ಇಂಜಿನಿಯರಿಂಗ್ ಪದವೀಧರೆಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಈ ನಟಿ ಯಾರು? ಹಿನ್ನೆಲೆಯೇನು?
ಕಿರುತೆರೆ ನಟಿ ಸ್ಪಂದನಾ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಸಕತ್ ಮಿಂಚುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿಯಲ್ಲಿ ನಾಯಕಿ ಸಾಹಿತ್ಯಾ ಆಗಿ ಸ್ಪಂದನಾ ಸೋಮಣ್ಣ ನಟಿಸುತ್ತಿದ್ದಾರೆ. ಸಾಹಿತ್ಯಾ ಪಾತ್ರವನ್ನು ಕಿರುತೆರೆ ವೀಕ್ಷಕರು ಒಪ್ಪಿಕೊಂಡದ್ದು, ಮಾತ್ರವಲ್ಲದೇ ಸ್ಪಂದನಾ ಪಾತ್ರವನ್ನು ಅವರು ಮೆಚ್ಚಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕಿ ಪಲ್ಲವಿ ಆಗಿ ನಟಿಸಿದ್ದರು ಸ್ಪಂದನಾ. ಈ ಧಾರಾವಾಹಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿತ್ತು. ಟಿಆರ್‌ಪಿ ಕಾರಣದಿಂದಲೋ ಏನೋ ನೂರು ಸಂಚಿಕೆ ದಾಟುತ್ತಿದ್ದಂತೆ ಆ ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸಿತ್ತು. ತದ ನಂತರ ಸ್ಪಂದನಾ ಅವರು ಕಿರುತೆರೆಗೆ ಸಾಹಿತ್ಯಾಳಾಗಿ ಮರಳಿದ್ದರು.

ಹೌದು, 'ಕರಿಮಣಿ' ಧಾರಾವಾಹಿಯ ಸಾಹಿತ್ಯಾಳಾಗಿ ಮತ್ತೊಮ್ಮೆ ಕಿರುತೆರೆಗೆ ಸ್ಪಂದನಾ ಕಂ ಬ್ಯಾಕ್ ಆಗಿದ್ದು, ಈಕೆಯ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಸಾಹಿತ್ಯಾ ಪಾತ್ರಕ್ಕೆ ಸ್ಪಂದನಾ ಅವರು ಜೀವ ತುಂಬುತ್ತಿದ್ದು, ಆಕೆಯ ನಟನೆ, ಮಾತಿಗೆ ಜನ ಸೋತುಹೋಗಿದ್ದಾರೆ.
ಸಾಂಸ್ಕೃತಿಕ ನಗರಿಯ ಸ್ಪಂದನಾ ಸೋಮಣ್ಣ ಕಲಿತದ್ದು ಇಂಜಿನಿಯರಿಂಗ್. ವಿದ್ಯಾಭ್ಯಾಸ ಮುಗಿಸಿ ಇಂಜಿನಿಯರ್ ಆಗಿ ಭಡ್ತಿ ಪಡೆಯುವ ಮೊದಲೇ ಬಣ್ಣದ ಲೋಕದಿಂದ ಅವಕಾಶ ದೊರಕಿತು. ಅಂತೆಯೇ ನಟನೆಗೆ ಮುಖ ಮಾಡಿದ ಈಕೆ ಸದ್ಯ ಇಲ್ಲಿ ಭವಿಷ್ಯ ರೂಪಿಸಿಕೊಂಡಿದ್ದಾರೆ. ಪರಭಾಷೆಯ ಕಿರುತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿರುವ ಸ್ಪಂದನಾ ಮೊದಲು ನಟಿಸಿದ್ದು ತೆಲುಗು ಧಾರಾವಾಹಿಯಲ್ಲಿ.
ತೆಲುಗಿನ 'ಅಭಿಲಾಶಾ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾನು ನನ್ನ ಕನಸು' ಧಾರಾವಾಹಿಯ ಅನುವಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟರು. ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಈಕೆ ಸ್ಯಾಂಡಲ್‌ವುಡ್‌ನಲ್ಲೂ ಕಮಾಲ್ ಮಾಡಿದಾಕೆ.

'ಮರೀಚಿ', 'ದಿಲ್ ಖುಷ್' ಸಿನಿಮಾಗಳಲ್ಲಿ ನಟಿಸಿರುವ ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲೂ ಸಕತ್ ಆ್ಯಕ್ಟೀವ್. ಆಗಾಗ ಫೋಟೋಶೂಟ್ ಗಳನ್ನು ಮಾಡಿಸುವ ಆಕೆ ಅದನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಲೆಹೆಂಗಾ ಧರಿಸಿ ಮಾಡಿಕೊಂಡಿರುವ ಫೋಟೋಶೂಟ್ ಅಂತೂ ಸಕತ್ ಸದ್ದು ಮಾಡುತ್ತಿದೆ. 'ಪ್ರೆಟಿ', 'ಮಸ್ತಾನಿ', 'ನಿನ್ನ ಅಂದಕ್ಕೆ ನಾ ಅಭಿಮಾನಿ', 'ನನ್ನ ಎದೆಗೆ ನೀ ಯಜಮಾನಿ', 'ರಾಣಿ ತರ ಕಾಣಿಸ್ತಿದ್ದೀರಾ', 'ಕಣ್ಣೋಟವೆ ಅದ್ಭುತವಾಗಿದೆ', 'ಬ್ಯೂಟಿಫುಲ್ ಸಾಹಿತ್ಯ' ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ.


Click it and Unblock the Notifications











