Srirasthu shubhamasthu: ನಿಧಿ ಹುಡುಕಲು ಹೋದ ಸೊಸೆ ಮಾವನಿಗೆ ಸಿಕ್ಕಿದ್ದು ಬರೀ ಬೂದಿನಾ?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾಗೆ ತಾನು ತಾಯಿಯಾಗಬೇಕು ಎಂಬ ಆಸೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಆದರೆ, ವೈದ್ಯರು ಪೂರ್ಣಿಮಾಳಿಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಸತ್ಯ ಪೂರ್ಣಿಮಾಳಿಗೆ ಗೊತ್ತಿಲ್ಲ. ಇನ್ನು ಅನುಮಾನ ಬಂದು ವೈದ್ಯರಿಗೆ ಕರೆ ಮಾಡಿ ಸತ್ಯ ಕೇಳಿದ ಪೂರ್ಣಿಮಾಳಿಗೆ ಮತ್ತೆ ಸುಳ್ಳು ಹೇಳಿ ಮರೆಮಾಚಲಾಗಿದೆ.

Srirasthu shubhamasthu kannada serial 19 April episode written update

ಪೂರ್ಣಿಮಾ ಆದಷ್ಟು ಬೇಗ ತನಗೆ ಮಗು ಆಗಲಿ ಎಂದು ದೇವರ ಮೊರೆ ಹೋಗಲು ಮುಂದಾಗಿದ್ದಾಳೆ. ವ್ರತ ಪ್ರಾರಂಭಿಸಲು ತುಳಸಿಯ ಸಹಾಯವನ್ನು ಕೇಳಿದ್ದಾಳೆ.

ನಿಧಿಗಾಗಿ ಮಾವ-ಸೊಸೆ ಹರಸಾಹಸ

ಇತ್ತ ಜುಗ್ಗ ಮಾವ ಮತ್ತು ಸಂಧ್ಯಾ ಇಬ್ಬರೂ ಸೇರಿ ದತ್ತ ತಾತನ ಮನೆಯನ್ನು ಸರ್ವನಾಶ ಮಾಡಲು ಮುಂದಾಗಿದ್ದಾರೆ. ನಿಧಿ ಹೆಸರಿನಲ್ಲಿ ಹಣ ಖರ್ಚು ಮಾಡಿಕೊಂಡಿದ್ದಾರೆ. ಮನೆಯವರಿಗೆಲ್ಲಾ ಫಿಲ್ಮಂ ಟಿಕೆಟ್ ಅನ್ನು ತಂದಿದ್ದು ಎಲ್ಲರನ್ನೂ ಮನೆಯಿಂದ ಹೊರಗೆ ಕಳಿಸಿದ್ದಾರೆ. ದತ್ತ ತಾತನಿಗೆ ಅನುಮಾನ ಬಂದರೂ ಕೂಡ ಸಿನಿಮಾ ನೋಡುವ ಕ್ರೇಜ್‌ನಿಂದ ಇಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಮಾವ-ಸೊಸೆ ಇಬ್ಬರೂ ನಿಧಿ ಹುಡುಕಾಟಕ್ಕಾಗಿ ಮಂತ್ರವಾದಿ ಹೇಳಿದ ಕಡೆ ಗುಂಡಿ ತೋಡಲು ಮುಂದಾಗಿದ್ದಾರೆ. ಸ್ವಲ್ಪ ಮಣ್ಣು ತೋಡುತ್ತಿದ್ದಂತೆ ಮಡಕೆಯೊಂದು ದೊರಕಿದ್ದು, ಇಬ್ಬರೂ ಫುಲ್ ಹ್ಯಾಪಿ ಆಗಿದ್ದಾರೆ.

Srirasthu shubhamasthu kannada serial 19 April episode written update

ನಿಧಿ ಎಲ್ಲಾ ಸಂಪೂರ್ಣ ಬೂದಿ

ನಿಧಿಯನ್ನು ತೆರೆಯುವ ಮುನ್ನವೇ ಇಬ್ಬರೂ ಕೂಡ ನಿಧಿಯ ಭಾಗಕ್ಕಾಗಿ ಕಿತ್ತಾಡಿದ್ದಾರೆ. ಕೊನೆಗೆ ಫಿಫ್ಟಿ ಫಿಫ್ಟಿ ಎಂದು ಮಾತನಾಡಿಕೊಂಡಿದ್ದು, ತೆರೆದು ನೋಡಿದರೆ ಮಡಕೆ ತುಂಬ ಬೂದಿ ಕಂಡು ಶಾಕ್ ಆಗಿದ್ದಾರೆ. ಮಂತ್ರವಾದಿ ಮಾತನ್ನು ನಂಬಿಕೊಂಡು ಇಬ್ಬರೂ ಜಪ ಮಾಡಿದ್ದಾರೆ. ಓಂ ಲಕ್ಷ್ಮಿಭ್ಯೋಃ ನಮಃ ಎಂದು ಸಹಸ್ರನಾಮ ಪಠಿಸಿದ್ದಾರೆ. ಅಷ್ಟರಲ್ಲಿ ಮನೆಯವರು ಆಗಮಿಸಿದ್ದು, ದತ್ತ ತಾತ ಮಡಕೆಯನ್ನು ಮುಟ್ಟಿದ್ದಕ್ಕೆ, ಚಿನ್ನವೆಲ್ಲಾ ಬೂದಿಯಾಯ್ತು ಎಂದು ಗೋಳಾಡಿದ್ದಾರೆ. ಆದರೆ, ಸಂಧ್ಯಾ ಮತ್ತು ಜುಗ್ಗ ಮಾವನ ಮಾತುಗಳು ಮನೆಯವರಿಗೆ ಅರ್ಥವಾಗುತ್ತಿಲ್ಲ. ಅವರಿಬ್ಬರ ನಡವಳಿಕೆಗೆ ಗಾಬರಿ ಜೊತೆಗೆ ಆಶ್ಚರ್ಯವನ್ನೂ ಪಟ್ಟಿದ್ದಾರೆ. ಸತ್ಯ ಗೊತ್ತಾದ ಮೇಲೆ ದತ್ತ ತಾತ ಅವರಿಗೆ ಗೇಟ್ ಪಾಸ್ ಕೊಡುತ್ತಾರಾ..? ಇಲ್ಲವೇ ತುಳಸಿಗೋಸ್ಕರ ಸಹಿಸಿಕೊಳ್ತಾರಾ ಕಾದು ನೋಡಬೇಕಿದೆ.

More from Filmibeat

English summary
Srirasthu shubhamasthu kannada serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X