Srirasthu Shubhamasthu ; ಅಪ್ಪನ ಜೀವಕ್ಕೆ ಆಸರೆಯಾದ ಮಗ : ಮಾಧವ್ ಗಾಗಿ ಅವಿನಾಶ್ ಫೈಟಿಂಗ್

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಇಷ್ಟು ದಿನ ಪೂರ್ಣಿ ತಂಟೆಗೆ ಬಾರದೆ ಸುಮ್ಮನಿದ್ದ ದೀಪಿಕಾ ಈಗ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಾಳೆ. ಪೂರ್ಣಿಮಾ ಕುತ್ತಿಗೆಯಲ್ಲಿರುವ ಸರವನ್ನು ನೋಡಿ ಯಾರು ಕೊಟ್ಟಿದ್ದು ಎಂದು ಕೇಳಿದ್ದಾಳೆ. ಪೂರ್ಣಿಮಾ ಉತ್ತರಿಸುವ ಮುನ್ನವೇ ನಿನಗ್ಯಾರು ಕೊಡುತ್ತಾರೆ.
ನಿನ್ನವರು ಅಂತ ಯಾರಿದ್ದಾರೆ.ನೀನು ಅನಾಥೆ.ನಿನಗೆ ತವರು ಮನೆ ಇಲ್ಲ. ಈ ಮನೆಯವರೇ ಕೊಡಿಸಬೇಕು ಎಂದು ಹೀಯಾಳಿಸಿದ್ದಾಳೆ. ಈ ಸಮಯಕ್ಕೆ ಬಂದ ತುಳಸಿ ಬಳಿ ಸರ ತುಂಬಾ ಚೆನ್ನಗಿದೆ ಎಂದು ಬಣ್ಣದ ಮಾತನಾಡಿದ್ದಾಳೆ.

ಅಜಂತಾ ಇಂಡಸ್ಟ್ರೀಸ್ ಜೊತೆ ಫೈಟ್

ಇನ್ನು ಮಾಧವ್ ಕಂಪನಿಯ ವಿರುದ್ಧ ಅಜಂತಾ ಇಂಡಸ್ಟ್ರಿ ದೂರು ದಾಖಲಿಸಿದೆ. ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಮಾಧವ್ ಕಂಪನಿಯನ್ನು ಮುಳುಗಿಸಲು ಯತ್ನಿಸಿದೆ. ಆದರೆ, ಮಾಧವ್ ಇದಕ್ಕೆಲ್ಲಾ ಜಗ್ಗುವುದಿಲ್ಲ ಎಂದು ಎಲ್ಲಾ ರೀತಿಯ ಸಾಕ್ಷಿಗಳನ್ನು ಕಲೆ ಹಾಕಿದ್ದಾನೆ. ಅಜಂತಾ ಕಂಪನಿಯ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಮುಂದಾಗಿದ್ದಾರೆ. ಅಜಂತಾ ಇಂಡಸ್ಟ್ರಿ ವಿರುದ್ಧ ದೂರು ನೀಡಲು ಮಾಧವ್ ಹೊರಟಿದ್ದಾನೆ. ಮಾಧವ್ ಒಬ್ಬನೇ ಹೋಗುವುದು ಬೇಡ ಎಂದು ಮಹೇಶ್ ಹೇಳಿದ್ದು, ಅವಿ ಅಪ್ಪನ ಜೊತೆಗೆ ಹೊರಟಿದ್ದಾನೆ. ಅಜಂತಾ ವಿರುದ್ಧ ಸಾಕ್ಷಿ ಹೇಳಲು ವ್ಯಕ್ತಿ ಒಬ್ಬರು ತಯಾರಾಗಿದ್ದು, ಅವರನ್ನು ತಮ್ಮದೇ ಕೇಶವ್ ಫಾರ್ಮ್ ಹೌಸ್ ನಲ್ಲಿ ಇರಲು ಹೇಳಿದ್ದಾರೆ.

srirasthu shubhamasthu serial 01 July episode written update


ಭಾವನ ಕೊಲೆಗೆ ಶಾರ್ವರಿ ಸಂಚು..!

ಮಾಧವ್ ಸಾಕ್ಷಿ ಬಗ್ಗೆ ಮನೆಯಲ್ಲಿ ಬಾಯಿ ಬಿಟ್ಟಿದ್ದು, ಇದು ಶಾರ್ವರಿ ಕಣ್ಣು ಕೆಂಪಗಾಗುವಂತೆ ಮಾಡಿದೆ. ಆಚಾರ್ಯ ಎಂಬ ವ್ಯಕ್ತಿಗೆ ಫೋನ್ ಮಾಡಿದ್ದಾಳೆ. ಕೇಶವ್ ಫಾರ್ಮ್ ಹೌಸ್ ನಲ್ಲಿ ಇರುವ ಸಾಕ್ಷಿಯನ್ನು ನಾಶ ಮಾಡಲು ಹೇಳಿದ್ದಾಳೆ. ಮಾಧವ್ ಕೂಡ ಅದೇ ಸಮಯಕ್ಕೆ ಸಾಕ್ಷಿ ಹೇಳಲು ತಯಾರಿರುವ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಬಂದಿದ್ದಾನೆ. ಶಾರ್ವರಿ ಫೋನ್ ನಲ್ಲಿ ಮಾತನಾಡುವಾಗ ಮಹೇಶ್ ಬಂದು ಸ್ಪೀಕರ್ ಹಾಕಿದ್ದಾನೆ. ಶಾರ್ವರಿ ಮಾತನ್ನು ಬದಲಿಸಿದ್ದು, ದೇವಸ್ಥಾನದ ಆಚಾರ್ಯರಿಗೆ ಫೋನ್ ಮಾಡಿರುವಂತೆ ಮಾತನಾಡಿ ಸಂದರ್ಭವನ್ನು ನಿಭಾಯಿಸುತ್ತಾಳೆ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿಯೂ ಕೂಡ ಶಾರ್ವರಿ ಮಾತಿಗೆ ತಕ್ಕಂತೆ ಮರು ಮಾತನಾಡಿ ಮಹೇಶನ ಅನುಮಾನವನ್ನು ಸುಳ್ಳು ಮಾಡುತ್ತಾನೆ.


ಮಾಧವ್ ಕೊಲ್ಲಲು ಬಂದವರಿಗೆ ಅವಿ ಬೆದರಿಕೆ..!

ರೌಡಿಗಳು ಕೊಲ್ಲಲು ಫಾರ್ಮ್ ಹೌ ಸ್ ಒಳಗೆ ಬಂದಿದ್ದಾರೆ. ಮಾಧವ್ ಕಷ್ಟಪಟ್ಟು ಹೋರಾಡುತ್ತಾನೆ. ಅಷ್ಟರಲ್ಲಿ ಅವಿ ಬಂದು ಫೈಟ್ ಮಾಡುತ್ತಾನೆ. ತನ್ನ ತಂದೆಗೋಸ್ಕರ ಅವಿ ಫೈಟ್ ಮಾಡುತ್ತಿರುವುದಕ್ಕೆ ಮಾಧವ್ ಖುಷಿ ಪಡುತ್ತಾನೆ. ಈ ನಡುವೆ ರೌಡಿಗಳ ಪ್ರಶ್ನೆಗೆ ಅವಿ ಮಾಧವ್ ತನ್ನ ಅಪ್ಪ ಎಂದು ಹೇಳಿದ್ದು, ಮಾಧವ್ ಇನ್ನಷ್ಟು ಖುಷಿ ಪಟ್ಟಿದ್ದಾನೆ. ಫೈಟಿಂಗ್ ನಲ್ಲಿ ಮಾಧವ್ ಗೆ ಪೆಟ್ಟು ಬಿದ್ದು ಪ್ರಜ್ಞೆ ಹೋಗುತ್ತದೆ. ಅವಿ ರೌಡಿಗಳಿಗೆ ಪಾಠ ಕಲಿಸುತ್ತಾನೆ. ಪೊಲೀಸರಿಗೆ ವಿಷಯ ತಿಳಿಸುತ್ತಾನೆ.

srirasthu shubhamasthu serial 01 July episode written update

ಅಪ್ಪನನ್ನು ಉಳಿಸಿದ ಮಗ ಅವಿನಾಶ್

ತಂದೆಯನ್ನು ಅವಿ ಹೊತ್ತುಕೊಂಡು ಆಸ್ಪತ್ರೆಗೆ ಹೋಗುತ್ತಾನೆ. ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬರುತ್ತಾನೆ. ಆದರೆ, ಮಾಧವ್ ಗೆ ಪ್ರಜ್ಞೆ ಬಂದಿರುವುದಿಲ್ಲ. ಇನ್ನು ಮಾಧವ್ ಸ್ಥಿತಿಯನ್ನು ಕಂಡು ಮನೆಯವರೆಲ್ಲಾ ಗಾಬರಿಯಾಗುತ್ತಾರೆ. ಎಲ್ಲರೂ ಏನಾಯ್ತು ಎಂದು ಪ್ರಶ್ನಿಸುತ್ತಾರೆ. ನಡೆದ ಘಟನೆಯನ್ನೆಲ್ಲಾ ಅವಿ ಮನೆಯವರಿಗೆ ಬಿಡಿಸಿ ಹೇಳುತ್ತಾನೆ. ಮಾಧವ್ ಗೆ ಪ್ರಜ್ಞೆ ಬಂದ ಬಳಿಕ ಅವಿ ಅಪ್ಪನನ್ನು ಹೇಗೆ ನೋಡಿಕೊಳ್ಳಬಹುದು ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X