Srirasthu Shubhamasthu ; ಸಂಧ್ಯಾ ಮಾಡಿದ ಸಾಲಕ್ಕೆ ಮನೆ ಅಡವಿಡಲು ಮುಂದಾದ ದತ್ತ ತಾತ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೇವಸ್ಥಾನದಲ್ಲಿ ತುಳಸಿ, ಪೂರ್ಣಿಮಾ ಸಮರ್ಥ್ ಮತ್ತು ಸಿರಿ ಎಲ್ಲರೂ ಸೇರಿ ಅನಾಥಾಶ್ರಮದ ಮಕ್ಕಳ ಜೊತೆಗೆ ಆಟವಾಡುತ್ತಾರೆ.ಆಡುವಾಗ ಆಕಸ್ಮಾತ್ ಆಗಿ ಸಮರ್ಥ್ ಬೀಳುತ್ತಾನೆ.ಆಗ ತುಳಸಿ ಗಾಬರಿಯಾಗಿ ಮಗನನ್ನು ವಿಚಾರಿಸುತ್ತಾಳೆ.ಇದನ್ನು ನೋಡಿ ಸಿರಿ ಮತ್ತು ಸಮರ್ಥ್ ತುಳಸಿಯನ್ನು ರೇಗಿಸುತ್ತಾರೆ.ಇನ್ನು ತುಳಸಿಗೆ ಮಾಧವ್ ಫೋನ್ ಮಾಡಿ ಮನೆಯಲ್ಲಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾನೆ. ವನಜಾಳಿಗೆ ಸತ್ಯ ಗೊತ್ತಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ಕೊಡುತ್ತಾನೆ.
ಅನ್ನಪೂರ್ಣ ಬಳಿ ಸತ್ಯ ಹೇಳಿದ ತುಳಸಿ
ವನಜಾ ದೇವಸ್ಥಾನಕ್ಕೆ ಬರುತ್ತಿದ್ದಂತೆ ತುಳಸಿ ಅನ್ನಪೂರ್ಣ ಅವರನ್ನು ಅಲ್ಲಿಂದ ದೂರ ಕರೆದುಕೊಂಡು ಹೋಗಿ ಇಲ್ಲೇ ಇರಿ ಎನ್ನುತ್ತಾಳೆ. ವನಜಾ ಪೂರ್ಣಿಮಾಳನ್ನು ಮಾತನಾಡಿಸಿಕೊಂಡು ಹೊರಡುತ್ತಾಳೆ. ಆಗ ಪೂರ್ಣಿಮಾ ವನಜಾಳಿಗೆ ಪ್ರಸಾದವನ್ನು ತಿನ್ನಿಸುತ್ತಾಳೆ. ಇದು ವನಜಾಳನ್ನು ಮತ್ತಷ್ಟು ಎಮೋಷನಲ್ ಆಗುವಂತೆ ಮಾಡುತ್ತದೆ. ಬಳಿಕ ತುಳಸಿ ಅನ್ನಪೂರ್ಣ ಬಳಿ ವನಜಾ ಮತ್ತು ಪೂರ್ಣಿ ಬಗ್ಗೆ ಹೇಳುತ್ತಾಳೆ. ಸತ್ಯ ಮುಚ್ಚಿಟ್ಟಿರುವ ಕಾರಣವನ್ನು ತಿಳಿಸುತ್ತಾಳೆ. ಇದೆಲ್ಲಾ ಕೇಳಿದ ಅನ್ನಪೂರ್ಣ ಒಳ್ಳೆಯದಿರುವಾಗ ಎಲ್ಲಾ ಶುಭವೇ ಆಗುತ್ತದೆ ಎಂದು ಹೇಳಿ ಹೊರಡುತ್ತಾಳೆ. ಇವರಿಬ್ಬರ ಮಾತನ್ನು ವನಜಾ ಕೇಳಿಸಿಕೊಂಡಿದ್ದಾಳೆ.

ಸಂಧ್ಯಾಳನ್ನು ಕಾಪಾಡಿದ ದತ್ತ ತಾತ
ಇನ್ನು ದೇವಸ್ಥಾನಕ್ಕೆ ಬಂದ ಸಂಧ್ಯಾ ಸಾಲಗಾರರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾಳೆ. ರೌಡಿಗಳು ಇವತ್ತು ಸಂಧ್ಯಾಳನ್ನು ಹಿಡಿಯಲೇಬೇಕು ಎಂದು ಅಟ್ಟಿಸಿಕೊಂಡು ಬಂದಿದ್ದಾರೆ. ಸಂಧ್ಯಾಳನ್ನು ಉಳಿಸಲು ದತ್ತ ತಾತ ಆಗಮಿಸಿದ್ದಾರೆ. ರೌಡಿಗಳಿಗೆ ಬೈದಿದ್ದಾರೆ. ಹೆಣ್ಣು ಹುಡುಗಿಯನ್ನು ಹೀಗೆ ಅಟ್ಟಿಸಿಕೊಂಡು ಬರುವುದು ಎಷ್ಟು ಸರಿ ಎಂದು ಬೈಯುತ್ತಾರೆ. ಆದರೆ ರೌಡಿಗಳು ಸಂಧ್ಯಾ ಮಾಡಿರುವ ಸಾಲದ ಬಗ್ಗೆ ಹೇಳುತ್ತಾರೆ. ದತ್ತ ತಾತ ನಾನು ಆ ಹಣವನ ನಾನು ಕೊಡುತ್ತೇನೆ. ಇವಳು ನನ್ನ ಮೊಮ್ಮಗಳು ಎಂದು ಬೈಯುತ್ತಾರೆ. ಆಗ ರೌಡಿಗಳು 10 ಲಕ್ಷ ರೂಪಾಯಿ ಯಾರು ತಂದು ಕೊಡುತ್ತಾರೆ ಎಂದು ಕೇಳಿದಾಗ ದತ್ತ ತಾತನಿಗೆ ಶಾಕ್ ಆಗುತ್ತದೆ.
ಬೇಸರ ಮಾಡಿಕೊಂಡ ದತ್ತ ತಾತ
10 ಲಕ್ಷ ತಾನೇ ನಾಳೆ ಇದೇ ಜಾಗಕ್ಕೆ ಇದೇ ಸಮಯಕ್ಕೆ ಬನ್ನಿ. ನಿಮ್ಮ ಹಣವನ್ನು ತೆಗೆದುಕೊಂಡು ಹೋಗಿ ಎಂದು ಬೈದು ಕಳಿಸುತ್ತಾರೆ. ಸಂಧ್ಯಾಳನ್ನು ಮನೆಗೆ ಕರೆ ತರುತ್ತಾರೆ. ನಾವೆಲ್ಲಾ ಮನೆಯವರು ಇದ್ದರೂ ಕೂಡ ಇಷ್ಟು ಹಣವನ್ನು ಹೊರಗಡೆ ಸಾಲ ಮಾಡಿದ್ದು ತಪ್ಪು. ಹಣ ಮತ್ತು ಸಂಬಂಧದ ಬಗ್ಗೆ ದತ್ತ ತಾತ ಬೈದು ಬುದ್ಧಿವಾದ ಹೇಳುತ್ತಾರೆ. ಸಂಧ್ಯಾಳಿಗೆ ತೀರಾ ಮುಜುಗರವಾಗುತ್ತದೆ. ತಾನು ಮಾಡಿದ ತಪ್ಪಿನಿಂದ ಎಷ್ಟೆಲ್ಲಾ ಸಮಸ್ಯೆ ಆಗಿದೆ ಎಂದು ನೊಂದುಕೊಳ್ಳುತ್ತಾಳೆ. ದತ್ತ ತಾತ ಮನೆಯನ್ನು ಅಡವಿಟ್ಟು ಸಾಲ ತೀರಿಸಲು ಮುಂದಾಗಿದ್ದಾರೆ. ಸಂಧ್ಯಾ ಮುಜುಗರಗೊಂಡು ಬೇಡ ನಾನೇ ತೀರಿಸುತ್ತೀನಿ ಎಂದು ಹೇಳುತ್ತಾಳೆ.

ಮತ್ತೆ ಸ್ಮಶಾನಕ್ಕೆ ತೆರಳಿದ ಶಾರ್ವರಿ
ಇನ್ನು ತುಳಸಿ ಮತ್ತು ಪೂರ್ಣಿಮಾ ಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ಶಾರ್ವರಿಯನ್ನು ನೋಡುತ್ತಾಳೆ. ಮತ್ತೆ ಅದೇ ಹೂವಿನ ಅಂಗಡಿ ಮುಂಧೇ ಶಾರ್ವರಿ ಇರುವುದನ್ನು ಕಂಡು ಕಾರು ನಿಲ್ಲಿಸುತ್ತಾರೆ. ಶಾರ್ವರಿ ಹೂವನ್ನು ತೆಗೆದುಕೊಂಡು ಮತ್ತೆ ಸ್ಮಶಾನದ ಕಡೆಗೆ ಹೊರಟಿದ್ದು, ಪ್ರತೀ ಅಮಾವಾಸ್ಯೆಯ ಮಾರನೇಯ ದಿನ ಶಾರ್ವರಿ ಅವರು ಸ್ಮಶಾನಕ್ಕೆ ಯಾಕೆ ಹೋಗುತ್ತಾರೆ ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡಿದ್ದಾಳೆ. ಶಾರ್ವರಿ ಮೂಲವನ್ನು ತುಳಸಿ ಹುಡುಕುತ್ತಾಳಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











