Srirasthu Shubhamasthu ; ತುಳಸಿಗೆ ಮಹಿಳಾ ಸಂಘದ ಅಧ್ಯಕ್ಷೆ ಸ್ಥಾನ : ಶಾರ್ವರಿಗೆ ಮನೆ ಕೆಲಸದವಳ ಸ್ಥಾನ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಬೇಸರದಿಂದ ಇರುವುದಕ್ಕೆ ಮಾಧವ್ ಅವರು ಭರತನಾಟ್ಯಂ ಗೆಜ್ಜೆಯನ್ನು ತಂದು ಕೊಡುತ್ತಾನೆ. ಡ್ಯಾನ್ಸ್ ಮಾಡುತ್ತಾ ಎಂಗೇಜ್ ಆಗಿರು ಎಂದು ಹೇಳುತ್ತಾರೆ. ಇನ್ನು ಮಹೇಶ ಶಾರ್ವರಿಯನ್ನು ಪ್ರತಿಯೊಂದರಲ್ಲೂ ಕಂಟ್ರೋಲ್ ಮಾಡುತ್ತಿರುತ್ತಾನೆ. ಒಡವೆಯನ್ನೆಲ್ಲಾ ಬಿಚ್ಚಿ ಕೆಲಸದವಳೆ ರೆಡಿಯಾಗು. ಮನೆ ಕೆಲಸವನ್ನೆಲ್ಲಾ ಮಾಡು. ಅಣ್ಣ-ಅತ್ತಿಗೆಯ ಸೇವೆಯನ್ನು ತಪ್ಪದೇ ಮಾಡಬೇಕು ಎಂದು ತಾಕೀತು ಮಾಡುತ್ತಾನೆ. ಶಾರ್ವರಿಗೆ ಬೇರೆ ದಾರಿ ಕಾಣದೇ ಮಹೇಶ ಹೇಳಿದಂತೆಯೇ ನಡೆದುಕೊಳ್ಳುತ್ತಿರುತ್ತಾಳೆ.
ತುಳಸಿ ಈಗ ಮಹಿಳಾ ಸಮಾಜದ ಅಧ್ಯಕ್ಷೆ
ಶಾರ್ವರಿ ಮನೆ ಕೆಲಸ ಮಾಡುವುದನ್ನು ನೋಡಿ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಮಹೇಶ ಹರಕೆ ಹೊತ್ತಿದ್ದಾಳೆ. ಅದಕ್ಕೆ ಹೀಗೆ ಮನೆ ಕೆಲಸ ಮಾಡುತ್ತಿದ್ದಾಳೆ ಎಂದು ರೇಗಿಸುತ್ತಾನೆ. ಶಾರ್ವರಿಗೆ ಏನೂ ಮಾತನಾಡಲಾಗದೇ ಒದ್ದಾಡುತ್ತಾಳೆ. ದೀಪಿಕಾಳಿಗೆ ಎಲ್ಲೋ ಸುಟ್ಟ ವಾಸನೆ ಬರುತ್ತದೆ. ಶಾರ್ವರಿ ಅತ್ತೆ ಹೀಗೆಲ್ಲಾ ಮಾಡುತ್ತಿರುವುದಕ್ಕೆ ಬಲವಾದ ಕಾರಣವೊಂದು ಇರಬೇಕು ಎಂದು ಗೆಸ್ ಮಾಡುತ್ತಾಳೆ. ಆದರೆ ಯಾವುದು ಎಂಬುದು ಗೊತ್ತಾಗುವುದಿಲ್ಲ. ಇನ್ನು ಮಹಿಳಾ ಸಮಾಜ ಸಂಘದವರು ಬಂದು ಶಾರ್ವರಿ ಅಧ್ಯಕ್ಷೆ ಆಗಬೇಕು ಎಂದು ಬಯಸುತ್ತಾರೆ. ಆದರೆ, ಮಹೇಶ ಶಾರ್ವರಿಗೆ ಯಾವುದಕ್ಕೂ ಬಿಡುವುದಿಲ್ಲ. ಶಾರ್ವರಿ ಮನೆ ಕೆಲಸ ಮಾಡಿಕೊಂಡು ಇರಲಿ, ನಿಮಗೆ ಅಷ್ಟೋಂದು ಪ್ರೀತಿ ವಿಶ್ವಾಸ ಇದ್ದರೆ, ತುಳಸಿ ಅತ್ತಿಗೆ ಅನ್ನೇ ಅಧ್ಯಕ್ಷೆ ಅನ್ನಾಗಿ ಮಾಡಿ ಎಂದು ಹೇಳುತ್ತಾನೆ. ಅವರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ.ಿದನ್ನು ಶಾರ್ವರಿ ಕೈಯಲ್ಲಿ ಸಹಿಸಿಕೊಳ್ಳಲು ಆಗುವುದಿಲ್ಲ. ಆದರೆ, ಬೇರೆ ದಾರಿ ಕಾಣದೇ ಸುಮ್ಮನಿರುತ್ತಾಳೆ.

ಸೈಟ್ ಗೆ ಸಂಧ್ಯಾ ಸ್ಕೆಚ್
ಇತ್ತ ದತ್ತ ತಾತನ ಮನೆಯಲ್ಲಿ ಜುಗ್ಗ ಮನೆಯವರು ತಿನ್ನುವುದಕ್ಕೆ, ಮಲಗುವುದಕ್ಕೆ ಎಲ್ಲಾವುದಕ್ಕೂ ಲೆಕ್ಕ ಕೊಡಬೇಕಾಗಿದೆ. ಅದರಲ್ಲೂ ಸಂಧ್ಯಾ ದತ್ತ ತಾತನಿಗೆ ಹಾಗೂ ಜುಗ್ಗಾ ಮಾವ ಇಬ್ಬರೂ ಲೆಕ್ಕ ಕೇಳಿ ಹಿಂಸೆ ಕೊಡುತ್ತಾರೆ. ಆದರೆ, ಸಂಧ್ಯಾ ಎಲ್ಲರೂ ಚಾಪೆ ಕೆಳಗೆ ನುಸುಳಿದರೆ, ಅವಳು ರಂಗೋಲಿ ಕೆಳಗೇ ನುಸುಳುತ್ತಾಳೆ. ಈಗ ತನ್ನ ಮಾವನಿಗೆ ಮಂಕು ಬೂದಿ ಎರಚುತ್ತಿದ್ದಾಳೆ. ಸೈಟ್ ತೆಗೆದುಕೊಂಡರೆ ಕೆಲವೇ ಸಮಯದಲ್ಲಿ ಅದರ ಎಲೆ ದುಪ್ಪಟ್ಟಾಗುತ್ತದೆ. ಕೋಟಿ ಕೋಟಿ ಹಣ ಇನ್ವೆಸ್ಟ್ ಮಾಡಿದರೆ, ನಾವು ರಾತ್ರೋ ರಾತ್ರಿ ಕೋಟ್ಯಾಧೀಶ್ವರರಾಗುತ್ತೇವೆ ಎಂದು ಹೇಳುತ್ತಾಳೆ. ಜುಗ್ಗ ಮಾವ ಕೂಡ ಸಂಧ್ಯಾ ಮಾತನ್ನು ನಂಬು ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಅಭಿಗೆ ಮಂಕು ಬೂದಿ ಎರಚಿದ ಜನಾರ್ಧನ್
ಅಭಿಗೆ ದೀಪಿಕಾ ಹಾಗೂ ಅವರ ತಂದೆ ಜನಾರ್ಧನ್ ಸೇರಿಕೊಂಡು ದಾರಿ ತಪ್ಪಿಸುತ್ತಿದ್ದಾರೆ. ನಿನ್ನ ಕಂಪನಿಯನ್ನು ನನ್ನ ಹೆಸರಿಗೆ ಹತ್ತು ವರ್ಷಗಳ ಕಾಲ ಗುತ್ತಿಗೆಗೆ ಕೊಡು. ಅಲ್ಲಿ ನಾನು ಕ್ಲಬ್ ಓಪನ್ ಮಾಡಿ ಒಂದೇ ವರ್ಷದಲ್ಲಿ ಡಬಲ್ ಲಾಭ ತಂದುಕೊಡುತ್ತೇನೆ ಎಂದು ಹೇಳುತ್ತಾನೆ. ಅಭಿಗೆ ಮನೆಯವರ ವಿರೋಧ ಕಟ್ಟಿಕೊಂಡು ಅಲ್ಲಿ ಕ್ಲಬ್ ಓಪನ್ ಮಾಡಲು ಇಷ್ಟವಿರುವುದಿಲ್ಲ. ಆದರೆ, ದೀಪಿಕಾ ಮಾತನ್ನು ನಂಬಿ ದಾರಿ ತಪ್ಪುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

ಶಾರ್ವರಿಗೆ ಮಹೇಶನ ಕಾಟ ಹೆಚ್ಚಾಯ್ತು
ಮಾಧವ್ ಗೆ ದೆಹಲಿ ಕಂಪನಿಯಿಂದ ಫೋನ್ ಬರುತ್ತದೆ. ಮ್ಯಾನೇಜರ್ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಮಾಧವ್ ತಕ್ಷಣವೇ ದೆಹಲಿಗೆ ಹೊರಡಲು ಮುಂದಾಗುತ್ತಾನೆ. ಶಾರ್ವರಿ ತನ್ನ ಬಗ್ಗೆ ಸತ್ಯ ಹೇಳಲು ಇನ್ನೂ ಸಮಯ ಸಿಕ್ತು ಎಂದುಕೊಳ್ಳುತ್ತಾಳೆ. ಆದರೆ, ಮಹೇಶ ಅಣ್ಣ ಮನೆಯಿಂದ ಹೊರಡುವ ಮುನ್ನವೇ ನೀನು ಸತ್ಯ ಹೇಳಬೇಕು. ನಿನಗೆ ಬೇರೆ ದಾರಿ ಇಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾನೆ.


Click it and Unblock the Notifications











