Srirasthu Shubhamasthu ; ಪ್ರಜ್ಞೆ ಬಂದ ಕೂಡಲೇ ಅವಿನಾಶ್ ಬಳಿ ಮಾಧವ್ ಕೇಳಿಕೊಂಡಿದ್ದೇನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ. ಮಾಧವ್ ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ಕೊರಗುತ್ತಿದ್ದಾರೆ. ಮಾಧವ್ ಮಾವನನ್ನು ಅವಿ ಕಾಪಾಡಿದ್ದಕ್ಕೆ ಪೂರ್ಣಿಮಾ ಖುಷಿಪಟ್ಟಿದ್ದಾಳೆ. ಅವಿ ಕೂಡ ಪೂರ್ಣಿಮಾ ಹಾಗೂ ತುಳಸಿ ಈ ಹಿಂದೆ ಮಾತನಾಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ.ಒಬ್ಬನೇ ತನ್ನ ತಂದೆಯ ಕಷ್ಟಗಳನ್ನು ಹಾಗೂ ತಾನು ಇಷ್ಟು ವರ್ಷ ಅವರಿಗೆ ಕೊಟ್ಟ ಶಿಕ್ಷೆಯನ್ನು ಸ್ಮರಿಸುತ್ತಾ ಕಣ್ಣೀರು ಹಾಕುತ್ತಿದ್ದಾನೆ. ತನ್ನ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾನೆ.
ಪ್ರಜ್ಞೆ ಬಂದು ಕೂಡಲೇ ಮಾಧವ್ ಕೇಳಿದ್ದೇನು..?
ಮಾಧವ್ ಗೆ ಪ್ರಜ್ಞೆ ಬಂದಿದ್ದು, ಎಲ್ಲರೂ ಕಾತುರದಿಂದ ನೋಡುತ್ತಿದ್ದಾರೆ. ಮಾಧವ್ ಮಾತ್ರ ಎಚ್ಚರವಾದ ಕೂಡಲೇ ಅವಿ ಬಳಿ ಎದ್ದು ಹೋಗುತ್ತಾರೆ. ತಮಗೇನೂ ಆಗೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾನೆ. ಸೀದಾ ಮಗ ಅವಿನಾಶ್ ಬಳಿ ಹೋಗಿ, ಆಗಲೇ ಕೊನೆಯದಾಗಿ ನೀನು ಏನೋ ಹೆಳಿದೆಯಲ್ಲ ಅದನ್ನ ಹೇಳು ಎಂದು ಕೇಳಿಕೊಳ್ಳುತ್ತಾನೆ. ಆಗ ಅವಿನಾಶ್ ಅಪ್ಪ ಎಂದು ಕರೆಯುತ್ತಾನೆ. ಆ ಮಾತನ್ನು ಕೇಳಿ ಮಾಧವ್ ಬಹಳ ಖುಷಿ ಪಡುತ್ತಾನೆ. ಮನೆಯವರು ಕೂಡ ಅವಿ ತನ್ನ ತಂದೆಯನ್ನು 15 ವರ್ಷಗಳ ಬಳಿಕ ಅಪ್ಪ ಎಂದು ಕರೆದಿದ್ದಕ್ಕೆ ಖುಷಿ ಪಡುತ್ತಾರೆ. ಕೊನೆಗೂ ಅಪ್ಪ-ಮಗ ಒಂದಾದರು ಎಂದು ಸಂತಸವನ್ನು ವ್ಯಕ್ತ ಪಡಿಸುತ್ತಾರೆ. ಮಾಧವ್ ಕೂಡ ಇನ್ನು ತನ್ನ ಬದುಕು ಸಾರ್ಥಕವಾಯ್ತು ಎಂಬ ಭಾವದಲ್ಲಿ ತೇಲುತ್ತಿರುತ್ತಾನೆ.

ಅಭಿಗೆ ಚಾಡಿ ಹೇಳಿದ ದೀಪಿಕಾ-ಶಾರ್ವರಿ
ಅವಿ ಮಾಧವ್ ನನ್ನು ಅಪ್ಪ ಎಂದು ಕರೆದಿದ್ದಕ್ಕೆ, ದೀಪಿಕಾ, ಶಾರ್ವರಿ ಮತ್ತು ಅಭಿಗೆ ಶಾಕ್ ಆಗುತ್ತದೆ. ಏನಾಗುತ್ತಿದೆ ಎಂಬ ಗೊಂದಲದಲ್ಲಿ ಅಭಿ ಇರುತ್ತಾನೆ. ಈ ಸಂದರ್ಭವನ್ನು ಬಳಸಿಕೊಳ್ಳುವ ಶಾರ್ವರಿ ಮತ್ತು ದೀಪಿಕಾ, ಅವರಿಬ್ಬರೂ ಯಾವತ್ತಿದ್ದರೂ ಒಂದೆ. ಇಷ್ಟು ದಿನ ಇಬ್ಬರೂ ಮಾತನಾಡದೆಯೇ ನಿನ್ನನ್ನು ಮೂಲೆ ಗುಂಪು ಮಾಡಿದ್ದಾರೆ. ಇನ್ನು ಈಗ ಇವರಿಬ್ಬರು ಒಂದಾಗಿದ್ದಾರೆ. ಹಾಗೆಂದ ಮೇಲೆ ನಿನ್ನ ಪಾಡು ಕೇಳೋರು ಯಾರು ಇಲ್ಲ ಎಂದೇ ಅರ್ಥ. ಅಪ್ಪ-ಮಗ ಸೇರಿಕೊಂಡು ನಿನ್ನ ಅಸ್ತಿತ್ವವನ್ನೇ ಸುಳ್ಳು ಮಾಡಿ ಬಿಡುತ್ತಾರೆ ಎಂದು ಹೇಳುತ್ತಾರೆ. ಮೊದಲಿನಿಂದ ಇಬ್ಬರ ಆಲೋಚನೆಯೂ ಒಂದೇ ಆಗಿರುತ್ತಿತ್ತು. ಇನ್ನು ಈಗಂತೂ ಕೇಳುವುದೇ ಬೇಡ ಎನ್ನುತ್ತಾರೆ. ಆಗ ಅಭಿ ಅದಕ್ಕೆಲ್ಲಾ ನಾನು ಅವಕಾಶವನ್ನೇ ಮಾಡಿಕೊಡುವುದಿಲ್ಲ ಎಂದು ಹೇಳುತ್ತಾನೆ. ಅಭಿ ಮನಸ್ಸಲ್ಲಿ ಇನ್ನಷ್ಟು ಧ್ವೇಷವನ್ನು ಹುಟ್ಟು ಹಾಕಿದ್ದಾರೆ.
ಅಮ್ಮನ ಕೈ ರುಚಿಗೆ ಮಾರು ಹೋದ ಸಮರ್ಥ್
ಸಮರ್ಥ್ ಊಟ ಮಾಡುವಾಗ ಜೊತೆಗೆ ಏನಾದರೂ ಬೇಕು ಎಂದು ಸಿರಿಯನ್ನು ಕೇಳುತ್ತಾನೆ. ಸಿರಿ ಹಪ್ಪಳ, ಸಂಡಿಗೆ ಬೇಕಾ ಎಂದು ಕೇಳುತ್ತಾಳೆ. ಸಮರ್ಥ್ ಬೇಡ ಎನ್ನುತ್ತಾನೆ. ಅಷ್ಟೇ ಅಲ್ಲದೇ, ಅವನು ತನ್ನ ತಾಯಿಯ ರುಚಿಯನ್ನು ಬಯಸುತ್ತಿರುತ್ತಾನೆ. ಸಿರಿ ಕೇಳಿ ಕೇಳಿ ಸಾಕಾಗಿ ನಿನಗೆ ಏನು ಬೇಕೋ ಅದನ್ನ ನೀನೇ ಮಾಡಿಕೋ ಎಂದಾಗ ಸಮರ್ಥ್ ತುಳಸಿ ತಂದಿದ್ದ ಹೇರಳೆಕಾಯಿ ಉಪ್ಪಿನಕಾಯಿಯನ್ನು ಊಟದ ಜೊತೆಗೆ ಸವಿಯುತ್ತಿರುತ್ತಾನೆ. ಇದನ್ನು ನೋಡಿದ ದತ್ತ ತಾತ ರೇಗಿಸುತ್ತಾರೆ. ಆದರೆ, ಸಮರ್ಥ್ ಬಿದ್ದರೂ ಮೀಸೆ ಮಣ್ಣಾಗದವನಂತೆ ನಡೆದುಕೊಳ್ಳುತ್ತಾನೆ.

ಅರ್ಚಕರ ಮೊಮ್ಮಗನ ಜೊತೆ ಮಾತು
ಜನಾರ್ಧನ್ ತನ್ನ ಮೊದಲ ಮಗಳನ್ನು ಹುಡುಕಬೇಕಿದೆ. ಅದಕ್ಕೆ ಇನ್ನೂ ಹೆಚ್ಚಿಗೆ ಸಮಯವಿಲ್ಲ. ಏನು ಮಾಡುವುದು ಎಂದು ತಿಳಿಯದೇ ತಾನು ಮಗುವನ್ನು ಬಿಟ್ಟು ಬಂದಿದ್ದ ದೇವಸ್ಥಾನದ ರಾಮಕೃಷ್ಣ ಅರ್ಚಕರ ಮೊಮ್ಮಗನನ್ನು ಕರೆಸಿ ಕೇಳುತ್ತಾರೆ. ಆತ ಆ ಮಗುವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ತಾತ ಆ ಮಗು ಜೊತೆಗೆ ಬಹಳ ಕಾಲ ಆಡಿಕೊಂಡಿದ್ದರು. ಕಡೆಗೊಂದು ದಿನ ಅನಾಥಾಶ್ರಮಕ್ಕೆ ಬಿಟ್ಟು ಬಂದರು. ಆದರೆ, ಯಾವ ಆಶ್ರಮ ಎಂದು ತಿಳಿಸಲಿಲ್ಲ ಎಂದು ಹೇಳುತ್ತಾನೆ.


Click it and Unblock the Notifications











