಬಿಗ್ ಬಾಸ್ ಸಂಭಾವ್ಯ ಪಟ್ಟಿ ಹೀಗಿದೆ
ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸಂಭಾವ್ಯರ ಪಟ್ಟಿ "ಫಿಲ್ಮಿ ಬೀಟ್ ಕನ್ನಡ"ಕ್ಕೆ ಲಭ್ಯವಾಗಿದೆ. ಹಾಸ್ಯ ನಟ ಕುರಿ ಪ್ರತಾಪ್, ಜೈ ಜಗದೀಶ್, ಚಂದನಾ ಅನಂತಸ್ವಾಮಿ, ರಾಜುತಾಳಿಕೋಟೆ, ಶೈನ್ ಶೆಟ್ಟಿ, ಕಿರಣ್ ರಾಜ್, ಭೂಮಿ ಶೆಟ್ಟಿ, ದೀಪಿಕಾ ದಾಸ್, ವಾಸುಕಿ ವೈಭವ್, ದುನಿಯಾ ರಶ್ಮಿ, ಗುರುಲಿಂಗ ಸ್ವಾಮಿಜಿ, ಪಂಕಜ್ ಎಸ್ ನಾರಾಯಣ್, ಕಾರ್ಕಳ ಡ್ಯಾನ್ಸರ್, ಚೈತ್ರಾ ವಾಸುದೇವನ್, ಧಾರಾವಾಹಿ ನಟಿ ಸುಜಾತ ಮತ್ತು ರವಿ ಬೆಳಗೆರೆ ಈ 17 ಮಂದಿ ಬಿಗ್ ಮನೆಗೆ ಎಂಟ್ರಿಕೊಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.


Click it and Unblock the Notifications











