Srirasthu Shubhamasthu; ಮಕ್ಕಳಿಬ್ಬರ ಆಸೆಯನ್ನು ಈಡೇರಿಸಿದ ತುಳಸಿ : ಸಮರ್ಥ್ ಗೆ ಅಣ್ಣನಾದ ಅವಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಎಲ್ಲರೂ ದತ್ತ ತಾತನ ಮನೆಯಲ್ಲಿದ್ದಾರೆ. ತುಳಸಿ ಮತ್ತು ಮಾಧವ್ ಮದುವೆ ಸಂಭ್ರಮ ಮನೆ ಮಾಡಿದ್ದು, ಎಲ್ಲರೂ ಮೆಹಂದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ.ಆದರೆ, ದೀಪಿಕಾ ಮೆಹಂದಿ ಕಲರ್ ಬಾರದಂತೆ ಏನೋ ಮಾಡಿದ್ದಾಳೆ. ಹಾಗಾಗಿ ಅವಳು ಮಾತ್ರ ಬೇರೆ ಕೋನ್ ಬಳಸಿ ಮೆಹಂದಿಯನ್ನು ಹಾಕಿಕೊಂಡಿದ್ದಾಳೆ.ಮೆಹಂದಿ ಬಣ್ಣ ಬಂದರೆ ಮಾತ್ರವೇ ಅವರ ಗಂಡ ಹೆಚ್ಚು ಪ್ರೀತಿಸುತ್ತಾರೆ ಎಂದು ಕಥೆ ಹೇಳಿದ್ದಾಳೆ. ಆದರೆ, ದೀಪಿಕಾ ಕೋನ್ ಬದಲಾಯಿಸಿದ್ದನ್ನು ನೋಡಿದ ಪೂರ್ಣಿ ಮತ್ತು ಸಿರಿ ಮತ್ತೆ ಬದಲಾವಣೆ ಮಾಡಿದ್ದಾರೆ.
ಶಾರ್ವರಿ ಅಕ್ಕ ಶರ್ಮಿಳಾ ಯಾರು..?
ಹೀಗಾಗಿ ಮೆಹಂದಿ ತೊಳೆದ ಮೇಲೆ ದೀಪಿಕಾ ಕೈಗೆ ಬಣ್ಣ ಬಂದಿಲ್ಲ. ಬದಲಿಗೆ ಬೇರೆ ಎಲ್ಲರಿಗೂ ಮೆಹಂದಿ ತುಂಬಾ ಚೆನ್ನಾಗಿ ಕಲರ್ ಬಂದಿದೆ. ಇದರಿಂದ ದೀಪಿಕಾಳಿಗೆ ಅವಮಾನವಾಗುತ್ತದೆ. ಆದರೆ, ಮಾಧವ್ ಮತ್ತು ದತ್ತ ತಾತ ಪ್ರೀತಿ ಎನ್ನುವುದು ಬಣ್ಣದಲ್ಲಿಲ್ಲ ಎಂಬ ಸತ್ಯವನ್ನು ಎಲ್ಲರಿಗೂ ಅರ್ಥ ಮಾಡಿಸಿದ್ದಾರೆ. ಇನ್ನು ಎಲ್ಲರೂ ದತ್ತ ತಾತನ ಮನೆಯಲ್ಲೇ ಮಲಗಬೇಕು ಎಂದು ಹೇಳಿದ್ದು, ಇದಕ್ಕೆ ದೀಪಿಕಾ ಮತ್ತು ಶಾರ್ವರಿ ಒಪ್ಪುವುದಿಲ್ಲ. ಆದರೆ, ದತ್ತ ತಾತನ ಮಾತು ಮೀರಲಾರದೇ ಎಲ್ಲರೂ ಇಲ್ಲೇ ಉಳಿಯುತ್ತಾರೆ. ಆದರೆ, ಶಾರ್ವರಿ ಎಲ್ಲರೂ ಮಲಗಿದ ಬಳೀಕ ಸ್ಮಶಾನವೊಂದಕ್ಕೆ ಹೋಗುತ್ತಾಳೆ. ಅಲ್ಲಿ ಶರ್ಮಿಳಾ ಎಂಬ ಸಮಾಧಿ ಮುಂದೆ ನಿಂತು ಅಕ್ಕ ನಿನ್ನ ಸಾವಿಗೆ ಕಾರಣವಾದ ಮಾಧವ್ ಮೇಲೆ ನಾನು ಧ್ವೇಷ ತೀರಿಸಿಕೊಳ್ಳುತ್ತೇನೆ ಎಂದು ಶಪಥ ಮಾಡುತ್ತಾಳೆ. ಆದರೆ, ಶಾರ್ವರಿ ಅಕ್ಕ ಶರ್ಮಿಳಾ ಯಾರೆಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ಜೋರಾಗಿದೆ ತುಳಸಿ ಮಾಧವ್ ಮದುವೆ
ದತ್ತ ತಾತನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಮರ್ಥ್ ತನ್ನ ತಾಯಿಗಾಗಿ ಧಾರೆ ಸೀರೆಯನ್ನು ತಂದುಕೊಟ್ಟಿದ್ದಾನೆ. ಇದನ್ನು ನೋಡಿದ ತುಳಸಿಗೆ ಬಹಳ ಖುಷಿಯಾಗುತ್ತದೆ. ಆದರೆ, ಪೂರ್ಣಿಮಾ ಮತ್ತು ಅವಿನಾಶ್ ಕೂಡ ತುಳಸಿಗಾಗಿ ಧಾರೆ ಸೀರೆಯನ್ನು ತಂದಿರುತ್ತಾರೆ. ಇದರಿಂದ ಸಮರ್ಥ್ ಗೆ ಬೇಸರವಾಗುತ್ತದೆ. ಇನ್ನು ಅರಿಶಿಣ ಶಾಸ್ತ್ರವನ್ನು ಮಾಡುವಾಗ ಸಮರ್ಥ್ ಕಣ್ಣಾಲಿಗಳು ಒದ್ದೆಯಾಗುತ್ತದೆ. ಮನದೊಳಗೆ ಪ್ರೀತಿ ಇದ್ದರೂ ಸಮರ್ಥ್ ಬೇಕಂತಲೇ ದೂರದವನಂತೆ ನಡೆದುಕೊಳ್ಳುತ್ತಿರುತ್ತಾನೆ. ಸಂಧ್ಯಾ ಕೂಡ ಜೀವನದ ಪಾಠವನ್ನು ಕಲಿತಿದ್ದಾಳೆ. ಶಾರ್ವರಿ ಮತ್ತು ದೀಪಿಕಾ ಒಡವೆ ಬಗ್ಗೆ ಆಸೆ ತೋರಿಸಿದಾಗ, ಆಸೆ ನನಗೂ ಇದೆ. ಆದರೆ ಅದನ್ನು ಈಡೇರಿಸಿಕೊಳ್ಳಲು ಮನಸ್ಸಿಲ್ಲ ಎಂದು ಹೇಳುತ್ತಾಳೆ.
ಅಣ್ಣ ಎಂದು ಒಪ್ಪಿಕೊಂಡ ಸಮರ್ಥ್
ಮಗಳು ಇಷ್ಟೊಂದು ಬದಲಾಗಿದ್ದಾಳೆ ಎಂಬುದನ್ನು ನೋಡಿದ ತುಳಸಿಗೆ ಖುಷಿಯಾಗುತ್ತದೆ. ಸಂಧ್ಯಾಳಿಗೆ ಬಂಗಾರದ ನೆಕ್ಲೆಸ್ ಕೊಟ್ಟು ತುಳಸಿ ಖುಷಿ ಪಡಿಸುತ್ತಾಳೆ. ತಾನು ಮಾಡಿದ ತಪ್ಪಿನ ಬಗ್ಗೆ ಪಶ್ಚಾತಾಪ ಹೊಂದಿರುವ ಸಂಧ್ಯಾ ನೆಕ್ಲೇಸ್ ಅನ್ನು ತೆಗೆದುಕೊಳ್ಳಲು ಮುಜುಗರ ಪಟ್ಟುಕೊಳ್ಳುತಾಳೆ. ಇನ್ನು ಸಮರ್ಥ್ ಅನ್ನು ಅವಿ ತಮ್ಮ ಎಂದು ಕರೆದಾಗ ಬೇಖಂತಳೇ ನಾನು ನಿಮ್ಮ ಮನೆಯ ಡ್ರೈವರ್ ಎಂದು ಸಿಡುಕುತ್ತಾನೆ. ಅದೇ ಸ್ವಲ್ಪ ಹೊತ್ತಿನ ಬಳಿಕ ಸಿರಿ ಗಂಡಸರಿಗೆಲ್ಲಾ ಬಟ್ಟೆ ಆರಿಸಿದವರು ಯಾರು ಎಂದು ಕೇಳಿದಾಗ ಸಮರ್ಥ್ ಅಣ್ಣ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಎಲ್ಲರಿಗೂ ಖುಷಿಯಾಗುತ್ತದೆ. ಆದರೆ, ಈ ಸಂದರ್ಭವನ್ನು ಶಾರ್ವರಿ ಬಳಸಿಕೊಳ್ಳುತ್ತಾಳೆ.
ಇಬ್ಬರು ಕೊಟ್ಟ ಸೀರೆಯನ್ನು ಉಟ್ಟ ತುಳಸಿ
ನೋಡು ನೀನು ಮತ್ತು ನಿಮ್ಮ ಅಣ್ಣ ರಾಮ ಲಕ್ಷ್ಮಣರಂತೆ ಕಾಣುತ್ತಿದ್ದೀರಿ. ಆದರೆ ಈಗ ಸಮರ್ಥ್ ಬಂದಾಗಿನಿಂದ ಅವಿ ನಿನ್ನನ್ನು ಮರೆತು ಬಿಟ್ಟಿದ್ದಾನೆ. ಅಭಿ ನಿನ್ನನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಎಂದು ಚಾಡಿ ಹೇಳುತ್ತಾಳೆ. ಸಮರ್ಥ್ ತುಳಸಿ ಅಮ್ಮ ತಾನು ಕೊಟ್ಟ ಸೀರೆಯನ್ನೇ ಉಡಬೇಕು ಎಂದು ಬಹಳ ಆಸೆ ಪಟ್ಟಿರುತ್ತಾನೆ. ಆದರೆ ತುಳಸಿ ಇಬ್ಬರೂ ಮಕ್ಕಳಿಗೆ ಬೇಸರ ಮಾಡಬ ಆರದು ಎಂದು ಸಮರ್ಥ್ ಕೊಟ್ಟ ಸೀರೆಯನ್ನು ಉಟ್ಟಿದ್ದು, ಅವಿ ಕೊಟ್ಟ ಸೀರೆಯನ್ನು ಕೂಡ ಧರಿಸಿರುತ್ತಾಳೆ. ಇದನ್ನು ನೋಡಿದ ಇಬ್ಬರೂ ಮಕ್ಕಳೂ ಖುಷಿಪಡುತ್ತಾರೆ.


Click it and Unblock the Notifications











