Srirasthu Shubhamasthu: ತಲೆಕೆಳಗಾದ ಕುತಂತ್ರ: ಗಂಡನನ್ನು ಕೊಂದೆ ಎಂದುಕೊಂಡ ಶಾರ್ವರಿ ಎದುರು ಗಟ್ಟಿಯಾಗಿ ನಿಂತ ಮಹೇಶ !
ಶ್ರೀರಸ್ತು ಶುಭಮಸ್ತು, ಧಾರಾವಾಹಿ ಮಹಾಸಂಚಿಕೆ ಒಂದು ಗಂಟೆಗಳ ಕಾಲ ಇವತ್ತು ಪ್ರಸಾರ ಆಗಲಿದೆ .ಇವತ್ತು ಶಾರ್ವರಿಯ ಮಸಲತ್ತು ಹೊರಗೆ ಬರಲಿದೆ ತನ್ನ ಗಂಡ ಮಹೇಶ ಸರಿಹೋದರೆ ನನಗೆ ಕೆಟ್ಟ ಕಾಲ ಶುರುವಾಗಲಿದೆ ಆದಕಾರಣ ಮಹೇಶ ಸರಿ ಹೋಗಬಾರದು ಅಂದುಕೊಂಡಿರುತ್ತಾಳೆ. ಇದೇ ಕಾರಣ ಮಹೇಶ ಯಾವತ್ತೂ ಸರಿ ಹೋಗಬಾರದು ಎಂದು ಅದಕ್ಕಾಗಿ ಏನು ಬೇಕೋ ಎಲ್ಲಾ ಮಾಡಿಕೊಂಡಿದ್ದಾಳೆ.
ಇನ್ನು ಮಹೇಶ ಇದೀಗ ಸ್ವಲ್ಪ ಸ್ವಲ್ಪ ಮಾತನಾಡಲು ಶುರು ಮಾಡಿದ್ದಾನೆ. ಅದೇ ಈಗ ಶಾರ್ವರಿಗೆ ಎಲ್ಲಾದರೂ ನನ್ನ ಹೆಸರನ್ನು ತೆಗೆದರೆ ಎನ್ನುವ ಭಯ ಆಕೆಗೆ ಮಾಧವನ ಹೆಂಡತಿಯನ್ನು ಶಾರ್ವರಿ ಕೊಂದಿರುವ ವಿಚಾರ ಮಹೇಶನಿಗೆ ಮತ್ತು ಕೆಲಸದವನಿಗೆ ತಿಳಿದಿರುತ್ತದೆ. ಆದರೆ ಆತನ ಮಾತನ್ನು ಯಾರು ನಂಬುವುದೇ ಇಲ್ಲ. ಆದರೆ ತುಳಸಿಗೆ ಮಾತ್ರ ಮಹೇಶ ಸರಿ ಹೋಗಿ ಹೋಗುತ್ತಾನೆ ಎನ್ನುವ ನಂಬಿಕೆ.

ಅದಕ್ಕಾಗಿ ತೋಟದ ಮನೆಗೆ ಕೂಡ ಮಹೇಶನನ್ನು ಕರೆದುಕೊಂಡು ಬಂದಾಗ ಆತನಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತದೆ ಇದನ್ನು ನೋಡಿ ಶಾರ್ವರಿ ಮತ್ತಷ್ಟು ಕಂಗೆಡುತ್ತಾಳೆ. ನನ್ನ ಗಂಡ ಜೀವಂತ ಇದ್ದರೆ ನನಗೆ ಉಳಿಗಾಲ ಇಲ್ಲವೇ ಇಲ್ಲ ಎಂದುಕೊಂಡು ಇರುತ್ತಾಳೆ. ಹೇಗಾದರೂ ನನ್ನ ಗಂಡನನ್ನು ಸಾಯಿಸಿ ಬಿಟ್ಟರೆ ಮುಚ್ಚಿಟ್ಟ ವಿಚಾರ ಹೊರ ಬರಲು ಸಾಧ್ಯವಿಲ್ಲ ಎಂದುಕೊಂಡು ಕೊಲ್ಲಲು ಹೊರಡುತ್ತಾಳೆ. ಅದೃಷ್ಟ ಎಂಬುವಂತೆ ಮಾಧವ ಹಠಾತ್ ಆಗಿ ಬರುತ್ತಾನೆ.
ತುಳಸಿ ಬಳಿ ನಿಜ ಹೇಳಲು ಒದ್ದಾಡಿದ ಮಹೇಶ
ಮಹೇಶನನ್ನು ಶಾರ್ವರಿ ವಾಕಿಂಗ್ ಕರೆದುಕೊಂಡು ಹೋಗಬೇಕಾದರೆ ಆಕೆಯ ಜೊತೆ ತುಳಸಿ ಕೂಡ ಹೋಗುತ್ತಾಳೆ. ತುಳಸಿಯ ಬಳಿ ಮಹೇಶ ಏನೂ ಒಂದು ವಿಚಾರವನ್ನು ಹೇಳಲು ಬಾಯಿ ತೆಗೆಯುತ್ತಿರುತ್ತಾರೆ ಆದರೆ ಅದು ಏನೆಂದು ಹೇಳಲು ತಿಳಿಯುವುದಿಲ್ಲ. ತುಳಸಿಗೆ ಏನನ್ನು ಹೇಳುವ ಪ್ರಯತ್ನವನ್ನು ಮಾಡುತ್ತಾನೆ ಮಹೇಶ ಆದರೆ ಶಾರ್ವರಿ ಆ ಕೂಡಲೇ ಮಹೇಶನನ್ನು ಬಿಟ್ಟುಬಿಡುತ್ತಾಳೆ. ಆ ಪ್ರದೇಶ ಇಳಿಜಾರು ಆಗಿರುವುದರಿಂದ ಮಹೇಶ ವೀಲ್ ಚೇರ್ ಮುಮದಕ್ಕೆ ಸಾಗುತ್ತದೆ. ಇಳಿಜಾರು ಪ್ರದೇಶದಲ್ಲಿ ಬಹಳ ಜೋರಾಗಿ ವೀಲ್ ಚೇರ್ ಮುಂದೆ ಹೋಗುತ್ತದೆ. ಇದನ್ನು ನೋಡಿದ ತುಳಸಿ ಬಹಳ ಶಾಕ್ ಆಗುತ್ತಾಳೆ.. ಅಯ್ಯೋ ಅಯ್ಯೋ ಎಂದು ಬೊಬ್ಬೆ ಹೊಡೆದುಕೊಂಡು ಇರುತ್ತಾಳೆ .

ಆಪತ್ತಿನಲ್ಲಿ ಇರುವ ಮಹೇಶನ ಪ್ರಾಣ
ಆ ವೇಳೆ ಅಲ್ಲಿಗೆ ಮಾಧವ ಹಾಗೂ ಪೂರ್ಣಿಮಾ ಎಲ್ಲಿಂದಲೋ ಕಾರಿನಲ್ಲಿ ಬರುತ್ತಿರುತ್ತಾರೆ . ಮಹೇಶ್ ಕುಳಿತುಕೊಂಡಿದ್ದ ವೀಲ್ ಚೇರ್ ನೇರವಾಗಿ ಮಾಧವನ ಕಾರಿಗೆ ಬಂದು ಗುದ್ದಿ ಅದರಿಂದ ಮಹೇಶ ಬೀಳುತ್ತಾನೆ. ಇದನ್ನು ನೋಡಿದ ಮಾಧವ ಬಹಳಷ್ಟು ಶಾಕ್ ಗೆ ಒಳಗಾಗುತ್ತಾನೆ. ಅಯ್ಯೋ ಇದೇನಾಯಿತು ಎಂದುಕೊಂಡು ಆತನನ್ನು ಮನೆ ಒಳಗೆ ಕರೆದುಕೊಂಡು ಹೋಗಿ ಮಲಗಿಸಿ ಡಾಕ್ಟರ್ ಅನ್ನು ಬರ ಹೇಳುತ್ತಾನೆ. ಅಯ್ಯೋ ನನ್ನಿಂದಲೇ ಈ ರೀತಿ ಆಯಿತಲ್ಲ ಎಂದು ಬಹಳ ಬೇಸರ ಪಟ್ಟುಕೊಂಡು ಇರುತ್ತಾನೆ.
ಮಾಧವನ ಮಾತು ಕೇಳಿ ಬೇಸರ ಮಾಡಿಕೊಂಡ ತುಳಸಿ
ಮಾಧವನ ಮಾತು ಕೇಳಿದ ತುಳಸಿ ಬಹಳಷ್ಟು ಬೇಸರ ಮಾಡಿಕೊಂಡು ಇರುತ್ತಾಳೆ. ಶಾರ್ವರಿ ಮಾಡಿದ ಪಿತೂರಿ ಆಕೆಗೆ ರಿಟರ್ನ್ ಬರುವ ಎಲ್ಲಾ ಸಾಧ್ಯತೆ ಇದೆ ಯಾಕೆಂದರೆ ಹಾಗೆ ಮಾಡಿದ ಕುತಂತ್ರಕ್ಕೆ ಪ್ರತಿಫಲ ಸಿಗಲು ಆ ದೇವರೇ ಮಹೇಶರಿಗೆ ಎಲ್ಲಾ ನೆನಪುಗಳು ಬರುವಂತೆ ಮಾಡಿದೆ. ಹಾಗೆ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆಗಳು ಕೂಡ ಆಗುತ್ತಿದೆ. ಅದನ್ನೆಲ್ಲ ಸಹಿಸಲು ಆಗದೆ ಶಾರ್ವರಿ ಕತ್ತಿ ಮಸೆಯುತ್ತಾ ಇರುತ್ತಾಳೆ. ಇದೀಗ ಮಹೇಶನಿಗೆ ಕಾರು ಡಿಕ್ಕಿ ಹೊಡೆದು ಬಿಟ್ಟಿದೆ ..ಎನು ಮಾಡುವುದು ಎಂದು ಮಾಧವ ತಲೆ ಕೆಡಿಸಿಕೊಂಡಿದ್ದಾನೆ.
ಇತ್ತ ಅಭಿ ಮಾತ್ರ ಮಾಧವನದೆ ತಪ್ಪು ಎನ್ನುವಂತೆ ಅಪ್ಪನನ್ನು ಬಯ್ಯುತ್ತಾ ಇರುತ್ತಾನೆ. ಶಾರ್ವರಿ ಎಲ್ಲರ ಮುಂದೆ ಮುಖವಾಡವನ್ನು ಹಾಕಿಕೊಂಡಿದ್ದಳೆ. ಆದರೆ ಮನದೊಳಗೆ ವಿಕೃತ ಸಂತೋಷ ಇರುತ್ತದೆ. ಆದರೆ ಇದೀಗ ಪ್ರೋಮೋ ದಲ್ಲಿ ಮಹೇಶ ಸರಿ ಹೋದ ಹಾಗೆ ಕಾಣಿಸುತ್ತಿದ್ದಾರೆ. ಮನೆಯಿಂದ ಹೊರಗೆ ಬಂದು ಅಣ್ಣ ಎನ್ನುವ ಕರೆಯುವ ದೃಶ್ಯ ಇದೆ ಇವತ್ತಿನ ಸಂಚಿಕೆ ಬಹಳ ಸ್ವಾರಸ್ಯಕರವಾಗಿದೆ.


Click it and Unblock the Notifications











