Shrirasthu Shubhamasthu: ಸಾಂಗವಾಗಿ ನಡೆದ ಅಭಿ -ದೀಪಿಕಾ ಮದುವೆ; ತುಳಸಿ ಕಥೆ ಏನು ?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಹಾಗೂ ದೀಪಿಕಾ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ತುಳಸಿಯೇ ಮುಂದೆ ನಿಂತು ಅಭಿ ಮದುವೆಯ ಎಲ್ಲಾ ಶಾಸ್ತ್ರಗಳು ನಡೆಯುವಂತೆ ನೋಡಿಕೊಂಡಿದ್ದಾಳೆ. ತುಳಸಿಯೇ ಮುಂದೆ ನಿಂತು ಮದುವೆಯನ್ನು ಸುಸೂತ್ರವಾಗಿ ನಡೆಸುತ್ತಿರುವುದನ್ನ ಕಂಡು ಮಾಧವ ಮನೆಯವರಿಗೆ ತುಳಸಿ ಬಗ್ಗೆ ಹೆಮ್ಮೆ ಆಗ್ತಿದೆ. ಮಾಧವಗಂತೂ ತುಳಸಿ ಮೇಲಿನ ಗೌರವ ಹೆಚ್ಚಾಗುವುದರ ಜೊತೆಗೆ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ಅಲ್ಲದೇ ತುಳಸಿ ಬಗ್ಗೆ ಕೊಂಚ ಹೆಚ್ಚೇ ಕಾಳಜಿ ವಹಿಸುತ್ತಿದ್ದಾನೆ.

ಆತಂಕದಲ್ಲೇ ಇರುವ ತುಳಸಿ

ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದರೆ, ತುಳಸಿ ಆತಂಕದಲ್ಲಿದ್ದಾಳೆ. ಒಂದೊಂದು ಕ್ಷಣವೂ ನೋವಿನಲ್ಲೇ ಕಳೆಯುತ್ತಿದ್ದಾಳೆ. ಮನದಲ್ಲಿರುವ ಮಾತುಗಳನ್ನು ಹೇಳಿಕೊಳ್ಳಲಾಗದೇ ಒದ್ದಾಡುತ್ತಿದ್ದಾಳೆ. ಈ ಮದುವೆ ಮುಗಿತಯುತ್ತಿದ್ದಂತೆ ಮನೆಯವರಿಂದ ಸಂಪೂರ್ಣವಾಗಿ ದೂರವಾಗಬೇಕು ಎಂದು ಒಳಗೊಳಗೆ ಕೊರಗುತ್ತಿದ್ದಾಳೆ. ತುಳಸಿ ಮುಖದಲ್ಲಿನ ಆತಂಕವನ್ನು ಕಂಡು ಮಾಧವ ಪದೇ ಪದೇ ವಿಚಾರಿಸಿಕೊಳ್ಳುತ್ತಿದ್ದಾನೆ. ಆದರೆ, ತುಳಸಿ ಸತ್ಯವನ್ನು ಹೇಳಲು ತಯಾರಿಲ್ಲ. ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾಳೆ. ನಿಮ್ಮಿಂದಲೇ ಇದೆಲ್ಲವೂ ನಡೆಯುತ್ತಿದೆ ಎಂದು ಮಾಧವ ತುಳಸಿ ಬಳಿ ಹೇಳಿಕೊಂಡಿದ್ದಾನೆ.

srirasthu shubhamasthu serial 02 February episode written update

ಕೊಲೆ ಆರೋಪ ಮಾಡಿದ ಸಮರ್ಥ್

ಇನ್ನು ಸಮರ್ಥ್ ಗೆ ಮಾಧವ ಮನೆಯವರು ಎಂದರೆ ಮೊದಲೇ ಆಗುವುದಿಲ್ಲ. ಅದರಲ್ಲೂ ಅಭಿ ಎಂದರೆ ಸಿಕ್ಕಾಪಟ್ಟೆ ಕೋಪವಿದೆ. ಹೀಗಿರುವಾಗ ಸಂಧ್ಯಾ ಅಭಿ ತಾಯಿ ಸುಮತಿಯ ಸೀರೆಯನ್ನು ತೆಗೆದುಕೊಂಡಿದ್ದಕ್ಕೆ ಅಭಿ ಕೈ ಮಾಡಲು ಮುಂದಾಗುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ಸಮರ್ಥ್ ಅಲ್ಲಿಗೆ ಬಂದು ಗಲಾಟೆ ಮಾಡುತ್ತಾನೆ. ಅಲ್ಲದೇ, ಅಭಿ ಕೊಲೆ ಮಾಡಿಸಲು ಯತ್ನಿಸಿದ್ದಾನೆ ಎಂದು ಆರೋಪ ಮಾಡುತ್ತಾನೆ. ಈ ಆರೋಪದಿಂದ ಅಭಿ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾನೆ. ಯಾರು ಸಮಾಧಾನ ಮಾಡಲು ಹೋದರೂ ಕೂಡ ಸುಮ್ಮನಾಗುವುದಿಲ್ಲ. ಕೊನೆಗೆ ದತ್ತ ತಾತ ಕಾಮಿಡಿ ಮಾಡಿ ಸಮರ್ಥ್ ಮತ್ತು ಅಭಿ ಜಗಳವನ್ನು ನಿಲ್ಲಿಸುತ್ತಾರೆ.

ಸಾಂಗವಾಗಿ ಜರುಗಿದ ದೀಪಿಕಾ-ಅಭಿ ಮದುವೆ

ಅಭಿ ಹಾಗೂ ದೀಪಿಕಾ ಇಷ್ಟದಂತೆಯೇ ಮದುವೆ ಖುಷಿ ಖುಷಿಯಾಗಿ ಜರುತ್ತಿದೆ. ದತ್ತ ತಾತ ಅಲ್ಲಲ್ಲಿ ಕಾಮಿಡಿ ಮಾಡಿ ಮದುವೆ ಮನೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಯಾವುದೇ ಸಮಸ್ಯೆ ಆಗದೇ ಮದುವೆಯೂ ಅದ್ಧೂಋಈಐಆಗಿ ನೆರವೇರುತ್ತದೆ. ಮದುವೆ ನಡೆಯುತ್ತಿದ್ದಂತೆಯೇ ತುಳಸಿಯಲ್ಲಿನ ಆತಂಕ ಹೆಚ್ಚಾಗುತ್ತದೆ. ತಾನು ಮನೆ ಬಿಟ್ಟು ಹೋಗುವ ಕಾಲ ಬಂತು ಎಂದು ಬೇಸರ ಮಾಡಿಕೊಂಡಿದ್ದಾಳೆ. ಆದರೆ, ತುಳಸಿ ಮಾತು ಕೊಟ್ಟಾಗಿ ಹಾಗಾಗಿ ಮನೆ ಬಿಟ್ಟು ಹೋಗಲೇ ಬೇಕಾದಂತಹ ಸಂದರ್ಭ ಬಂದಿದೆ.

srirasthu shubhamasthu serial 02 February episode written update

ಮನೆ ಬಿಟ್ಟು ಹೊರಟ ತುಳಸಿ

ಅಭಿ ದೀಪಿಕಾ ಕುತ್ತಿಗೆಗೆ ಮಾಂಗಲ್ಯವನ್ನು ಕಟ್ಟುತ್ತಿದ್ದಂತೆ ಜನಾರ್ಧನ್ ತುಳಸಿಗೆ ಜಾಗ ಖಾಲಿ ಮಾಡುವಂತೆ ಸನ್ನೆ ಮಾಡುತ್ತಾನೆ. ಇತ್ತ ಶಾರ್ವರಿ ತನ್ನ ಕೆಲಸ ಸುಲಭವಾಗಿ ಆಗುತ್ತಿದೆ, ತುಳಸಿ ಮನೆಯಿಂದ ಮಾಯವಾಗುವ ಕ್ಷಣ ಬಂದೇ ಬಿಡ್ತು ಎಂದು ಮನದೊಳಗೆ ಖುಷಿ ಪಟ್ಟಿದ್ದಾಳೆ. ತುಳಸಿ ಭಾರವಾದ ಮನಸ್ಸಿನಿಂದಲೇ ಮನೆಯವರಿಂದ ದೂರಾಗಲು ಮುಂದಾಗಿದ್ದಾಳೆ. ಆದರೆ, ಜನಾರ್ಧನ್ ಹಾಗೂ ಶಾರ್ವರಿಯ ಈ ಕೆಟ್ಟ ಪ್ಲಾನ್ ಸಕ್ಸಸ್ ಆಗುತ್ತಾ ಇಲ್ಲ ಮಹೇಶ ಮತ್ತು ದತ್ತ ತಾತ ಸೇರಿ ಅದನ್ನು ಠುಸ್ ಪಟಾಕಿ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ. ಇಲ್ಲವೆ ಸಮರ್ಥ್ ತಾಯಿಗೋಸ್ಕರ ಜೊತೆಯಾಗಿ ನಿಲ್ಲುತ್ತಾನಾ ಅಥವಾ ಮಾಧವ್ ಮನೆಯವರು ತುಳಸಿಯ ಗುಣಕ್ಕೆ ಮಾರು ಹೋಗಿ ಆಕೆಯ ಕೈ ಹಿಡಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
janardhan forces tulasi to leave house. After marriage tulasi left home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X