ಕಂಪನಿ ಮುಳುಗುವ ಹಂತದಲ್ಲಿದ್ದರೂ ಮನೆಯವರ ಮೇಲೆ ಹಗೆ ಸಾಧಿಸುತ್ತಿರುವ ಅಭಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಇನ್ನೂ ಹುಡುಗು ಬುದ್ಧಿಯನ್ನು ಹೊಂದಿರುವ ಅಭಿ ಇನ್ನೊಬ್ಬರು ಹೇಳಿದ ಮಾತಗಳನ್ನು ಕೇಳುವುದೇ ಹೆಚ್ಚು. ಕಂಪನಿ ನಡೆಸಲು ಬಾರದಿದ್ದರೂ ತನಗೂ ಅಧಿಕಾರ ಬೇಕು ಎಂದು ಈ ಹಿಂದೆ ಎಂಡಿ ಪೋಸ್ಟ್ ಅನ್ನು ಕೇಳಿ ಪಡೆದಿದ್ದ. ಅವಿ ಕೂಡ ತಮ್ಮನಿಗಾಗಿ ಕಂಪನಿಯ ಜವಾಬ್ದಾರಿಯನ್ನು ವಹಿಸಿದ್ದ. ಅಧಿಕಾರ ಸಿಕ್ಕ ಕೂಡಲೇ ಅಭೀ ಸಮರ್ಥ್ ಗೆ ಅವಮಾನ ಮಾಡಿ ಅವನ್ನು ಕೆಲಸದಿಂದ ತೆಗೆದಿದ್ದ. ನಂತರ ತನಗೆ ಬೇಕಾದಂತೆ ಕಂಪನಿಯನ್ನು ನಡೆಸುತ್ತಿದ್ದಾನೆ.
ಮುಳುಗುವ ಹಂತದಲ್ಲಿದೆ ಅಭಿ ಕಂಪನಿ
ಆದರೆ ಈಗ ಅಭಿಯ ನಿರ್ಲಕ್ಷ್ಯದಿಂದ ಕಂಪನಿ ಮುಳುಗುವ ಹಂತ ತಲುಪಿದೆ. ಅಭಿಗೆ ತಿಳಿಯದಂತೆ ಕಂಪನಿಯ ಮ್ಯಾನೇಜರ್ ಮನೆಗೆ ಬಂದು ಮಾಧವ ಮತ್ತು ಅವಿ ಬಳಿ ಸಮಸ್ಯೆ ಅನ್ನು ಹೇಳಿಕೊಂಡಿದ್ದಾರೆ. ಕಂಪನಿಗೆ ತೀರಾ ಲಾಸ್ ಆಗಿದ್ದು, ಇದು ಹೀಗೆ ಮುಂದುವರೆದರೆ, ಕಂಪನಿ ಮುಳುಗಿ ಹೋಗುತ್ತದೆ ಎಂದು ಹೇಳುತ್ತಾರೆ. ಈ ವಿಚಾರ ತಿಳಿದ ಮಾಧವ, ಮಹೇಶ ಹಾಗೂ ಅವಿನಾಶ್ ಮೂವರು ಅಭಿಯನ್ನ ಬೈಯುತ್ತಾರೆ. ಹೀಗೆಲ್ಲಾ ಕಂಪನಿಯನ್ನು ಈ ರೀತಿ ಯಾಕೆ ಮಾಡಿದ್ದೀಯಾ. ಏನಾದರೂ ಗೊತ್ತಿಲ್ಲ ಎಂದಾದರೆ, ನಮ್ಮ ಸಲಹೆ ಕೇಳಬಹುದಿತ್ತು ಎಂದು ಬೈದು ಬುದ್ಧಿ ಹೇಳುತ್ತಾರೆ. ಆದರೆ, ಅಭಿ ಮನೆಯವರ ಮಾತನ್ನು ಕೇಳಲು ತಯಾರಿರುವುದಿಲ್ಲ. ಬೇಕಂತಲೇ ಮನೆಯವರೆಲ್ಲರೂ ತನ್ನ ಮೇಲೆ ಪಿತೂರಿ ಮಾಡುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಳ್ಳುತ್ತಾನೆ.

ಅಭಿ ಕಂಪನಿ ಕೆಲಸದಲ್ಲಿ ಸಮರ್ಥ್
ಇತ್ತ ಸಮರ್ಥ್ ಗೆ ಮನೆಯಲ್ಲಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುತ್ತದೆ. ಊಟಕ್ಕೂ ಹಣವಿಲ್ಲದೇ ಒದ್ದಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಸಮರ್ಥ್ ಗೆ ಅವಿ ಆಫೀಸ್ ಕೆಲಸವನ್ನು ಕೊಡುತ್ತಾನೆ. ಇದಕ್ಕೆ ಸಂಬಳ ನೀಡುವುದಾಗಿಯೂ ಹೇಳುತ್ತಾನೆ. ಮುಳುಗುತ್ತಿರುವ ಕಂಪನಿಯನ್ನು ಉಳಿಸಿಕೊಳ್ಳಲು ಅವಿ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿರುತ್ತಾನೆ. ಸಮರ್ಥ್ ಕೂಡ ಹಣಕ್ಕೋಸ್ಕರ ಕೆಲಸ ಮಾಡಲು ಒಪ್ಪಿಕೊಳ್ಳುತ್ತಾನೆ. ಸಮರ್ಥ್ ಮನೆಯಲ್ಲಿ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವುದನ್ನು ನೋಡಿ ಗಾಬರಿಯಾಗುತ್ತಾನೆ. ಅಲ್ಲದೇ, ಸಮರ್ಥ್ ಮೇಲೆ ಜಗಳಕ್ಕೆ ಹೋಗುತ್ತಾನೆ.
ಸಮರ್ಥ್ ಮೇಲೆ ಕೂಗಾಡಿದ ಅಭಿ
ನೀನ್ಯಾರು ಈ ಮನೆಯಲ್ಲಿ ಕೂತು ಕೆಲಸ ಮಾಡಲು. ಅದರಲ್ಲೂ ನನ್ನ ಕಂಪನಿ ಕೆಲಸ ಮಾಡಲು ನಿನಗ್ಯಾರು ಹೇಳಿದ್ದು, ಮೊದಲು ಮನೆಯಿಂದ ಹೊರಗೆ ಹೋಗು ಎಂದು ಕತ್ತು ಹಿಡಿದು ಆಚೆಗೆ ಹಾಕಲು ಯತ್ನಿಸುತ್ತಾನೆ. ಆಗ ಅವಿನಾಶ್ ಬಂದು ಸಮರ್ಥ್ ಪರ ಮಾತನಾಡುತ್ತಾನೆ. ಅವಿ ಜೊತೆಗೂ ಅಭಿ ಜಗಳ ಮಾಡುತ್ತಾನೆ. ಆದರೆ, ಅಭಿ ಕೇಳುವುದಿಲ್ಲ. ಸಮರ್ಥ್ ಮೇಲೆ ಕೂಗಾಡುತ್ತಲೇ ಇರುತ್ತಾನೆ. ಅಭಿಗೆ ಅವಿ ಜೋರು ಧ್ವನಿಯಲ್ಲಿ ಹೇಳಿದಾಗ ಅಭಿಗೆ ಬೇರೆ ದಾರಿ ಇರುವುದಿಲ್ಲ. ಸುಮ್ಮನಾಗುತ್ತಾನೆ.

ಮನೆಯಲ್ಲಿ ಭಾಗ ಕೇಳಲು ಮುಂದಾದ ಅಭಿ
ರೂಮಿನಲ್ಲಿ ಕುಳಿತು ಮನೆಯವರೆಲ್ಲಾ ಸೇರಿ ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಮನೆ ಮಗನನ್ನೇ ಸೋಲಿಸಲು ಯತ್ನಿಸುತ್ತಿದ್ದಾರೆ ಎಂದು ಬೇಸರದಿಂದ ಮಾತನಾಡುತ್ತಾನೆ. ದೀಪಿಕಾ ಮತ್ತು ಶಾರ್ವರಿ ಅಭಿ ಪರ ಮಾತನಾಡುತ್ತಾ, ತುಂಬಿದ ಕುಟುಂಬದಲ್ಲಿ ಹೀಗೆಯೇ. ಅಧಿಕಾರ ಇರುವವರು ಏನು ಮಾಡಿದರೂ ಮಿಕ್ಕವರು ಕೇಳಬೇಕು ಎಂದು ಚಾಡಿ ಹೇಳುತ್ತಾಳೆ. ಶಾರ್ವರಿ ಮಾತುಗಳನ್ನು ಕೇಳಿದ ಅಭಿಗೆ ಇನ್ನಷ್ಟು ಕೋಪ ಬರುತ್ತದೆ. ನನ್ನನ್ನು ಯಾರೂ ತುಳಿಯಲು ಬಿಡುವುದಿಲ್ಲ. ನಾನು ಈ ಮನೆಯಲ್ಲಿ ನನ್ನ ಪಾಲು ತೆಗೆದುಕೊಂಡು ಬೇರೆ ಬಾಳುತ್ತೇನೆ ಎಂದು ತೀರ್ಮಾನ ಮಾಡುತ್ತಾನೆ. ಶಾರ್ವರಿಗೆ ಅಭಿ ಮಾತುಗಳನ್ನು ಕೇಳಿ ಖುಷಿಯಾಗುತ್ತದೆ.


Click it and Unblock the Notifications











