Srirastu Shubhamastu ; ಮನೆಯ ಆಸ್ತಿಯಲ್ಲಿ ಭಾಗ ಕೇಳಿದ ಅಭಿಲಾಶ್ : ಭವಿಷ್ಯದ ಚಿಂತೆಯಲ್ಲಿ ಸಿರಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜನಾರ್ಧನ್, ದೀಪಿಕಾ ಮತ್ತು ಶಾರ್ವರಿ ಸೇರಿಕೊಂಡು ಈಗಾಗಲೇ ಅಭೀ ಮನಸ್ಸನ್ನು ಹಾಳು ಮಾಡಿದ್ದಾರೆ. ಅಭಿಯ ಮೂರ್ಖತನವನ್ನು ಬಳಸಿಕೊಂಡು ಈಗಾಗಲೇ ಮಾಧವ್ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ. ಮನೆಯವರ ಮೇಲೆ ನಂಬಿಕೆ ಇಲ್ಲದ ಅಭಿ ಕೂಡ ಪ್ರತೀ ಸಲವೂ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದಾನೆ. ಅಭಿ ಏನೇ ತಪ್ಪು ಮಾಡಿದರೂ ಬೈದು ಬುದ್ಧಿ ಹೇಳುವ ಮನೆಯವರ ಮೇಲೆಯೇ ಅಭಿ ಧ್ವೇಷ ಸಾಧಿಸುತ್ತಿದ್ದಾನೆ. ತನ್ನ ತಪ್ಪಿನ ಅರಿವಿಲ್ಲದೇ, ಮನೆಯವರ ಮೇಲೆ ಗೂಬೆ ಕೂರಿಸುತ್ತಿದ್ದಾನೆ.

ಕಂಪನಿಯ ಆನಿವರ್ಸರಿ ಬಗ್ಗೆ ಚರ್ಚೆ

ಮಾಧವ್ ಮತ್ತು ಮಹೇಶ ಸೇರಿಕೊಂಡು ಕಟ್ಟಿದ ಕಂಪನಿಗೆ ಈಗ 25 ವರ್ಷ ತುಂಬಿದೆ. ಮೊದಲು ಪ್ರತೀ ವರ್ಷವೂ ಸುಮತಿ ಕಂಪನಿಯ ಆನಿವರ್ವಸರಿಯನ್ನು ಜೋರಾಗಿ ಆಚರಿಸುತ್ತಿದ್ದರು. ಆದರೆ, ಸುಮತಿ ಸಾವಿನ ಬಳಿಕ ವಾರ್ಷಿಕೋತ್ಸವ ಆಚರಣೆಯನ್ನೇ ನಿಲ್ಲಿಸಿ ಬಿಟ್ಟಿದ್ದರು. ಈ ಬಾರಿ 25 ವರ್ಷ ತುಂಬಿದ ಹಿನ್ನೆಲೆ ಕಂಪನಿ ನೌಕರರು ಮತ್ತು ಮನೆಯವರೆಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದಾರೆ. ಅದಕ್ಕಾಗಿ ಏನೆಲ್ಲಾ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಮನೆಯವರೆಲ್ಲಾ ಕುಳಿತು ಪ್ಲಾನ್ ಮಾಡುತ್ತಿದ್ದಾರೆ. ಮನೆಯವರೆಲ್ಲರೂ ಖುಷಿಯಾಗಿ ಒಟ್ಟಿಗೆ ಸೇರಿದ್ದಾರೆ. ಶುಭ ಕಾರ್ಯಕ್ಕೆ ಮುನ್ನುಡಿ ಹಾಡುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲೇ ಅಭಿ ಒಬ್ಬನೇ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಾನೆ.

srirasthu-shubhamasthu-serial-04-june-episode-written-update

ಮಗುವಿನ ಬಗ್ಗೆ ಚಿಂತಿಸುತ್ತಿರುವ ಸಿರಿ

ಇತ್ತ ಸಿರಿ ಮನೆಯಲ್ಲಿ ಮನೆ ನಡೆಸುವುದು ಕಷ್ಟವಾಗಿದೆ. ಸಿರಿ ನಿತ್ಯವೂ ಇದರ ಬಗ್ಗೆಯೇ ಯೋಚಿಸುತ್ತಿದ್ದಾಳೆ. ಸದ್ಯಕ್ಕೆ ಮನೆಯಲ್ಲಿ ರೇಷನ್ ಇದೆ. ಆದರೆ, ಮುಂದಿನ ವಾರದಿಂದ ಮನೆಯವರಿಗೆ ಹೊಟ್ಟೆ ತುಂಬಾ ಊಟ ಹಾಕಲು ಕೂಡ ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ತಮಗೊಂದು ಮಗು ಬೇಕಾ ಎಂಬುದು ಸಿರಿ ಪ್ರಶ್ನೆ. ಆದರೆ, ಸಮರ್ಥ್ ಮನೆಯ ಪರಿಸ್ಥಿತಿ ಹೇಗೋ ಸುಧಾರಿಸುತ್ತದೆ. ಕಷ್ಟ ಇದೆ ಎಂದು ಮಗುವನ್ನು ಕಳೆದುಕೊಳ್ಳುವುದು ಬೇಡ. ನಮಗೆ ಮಗು ಬೇಕು ಎಂದು ಸಿರಿಗೆ ಬುದ್ಧಿ ಹೇಳುತ್ತಿದ್ದಾನೆ. ಆದರೆ, ಸಿರಿಗೆ ಸಮರ್ಥ್ ಮಾತುಗಳಲ್ಲಿ ನಂಬಿಕೆಯೇ ಬರುತ್ತಿಲ್ಲ.

ಮನೆಯಲ್ಲಿ ಭಾಗ ಕೇಳಿದ ಅಭಿಲಾಶ್

ಮನೆಯವರೆಲ್ಲರೂ ಕಂಪನಿಯ ವಾರ್ಷಿಕೋತ್ಸವಕ್ಕೆ ಏನೆಲ್ಲಾ ಹೊಸ ರೀತಿಯಲ್ಲಿ ಆಚರಿಸಬಹುದು ಎಂದು ಆಲೋಚಿಸುತ್ತಿದ್ದಾರೆ. ಇದೇ ವೇಳೆಗೆ ಬಂದ ಅಭಿ ನಾನೊಂದು ಖುಷಿ ವಿಚಾರವನ್ನು ಹೇಳಲು ಬಂದಿದ್ದೇನೆ ಎಂದು ಹೇಳುತ್ತಾನೆ. ಅಭಿ ಮಾತು ಕೇಳಿ ಎಲ್ಲರಿಗೂ ಖುಷಿಯಾಗುತ್ತದೆ. ಏನದು ಎಂದು ಪ್ರಶ್ನಿಸಿದ್ದಕ್ಕೆ, ತನಗೆ ಈ ಮನೆಯ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿದ ಕೂಡಲೇ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಇದೇನು ತಮಾಷೆ ಮಾಡುತ್ತಿದ್ದೀಯಾ ಎಂದು ಎಲ್ಲರೂ ಅಭಿ ಮಾತನ್ನು ಅರಗಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಅಭಿ, ಈ ಮನೆಯಲ್ಲಿ ತನಗೆ ಒಳ್ಳೆಯ ಸ್ಥಾನ-ಮಾನವಿಲ್ಲ. ಹಾಗಾಗಿ ತನಗೆ ಪಾಲು ಬೇಕೆ ಬೇಕು ಎಂದು ಕೇಳುತ್ತಾನೆ.

srirasthu-shubhamasthu-serial-04-june-episode-written-update

ಜನಾರ್ಧನ್ ಗೆ ಮಹೇಶನ ತರಾಟೆ

ಮಹೇಶ ಕೋಪ ಬಂದು ಅಭಿಗೆ ಹೊಡೆಯಲು ಮುಂದಾಗುತ್ತಾನೆ. ಆದರೆ, ಮಾಧವ್ ಮತ್ತು ತುಳಸಿ ತಡೆಯುತ್ತಾರೆ. ಅಭಿಗೆ ಬೈದು ಕಳಿಸಿ, ಜನಾರ್ಧನನಿಗೆ ಫೋನ್ ಮಾಡುತ್ತಾರೆ. ನಿನ್ನಿಂದಲೇ ನನ್ನ ಮಗ ಹೀಗೆಲ್ಲಾ ಮಾತನಾಡುತ್ತಿದ್ದಾನೆ. ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾನೆ ಎಂದು ಜನಾರ್ಧನನನ್ನು ಮಹೇಶ ತರಾಟೆಗೆ ತೆಗೆದುಕೊಳ್ಳುತ್ತಾನೆ. ಜನಾರ್ಧನ್ ಮಹೇಶನ ಮಾತು ಕೇಳಿ ಖುಷಿ ಪಡುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Abhi asks for property share for him. This makes everyone get shocked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X