ಇನ್ಮುಂದೆ ಕಿರುತೆರೆಯಲ್ಲಿ ಮಿಂಚಲಿರುವ ಸ್ಟಾರ್ ನಟ; ವೀಕ್ಷಕರ ತಲೆಗೆ ಹುಳ ಬಿಟ್ಟ ವಾಹಿನಿ
ಮನರಂಜನಾ ವಾಹಿನಿಗಳಲ್ಲಿ ವಾರ ವಾರವೂ ಒಂದಲ್ಲ ಒಂದು ಸರ್ಪ್ರೈಸ್ ಅನ್ನು ವೀಕ್ಷಕರಿಗೆ ನೀಡುತ್ತಲೇ ಇರುತ್ತವೆ. ವೀಕ್ಷಕರು ಕೂಡ ಹೊಸತನ್ನು ನೋಡಲು ಕಾತುರರಾಗಿರುತ್ತಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಪ್ರಸಾರವಾಗುವುದು ಹೊಸತೇನಲ್ಲ. ಆದರೆ, ಇದೀಗ ಹೊಸ ಸಾಹಸ ಒಂದಕ್ಕೆ ಕೈ ಹಾಕಿದೆ ಎಂದರೆ ತಪ್ಪಾಗುವುದಿಲ್ಲ.
ಹೊಸ ಧಾರಾವಾಹಿಗಳು ಬರುವುದು ಹೊಸತೇನಲ್ಲ. ಕಥೆಗಳು ಹೊಸದಾಗಿರಬಹುದು. ಕಲಾವಿದರು ಹೊಸಬರು ಬರುತ್ತಾರೆ. ಆದರೆ, ಸ್ಟಾರ್ ನಟನೊಬ್ಬರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಹೊಸ ವಿಚಾರವೇ.

ವೀಡಿಯೋ ನೋಡಿ ಗೆಸ್ಸಿಂಗ್ ಶುರು
ಸ್ಟಾರ್ ಸುವರ್ಣ ವಾಹಿನಿಯಲ್ಲಿ' ಸ್ನೇಹದ ಕಡಲಲ್ಲಿ' ಎಂಬ ಹೊಸ ಧಾರಾವಾಹಿಯ ಪ್ರೊಮೋ ನೋಡೇ ಇರುತ್ತೀರಾ. ಕಳೆದ ತಿಂಗಳೇ ಈ ಸೀರಿಯಲ್‌ನ ಪ್ರೊಮೋ ಪ್ರಸಾರವಾಗಿದೆ. ಆದರೆ ಈಗ ಹೊಸ ಅಪ್ ಡೇಟ್ ಏನೆಂದರೆ, ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಹೊಸ ಪಾತ್ರ. ಪಾತ್ರ ಯಾವುದು ಎಂಬುದು ಗೊತ್ತಿಲ್ಲ. ಹಾಗೆಯೇ ಕಲಾವಿದರ ಬಗ್ಗೆಯೂ ಗೊತ್ತಿಲ್ಲ. ಗೆಸ್ ಮಾಡಿ ಎಂದು ಬ್ಲರ್ ಆಗಿರುವ ವೀಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ನಟ ಸೌತ್ ಇಂಡಿಯಾದ ಸ್ಟಾರ್ ನಟ ಎಂದು ಹೇಳಲಾಗಿದೆ. ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ನಟ ಯಾರು ಎಂಬುದನ್ನು ಊಹಿಸುವುದು ಈಗ ವೀಕ್ಷಕರ ಕೆಲಸ.
ಸ್ಟಾರ್ ನಟನ ಕ್ಲೂ ಏನು?
ಈಗಾಗಲೇ ಈ ವೀಡಿಯೋ ನೋಡಿದ ನೆಟ್ಟಿಗರೆಲ್ಲಾ ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ತುಳುನಾಡಿನ ಮೂಲದವರು ಎಂದು ಒಬ್ಬರು ಕ್ಲೂ ಕೊಟ್ಟಿದ್ದರೆ, ಕನ್ನಡ, ಮಲಯಾಳಂ, ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನ್ನೂ ನಟಿಸಿದ್ದಾರೆ. 11 ಭಾಷೆಯಲ್ಲಿ ನಟಿಸಿದ್ದಾರೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇಷ್ಟು ದೊಡ್ಡ ವ್ಯಕ್ತಿಯ ಜೊತೆಗೆ ಕೆಲಸ ಮಾಡುವುದು ನಮ್ಮ ಪುಣ್ಯ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇನ್ನು ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ ಎಂದು ಮಗದೊಬ್ಬರು ಕ್ಲೂ ನೀಡಿದ್ದಾರೆ.
ಮೂವರು ನಟರ ಹೆಸರು ಗೆಸ್
ಈಗ ನೆಟ್ಟಿಗರು. ಒಂದೊಂದೇ ಹೆಸರುಗಳನ್ನು ಗೆಸ್ ಮಾಡುತ್ತಿದ್ದಾರೆ. ಹಲವು ನೆಟ್ಟಿಗರು ಗೆಸ್ ಮಾಡಿರುವ ಹೆಸರು ಖ್ಯಾತ ತೆಲುಗು ನಟ ಸುಮನ್ ಅವರದ್ದು. ಇನ್ನೂ ಕೆಲವರು ಹಿರಿಯ ನಟರಾದ ದೇವರಾಜ್, ಅವಿನಾಶ್ ಅವರ ಹೆಸರನ್ನೂ ಕೂಡ ತಿಳಿಸಿದ್ದಾರೆ. ಆದರೆ, ನಟ ಸುಮನ್ ಕನ್ನಡ ಕಿರುತೆರೆಗೆ ಬರುತ್ತಾರಾ? ಇಲ್ಲ ಧಾರಾವಾಹಿಯ ಪ್ರೊಮೋಷನ್‌ಗಾಗಿ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ? ಎಂಬುದು ಕುತೂಹಲಕಾರಿಯಾಗಿದೆ.
ಸ್ನೇಹದ ಕಡಲಲ್ಲಿ ಪಾತ್ರಧಾರಿಗಳು
ಇನ್ನು 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ 'ಲಕ್ಷ್ಮೀಬಾರಮ್ಮ' ಖ್ಯಾತಿಯ ಚಂದು ಗೌಡ ಹಾಗೂ 'ನಮ್ಮನೆ ಯುವರಾಣಿ' ಖ್ಯಾತಿಯ ಕಾವ್ಯಾ ಮಹಾದೇವ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸಮೀಪ್ ಆಚಾರ್ಯ ಅವರು ವಿಲನ್ ಎಂದು ಹೇಳಲಾಗಿದೆ. ಉಳಿದಂತೆ ಹೇಮಾ ಬೆಳವಾಡಿ, ಅನನ್ಯಾ ಕಾಸರವಳ್ಳಿ, ಕಾಮಿಡಿ ಕಿಲಾಡಿ ನಯನಾ, ಅಭಿಜ್ಞಾ ಭಟ್ ನಟಿಸಿದ್ದಾರೆ. ಇನ್ನು ಈ ಧಾರಾವಾಹಿಗೆ ನೀನಾದೆ ನಾ, ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಗಳ ನಿರ್ದೇಶಕ ಪ್ರೀತಂ ಶೆಟ್ಟಿ ಸ್ನೇಹದ ಕಡಲಲ್ಲಿ ಧಾರಾವಾಹಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಧಾರಾವಾಹಿಯೂ ರಿಮೇಕ್ ಎಂದು ನೆಟ್ಟಿಗರು ಹೇಳಿದ್ದು, ತೆಲುಗಿನ 'ನಿನ್ನು ಕೋರಿ' ಹಾಗೂ ಹಿಂದಿಯ 'ಮೇಘಾ ಬರ್ಸೆಂಗೆ' ಧಾರಾವಾಹಿ ಮೂಲ ಎಂದು ಹೇಳಲಾಗಿದೆ.


Click it and Unblock the Notifications











