'ಸರಿಗಮಪ' ವೇದಿಕೆಗೆ ಬರುತ್ತಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ

By Naveen

ಕನ್ನಡ ಕಿರುತೆರೆಯಲ್ಲಿ ಸದ್ಯ ಹೆಚ್ಚು ಜನಪ್ರಿಯತೆ ಹೊಂದಿರುವ ಕಾರ್ಯಕ್ರಮದ ಪೈಕಿ 'ಸರಿಗಮಪ' ಪ್ರಮುಖವಾದದ್ದು. ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನೋಡುಗರ ಮೆಚ್ಚುಗೆ ಗಳಿಸಿದೆ. ಮಕ್ಕಳ ಹಾಡುಗಳು ಕೇಳುವುದೇ ಒಂದು ಚಂದದಂತೆ ಇದೆ.

ಇಂತಹ ಕಾರ್ಯಕ್ರಮಕ್ಕೆ ಈಗ ಶ್ರೇಷ್ಠ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬರುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಹಂಸಲೇಖ ಅವರು ಹಂಚಿಕೊಂಡಿದ್ದಾರೆ. ಇಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದ ಹಂಸಲೇಖ ಈ ವಿಷಯವನ್ನು ಹೇಳಿದ್ದಾರೆ. ಸರಿಗಮಪ ಕಾರ್ಯಕ್ರಮದ ವೇದಿಕೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬರುತ್ತಾರೆ ಎಂದು ಹಂಸಲೇಖ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

S P Balasubrahmanyam will be the guest for 'Sarigamapa Season 14'

ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಹಂಸಲೇಖ ಅವರು ತುಂಬ ವರ್ಷ ಜೊತೆಗೆ ಕೆಲಸ ಮಾಡಿದ್ದಾರೆ. ಇಬ್ಬರು ಒಳ್ಳೆಯ ಆಪ್ತರಾಗಿರುವ ಕಾರಣ 'ಸರಿಗಮಪ' ಕಾರ್ಯಕ್ರಮಕ್ಕೆ ಎಸ್.ಪಿ.ಬಿ ಆಗಮಿಸುತ್ತಿದ್ದಾರೆ. ಈ ಹಿಂದೆ ಎಸ್.ಪಿ.ಬಿ ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ತೀರ್ಪುಗಾರರಾಗಿದ್ದರು. ಅಂದಹಾಗೆ, 'ಸರಿಗಮಪ' ಕಾರ್ಯಕ್ರಮ 'ಜೀ ಕನ್ನಡ' ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುತ್ತದೆ. ಹಂಸಲೇಖ, ಅರ್ಜುನ್ ಜನ್ಯ ಮತ್ತು ವಿಜಯ ಪ್ರಕಾಶ್ ಕಾರ್ಯಕ್ರಮ ತೀರ್ಪುಗಾರರಾಗಿದ್ದಾರೆ.

More from Filmibeat

English summary
Singer S P Balasubrahmanyam will be the guest for Zee Kannada channel's popular show 'Sarigamapa Season 14'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X