BBK12: ಅದೃಷ್ಟ ಕೈಕೊಡ್ತು; 98 ದಿನಗಳ ಬಿಗ್‌ಬಾಸ್ ಜರ್ನಿ ಮುಗೀತು
ಬಿಗ್‌ಬಾಸ್ ಆಟದಲ್ಲಿ ಯಾವುದನ್ನು ಊಹಿಸೋಕೆ ಆಗೊಲ್ಲ. ಎಲ್ಲರ ನಿರೀಕ್ಷೆ ಮೀರಿ ಕೆಲವೊಮ್ಮೆ ಎಲಿಮಿನೇಷನ್ ನಡೆಯುತ್ತದೆ. ಕಳಪೆ ಎಂದುಕೊಂಡಿದ್ದವರು ಬಹಳ ದಿನ ಮನೆಯಲ್ಲಿ ಉಳಿದುಕೊಂಡುಬಿಡ್ತಾರೆ. ಪ್ರಬಲ ಸ್ಪರ್ಧಿ ಎಂದುಕೊಂಡವರು ಬೇಗ ಎಲಿಮಿನೇಟ್ ಆಗುತ್ತಾರೆ.
ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಕೂಡ ಕೆಲವರು ಅದೃಷ್ಟದಿಂದಲೇ ಉಳಿದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸ್ಪಂದನಾ ಹೆಸರು ಅದರಲ್ಲಿ ಮುಂಚೂಣಿಯಲ್ಲಿತ್ತು. ಆಕೆ ಅಷ್ಟೇನು ಚೆನ್ನಾಗಿ ಆಡ್ತಿಲ್ಲ. ಗ್ಲಾಮರ್ ಗೊಂಬೆಯಂತೆ ಮಿಂಚುವುದು ಬಿಟ್ಟರೆ ಬಿಗ್‌ಬಾಸ್ ಅಸಲಿ ಆಟ ಗೊತ್ತಿಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದರು.

ಸ್ಪಂದನಾಗಿಂತ ಪ್ರಬಲ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು ಹೇಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಚರ್ಚೆ ನಡೀತಿತ್ತು. ಅಂತೂ ಇದೀಗ ಸ್ಪಂದನಾ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಫಿನಾಲೆಗೆ ಇನ್ನೆರಡು ವಾರ ಇರುವಾಗಲೇ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಈ ಎಲಿಮಿನೇಷನ್ ಅಚ್ಚರಿ ವೀಕ್ಷಕರಿಗೆ ಅಚ್ಚರಿ ಅನ್ನಿಸಲೇ ಇಲ್ಲ.
ಕಳೆದ ವಾರವೇ ಸ್ಪಂದನಾ ಮನೆಯಿಂದ ಹೊರ ಬರಬೇಕಿತ್ತು. ಸೂರಜ್ ಅಥವಾ ಮಾಳು ಬದಲು ಆಕೆ ಎಲಿಮಿನೇಟ್ ಆಗಬೇಕಿತ್ತು ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಸುಳ್ಳಾಗಿತ್ತು. ಈ ವಾರ ಅನಿವಾರ್ಯವಾಗಿ ಸ್ಪಂದನಾ ಹೊರಬರುವಂತಾಯಿತು. ಈ ವಾರ ಧ್ರುವಂತ್, ಧನುಷ್, ರಘು, ಅಶ್ವಿನಿ, ಗಿಲ್ಲಿ, ರಾಶಿಕಾ, ಕಾವ್ಯಾ, ರಕ್ಷಿತಾ, ಸ್ಪಂದನಾ ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದರು. ಅಶ್ವಿನಿ ಸೇಫ್ ಆಗಿರುವುದನ್ನು ಶನಿವಾರವೇ ಸುದೀಪ್ ಖಚಿತಪಡಿಸಿದ್ದರು. ಇನ್ನು ಯಾರೆಲ್ಲಾ ಸೇಫ್ ಆಗಿದ್ದಾರೆ ಎಂದು ನಾಳಿನ ಸಂಚಿಕೆಯಲ್ಲಿ ಹೇಳ್ತೀನಿ ಎಂದಿದ್ದರು.
ಭಾನುವಾರದ ಎಪಿಸೋಡ್‌ನಲ್ಲಿ ಸರಳವಾಗಿಯೇ ಎಲಿಮಿನೇಷನ್ ನಡೀತು. ಯಾವುದೇ ಆಕ್ಟಿವಿಟಿ ಇಲ್ಲದೇ ಸಿಂಪಲ್ ಆಗಿ ಸ್ಪಂದನಾ ಔಟ್ ಎನ್ನುವುದನ್ನು ಸುದೀಪ್ ಹೇಳಿದ್ದರು. ಅಂತಿಮವಾಗಿ ಎಲ್ಲರನ್ನು ಸೇಫ್ ಮಾಡಿ ರಾಶಿಕಾ ಹಾಗೂ ಸ್ಪಂದನಾ ಹೆಸರು ಫೈನಲ್ ಮಾಡಿದ್ದರು. ಬಳಿಕ ಸ್ಪಂದನಾ ಹೆಸರು ಹೇಳಿ ಎಲಿಮಿನೇಟ್ ಆಗಿರುವುದನ್ನು ಘೋಷಿಸಿದ್ದರು. ಅಲ್ಲಿಗೆ 98 ದಿನಗಳ ಸ್ಪಂದನಾ ಬಿಗ್‌ಬಾಸ್ ಜರ್ನಿ ಮುಗಿದಿದೆ.
ಕಾವ್ಯಾ ಜೊತೆ ಸ್ಪಂದನಾಗೆ ಒಳ್ಳೆ ಒಡನಾಟ ಇತ್ತು. ಇನ್ನುಳಿದಂತೆ ಧನುಷ್, ಗಿಲ್ಲಿ ಜೊತೆಗೂ ಆತ್ಮೀಯ ಸ್ನೇಹ ಇತ್ತು. ಔಟ್ ಆಗಿ ಬಂದ ಬಳಿಕ ಬಿಗ್‌ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸ್ಪಂದನಾ ಹೇಳಿದ್ದಾರೆ. ಸ್ಪಂದನಾ ಎಲಿಮಿನೇಟ್ ಬಳಿಕ ಬಿಗ್‌ಬಾಸ್ ಮನೆಯಲ್ಲಿ 8 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರದ ನಡುವೆ ಮತ್ತೊಂದು ಎಲಿಮಿನೇಷನ್ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.
ಸದ್ಯ ಮನೆಯಲ್ಲಿ ಗಿಲ್ಲಿ, ಅಶ್ವಿನಿ, ಕಾವ್ಯಾ, ರಕ್ಷಿತಾ, ಧ್ರುವಂತ್, ಧನುಷ್, ರಘು, ರಾಶಿಕಾ ಉಳಿದುಕೊಂಡಿದ್ದಾರೆ. ಯಾರು ಫಿನಾಲೆವರೆಗೂ ಹೋಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಸ್ಪಂದನಾ ಆಟವನ್ನು ಗಂಭೀರವಾಗಿ ಪರಿಗಣಿಸಿ ಆಡಲು ಪ್ರಾರಂಭಿಸಿದ್ದರು. ಆದರೆ ಅದಾಗಲೇ ವೀಕ್ಷಕರಿಂದ ಆಕೆಯ ಬಗ್ಗೆ ನಿರಾಸೆ ಇತ್ತು. ಬರೀ ಅದೃಷ್ಟದಿಂದ ಉಳಿದುಕೊಂಡಿದ್ದಾಳೆ ಎನ್ನುವ ಮಾತು ಕೇಳಿಬರ್ತಿತ್ತು.
ಕಳೆದ ವಾರ ಸುದೀಪ್ ಬಿಗ್‌ಬಾಸ್ ಪಂಚಾಯ್ತಿಗೆ ಬಂದಿರಲಿಲ್ಲ. 'ಮಾರ್ಕ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಫ್ಯಾಮಿಲಿ ರೌಂಡ್ ಬೆನ್ನಲ್ಲೇ ಡಬಲ್ ಎಲಿಮಿನೇಷನ್ ನಡೆದಿತ್ತು. ಸೂರಜ್ ಹಾಗೂ ಮಾಳು ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದರು. ಶನಿವಾರದ ಪಂಚಾಯ್ತಿ ವೇಳೆ ಇಬ್ಬರನ್ನು ವೇದಿಕೆಗೆ ಕರೆಸಿ ಸುದೀಪ್ ಬಿಗ್‌ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದರು. ಕ್ಯಾಪ್ಟನ್ ಗಿಲ್ಲಿಯ ಬಗ್ಗೆ ಸಾಕಷ್ಟು ಚರ್ಚೆ ನಡೀತು. ಗಿಲ್ಲಿಗೆ ಕೊಂಚ ಕ್ಲಾಸ್ ತಗೊಂಡಿದ್ದ ಸುದೀಪ್ ಬಳಿಕ ಆತನ ಆಟದ ಬಗ್ಗೆ ಮೆಚ್ಚಿಕೊಂಡಿದ್ದರು.


Click it and Unblock the Notifications











