ಮನೆಯಲ್ಲಿ ವಿಜಯ್, ಸ್ಪಂದನಾ ಚುಂಬನ ವಿನಿಮಯ
ಮನೆಗೆ ಮೊದಲು ಬಂದ ಅತಿಥಿ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ. ವಿರಹ ವೇದನೆಯಲ್ಲಿ ಬೆಂದು ಬೆಂಡಾಗಿದ್ದ ವಿಜಯ್ ಅವರು ಪತ್ನಿಯನ್ನು ನೋಡುತ್ತಿದ್ದಂತೆ ಮಂಜುಗಡ್ಡೆಯಂತೆ ಕರಗಿ ನೀರಾದರು. ತಮ್ಮನ್ನು ಮನೆಗೆ ಕರೆಸಿದ್ದಕ್ಕೆ ಸ್ಪಂದನಾ ಅವರು ಸುದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ವಿಜಯ್ ಜೊತೆ ಅವರ ಪತ್ನಿ ಸ್ಪಂದನಾ ಮಾತನಾಡುತ್ತಾ, ಅಯ್ಯೋ ತುಂಬಾ ಸಣ್ಣ ಆಗೋಗಿದ್ದೀಯಾ. ಏನಾದರೂ ತಿಂತಿದ್ದೀರಾ ಇಲ್ವಾ ಎಂದು ಅವರ ತೋಳನ್ನು ಹಿಡಿದು ಪ್ರಶ್ನಿಸಿದರು. ಇದಕ್ಕೆ ನಿನ್ನ ಬಿಟ್ಟು ಇರುಕ್ಕೆ ಆಗುತ್ತಿಲ್ಲ ಎಂದರು. ಸ್ವಲ್ಪ ದಿನ ತಡೆದುಕೊಳ್ಳಿ. ನಾವೆಲ್ಲರೂ ಕಾರ್ಯಕ್ರಮ ನೋಡುತ್ತಿದ್ದೇವೆ. ಅಳುವುದನ್ನು ಬಿಡಿ ಎಂದು ಹೇಳಿ ಸ್ಪಂದನಾ ಅವರು ಸಮಾಧಾನಪಡಿಸಿದರು. ಬಳಿಕ ಒಬ್ಬರಿಗೊಬ್ಬರು ಚುಂಬನ ವಿನಿಮಯ ಮಾಡಿಕೊಂಡು ಬೀಳ್ಕೊಟ್ಟರು.

ಬಳಿಕ ಬಿಗ್ ಬಾಸ್ ಕನ್ಫೆಷನ್ ರೂಮಿನಲ್ಲಿ ಸ್ಪಂದನಾ ಅವರನ್ನು ಹೇಗಿತ್ತು ಬಿಗ್ ಬಾಸ್ ಅನುಭವ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪಂದನಾ, "ನೋಡಕ್ಕೆ ತುಂಬಾ ವೀಕ್ ಆಗಿದ್ದಾರೆ. ಆದರೆ ಅವನ್ನು ನೋಡಿ ತುಂಬಾ ಸಂತೋಷವಾಯಿತು. ಅವರಲ್ಲಿ ಕಾನ್ಫಿಡೆನ್ಸ್ ತುಂಬಿದ್ದು ಸಂತಸ ಕೊಡ್ತು" ಎಂದರು.
ಸದಾ ಪತ್ನಿಯ ಧ್ಯಾನದಲ್ಲೇ ಕಳೆಯುತ್ತಿದ್ದ ವಿಜಯ್ ಅವರ ಧರ್ಮಸಂಕಟವನ್ನು ಬಿಗ್ ಬಾಸ್ ಸರಿಯಾಗಿ ಅರ್ಥ ಮಾಡಿಕೊಂಡಿದ್ದರು ಎನ್ನಿಸುತ್ತದೆ. ಕೆಲವು ಕ್ಷಣ ಪತಿ ಪತ್ನಿಯರು ಬಿಗ್ ಬಾಸ್ ಮನೆಯಲ್ಲಿ ಕಳೆದು ಉಲ್ಲಸಿತರಾದರು. ಪತ್ನಿ ಬಂದು ತೆರಳಿದ ಬಳಿಕ ವಿಜಯ್ ಗೆಲುವಾಗಿ ಕಂಡುಬಂದರು.


Click it and Unblock the Notifications











