ಶ್ರೀಮುರಳಿ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ

ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್, ಶ್ರೀಮುರಳಿ ಲವ್ ಸ್ಟೋರಿ ಯಾವ ಸಿನಿಮಾಗೇನು ಕಮ್ಮಿ ಇಲ್ಲ. ಕಾಲೇಜು ದಿನಗಳಲ್ಲಿ ಪ್ರೀತಿ-ಪ್ರೇಮ ಸರ್ವೆ ಸಾಮಾನ್ಯ. ಆದ್ರೆ ಶ್ರೀಮುರಳಿ ಲವ್ ಸ್ಟೋರಿ ಇನ್ನು ಸ್ವಲ್ಪ ವಿಭಿನ್ನ ಮತ್ತು ಇಂಟ್ರಸ್ಟಿಂಗ್ ಆಗಿದೆ.

ಆರಾಮಾಗಿ ಪ್ರಥಮ ಪಿ ಯು ಸಿ ಮುಗಿಸಿದ ಶ್ರೀಮುರಳಿಗೆ ಆನಂತರ ಕಾಲೇಜ್ ನಲ್ಲಿ ಒಬ್ಬಳು ಪ್ರೀಯತಮೆ ಇದ್ದರೆ ಚಂದ ಅಂತ ಅನಿಸೋಕೆ ಶುರುವಾಗಿತ್ತಂತೆ. ಮೊದಲೆ ಪಾಠ ಕೇಳುವುದೆಂದರೆ ಅಲರ್ಜಿ. ಹೇಗೊ ಪ್ರಥಮ ಪಿ ಯು ಸಿ ಮುಗಿಸಿ ದ್ವಿತಿಯ ಪಿಯುಸಿಗೆ ಎಂಟ್ರಿಯಾಗಿದ್ದಾರೆ.

ಕಾಲೇಜು ಮುಗಿಸಿ ಎರಡನೆ ವರ್ಷಕ್ಕೆ ಎಂಟ್ರಿ ಕೊಡುತ್ತಿದ್ದಹಾಗೆ ಶ್ರೀಮುರಳಿ ಜೀವನಕ್ಕೂ ಒಬ್ಬಳು ಸುಂದರಿ ಎಂಟ್ರಿ ಕೊಡುತ್ತಾರೆ. ದ್ವಿತಿಯ ಪಿ ಯು ಸಿಯಲ್ಲಿ ಲವ್ ಲ್ಲಿ ಬಿದ್ದ ಶ್ರೀಮುರಳಿ ಪ್ರೀತಿಸಿದ ಹುಡುಗಿಯನ್ನು ಪಟಾಯಿಸಲು ಏನೆಲ್ಲ ಕಸರತ್ತು ಮಾಡಿದ್ದಾರೆ ಗೊತ್ತಾ? ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗಿ ಶ್ರಿಮುರಳಿ ಜೀವನದಲ್ಲೂ ಹಾಗೆ ಆಗಿದೆ. ಮುಂದೆ ಓದಿ..

ದ್ವಿತಿಯ ಪಿಯುಸಿಯ ಮುರಳಿ ಪ್ರೇಮ್ ಕಹಾನಿ

ದ್ವಿತಿಯ ಪಿಯುಸಿಯ ಮುರಳಿ ಪ್ರೇಮ್ ಕಹಾನಿ

ಯಾರು ಗರ್ಲ್ ಫ್ರೆಂಡ್ ಇಲ್ಲವಲ್ಲಾ ಎನ್ನುವ ಫೀಲಿಂಗ್ಸ್ ನಲ್ಲೆ ದ್ವಿತಿಯ ಪಿ ಯು ಸಿಗೆ ಎಂಟ್ರಿ ಆಗಿದ್ದ ಮುರಳಿಗೆ ಕಾಲೇಜ್ ಮೊದಲ ದಿನವೆ ಶ್ರೀಮುರಳಿ ಕಣ್ಣಿಗೆ ಒಬ್ಬಳು ಸುಂದರಿ ಕಂಡಿದ್ದಾಳೆ. ಮೆಟ್ಟಿಲುಗಳನ್ನು ಇಳಿದು ಕೆಳಗೆ ಬರುತ್ತಿದ್ದ ಆಕೆಯನ್ನು ನೋಡಿದ ರೋರಿಂಗ್ ಸ್ಟಾರ್ ಗೆ ಲವ್ ಅಟ್ ಫಸ್ಟ್ ಆಗಿದೆ. ಅಲ್ಲೆ ಆ ಕ್ಷಣವೆ ಮದುವೆ ಆದ್ರೆ ಇವಳನ್ನೆ ಆಗಬೇಕು ಅಂತ ನಿರ್ಧರಿಸಿದ್ರಂತೆ.

ಮದುವೆ ಆದ್ರೆ ಇಂತವಳನ್ನೆ ಆಗಬೇಕು

ಮದುವೆ ಆದ್ರೆ ಇಂತವಳನ್ನೆ ಆಗಬೇಕು

ಕಪ್ಪು ಮತ್ತು ಕೆಂಪು ಬಣ್ಣದ ಕಾಸ್ಟ್ಯೂಮ್ ಧರಸಿದ್ದ ಹುಡುಗಿಯನ್ನು ನೋಡಿ ಫಿದಾ ಆಗಿದ್ದ ಮುರಳಿ ಜೀವನದಲ್ಲಿ ಮದುವೆ ಆದ್ರೆ ಇಂತವಳನ್ನೆ ಮದುವೆ ಆಗಬೇಕು ಅಂತ ಅಲ್ಲೆ ನಿರ್ಧರಿಸಿದ್ರಂತೆ. ಅಲ್ಲಿಂದ ಪ್ರಾರಂಭವಾಗಿದೆ ಮುರಳಿಯ ಲವ್ ಸ್ಟೋರಿ. ಆ ನಂತರ ಪ್ರೀತಿಸುತ್ತಿರುವ ಹುಡುಗಿಗೆ ಪ್ರೀತಿಯ ವಿಚಾರ ಹೇಳಲು ಅನೇಕ ತಿಂಗಳು ಅಲೆದಾಡಿದ್ದಾರಂತೆ.

ಮೊದಲ ಭೇಟಿ ಕ್ಯಾಂಟೀನ್ ನಲ್ಲಿ

ಮೊದಲ ಭೇಟಿ ಕ್ಯಾಂಟೀನ್ ನಲ್ಲಿ

ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಬೇಕೆಂದು ಹರಸಾಹಸ ಪಡುತ್ತಿದ್ದ ಮುರಳಿ ಕೊನೆಗೂ ಒಂದು ದಿನ ಆಕೆಯನ್ನು ಮಾತನಾಡಿಸಿಯೆ ಬಿಟ್ಟರು. ಕ್ಯಾಂಟೀನ್ ನಲ್ಲಿ ಇದ್ದ ಮಾಹಿತಿಯನ್ನು ಪಡೆದು ಆಕೆಯ ಬಳಿ ಹೋಗಿ ಪರಿಚಯ ಮಾಡಿಕೊಂಡಿದ್ದಾರೆ. ಆದ್ರೆ ಮುರಳಿ ಮಾತಿಗೆ ಆಕೆಯ ಕಡೆಯಿಂದ ಸರಿಯಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ. ಸಿಟ್ಟಿಗೆದ್ದ ಮುರಳಿ ಇಡೀ ಕಾಲೇಜಿಗೆ ಪ್ರೀತಿ ವಿಚಾರ ಹೇಳಿದ್ದಾರೆ.

1999 ಡಿಸೆಂಬರ್ 30

1999 ಡಿಸೆಂಬರ್ 30

ಅನೇಕ ದಿನಗಳಿಂದ ಶ್ರೀಮುರಳಿಯನ್ನು ಸತಾಯಿಸುತ್ತಿದ್ದ ಪ್ರೀತಿಯ ಹುಡುಗಿಗೆ 1999 ಡಿಸೆಂಬರ್ 30ರಂದು ನೇರವಾಗಿ ಮನೆಯ ಬಳಿ ಹೋಗಿ ಮದುವೆ ಆಗ್ತೀಯಾ ಎಂದು ಕೇಳಿದ್ದಾರೆ. ಇನ್ನೇನು ಹೊಸ ವರ್ಷಕ್ಕೆ ಕೆಲವೆ ಕ್ಷಣಗಳು ಭಾಕಿ ಇದ್ದ ಕಾರಣ ರಾತ್ರಿ ಫೋನ್ ಮಾಡಿದ್ರೆ ರಿಸೀವ್ ಮಾಡಿ ಮಾತನಾಡ ಬೇಕು. ಮಾತನಾಡಿದ್ರೆ ಪ್ರೀತಿ ಒಪ್ಪಿಕೊಂಡಹಾಗೆ ಅಂತ ಕಂಡೀಶನ್ ಹಾಕಿ ಹೋರಟುಹೋಗಿದ್ರಂತೆ. ಹೊಸ ವರ್ಷಾಚರಣೆಯ ಸಂತದಲ್ಲಿ ರಾತ್ರಿ 12 ಗಂಟೆಗೆ ಫೋನ್ ಮಾಡಿದ ಮುರಳಿಗೆ ಪ್ರೀತಿಸಿದ ಹುಡುಗಿಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತಂತೆ. ಅದು ಮುರಳಿ ಜೀವನದ ಮೋಸ್ಟ್ ಹ್ಯಾಪಿಯಸ್ಟ್ ಸಮಯವಂತೆ.

ಮುರಳಿ ಪ್ರೀತಿಸಿದ ಹುಡುಗಿ ಪತ್ನಿ ಶ್ರೀವಿದ್ಯಾ

ಮುರಳಿ ಪ್ರೀತಿಸಿದ ಹುಡುಗಿ ಪತ್ನಿ ಶ್ರೀವಿದ್ಯಾ

ಮುರಳಿ ಪಿ ಯು ಸಿಯಿಂದ ಪ್ರೀತಿಸಿದ ಹುಡುಗಿ. ಲವ್ ಅಟ್ ಫಸ್ಟ್ ಸೈಟ್ ಆದ ಹುಡುಗಿ ಈಗ ಮದುವೆಯಾಗಿ ಸಂಸಾರ ನಡೆಸುತ್ತಿರುವ ಪತ್ನಿ ಶ್ರೀವಿದ್ಯಾ. ಅಂದು ಬರೀ ಮುರಳಿ ಆಗಿದ್ದರು. ಆಗಲೆ ಮುರಳಿ ಪ್ರೀತಿಯನ್ನು ಒಪ್ಪಿಕೊಂಡು ಮುರಳಿಯನ್ನು ಇಷ್ಟಪಡುತ್ತಿದ್ದರು ವಿದ್ಯಾ.

ಮುರಳಿಯನ್ನು ಕಂದ ಎಂದು ಕರೆಯುವ ಪತ್ನಿ

ಮುರಳಿಯನ್ನು ಕಂದ ಎಂದು ಕರೆಯುವ ಪತ್ನಿ

ಶ್ರೀಮುರಳಿಯನ್ನು ಪತ್ನಿ ವಿದ್ಯಾ ಕಂದ ಎಂದು ಕರೆಯುತ್ತಾರಂತೆ. ಮುರಳಿ ಕೂಡ ಪತ್ನಿಯನ್ನು ಕಂದ ಎಂದೇ ಕರೆಯುತ್ತಾರಂತೆ. ಪತಿಯ ಹೆಸರು ಹೇಳಿಕರೆದರೆ ಆಯಸ್ಸು ಕಮ್ಮಿ ಆಗುತ್ತೆ ಎನ್ನುವ ಕಾರಣಕ್ಕೆ ವಿದ್ಯಾ ಅವರು ಮುರಳಿಯ ಅವರನ್ನು ಕಂದ ಎಂದು ಕರೆಯುತ್ತಾರಂತೆ. ಪತ್ನಿ ಕರೆಯುತ್ತಾರೆ ಎನ್ನುವ ಕಾರಣಕ್ಕೆ ಮುರಳಿ ಸಹ ಕಂದ ಎಂದು ಕರೆಯುತ್ತಾರಂತೆ.

ಮುರಳಿ ಜೊತೆ ಸುತ್ತಾಡಿದ್ರೆ ಆಸಿಡ್ ಹಾಕ್ತೀವಿ

ಮುರಳಿ ಜೊತೆ ಸುತ್ತಾಡಿದ್ರೆ ಆಸಿಡ್ ಹಾಕ್ತೀವಿ

ಶ್ರೀಮುರಳಿಯನ್ನು ವಿದ್ಯಾ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಶ್ಯ ಇಡೀ ಕಾಲೇಜ್ ಗೆ ಗೊತ್ತಾಗುತ್ತಿದಂತೆ ಮುರಳಿ ಇಷ್ಟಪಡುತ್ತಿದ್ದ ಹುಡುಗಿಯರೆಲ್ಲ ವಿದ್ಯಾ ಅವರನ್ನು ದ್ವೇಷಮಾಡಲು ಶುರುಮಾಡಿದ್ರಂತೆ. ಮುರಳಿ ಜೊತೆ ಸುತ್ತಾಡಿದ್ರೆ, ಮಾತನಾಡಿದ್ರೆ ಆಸಿಡ್ ಹಾಕ್ತೀವಿ ಅಂತ ಹೇಳುತ್ತಿದ್ದರಂತೆ.

ಮನೆಯವರನ್ನು ಒಪ್ಪಿಸಿ ಮದುವೆಯಾದ ಮುರಳಿ

ಮನೆಯವರನ್ನು ಒಪ್ಪಿಸಿ ಮದುವೆಯಾದ ಮುರಳಿ

ಮೊದಲು ಮನೆಯವರು ಪ್ರೀತಿಯನ್ನು ಒಪ್ಪಿಕೊಂಡಿರಲ್ಲಿವಂತೆ. ಆದ್ರೆ ಶ್ರೀಮುರಳಿ ಮನೆಯಲ್ಲಿ ಪೂಜೆ ಇತ್ತಂತೆ. ಪೂಜೆಗೆ ವಿದ್ಯಾ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ರಂತೆ. ಪೂಜೆಗೆ ಬಂದಿದ್ದ ವಿದ್ಯಾ ಅವರನ್ನು ನೋಡಿ ಮನೆಯವರು ಒಪ್ಪಿಕೊಂಡಿದ್ದರಂತೆ. ಆ ನಂತರ ಇಬ್ಬರ ಪ್ರೀತಿಗೆ ಮದುವೆಯ ಮುದ್ರೆ ಬಿತ್ತು. ಸುಮಾರು 9 ವರ್ಷದ ಪ್ರೀತಿಯ ನಂತರ 2008ರಲ್ಲಿ ಶ್ರೀಮುರಳಿ ಮತ್ತು ವಿದ್ಯಾ ಹಸೆಮಣೆ ಏರಿದ್ರು.

More from Filmibeat

English summary
Kannada actor srimurali spoke about his love story. sri murali married vidya in 2008.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X