For Quick Alerts
  ALLOW NOTIFICATIONS  
  For Daily Alerts

  ಅಕುಲ್ ಬಾಲಾಜಿಗೆ ಓಟು ಹಾಕಿ ಎಂದ ಶ್ರೀಮುರಳಿ

  By Rajendra
  |

  ಈ ಬಾರಿಯ ಬಿಗ್ ಬಾಸ್ ವಿನ್ನರ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ, ಬೆಟ್ಟಿಂಗ್, ಮಾತುಕತೆ ನಡೆಯುತ್ತಿದೆ. ಬಹುತೇಕ ಎಲ್ಲರ ಕಣ್ಣು, ಮನಸ್ಸು ಹೇಳುತ್ತಿರುವುದು ಸೃಜನ್ ಲೋಕೇಶ್ ಅಥವಾ ಅಕುಲ್ ಬಾಲಾಜಿ ಎಂದು. ಇವರಿಬ್ಬರಲ್ಲಿ ಒಬ್ಬರಿಗೆ ಗೆಲುವು ಗ್ಯಾರಂಟಿ ಎಂದೇ ಎಲ್ಲರೂ ಭಾವಿಸಿದ್ದಾರೆ.

  ಆದರೆ ಉಳಿದ ಇಬ್ಬರು ಮಹಿಳಾ ಸ್ಪರ್ಧಿಗಳ (ಶ್ವೇತಾ, ದೀಪಿಕಾ) ಬಗ್ಗೆ ಮಾತ್ರ ಯಾರೂ ಸೊಲ್ಲೆತ್ತುತ್ತಿಲ್ಲ. ಇದು ಅನ್ಯಾಯ ಅಲ್ಲವೇ ಎಂದೂ ಕೆಲವರು ಕ್ಯಾತೆ ತೆಗೆಯುತ್ತಿದ್ದಾರೆ. ಏನೇ ಆಗಲಿ ಭಾನುವಾರ (ಅ.5) ಸಂಜೆ 6 ಗಂಟೆಯಿಂದ 11 ಗಂಟೆ ತನಕ ಸತತ ಐದು ಗಂಟೆಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. [ಯಾರಾಗಲಿದ್ದಾರೆ ಬಿಗ್ ಬಾಸ್ 2 ವಿನ್ನರ್, ರನ್ನರ್?]

  ಬಿಗ್ ಬಾಸ್ ಸೀಸನ್ 1 ವಿನ್ನರ್ ಆಗಿದ್ದ ವಿಜಯ್ ರಾಘವೇಂದ್ರ ಅವರ ಸಹೋದರ ಶ್ರೀಮುರಳಿ ಅವರು ಅಕುಲ್ ಬಾಲಾಜಿಗೆ ಓಟ್ ಹಾಕಿ ಎನ್ನುತ್ತಿದ್ದಾರೆ. ಬನ್ನಿ ನೋಡೋಣ 'ಉಗ್ರಂ' ನಟ ಶ್ರೀಮುರಳಿ ಏನು ಹೇಳುತ್ತಿದ್ದಾರೆ ನೋಡೋಣ.

  "ಹಾಯ್ ಫ್ರೆಂಡ್ಸ್, ಡಾರ್ಲಿಂಗ್ಸ್ ಹೇಗಿದ್ದೀರಿ? ಬಿಗ್ ಬಾಸ್ 2ನ ನಾಲ್ಕು ಮಂದಿ ಸ್ಪರ್ಧಿಗಳಲ್ಲಿ ನನ್ನ ಆತ್ಮೀಯ ಗೆಳೆಯ ಅಕುಲ್ ಬಾಲಾಜಿ ಸಹ ಒಬ್ಬರು. ಅವರು ನಿಜಕ್ಕೂ ತುಂಬಾ ಹಾರ್ಡ್ ವರ್ಕ್ ಮಾಡಿದ್ದಾರೆ. ಮನೆಯಲ್ಲಿದ್ದಷ್ಟು ದಿನವೂ ಎಲ್ಲರನ್ನೂ ರಂಜಿಸುತ್ತಾ ಬಂದಿದ್ದಾರೆ. ಸೃಜನ್, ಶ್ವೇತಾ ಹಾಗೂ ದೀಪಿಕಾ ಅವರಿಗೂ ಬೆಸ್ಟ್ ವಿಶಸ್. ಅವರಿಗೂ ನನ್ನ ಸ್ವೀಟ್ ಫ್ರೆಂಡ್ಸ್" ಎಂದಿದ್ದಾರೆ.

  ಆದರೆ ಅವರು ಅಕುಲ್ ಗೆ ಮಾತ್ರ ಓಟ ಮಾಡಿ ಗೆಲ್ಲಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಅವರ ಪ್ರಕಾರ ಅಕುಲ್ ಬಾಲಾಜಿ ಈ ಬಾರಿ ಗೆಲ್ಲಬೇಕು ಎಂಬುದು. ನೋಡೋಣ ಏನಾಗುತ್ತದೋ ಎಂದು. (ಫಿಲ್ಮಿಬೀಟ್ ಕನ್ನಡ)

  English summary
  Ugramm actor Srimurali is also keenly following the Bigg Boss Kannada season 2. He recently put out voice in support of his friend Akul Balaji. He also asked people to vote and ensure his victory in the game show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X