Srirasthu Shubhamasthu ; ಸಮರ್ಥ್ ಗೆ ಕೆಲಸ ಸಿಕ್ಕಾಯ್ತು : ತುಳಸಿ ಈಗ ಫುಲ್ ಹ್ಯಾಪಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಗೆ ತನ್ನ ಮಗ ಅವಿ ಅಪ್ಪ ಎಂದು ಕರೆದಿದ್ದೇ ಒಂದು ದೊಡ್ಡ ಉಡುಗೊರೆಯನ್ನು ತಂದುಕೊಟ್ಟಂತಾಗಿದೆ. ಬೆಲೆ ಕಟ್ಟಲು ಆಗದ ಈ ಉಡುಗೊರೆಯಿಂದ ಮಾಧವ್ ಕಾಲುಗಳು ನೆಲದ ಮೇಲೆ ನಿಲ್ಲುತ್ತಿಲ್ಲ.ಅಷ್ಟೇ ಅಲ್ಲದೇ, ಅವಿ ಅಪ್ಪ ಮುಟ್ಟಿದ ಕೋಟ್‌ ಎಂದು ತೆಗೆದು ಬಿಸಾಡಿದ್ದನ್ನೇ ಈಗ ಲಕ್ಕಿ ಕೋಟ್‌ ಎಂದು ಹಾಕಿಕೊಂಡಿದ್ದಾನೆ. ತಾನು ಇಷ್ಟು ವರ್ಷ ನಡೆದುಕೊಂಡ ರೀತಿ ತಪ್ಪು ಎಂದು ಕ್ಷಮೆ ಕೇಳಿದ್ದಾನೆ. ತನ್ನಿಂದ ನಿಮಗೆ ಇಷ್ಟು ವರ್ಷ ಬಹಳಷ್ಟು ನೋವು ಮಾಡಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ ಎನ್ನುತ್ತಾನೆ. ಇದೆಲ್ಲವೂ ಮಾಧವ್ ಗೆ ಬಹಳ ಖುಷಿ ಕೊಟ್ಟಿದೆ. ಅಪ್ಪ ಮಗ ಒಂದಾಗಿದ್ದು, ಇನ್ನು ಅಭಿ ತನ್ನ ತಪ್ಪನ್ನು ಒಪ್ಪಿಕೊಂಡರೆ ಕುಟುಂಬ ಕಂಪ್ಲೀಟ್ ಆಗುತ್ತದೆ.

ನಿಧಿ ಮದುವೆ ಮಾಡಲು ಮುಂದಾದ ಮಹೇಶ

ಎಲ್ಲರೂ ಒಟ್ಟಿಗೆ ತಿಂಡಿ ತಿನ್ನುವಾಗ ಮಹೇಶ ಇದ್ದಕ್ಕಿದ್ದ ಹಾಗೆಯೇ ಮನೆಯವರ ಬಳಿ ನಿಧಿ ಮದುವೆ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಈ ಮಾತು ಶಾರ್ವರಿಗೆ ಶಾಕ್ ಆಗುವಂತೆ ಮಾಡುತ್ತದೆ. ಮಾಧವ್ ಮತ್ತು ತುಳಸಿ ನಿಧಿಗೆ ಒಪ್ಪಿಗೆ ಇದ್ದರೆ ಮಾಡೋಣ ಎನ್ನುತ್ತಾರೆ. ಇನ್ನು ಮಹೇಶ ಶೇಖರ್ ಆಂಡ್ ಶೇಖರ್ ಕಂಪನಿಯ ವಾರಸ್ಧಾರನೇ ಹುಡುಗ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಮಾಧವ್ ಮತ್ತು ಅವಿ ಇಬ್ಬರೂ ಆ ಹುಡುಗ ಒಳ್ಳೆಯವನೇ ಎನ್ನುತ್ತಾರೆ. ಇನ್ನು ನಿಧಿನ ಪ್ರಶ್ನಿಸಿದ್ದಕ್ಕೆ ಶಾರ್ವರಿ ಬೇಡ ಎಂದು ಸನ್ನೆ ಮಾಡಿದ್ದನ್ನು ನೋಡಿ ಬೇಡ ಎಂದು ಹೇಳುತ್ತಾಳೆ. ಶಾರ್ವರಿ ರೂಮಿಗೆ ಬಂದು ಮಹೇಶನನ್ನು ಪ್ರಶ್ನೆ ಮಾಡುತ್ತಾಳೆ. ಶಾರ್ವರಿಗೆ ಮಹೇಶ ಇದರಲ್ಲಿ ಮಸಲತ್ತೇನು ಇಲ್ಲ. ಮಗಳಿಗೆ ಒಳ್ಳೆಯ ಸಂಬಂಧ ಬಂದಿದೆ ಯೋಚಿಸು ಎಂದು ಹೇಳುತ್ತಾನೆ.

srirasthu-shubhamasthu-serial-04-july-episode-written-update

ಸಮರ್ಥ್ ಜೊತೆಗೆ ಜಗಳ ಮಾಡಿದ ಅಭಿ

ಸಮರ್ಥ್ ಅಭಿ ಆಫೀಸಿನ ಕೆಲಸವನ್ನು ಮಾಡುತ್ತಿದ್ದಾನೆ. ಇದನ್ನು ನೋಡಿದ ಅಭಿ ಬಂದು ಬೇಕಂತಲೇ ಸಮರ್ಥ್ ಗೆ ಅವಮಾನವಾಗುವಂತೆ ಮಾತನಾಡುತ್ತಾನೆ. ಆಗ ಸಮರ್ಥ್ ತಾನು ಸಂಬಳಕ್ಕಾಗಿ ದುಡಿಯುತ್ತಿದ್ದು, ಈ ಮನೆಯ ಮೇಲಿನ ಆಸೆಗಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ. ಆದರೆ ಅಭಿ ಮಾತುಗಳು ಸಮರ್ಥ್ ಗೆ ನೋವು ಮಾಡುತ್ತದೆ. ಅವಿ ಬಂದು ಸಮರ್ಥ್ ಗೆ ಸಪೋರ್ಟ್ ಮಾಡಿದರೂ ಕೂಡ ಅಭಿ ಸುಮ್ಮನಿರುವುದಿಲ್ಲ. ಇದರಿಂದ ಸಮರ್ಥ್ ಕೋಪ ಮಾಡಿಕೊಂಡು ಹೊರಟು ಬಿಡುತ್ತಾನೆ.

ಮಗನಿಗೆ ಕೆಲಸ ಬೇಕು ಎಂದ ತುಳಸಿ

ಇದನ್ನೆಲ್ಲಾ ಗಮನಿಸಿದ ತುಳಸಿ ಬೇಸರ ಮಾಡಿಕೊಂಡು ಕಣ್ಣೀರು ಹಾಕುತ್ತಾಳೆ. ಇದನ್ನು ನೋಡಿದ ಅವಿ ಕ್ಷಮೆ ಕೇಳುತ್ತಾನೆ. ಆಗ ತುಳಸಿ, ನನ್ನ ಮಗನಿಗೆ ಈ ಕೆಲಸ ಅಲ್ಲ. ಅವನಿಗೆ ನಿನ್ನ ಆಫೀಸಿನಲ್ಲೇ ಕೆಲಸ ಕೊಡು ಎಂದು ಕೇಳಿಕೊಳ್ಳುತ್ತಾಳೆ. ಆದರೆ, ಅವಿ ನಾನು ಕೆಲಸ ಕೊಟ್ಟರೂ ಸಮರ್ಥ್ ಮಾಡಲು ರೆಡಿ ಇಲ್ಲ ಎನ್ನುತ್ತಾನೆ. ಬೇರೆ ದಾರಿ ಹುಡುಕುವ ಅವಿ ಸ್ನೇಹಿತನಿಗೆ ಕಾಲ್ ಮಾಡುತ್ತಾನೆ. ಸಮರ್ಥ್ ಗೆ ಕೆಲಸ ಕೊಡುವಂತೆ ಕೇಳುತ್ತಾನೆ. ಸಮರ್ಥ್ ಗೆ ಆ ಕಂಪನಿಯಿಂದ ಕಾಲ್ ಬರುತ್ತದೆ.

srirasthu-shubhamasthu-serial-04-july-episode-written-update

ಕೊನೆಗೂ ಸಮರ್ಥ್ ಗೆ ಸಿಕ್ತು ಕೆಲಸ

ಸಮರ್ಥ್ ತಾನು ಆ ಕಂಪನಿಗೆ ರೆಸ್ಯೂಮ್ ಕೊಡದಿದ್ದರೂ ಕಾಲ್ ಬಂದಿದ್ದಕ್ಕೆ ಆಶ್ಚರ್ಯಗೊಳ್ಳುತ್ತಾನೆ. ನಂತರ ಕಂಪನಿಗೆ ಹೋಗಿ ಇಂಟರ್ ವ್ಯೂವ್ ಕೊಟ್ಟಾಗ ಅವನಿಗೆ ಕೆಲಸ ಸಿಗುತ್ತದೆ. ಒಳ್ಳೆಯ ಸಂಬಳವೂ ಸಿಗುತ್ತದೆ. ಇದರಿಂದ ಖುಷಿ ಪಡುವ ಸಮರ್ಥ್ ಸೀದಾ ಮನೆಗೆ ಬಂದು ಸಿಹಿ ಕೊಟ್ಟು ಖುಷಿ ಹೇಳುತ್ತಾನೆ. ತುಳಸಿಗೂ ಈ ಖುಷಿ ವಿಚಾರವನ್ನು ತಿಳಿಸಿ, ಡ್ರೈವರ್ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X