Srirasthu Shubhamasthu ; ಹೊಟ್ಟೆಯಲ್ಲಿ ಇಲ್ಲದ ಮಗುವಿಗಾಗಿ ಸೀಮಂತ ಮಾಡಿಸಿಕೊಳ್ಳಲು ಹಠ ಹಿಡಿದ ಸಂಧ್ಯಾ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾಳಿಗೆ ಹಣದ ಮೇಲಿನ ಮೋಹ ಕೊಂಚವೂ ಕಡಿಮೆ ಆಗಿಲ್ಲ. ಸದಾ ಯಾರಿಂದ ಹಣ ಲಪಟಾಯಿಸುವುದು ಎಂದು ಕಾಯುತ್ತಲೇ ಇರುತ್ತಾಳೆ. ಮಾವನ ಮನೆಯಲ್ಲಿ ಇರುವುದು ಕಷ್ಟ ಎಂಬ ಕಾರಣಕ್ಕೆ ಸುಳ್ಳು ಹೇಳಿಕೊಂಡು ತವರು ಮನೆಯಲ್ಲೇ ಸೆಟಲ್ ಆಗಿರುವ ಸಂಧ್ಯಾಳದ್ದು ದಿನಕ್ಕೊಂದು ರಾಮಾಯಣವಿರುತ್ತದೆ. ಯಾರು ಎಷ್ಟೇ ಬುದ್ಧಿ ಹೇಳಿದರೂ ಕೇಳದ ಸಂಧ್ಯಾ ತನ್ನದೇ ದಾರಿಯಲ್ಲಿ ಸಾಗುತ್ತಾಳೆ. ಸುಳ್ಳು ಹೇಳಿಕೊಂಡು ಮನೆಯವರಿಗೆ ಪದೇ ಪದೇ ಮೋಸ ಮಾಡುತ್ತಿದ್ದಾಳೆ.

ಮನೆಯಲ್ಲಿ ಹೊಸ ಸಮಸ್ಯೆ ತಂದ ಸಂಧ್ಯಾ

ಮಾಧವ ವಂಶವೃಕ್ಷದಲ್ಲಿ ಸಮರ್ಥ್ ಹಾಗೂ ಸಂಧ್ಯಾ ಹೆಸರು ಕೂಡ ಸೇರಿಕೊಂಡಿದೆ. ಇದು ಸಂಧ್ಯಾಳಿಗೆ ಪ್ಲಸ್ ಪಾಯಿಂಟ್ ಆಗಿದೆ. ಸುಮ್ಮನಿರದೇ ಈಗ ತನಗೆ ಸೀಮಂತ ಆಗಲೇಬೇಕು ಎಂದು ಹಠ ಮಾಡುತ್ತಿದ್ದಾಳೆ. ಹೊಟ್ಟೆಯಲ್ಲಿ ಮಗುವಿಲ್ಲದೇ ಇದ್ದರೂ ಕೂಡ ಇತರೆ ಶೋಕಿಗಳನ್ನು ಮಾಡುತ್ತಲೇ ಇರುತ್ತಾಳೆ. ಮನೆಯವರಿಗೆ ಪದೇ ಪದೇ ಬೇಸರ ಮಾಡುತ್ತಿರುತ್ತಾಳೆ. ಈಗ ತನಗೆ ಸೀಮಂತ ಮಾಡಲೇಬೇಕು ಎಂದು ಮನೆಯಲ್ಲಿ ಹಠ ಹಿಡಿದಿದ್ದಾಳೆ. ಸೀಮಂತ ಮಾಡಲು ಮನೆಯವರಿಗೆ ಒಪ್ಪಿಗೆ ಇದ್ದರೂ ಕೂಡ ಸಂಧ್ಯಾಳಿಗೆ ಈ ಮನೆಯಲ್ಲಿ ಸೀಮಂತ ನಡೆಯುವುದು ಕೊಂಚವೂ ಇಷ್ಟವಿಲ್ಲ. ಮಾಧವ ಮನೆಯಲ್ಲೇ ತನ್ನ ಸೀಮಂತ ನಡೆಯಬೇಕು ಎಂದಿದ್ದಾಳೆ. ಇದಕ್ಕೆ ಸಮರ್ಥ್ ಹಾಗೂ ದತ್ತ ತಾತ ಇಬ್ಬರೂ ಕೂಡ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಮನೆಯಲ್ಲಿ ಮಾಡೋಣ, ಮಾಧವ ಮನೆಯವರಿಗೆ ಸಮಸ್ಯೆ ಮಾಡಬಾರದು ಎಂದು ಬೈದರೂ ಸಂಧ್ಯಾ ಯಾರ ಮಾತನ್ನು ಕೇಳಲೂ ತಯಾರಿಲ್ಲ.

srirasthu shubhamasthu serial 01 March episode written update

ಅಣ್ಣ ಸಮರ್ಥ್ ಗೆ ಅವಮಾನ ಮಾಡಿದ ತಂಗಿ

ಸಮರ್ಥ್ ಜೊತೆಗೆ ಕಾರಿನಲ್ಲಿ ಮಾಧವ ಮನೆಗೆ ಹೋಗುತ್ತಾಳೆ. ಅಲ್ಲಿ ಸೀಮಂತದ ಬಗ್ಗೆ ಮಾತನಾಡಬೇಡ ಎಂದು ಸಮರ್ಥ್ ಬುದ್ಧಿ ಹೇಳುತ್ತಾನೆ. ಆದರೆ, ಸಂಧ್ಯಾ ಬೇಕಂತಲೇ ನೀನು ಈ ಮನೆ ಕಾರ್ ಡ್ರೈವರ್ ಅಷ್ಟೇ ನಿನ್ನ ಕೆಲಸ. ನಾನು ಈ ಮನೆಯ ಮಗಳು. ನನ್ನನ್ನು ಡ್ರಾಪ್ ಮಾಡಿ ಪಿಕ್ ಮಾಡುವುದಷ್ಟೇ ನಿನ್ನ ಕೆಲಸ ಎಂದು ಸಂಧ್ಯಾ ಸಮರ್ಥ್ ಗೆ ಅವಮಾನ ಮಾಡುತ್ತಾಳೆ. ಸ್ವಂತ ಅಣ್ಣನನ್ನೇ ಹಣದಿಂದ ತೂಕ ಮಾಡಿ ಮಾತನಾಡುತ್ತಾಳೆ.

srirasthu shubhamasthu serial 01 March episode written update

ಅಭಿ ಕೋಪ ನೆತ್ತಿಗೇರಿಸಿದ ಸಂಧ್ಯಾ

ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಅಭಿ ಅನ್ನು ತಮ್ಮಯ್ಯ ಎಂದು ಮಾತನಾಡಿಸುತ್ತಾಳೆ. ಅಭಿಗೆ ಸಂಧ್ಯಾಳನ್ನು ನೋಡಿದ ಕೂಡಲೇ ಕೋಪ ಬರುತ್ತದೆ. ಆದರೆ, ಸಂಧ್ಯಾ ಅವರ ಅಮ್ಮನ ಎದುರಿಗೆ ತನ್ನ ಸೀಮಂತದ ಬಗ್ಗೆ ಮಾತನಾಡಲು ಶುರು ಮಾಡುತ್ತಾಳೆ. ವಿಚಾರ ತಿಳಿದಿದ್ದ ತುಳಸಿ ಅವಳನ್ನು ಬೇಕಂತಲೇ ಒಳಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಗೂ ಅಭಿ ಬಂದಾಗ ತನ್ನ ಸೀಮಂತ ಈ ಮನೆಯಲ್ಲೇ ಆಗಬೇಕು ಎಂದು ಕೇಳುತ್ತಾಳೆ. ಈ ಮಾತನ್ನು ಕೇಳಿದ ಅಭಿ ಕೋಪ ನೆತ್ತಿಗೇರುತ್ತದೆ.

srirasthu shubhamasthu serial 01 March episode written update

ಅಮ್ಮನ ಮಾತೂ ಕೇಳದ ಸಂಧ್ಯಾ

ನಿನಗೆ ಎಷ್ಟು ಬೇಕೋ ಅಷ್ಟು ಹಣವನ್ನು ಕೊಡುತ್ತೇನೆ ಬೇಕಾದರೆ, ಈ ಮನೆಯಿಂದ ತೊಲಗು, ಸೀಮಂತ ಅದೂ ಇದೂ ಅಂತ ಇಲ್ಲಿಗಂತೂ ಬರಬೇಡ ಎಂದು ಬೈಯುತ್ತಾನೆ. ಆದರೆ, ಸಂಧ್ಯಾ, ಅಭಿ ಮಾತಿಗೆ ನನಗೂ ಈ ಮನೆಯಲ್ಲಿ ಹಕ್ಕಿದೆ. ಕೋರ್ಟ್ ಗೆ ಹೋದರೆ, ನಿನಗೆ ಕಷ್ಟ ಆಗುತ್ತದೆ ಎಂದು ವಾರ್ನಿಂಗ್ ಕೊಡುತ್ತಾಳೆ. ತುಳಸಿ ಮಗಳ ಮೇಲೆ ಕೂಗಾಡುತ್ತಾಳೆ. ಇಲ್ಲಿ ನಿನ್ನ ಸೀಮಂತ ನಡೆಯುವುದಿಲ್ಲ. ಅಮ್ಮನ ಮಾತನ್ನು ಕೇಳು ಎಂದು ಬುದ್ಧಿ ಹೇಳುತ್ತಾಳೆ. ಆದರೂ ಸಂಧ್ಯಾ ತನ್ನ ಹಠವನ್ನು ಬಿಡುವುದಿಲ್ಲ.

More from Filmibeat

English summary
sandhya is planned for baby shower in madhav’s house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X