Srirasthu Shubhamasthu ; ಅನಾಥಾಶ್ರಮಕ್ಕೆ ತೆರಳಿದ ತುಳಸಿಗೆ ಪೂರ್ಣಿಮಾ ಬಗ್ಗೆ ಏನ್ ಗೊತ್ತಾಯ್ತು..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಹೋಳಿ ಹಬ್ಬ ಜೋರಾಗಿ ಆಚರಿಸಲಾಯ್ತು. ಅಭಿ ಹಾಗೂ ಅವಿ ಇಬ್ಬರೂ ಬಣ್ಣದ ಆಟದಲ್ಲಿ ಮಸ್ತ್ ಮಜಾ ಮಾಡಿದ್ದೂ ಆಯ್ತು. ಅಭಿ ಅಂತೂ ಯಾರ ಕೈಯಲ್ಲಿ ಬಣ್ಣ ಹಚ್ಚಿಸಿಕೊಳ್ಳಬಾರದು ಎಂದು ಬಚ್ಚಿಟ್ಟುಕೊಂಡಿದ್ದೇ ಹೆಚ್ಚು. ಮಾಧವ ಗೆದ್ದವರಿಗೆ ಉಡುಗೊರೆಯನ್ನೂ ಕೊಡುವುದಾಗಿ ಹೇಳಿದ್ದಾರೆ. ಅಂತೂ ಇಂತೂ ತುಳಸಿ ಆಟದಲ್ಲಿ ಸೋತು ಅಭಿ ಗೆಲ್ಲುವಂತೆ ಮಾಡಿದ್ದಾಳೆ. ಅಭಿಗೆ 120ಕೋಟಿ ಪ್ರಾಜೆಕ್ಟ್ ಸಿಕ್ಕಿದೆ. ಜೊತೆಗೆ ತುಳಸಿಯೂ ತನ್ನ ಕೀಗಳನ್ನು ಅಭಿಗೆ ನೀಡಿದ್ದಾಳೆ.

ದತ್ತ ತಾತನ ಮನೆಗೆ ಸಂಧ್ಯಾ ವಾಪಸ್..!

ಇತ್ತ ಸಂಧ್ಯಾ ಜುಗ್ಗ ಮಾವ ಹೊಸ ಪ್ಲಾನ್ ಮಾಡಿದ್ದಾನೆ. ತನ್ನ ಮನೆ ಇನ್ಮುಂದೆ ತನ್ನ ಪಾಲಿಗಿಲ್ಲ ಎಂದು ಸುಳ್ಳು ಹೇಳಿದ್ದಾನೆ. ತನ್ನ ಮೈದುನ ಮನೆಯನ್ನು ಯಾರಿಗೋ ಮಾರಾಟ ಮಾಡಿದ್ದಾನೆ. ನಾವು ಈ ಕೂಡಲೇ ಮನೆ ಖಾಲಿ ಮಾಡಬೇಕು ಎಂದು ಸುಳ್ಳು ಹೇಳಿದ್ದಾನೆ. ಸೀದಾ ಮನೆಯವರನ್ನು ದತ್ತಾ ತಾತನ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾನೆ. ತನ್ನ ಮನೆಯನ್ನು ಬಾಡಿಗೆಗ ಕೊಟ್ಟು ಅದರಿಂದ ಬರುವ ಹಣವನ್ನು ಕೂಡಿಟ್ಟುಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದಾನೆ. ಸಂಧ್ಯಾ ವಾಪಸ್ ಮನೆಗೆ ಬಂದಿದ್ದನ್ನು ನೋಡಿ ದತ್ತ ತಾತ ಫುಲ್ ಶಾಕ್ ಆಗಿದ್ದಾರೆ.

Srirasthu Shubhamasthu serial 01 April episode written update

ಶುರುವಾಯ್ತು ಗತಿಗೆಟ್ಟವರ ನಾಟಕ..!

ದತ್ತ ತಾತನನ್ನು ಪುಸಲಾಯಿಸಿ ಜುಗ್ಗ ಮಾವ ಮನೆಯೊಳಗೆ ಹೊಕ್ಕಿದ್ದಾನೆ. ಇಲ್ಲೇ ಠಿಕಾಣಿ ಹೂಡಬೇಕು. ದತ್ತ ತಾತ ತೀರಿಕೊಂಡ ಮೇಲೆ ಈ ಮನೆಯನ್ನೂ ತನ್ನ ಹೆಸರಿಗೆ ಮಾಡಿಕೊಳ್ಳಬೇಕು ಎಂದು ಜುಗ್ಗ ಆಲೋಚಿಸಿದ್ದಾನೆ. ಆದರೆ, ದತ್ತ ತಾತನಿಗೆ ಜುಗ್ಗನ ದೂರಾಲೋಚನೆ ಗೊತ್ತಿದ್ದರೂ ಕೂಡ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಇವರ ಈ ಹೊಸ ನಾಟಕಕ್ಕೆ ಗತಿಗೆಟ್ಟವರು ಎಂದು ಹೆಸರಿಟ್ಟಿದ್ದಾರೆ. ಇನ್ನೂ ಸಂಧ್ಯಾ ವಾಪಸ್ ಬಂದಿರುವುದು ಸಮರ್ಥ್, ಸಿರಿಗೂ ಕೊಂಚವೂ ಇಷ್ಟವಿಲ್ಲ. ಆದರೆ, ಈ ಮನೆಯಲ್ಲಿ ಜಾಗ ಕೊಡದಿದ್ದರೆ, ತುಳಸಿ ಮನೆಗೆ ಹೋಗುವುದಾಗಿ ಹೆದರಿಸಿರುವ ಜುಗ್ಗನ ಮಾತಿಗೆ ಅಂಜಿ ತಾತ ಸುಮ್ಮನಿದ್ದಾರೆ. ಆದರೆ, ಮನೆಯಲ್ಲಿ ನಿಧಾನವಾಗಿ ಜಾಗ ಮಾಡಿಕೊಳ್ಳಬೇಕು ಎಂದು ಜುಗ್ಗ ಡಿಸೈಡ್ ಮಾಡಿಕೊಂಡು ಆಗಿದೆ.

Srirasthu Shubhamasthu serial 01 April episode written update

ಅನಾಥಾಶ್ರಮಕ್ಕೆ ತೆರಳಿದ ತುಳಸಿ..!

ಅಭಿ ಆಸೆಯಂತೆಯೇ ತುಳಸಿ ತಾನೂ ಇಂಗ್ಲೀಷ್ ಕಲಿಯಬೇಕು. ಡ್ಯಾನ್ಸ್ ಕೂಡ ಕಲಿತುಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಳೆ. ಹೀಗಾಗಿ ರೂಮಿನಲ್ಲಿ ಒಬ್ಬಳೇ ಇರುವಾಗ ಭರತನಾಟ್ಯ ವೀಡಿಯೋ ಹಾಕಿಕೊಂಡು ಡ್ಯಾನ್ಸ್ ಕಲಿಯುತ್ತಿದ್ದಾಳೆ ತುಳಸಿ. ಆದರೆ, ಡ್ಯಾನ್ಸ್ ಕಲಿಯುವುದು ಕಷ್ಟವಾಗುತ್ತಿದೆ. ಇನ್ನು ಮಾಧವಗೆ ಅನಾಥಾಶ್ರಮದವರು ಹಣವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಚಿಂತೆ ಶುರುವಾಗಿದೆ. ಮಾಧವ ಚಿಂತೆಯನ್ಜು ಕಂಡ ತುಳಸಿ ಬೇಸರ ಮಾಡಿಕೊಂಡಿದ್ದು, ಹೇಗಾದರೂ ಮಾಡಿ ಅನಾಥಾಶ್ರಮಕ್ಕೆ ಚೆಕ್ ಕೊಡಲೇಬೇಕು ಎಂದು ತುಳಸಿ ತೀರ್ಮಾನಿಸಿದ್ದಾಳೆ. ಹಾಗಾಗಿ ಮನೆಯಲ್ಲಿ ಯಾರಿಗೂ ಹೇಳದೇ ತುಳಸಿ ಅನಾಥಾಶ್ರಮಕ್ಕೆ ಹೋಗಿದ್ದಾಳೆ.

Srirasthu Shubhamasthu serial 01 April episode written update

ಪೂರ್ವಿ ಫೋಟೋಗಳನ್ನು ನೋಡಿ ಶಾಕ್..!

ಅನಾಥಾಶ್ರಮಕ್ಕೆ ತೆರಳಿದ ತುಳಸಿ, ಚೆಕ್ ಕೊಟ್ಟರೂ ಆಶ್ರಮದವರು ತೆಗೆದುಕೊಳ್ಳುವುದಿಲ್ಲ. ಆಗ ತುಳಸಿ ತನ್ನ ತಪ್ಪಿನ ಬಗ್ಗೆ ಅರ್ಥ ಮಾಡಿಸುತ್ತಾಳೆ. ಚೆಕ್ ತೆಗೆದುಕೊಳ್ಳದೇ ಹೋದರೆ ಉಪವಾಸ ಕೂರುವುದಾಗಿ ಹಠ ಮಾಡುತ್ತಾಳೆ. ಆಗ ಆಶ್ರಮದವರು ಚೆಕ್ ತೆಗೆದುಕೊಳ್ಳುತ್ತಾರೆ. ತುಳಸಿ ಅಲ್ಲಿ ಪೂರ್ಣಿಮಾ ಇದ್ದ ಫೋಟೋಗಳನ್ನು ನೋಡುತ್ತಾಳೆ. ಆಗ ಆಶ್ರಮದವರು ಪೂರ್ಣಿಮಾ ತಮ್ಮ ಆಶ್ರಮದಲ್ಲೇ ಓದಿದ್ದು ಎಂಬ ಸತ್ಯವನ್ನು ಹೇಳುತ್ತಾರೆ. ಈ ಮಾತನ್ನು ಕೇಳಿದ ತುಳಸಿಗೆ ಖುಷಿಯಾಗುತ್ತದೆ. ಆದರೆ. ತುಳಸಿ ಅನಾಥಾಶ್ರಮಕ್ಕೆ ಹೋಗಿದ್ದು ತಿಳಿದರೆ, ಮಾಧವ ಬೇಸರ ಮಾಡಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Tulasi goes to orphanage and gives cheque and also knows about poornima.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X