Srirastu Shubhamastu ; ಪೂರ್ಣಿಮಾ ಹುಟ್ಟಿನ ಹಿನ್ನೆಲೆ ತಿಳಿದ ತುಳಸಿ : ಪೂರ್ಣಿಗೆ ಮಕ್ಕಳಾಗಲ್ವಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜುಗ್ಗ ಮಾವ ಮನೆಯಲ್ಲಿ ಏನಾದರೂ ಒಂದು ವಿಚಾರಕ್ಕೆ ಕಿರಿಕಿರಿ ಮಾಡುತ್ತಲೇ ಇದ್ದಾನೆ. ಇಲ್ಲೂ ಮನೆಯನ್ನು ತನ್ನ ಕಂಟ್ರೋಲ್ ಗೆ ತೆಗೆದುಕೊಳ್ಳಲು ಮುಂದಾಗುತ್ತಾನೆ. ಸಿಹಿ ತಂದೆಗೆ ಮರೆಯುವ ಖಾಯಿಲೆ ಇರುವುದನ್ನು ತಿಳಿದ ಜುಗ್ಗ ಮಾವ, ಸಿರಿ ತನ್ನ ತಂದೆಗೆ ಹಣ್ಣು ಕೊಟ್ಟರೆ, ಯಾರಿಗೂ ತಿಳಿಯದಂತೆ ಜುಗ್ಗ ಮಾವ ಹಣ್ಣನ್ನು ತಿಂದು, ನೀವೆ ಎಲ್ಲಾ ತಿಂದಿದ್ದು ಎಂದು ಹೇಳಿ ನಂಬಿಸುತ್ತಾನೆ.ಇನ್ನು ಟ್ಯೂಷನ್ ಗೆ ಬರುವ ಮಕ್ಕಳನ್ನು ಅವರ ತಂದೆಯ ಕೆಲಸದ ಬಗ್ಗೆ ಮಾಹಿತಿ ಪಡೆದು, ಹಣ್ಣು ಮಾರುವ, ದಿನಸಿ ಅಂಗಡಿ ಇಟ್ಟಿರುವ ಮಕ್ಕಳ ಬಳಿ ನಾಳೆಯಿಂದ ಮನೆಗೆ ಡ್ರೈಫ್ರೂಟ್ಸ್, ತರಕಾರಿ ಹಾಗೂ ಹಣ್ಣನ್ನು ತರಲು ಹೇಳುತ್ತಾನೆ. ಈ ವಿಚಾರ ತಿಳಿದು ಸಿರಿ ಬೈಯುತ್ತಾಳೆ.
ಪೂರ್ಣಿ ಬಗ್ಗೆ ಕೇಳಿದ ತುಳಸಿ..!
ಇನ್ನು ಮಾಧವ ಮೇಲೆ ತುಳಸಿ ಕೋಪ ಮಾಡಿಕೊಂಡಿದ್ದಾಳೆ. ಮಾಧವ್ ತುಳಸಿ ಜೊತೆಗೆ ಎಷ್ಟೇ ಮಾತನಾಡಲು ಪ್ರಯತ್ನಿಸಿದರೂ ಕೂಡ ತುಳಸಿ ಮಾತನಾಡುವುದಿಲ್ಲ. ಅಲ್ಲದೇ, ಪೂರ್ಣಿಮಾ ಬಗ್ಗೆ ನನ್ನ ಬಳಿ ಯಾಕೆ ಮುಚ್ಚಿಟ್ಟಿದ್ದೀರಾ..? ನನ್ನ ಮೇಲೆ ನಿಮಗೆ ನಂಬಿಕೆ ಇಲ್ವಾ ಎಂದೆಲ್ಲಾ ಪ್ರಶ್ನಿಸುತ್ತಾಳೆ. ಮಾಧವ ಗೆ ತುಳಸಿ ಪ್ರಶ್ನೆ ಮಾಡಿದಾಗ ಮುಜುಗರವಾಗುತ್ತದೆ. ಪೂರ್ಣಿ ಬಗ್ಗೆ ರಹಸ್ಯವನ್ನು ಯಾರಿಗೂ ಹೇಳಬಾರದು ಅಂದುಕೊಂಡಿದ್ದೆ. ಆದರೆ, ಇವತ್ತು ನಿಮಗೆ ಹೇಳುತ್ತೇನೆ. ನಾನು ನಿಮ್ಮ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದೇನೆ ಎಂದು ಹೇಳುತ್ತಾನೆ.

ತುಳಸಿಗೆ ಸತ್ಯ ಹೇಳಿದ ಮಾಧವ
ಬಸವನಗುಡಿ ದೇವಸ್ಥಾನದ ಬಳಿ 25 ವರ್ಷಗಳ ಹಿಂದೆ ಯಾರೋ ಕಾರಿನಲ್ಲಿ ಬಂದು ಮಗುವನ್ನು ಅಲ್ಲೇ ಬಿಟ್ಟು ಹೋಗಲು ಯತ್ನಿಸಿದರು. ಆಗ ಅಲ್ಲೇ ಇದ್ದ ಅನ್ನಪೂರ್ಣ ಅವರು, ನೀವು ಯಾರು, ಈ ಮಗು ಯಾರದ್ದು, ಇಲ್ಲಿಗೆ ಯಾಕೆ ಬಿಟ್ಟು ಹೋಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ, ಅವರು ಈ ಮಗು ಈ ಊರಿನ ದೊಡ್ಡ ಮನೆಗೆ ಸೇರಿದ್ದು. ಆದರೆ, ಆ ಮಗುವನ್ನು ಅವರು ಸಾಕುವುದಕ್ಕೆ ಆಗುವುದಿಲ್ಲ. ಈ ಮಗುವನ್ನು ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸಿ ಎಂದು ಹೇಳಿ ಸಾಕಷ್ಟು ಹಣ ಕೊಟ್ಟು ಹೋದರಂತೆ. ಪೂರ್ಣಿಮಾ ದೊಡ್ಡ ಮನೆಗೆ ಸೇರಿದವಳೆ. ಆದರೆ, ಅವಳನ್ನು ಯಾಕೆ ಹಾಗೆ ಬಿಟ್ಟು ಹೋದರು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಹೇಳುತ್ತಾನೆ. ಈ ವಿಚಾರವನ್ನು ಕೇಳಿದ ತುಳಸಿಗೆ ಬೇಸರವಾಗುತ್ತದೆ.

ಪೂರ್ಣಿಗೆ ಮಕ್ಕಳಾಗೋದಿಲ್ವಾ..?
ಇನ್ನು ಪೂರ್ಣಿಮಾ ಮತ್ತು ಅವಿ ಇಬ್ಬರೂ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿರುತ್ತಾರೆ. ರಿಪೋರ್ಟ್ ಏನು ಎಂದು ಪೂರ್ಣಿಮಾ ಕೇಳಿದ್ದಕ್ಕೆ ಅವಿ ನಿನಗೆ ಮಕ್ಕಳಾಗುತ್ತೆ. ಗರ್ಭಕೋಶದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಸುಳ್ಳು ಹೇಳುತ್ತಾನೆ. ಆದರೆ, ತುಳಸಿ ಬಳಿ ಹೋಗಿ ಪೂರ್ಣಿ ಗರ್ಭಕೋಶ ವೀಕ್ ಆಗಿದ್ಯಂತೆ ಅವಳಿಗೆ ಮಕ್ಕಳಾಗುವುದು ಕಷ್ಟವಂತೆ. ಈ ವಿಚಾರವನ್ನು ಪೂರ್ಣಿಗೆ ಹೇಳಬೇಡಿ ಎಂದು ಕಣ್ಣೀರು ಹಾಕುತ್ತಾನೆ. ಈ ಮಾತನ್ನು ದೀಪಿಕಾ ಕದ್ದು ಕೇಳಿಸಿಕೊಳ್ಳುತ್ತಾಳೆ.

ಶಾರ್ವರಿಗೆ ಶಾಕ್ ಟ್ರೀಟ್ ಮೇಂಟ್
ಇನ್ನು ಮಹೇಶ ಬೇಕಂತಲೇ ಆಗಾಗ ಶಾರ್ವರಿಗೆ ಶಾಕ್ ಟ್ರೀಟ್ ಮೆಂಟ್ ಕೊಡುತ್ತಿದ್ದಾನೆ. ನಿಧಿ ಮದುವೆ ಮಾಡಬೇಕು ಎಂದು ಬಯಸುವ ಮಹೇಶ ನಿಧಿಯನ್ನು ಕರೆದು ಕೇಳುತ್ತಾನೆ. ಆಗ ನಿಧಿ ಇದೇ ಥರ ತುಂಬಿದ ಮನೆಗೆ ಹೋಗಲು ಇಷ್ಟ ಎನ್ನುತ್ತಾಳೆ. ಈ ಮಾತನ್ನು ಕೇಳಿ ಮಹೇಶನಿಗೆ ಖುಷಿ ಆಗುತ್ತದೆ. ಅದಕ್ಕೆ ಶಾರ್ವರಿ ಎಷ್ಟೇ ಆದರೂ ನನ್ನ ಮಗಳು ಅಲ್ವಾ ಎಂದಾಗ ಮಹೇಶ ನೀನು ಅಣ್ಣ-ಅತ್ತಿಗೆಯನ್ನು ಕೊಂದು ಇಡೀ ಮನೆಯಲ್ಲಿ ನೀನೇ ರಾಣಿಯಾಗಿ ಇರಬೇಕು ಎಂದುಕೊಂಡವಳಲ್ಲವೇ ಎಂದು ಹೇಳುತ್ತಾನೆ. ಈ ಮಾತು ಶಾರ್ವರಿಗೆ ಶಾಕ್ ಉಂಟು ಮಾಡುತ್ತದೆ.


Click it and Unblock the Notifications











