ಪ್ರಜ್ವಲಿಸುತ್ತಿರುವ ಪೆನ್ ಡ್ರೈವ್ ನಡುವೆ ಕನ್ನಡ ಕಿರುತೆರೆ ನಾಯಕಿಯ ಅಶ್ಲೀಲ ವಿಡಿಯೋ ವೈರಲ್...?

By ಫಿಲ್ಮಿ ಬೀಟ್ ಡೆಸ್ಕ್

ಪತ್ರಿಕಾ, ಟಿವಿ ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾ ಕಾಂಪಿಟೇಷನ್ ಕೊಡಲು ಶುರುವಾದ ಮೇಲಂತೂ ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ ಸ್ಟಾಗ್ರಾಂ ಇತ್ಯಾದಿ ಜಾಲ ತಾಣಗಳ ಅಬ್ಬರ ಅಷ್ಟಿಷ್ಟಲ್ಲ.

ತಮ್ಮದೇ ಆದ ಗ್ರೂಪ್ ಗಳನ್ನು, ಚಾನೆಲ್ ಗಳನ್ನು ಮಾಡಿಕೊಂಡ ಬಹುತೇಕ ಸೈಟ್ ಗಳು ಹಿಟ್ಸ್, ವ್ಯೂವರ್ ಶಿಪ್ ಹೆಚ್ಚು ಗಳಿಸುವ ಸಲುವಾಗಿ ಕೆಲವೊಮ್ಮೆ ಫೇಕ್ ನ್ಯೂಸ್ ಗಳನ್ನು ಹರಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸಗಳನ್ನ ಮಾಡ್ತಿದ್ದರೆ, ಇನ್ನೂ ಕೆಲವೊಮ್ಮೆ ಪ್ರಭಾವಿಗಳ, ಸೆಲೆಬ್ರೆಟಿಗಳ ಹೆಸರಿಗೆ ಮಸಿ ಬಳಿಯುವ ಕೆಲಸಗಳನ್ನೂ ಕೂಡ ಜೋರಾಗಿಯೇ ಮಾಡುತ್ತಿವೆ. ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಅವರ ವಿಚಾರದಲ್ಲಿ ಕೂಡ ಇಂಥಹದ್ದೇ ಕೆಲಸ ನಡೆಯುತ್ತಿದೆಯಾ ಅನ್ನುವ ಅನುಮಾನ ಸದ್ಯಕ್ಕೆ ದಟ್ಟವಾಗಿ ಕಾಡುತ್ತಿದೆ.

South Indian Serial Actress Jyothi Rai Bed Room Obscene Videos Leaked In Social Media

ಹೌದು, ಕರುನಾಡಿನೆಲ್ಲೆಡೆ ಅಷ್ಟೇ ಅಲ್ಲ ಭಾರತದೆಲ್ಲೆಡೆ ಹಾಸನದ ಪೆನ್ ಡ್ರೈವ್ ಪ್ರಜ್ವಲಿಸುತ್ತಿರುವ ಈ ಸಮಯದಲ್ಲಿ, ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದ ಮೂಲಕ ಊರೂರು ಮತ್ತು ಹಳ್ಳಿ ಹಳ್ಳಿಗಳಿಗೆ ತಲುಪುತ್ತಿದೆ. ಕೇವಲ ಕನ್ನಡ ಕಿರುತೆರೆಯನ್ನಷ್ಟೇ ಅಲ್ಲ, ಅಕ್ಕ-ಪಕ್ಕದ ರಾಜ್ಯದ ಕಿರುತೆರೆ ವಲಯವನ್ನೂ ಕೂಡ ಈ ವಿಡಿಯೋ ಬೆಚ್ಚಿ ಬೀಳಿಸಿದೆ.

ಇನ್ನೂ.. ಜ್ಯೋತಿ ರೈ ಅವರದ್ದು ಎನ್ನಲಾದ ಈ ತುಣುಕು ಮುಂದೆ ಇಟ್ಟುಕೊಂಡು, ತಮ್ಮ ತಮ್ಮ ಯುಟ್ಯೂಬ್‌ ಚಾನೆಲ್‌ನ ಸಬ್‌ಸ್ಕ್ರೈಬರ್ಸ್‌ಗಳನ್ನ ಹೆಚ್ಚಿಸಿಕೊಳ್ಳುವ ಕೆಲಸವನ್ನು ಕೂಡ ಅನೇಕರು ಮಾಡ್ತಿದ್ದಾರೆ. ಸಬ್‌ಸ್ಕ್ರೈಬರ್ಸ್‌ ಸಂಖ್ಯೆ ಒಂದು ಸಾವಿರದ ಗಡಿಯನ್ನ ದಾಟಿದರೆ, ವಿಡಿಯೋ ಅಪ್ಲೋಡ್ ಮಾಡುವ ಆಮಿಷವನ್ನೊಡ್ಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಉದಾಹರಣೆಗೆ EDIT_BY_ABHI ಎಂಬ ಖಾತೆ.

South Indian Serial Actress Jyothi Rai Bed Room Obscene Videos Leaked In Social Media

ಕೇವಲ ಇಂದೊಂದೆ ಖಾತೆ ಇಲ್ಲ ಇಂತಹ ಹತ್ತಾರು ಖಾತೆಗಳು ಸಾಮಾಜಿಕ ಜಾಲತಾಣದಲ್ಲಿ ಇಟ್ಟಾಡುತ್ತಿವೆ. ವಿಡಿಯೋದಲ್ಲಿರುವ ಮಹಿಳೆ ಮತ್ತು ಪುರುಷ ಯಾರು ಅನ್ನುವ ಸತ್ಯಾಸತ್ಯತೆ ಹೊರ ಬರುವ ಮುನ್ನವೇ ವಿಡಿಯೋದಲ್ಲಿರುವುದು ಜ್ಯೋತಿ ರೈ ಅವರೇ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಂಥ ಎಲ್ಲರು ಒಂದೇ ದೋಣಿಯವರಲ್ಲ. ಕೆಲವರು ಇದು ಜ್ಯೋತಿ ರೈ ಅವರದ್ದಲ್ಲ ಬದಲಿಗೆ ಮಾರ್ಫ್ ಮಾಡಲಾದ ವಿಡಿಯೋ ಎಂಬ ವಾದವನ್ನ ಕೂಡ ಕೆಲವರು ಮಾಡುತ್ತಿದ್ದಾರೆ

ಅಂದ್ಹಾಗೇ ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದ ಜ್ಯೋತಿ ರೈ 20ರ ಹರೆಯದಲ್ಲಿಯೇ ಮದುವೆಯಾಗಿದ್ದರು. ಆ ನಂತರ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ಸದ್ಯಕ್ಕೆ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಂಸಾರ ನಡೆಸುತ್ತಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿ ರೈ ಸೈಬರ್ ಕೈಮ್‌ಗೆ ದೂರು ದಾಖಲಿಸಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ತನಿಖೆ ನಂತರೆ ಸತ್ಯಾಸತ್ಯತೆ ಹೊರಬರಲಿದೆ.

More from Filmibeat

English summary
An obscene video said to be of South Indian television actress Jyoti Rai has gone viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X