Srirastu Shubhamastu ; ತಮ್ಮನಿಗಾಗಿ ಖಾಲಿ ಹಾಳೆ ಮೇಲೆ ಸಹಿ ಹಾಕಿದ ಅವಿ : ಮನೆಗಾಗಿ ಮಾತು ಕೊಟ್ಟ ತುಳಸಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಮನೆಯನ್ನು ಸಂಧ್ಯಾ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಜುಗ್ಗ ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದಾನೆ.ಆದರೆ, ಕೆಲಸ ಬಹಳ ನಿಧಾನವಾಗಿ ಸಾಗಿದ್ದು, ಸಂಧ್ಯಾ ಮತ್ತು ಜುಗ್ಗ ಇಬ್ಬರಿಗೂ ಕಾಯುವ ತಾಳ್ಮೆ ಮಿತಿ ಮೀರುತ್ತಿದೆ. ಈ ನಡುವೆ ದತ್ತ ತಾತನಿಗೆ ಅನುಮಾನ ಮೂಡಿದೆ. ಹೀಗಾಗಿ ಜುಗ್ಗನಿಂದ ಆಣೆ ಪ್ರಮಾಣವನ್ನು ಮಾಡಿಸುತ್ತಾರೆ. ಮನೆಯಲ್ಲಿ ಯಾವುದೇ ಪಿತೂರಿ ನಡೆಸುತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಜುಗ್ಗ ಇಲ್ಲ ಎಂದು ಸುಳ್ಳು ಹೇಳಿದ್ದಾನೆ.

ಅಸಲಿಗೆ ಸಿರಿ ಗರ್ಭಿಣಿಯೇ ಅಲ್ಲ

ಇತ್ತ ಸಿರಿ ಗರ್ಭಿಣಿ ಎಂದು ತಿಳಿದಿರುವ ಸಮರ್ಥ್ ಮನದಲ್ಲೇ ನೂರೆಂಟು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ. ಸಿರಿಯೂ ಕೂಡ ತಾನು ಗರ್ಭಿಣಿ ಎಂದೇ ನಂಬಿದ್ದಾಳೆ. ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ. ಆಗ ಸಿರಿಗೆ ತಾನು ಗರ್ಭಿಣಿ ಅಲ್ಲ ಎಂಬ ಸತ್ಯ ತಿಳಿದು ಬಂದಿದೆ. ಇದರಿಂದ ಬೇಸರಗೊಂಡ ಸಿರಿ ಸೀದಾ ಮನೆಗೆ ಬಂದಿದ್ದಾಳೆ. ಸಿರಿ ಆಸ್ಪತ್ರೆಗೆ ಹೋಗಿದ್ದನ್ನು ತಿಳಿದ ಸಮರ್ಥ್ ಅಬಾರ್ಷನ್ ಮಾಡಿಸಿರಬಹುದು ಎಂದು ಬೇಸರದಿಂದ ಪ್ರಶ್ನೆ ಮಾಡುತ್ತಾನೆ. ಆದರೆ ಸಿರಿ ತಾನು ಗರ್ಭಿಣಿಯೇ ಅಲ್ಲ. ಅಂದೇ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಬೇಕಿತ್ತು ಎಂದು ಹೇಳುತ್ತಾಳೆ. ಇದರಿಂದ ಸಮರ್ಥ್ ಗೂ ಬೇಸರವಾಗುತ್ತದೆ.

srirasthu-shubhamasthu-serial-05-june-episode-written-update

ತನ್ನ ಹೆಸರಿಗೆ ಆಸ್ತಿ ಬೇಕು ಎಂದ ಅಭಿ

ಮಾಧವ್ ಮನೆಯಲ್ಲಿ ಎಲ್ಲರ ಮನಸ್ಸು ಕದಡಿ ಹೋಗಿರುತ್ತದೆ. ಅಭಿ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಎಲ್ಲರೂ ಬೇಸರ ಮಾಡಿಕೊಂಡಿರುತ್ತಾರೆ. ಪಾಲು ಕೊಡುವುದಿಲ್ಲ ಎಂದು ಹೇಳಿರುತ್ತಾರೆ. ಬೆಳಗ್ಗೆ ತಿಂಡಿಗಾಗಿ ಅಭಿ ಬರಲೆಂದು ಅವಿ ಕಾಯುತ್ತಿರುತ್ತಾನೆ. ಅಭಿ ಬಂದವನೇ ತನ್ನ ಪಾಡಿಗೆ ತಾನು ಅಣ್ಣನಿಂದ ದೂರ ಕೂರಲು ಯತ್ನಿಸುತ್ತಾನೆ. ಆದರೆ ಅಭಿಗೆ ಅವಿ ಸಮಾಧಾನ ಮಾಡಲು ಯತ್ನಿಸಿದಾಗ ಅಭಿ ಆಸ್ತಿಯಲ್ಲಿ ಪಾಲು ಬೇಕೇ ಬೇಕು ಎಂದು ಹಠ ಮಾಡುತ್ತಾನೆ. ಅವಿನಾಶ್ ನನಗೆ ನಿನಗಿಂತಲೂ ಈ ಮನೆಯವರ ಖುಷಿ, ನೆಮ್ಮದಿಗಿಂತಲೂ ಇನ್ನೇನೂ ಬೇಕಿಲ್ಲ. ಎಲ್ಲಾ ಆಸ್ತಿ, ಹಣ ಎಲ್ಲವನ್ನೂ ನೀನೇ ಇಟ್ಟುಕೊ ಎಂದು ಹೇಳುತ್ತಾನೆ.

ಮನೆಗಾಗಿ ಖಾಲಿ ಹಾಳೆಗೆ ಅವಿ ಸಹಿ

ತಕ್ಷಣವೇ ಅಭಿ ಹಾಗಾದರೆ, ಬಾಯಿ ಮಾತಿನಲ್ಲಿ ಹೇಳುವುದು ಬೇಡ. ಏನಿದ್ದರೂ ನನ್ನ ಪಾಲನ್ನು ಪೇಪರ್ ನಲ್ಲಿ ಕೊಟ್ಟರೆ ಚೆಂದ ಎಂದು ಪದೇ ಪದೇ ಕೇಳುತ್ತಾನೆ. ಹಾಳೆಯಲ್ಲಿ ಬರೆದುಕೊಟ್ಟರೆ ಈ ಮನೆಯನ್ನು ಪಾಲು ಮಾಡಬಾರದು, ನೀನು ಮನೆ ಬಿಟ್ಟು ಹೋಗಬಾರದು ಎಂದು ಅವಿ ಕೇಳಿದ್ದಕ್ಕೆ ಅಭಿ ಸರಿ ಎನ್ನುತ್ತಾನೆ. ಅವಿನಾಶ್ ಖಾಲಿ ಅಗ್ರಿಮೆಂಟ್ ಪೇಪರ್ ತಂದು ಸಹಿ ಹಾಕಿ, ಏನಾದರೂ ಬರೆದುಕೊ ಎಂದು ಹೇಳುತ್ತಾನೆ. ಅಭಿಗೆ ಶಾಕ್ ಆಗುತ್ತದೆ

srirasthu-shubhamasthu-serial-05-june-episode-written-update

ತುಳಸಿ ಬಳಿ ಮಾತು ತೆಗೆದುಕೊಂಡ ಅಭಿ

ಇನ್ನು ಅಭಿಗಾಗಿ ತುಳಸಿ ಕಾಫಿ ತೆಗೆದುಕೊಂಡು ಬರುತ್ತಾಳೆ. ಆಗ ತುಳಸಿಯನ್ನು ಅಭಿ ದೂಷಿಸುತ್ತಾನೆ. ಈ ಮನೆಯಲ್ಲಿ ನೆಮ್ಮದಿ ಹಾಳಾಗಲೂ, ನಾವೆಲ್ಲರೂ ಜಗಳ ಮಾಡಲು ನೀವೇ ಕಾರಣ. ನಿಮ್ಮಿಂದಲೇ ಎಲ್ಲಾ ಸಮಸ್ಯೆ ಆಗುತ್ತಿದೆ. ಈ ಮನೆ ಬಿಟ್ಟು ಹೋಗಿ ಎಂದು ಹೇಳುತ್ತಾನೆ. ತುಳಸಿ ಈ ಮನೆಯನ್ನು ಭಾಗ ಮಾಡುವುದಿಲ್ಲ ಎಂದು ಮಾತು ಕೊಟ್ಟರೆ ನಾನು ಹೋಗುತ್ತೇನೆ ಎನ್ನುತ್ತಾಳೆ. ಅಭಿಗೆ ಮೊದಲು ತುಳಸಿ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಬಳಿಕ ಮಾತು ಕೊಡುವ ಅಭಿ ತಾನು ಹೇಳಿದ ತಕ್ಷಣವೇ ಮನೆ ಬಿಟ್ಟು ಹೋಗಬೇಕು ಎಂದು ತುಳಸಿಗೆ ಹೇಳುತ್ತಾನೆ.

More from Filmibeat

English summary
Abhi asks for property avinash signs empty paper and gives
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X