Srirasthu Shubhamasthu ; ನಾನಾ-ನೀನಾ ಎಂದು ಸವಾಲು ಹಾಕಿದ ತುಳಸಿ-ಶಾರ್ವರಿ, ದತ್ತ ತಾತ ರೀ ಎಂಟ್ರಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ ಮನೆಯಲ್ಲಿ ನಿಧಿ ಮದುವೆಯ ಸಂಭ್ರಮ ಜೋರಾಗಿದೆ. ಇದರ ಜೊತೆಗೆ ಪೂರ್ಣಿಮಾಳಿಗೆ ಅವಳ ಅಪ್ಪ-ಅಮ್ಮ ಸಿಕ್ಕಿದ್ದಾರೆ. ಆಸ್ತಿಗಾಗಿ ಅಪ್ಪ ತನ್ನ ಎದುರು ಬಂದರು ಎಂದು ಕೋಪ ಮಾಡಿಕೊಂಡಿದ್ದ ಪೂರ್ಣಿಮಾ ಬಳಿ ಜನಾರ್ಧನ್ ಕ್ಷಮೆ ಕೇಳಿದ್ದು, ಆಸ್ತಿಯನ್ನೆಲ್ಲಾ ಮಗಳು ಪೂರ್ಣಿಮಾ ಹೆಸರಿನಲ್ಲಿ ಬರೆದಿದ್ದಾನೆ. ಅಲ್ಲದೇ, ಮಗಳ ಬಳಿ ಕ್ಷಮೆ ಕೇಳಿದ್ದಾನೆ. ಪೂರ್ಣಿಮಾ ತಂದೆಯನ್ನು ಕ್ಷಮಿಸಿದ್ದು, ತನಗೂ ತವರು ಮನೆ ಇದೆ ಎಂದು ಸಂತಸ ಪಟ್ಟಿದ್ದಾಳೆ. ಆದರೆ, ಜನಾರ್ಧನ್ ಮತ್ತು ವನಜಾ ಕೆಲ ಕಾಲ ದೂರ ಇರುವುದಾಗಿ ಹೇಳಿ ಫಾರಿನ್ ಗೆ ತೆರಳಿದ್ದಾರೆ.
ತುಳಸಿ ವಿರುದ್ಧ ವಿಷ ಕಾರುತ್ತಿರುವ ಶಾರ್ವರಿ
ಶಾರ್ವರಿಗೆ ತುಳಸಿ ಎಂದರೆ ಮೊದಲೇ ಸಿಟ್ಟಿತ್ತು. ಈಗ ತುಳಸಿಗೆ ಶಾರ್ವರಿಯ ಇತಿಹಾಸ ಗೊತ್ತಾಗಿದ್ದು, ಅವಳ ಉದ್ದೇಶ ತಿಳಿದ ಮೇಲೆ ಇಬ್ಬರೂ ಒಬ್ಬರಿಗೊಬ್ಬರು ವಿಷ ಕಾರುತ್ತಿದ್ದಾರೆ. ಶಾರ್ವರಿ ಹೆಜ್ಜೆ ಹೆಜ್ಜೆಗೂ ತುಳಸಿಯನ್ನು ಮಟ್ಟ ಹಾಕಲು ಪ್ರಯತ್ನ ಪಡುತ್ತಲೇ ಇದ್ದಾಳೆ. ಆದರೆ, ದುರಾದೃಷ್ಟವಶಾತ್ ತುಳಸಿ ಪರ ಇಡೀ ಮನೆಯವರಿದ್ದಾರೆ. ಇತ್ತೀಚೆಗಷ್ಟೇ ಅಭಿ ಕೂಡ ತುಳಸಿಯನ್ನು ಅಮ್ಮ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಶಾರ್ವರಿಗೆ ಹಿನ್ನೆಡೆ ಆಗುತ್ತಲೇ ಇದೆ. ಈಗ ಮನೆಯವರೆಲ್ಲಾ ದೇವಸ್ಥಾನಕ್ಕೆ ಹೊರಟಿದ್ದು, ತುಳಸಿ ಬೇಡ ಎಂದು ಶಾರ್ವರಿ ತಡೆದಿದ್ದಾಳೆ. ಶಾರ್ವರಿ ಮಾತನ್ನು ಒಪ್ಪದೇ ಮಹೇಶ್ ವಾದ ಮಾಡುತ್ತಾನೆ. ಕೊನೆಗೆ ತುಳಸಿ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ.

ತುಳಸಿ ಪರ ಬಂದ ದತ್ತ ತಾತ
ಶಾರ್ವರಿ ತುಳಸಿಯನ್ನು ಬೆದರಿಸುತ್ತಿರುತ್ತಾಳೆ. ನಿನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಮನೆಯವರ ಬಳಿ ಸತ್ಯ ಹೇಳಿದರೂ ಯಾರೂ ನಂಬುವುದಿಲ್ಲ. ಎಲ್ಲರಿಗೂ ನನ್ನ ಮೇಲಿರುವ ನಂಬಿಕೆ ಸುಳ್ಳಾಗದು. ಕಳೆದ 25 ವರ್ಷಗಳಿಂದ ಈ ನಂಬಿಕೆಯನ್ನು ಗಳಿಸಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ನೀನು ಏನೇ ತಿಪ್ಪರಲಾಗ ಹಾಕಿದರೂ ಯಾರೂ ನಿನ್ನ ಮಾತನ್ನು ನಂಬುವುದಿಲ್ಲ ಎಂದು ಹೇಳುತ್ತಾಳೆ. ನನ್ನ ಬಗ್ಗೆ ಮನೆಯಲ್ಲಿ ಸತ್ಯ ಹೇಳಿ ಸಮಸ್ಯೆ ಮಾಡಬಹುದು ಎಂದು ನೀನು ಅಂದುಕೊಂಡಿದ್ದರೆ ಆ ಪ್ರಯತ್ನವನ್ನು ಈಗಲೇ ಮರೆತು ಬಿಡು. ಮೊದಲು ನಿನ್ನ ಬದುಕನ್ನು ಉಳಿಸಿಕೋ. ಆಮೇಲೆ ಈ ಮನೆಯವರ ಬಗ್ಗೆ ಯೋಚಿಸು ಎಂದು ಹೆದರಿಸುತ್ತಿರುತ್ತಾಳೆ. ಇದೇ ವೇಳೆಗೆ ಮನೆಗೆ ಬರುವ ದತ್ತ ತಾತ ತುಳಸಿ ಜೊತೆಗೆ ನಾನಿದ್ದೇನೆ ಎಂದು ಹೇಳುತ್ತಾರೆ.
ಶಾರ್ವರಿಯ ಹಿಂದಿನ ಸತ್ಯ ದತ್ತ ತಾತನಿಂದ ಬಯಲಾಗುತ್ತಾ..?
ದತ್ತ ತಾತ ತುಳಸಿಗೆ ನೀನು ಯಾಕೆ ಹೀಗೆಲ್ಲಾ ಹೆದರಿಸುತ್ತಿದ್ದೀಯೋ ಗೊತ್ತಿಲ್ಲ. ಇನ್ನು ತುಳಸಿ ನಿನ್ನ ವಿರುದ್ಧ ನಿಂತಿದ್ದಾಳೆ ಎಂದರೆ ಅದರ ಹಿಂದೆ ಬಲವಾದ ಕಾರಣವಿದೆ ಎಂದು ನಾನು ನಂಬುತ್ತೇನೆ. ತುಳಸಿ ಮನೆಗಷ್ಟೇ ಮೀಸಲಾಗಿರುವ ಹೆಣ್ಣಾಗಿದ್ದರೂ ಕೂಡ ಮನೆಯವರಿಗೆ ಸಮಸ್ಯೆ ಆಗುತ್ತದೆ ಎಂಬುದು ಗೊತ್ತಾದರೆ, ಮನೆಯವರಿಗೋಸ್ಕರ ಏನೇ ಬಂದರೂ ಎದುರಿಸುವ ಶಕ್ತಿಯಂತೂ ಇದೆ. ಅವಳ ಪರ ನಾನಿರುತ್ತೇನೆ ಎಂದು ಹೇಳಿದ್ದಾರೆ. ಹಲವು ತಿಂಗಳ ಬಳಿಕ ದತ್ತ ತಾತನ ಆಗಮನವಾಗಿದ್ದು, ಶಾರ್ವರಿಯ ಹಿಂದಿನ ರಹಸ್ಯವನ್ನು ದತ್ತ ತಾತನೇ ಬಯಲು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಮಹೇಶನಿಗೂ ಎಲ್ಲಾ ಸತ್ಯ ಗೊತ್ತಾಗಿದೆಯಾ..?
ಇನ್ನು ಮಹೇಶ ದೇವಸ್ಥಾನದಿಂದ ಬಂದ ಕೂಡಲೇ ತುಳಸಿ ಬಳಿ ಶಾರ್ವರಿ ಏನಾದರೂ ಹೇಳಿದಳಾ..? ನಿಮಗೆ ಬೇಸರ ಮಾಡಿದಳಾ ಎಂದು ವಿಚಾರಿಸುತ್ತಾರೆ. ಈ ಹಿಂದೆ ಶಾರ್ವರಿ ಅಕ್ಕನ ಫೋಟೋ ಮಹೇಶನಿಗೆ ತುಳಸಿ ತೋರಿಸಿದ್ದು, ಸತ್ಯವನ್ನು ಹೇಳಿದ್ದಾಳೆ. ಆದರೆ, ಶಾರ್ವರಿಯ ಅಕ್ಕನಿಗೆ ಏನಾಯ್ತು. ಅವಳ ಕುಟುಂಬದ ರಹಸ್ಯೆವೇನು ಎಂಬುದಷ್ಟೇ ಇನ್ಮುಂದೆ ತಿಳಿಯಬೇಕಿದೆ.


Click it and Unblock the Notifications











