»   » ಸೋಮವಾರದಿಂದ ಶುರುವಾಗುವ 'ಕಿಲಾಡಿ ಕುಟುಂಬ' ಕಾರ್ಯಕ್ರಮದ ವಿಶೇಷತೆಗಳೇನು.?

ಸೋಮವಾರದಿಂದ ಶುರುವಾಗುವ 'ಕಿಲಾಡಿ ಕುಟುಂಬ' ಕಾರ್ಯಕ್ರಮದ ವಿಶೇಷತೆಗಳೇನು.?

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಕಾಮಿಡಿ ಕಿಲಾಡಿಗಳು' ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆ ವೀಕ್ಷಕರಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ವಿನೂತನ ಹಾಸ್ಯ ಸರಣಿಯೊಂದನ್ನು ಆರಂಭಿಸಿದೆ.

'ಕಿಲಾಡಿ ಕುಟುಂಬ' ಎಂಬ ಹೆಸರಿನಲ್ಲಿ ಮೂಡಿಬರುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ ಬಂದಿದ್ದ ಹತ್ತು ಜನ ಫೈನಲಿಸ್ಟ್ ಗಳು ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ಅಲ್ಲದೇ, ಇವರೊಂದಿಗೆ 'ಡ್ರಾಮಾ ಜ್ಯೂನಿಯರ್ಸ್', 'ಸರಿಗಮಪ' ಹಾಗೂ ಜೀ ಕುಟುಂಬದ ಬಹುತೇಕ ಸದಸ್ಯರು ಈ 'ಕಿಲಾಡಿ ಕುಟುಂಬ'ದಲ್ಲಿ ವೇದಿಕೆಯನ್ನು ಹಂಚಿಕೊಳ್ಳಲಿರುವುದು ವಿಶೇಷ. ಮುಂದೆ ಓದಿರಿ....

ವಿಭಿನ್ನ ಕಾರ್ಯಕ್ರಮ

ಜೂನ್ 12 ರಿಂದ ಆರಂಭವಾಗಲಿರುವ ಈ ರಿಯಾಲಿಟಿ ಶೋ ಈವರೆಗೆ ಪ್ರಸಾರಗೊಂಡ ಕಾಮಿಡಿ ಕಾರ್ಯಕ್ರಮಗಳೆಲ್ಲವುಗಳಿಗಿಂತ ವಿಭಿನ್ನವಾಗಿ ಮೂಡಿ ಬರಲಿದೆ.

ಜೂನ್ 12 ರಿಂದ ವಾರ ಪೂರ 'ಕಾಮಿಡಿ' ಕಿಲಾಡಿಗಳ ಕಲರವ

ಜಗ್ಗೇಶ್ ನಿರೂಪಣೆ

ನವರಸ ನಾಯಕ ಜಗ್ಗೇಶ್ 'ಕಿಲಾಡಿ ಕುಟುಂಬ' ಕಾರ್ಯಕ್ರಮವನ್ನು ನಿರೂಪಿಸುತ್ತಿರುವುದು ಮತ್ತೊಂದು ವಿಶೇಷ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ಜಗ್ಗೇಶ್ ಅವರು ಇಲ್ಲಿ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಮತ್ತೆ ಬಂದ್ರು 'ಕಾಮಿಡಿ ಕಿಲಾಡಿಗಳು': ಅತಿ ಶೀಘ್ರದಲ್ಲಿ 'ಕಿಲಾಡಿ ಕುಟುಂಬ' ಶುರು.!

ಕಾಮಿಡಿ ಮಾತ್ರ ಅಲ್ಲ.!

'ಕಿಲಾಡಿ ಕುಟುಂಬ' ಕಾರ್ಯಕ್ರಮದ ಮೂಲಕ ಕಾಮಿಡಿ ಜೊತೆಗೆ ನವರಸಗಳ ರಸದೌತಣವನ್ನೂ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಉಣಬಡಿಸಲಿರುವುದು ಕಾರ್ಯಕ್ರಮದ ಬಹುದೊಡ್ಡ ಸ್ಪೆಷಾಲಿಟಿ.

ಸಂಜೆ ಏಳು ಗಂಟೆಗೆ ಮಿಸ್ ಮಾಡ್ಬೇಡಿ

ಜೂನ್ 12 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7 ರಿಂದ 7.30 ರವರೆಗೆ 'ಕಿಲಾಡಿ ಕುಟುಂಬ' ಪ್ರಸಾರ ಆಗಲಿದೆ.

English summary
Read the article to know the Specialities of Zee Kannada Channel's new show 'Khiladi Kutumba'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada