Srirasthu Shubhamasthu ; ಅಪ್ಪ-ಮಗಳ ಸಂಬಂಧ ತಿಳಿಯದ ದೀಪಿಕಾ ಮನದಲ್ಲಿ ಅಸೂಯೆ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಗರ್ಭಿಣಿ ಎಂಬ ಕಾರಣಕ್ಕೆ ನಿಧಿ ಮದುವೆ ನಿಂತು ಹೋಗಿದೆ. ಇದರಿಂದ ಮನೆಯಲ್ಲಿ ಎಲ್ಲರ ಮನಸ್ಸು ಗೊಂದಲದಲ್ಲಿದೆ.ಅಭಿ ಹಾಗೂ ಅವಿ ಇಬ್ಬರೂ ತಾಯಿ ತುಳಸಿ ಪರವಿದ್ದು, ಮದುವೆಗೆ ಒಪ್ಪಿಸಿದರೆ ಆಯ್ತು ಎಂದಿದ್ದಾರೆ. ಆದರೆ, ಶಾರ್ವರಿಗೆ ಇದರಿಂದ ಬಹಳ ಬೇಸರವಾಗಿದೆ. ಈ ವಯಸ್ಸಲ್ಲಿ ಮಗು ಮಾಡಿಕೊಳ್ಳುತ್ತಿರುವುದಲ್ಲದೇ ತನ್ನ ಮಗಳ ಭವಿಷ್ಯಕ್ಕೆ ಕಲ್ಲಾಗಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡಿದ್ದು, ಮನೆಯವರೆಲ್ಲರ ಮೇಲೂ ಸಿಡಿಮಿಡಿಗೊಂಡಿದ್ದಾಳೆ.

ಮನೆ ಬಿಟ್ಟು ಹೊರಡುತ್ತಾರಾ ಮಾಧವ್-ತುಳಸಿ

ಹೇಗಾದರೂ ಮಾಡಿ ಈ ಸಮಸ್ಯೆ ಅನ್ನು ಸರಿ ಮಾಡಲೇಬೇಕು ಎಂದು ಶಾರ್ವರಿ ಗಂಡಿನ ತಂದೆ-ತಾಯಿ ಬಳಿ ಮಾತನಾಡಿದ್ದಾಳೆ. ತುಳಸಿ ಗರ್ಭಿಣಿ ಎಂಬ ಕಾರಣಕ್ಕೆ ನಮ್ಮ ಮಕ್ಕಳ ಭವಿಷ್ಯ ಹಾಳಾಗುವುದು ಬೇಡ ಎಂದು ಸಮಾಧಾನ ಮಾಡಲು ಮುಂದಾಗುತ್ತಾಳೆ. ಆಗ ಗಂಡಿನ ಕಡೆಯವರು ಬೇಕಂತಲೇ ಮದುವೆಗೆ ತುಳಸಿ ಮತ್ತು ಮಾಧವ್ ಬರುವುದು ನಮಗೆ ಇಷ್ಟವಿಲ್ಲ ಎಂದು ಹೇಳುತ್ತಾರೆ. ಇದಕ್ಕೆಲ್ಲಾ ಒಪ್ಪಿರುವ ಶಾರ್ವರಿ ತನ್ನ ಮಗಳ ಮದುವೆಯಾದರೆ ಸಾಕು ಎಂದಿದ್ದಾಳೆ. ಅದಕ್ಕೋಸ್ಕರ ಶಾರ್ವರಿ ಮಾಧವ್ ಮತ್ತು ತುಳಸಿಯನ್ನು ಮನೆಯಿಂದ ಹೊರಗೆ ಕಳಿಸಲು ಮುಂದಾಗಿದ್ದಾಳೆ. ನೀವಿಬ್ಬರು ಮನೆಯಲ್ಲಿದ್ದರೆ ನಿಧಿ ಮದುವೆಗೆ ಕಷ್ಟವಾಗುತ್ತೆ ಎಂದಿದ್ದು, ಇಬ್ಬರೂ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದ್ದಾರೆ.

srirasthu shubhamasthu serial 05 November episode written update

ತುಳಸಿ ಗರ್ಭಿಣಿ ಎಂದು ತಿಳಿದ ಜನಾರ್ಧನ್

ಇನ್ನು ಜನಾರ್ಧನ್ ಮನೆಗೆ ಬರುತ್ತಿಲ್ಲ ಎಂದು ಮೊಸಳೆ ಕಣ್ಣೀರು ಹಾಕುತ್ತಾ ನಟಿಸಿದ ದೀಪಿಕಾಳ ಮಾತನ್ನು ಮಾಧವ್ ನಂಬಿದ್ದಾನೆ. ಹಾಗಾಗಿ ಮಾಧವ್ ಬೀಗರಾದ ಜನಾರ್ಧನ್ ಅವರಿಗೆ ಕರೆ ಮಾಡಿ ಮನೆಗೆ ಸ್ವಾಗತಿಸಿದ್ದಾರೆ. ಜನಾರ್ಧನ್ ಮನೆಗೆ ಬಂದಿದ್ದು, ದೀಪಿಕಾಳಿಗೆ ಬಲ ಬಂದಂತಾಗಿದೆ. ಜನಾರ್ಧನ್ ಮತ್ತು ದೀಪಿಕಾ ರೂಮ್ ನಲ್ಲಿ ಸೀಕ್ರೆಟ್ ಆಗಿ ಮಾತನಾಡಿದ್ದು, ತುಳಸಿ ಗರ್ಭಿಣಿ ಆಗಿರುವ ವಿಚಾರವನ್ನು ತಿಳಿಸಿದ್ದಾಳೆ. ಈ ಸತ್ಯವನ್ನು ತಿಳಿದ ಜನಾರ್ಧನ್ ಇದೊಂದು ವಿಚಾರ ಸಾಕು ಮಾಧವ್ ನನ್ನು ಮಟ್ಟ ಹಾಕಲು ಎಂದು ಪ್ಲಾನ್ ಮಾಡಿಕೊಂಡಿದ್ದಾನೆ.

ಜನಾರ್ಧನ್ ನಡವಳಿಕೆಯಿಂದ ಕೋಪಗೊಂಡ ದೀಪಿಕಾ

ಇನ್ನು ಪೂರ್ಣಿಮಾಳನ್ನು ನೋಡಿದ ಕೂಡಲೇ ಜನಾರ್ಧನ್ ಮನಸ್ಸು ಕರಗಿ ಕ್ಷಮೆ ಕೇಳುತ್ತಾನೆ. ಅಂದು ಪೂರ್ಣಿಮಾಳೀಗೆ ಸುಳ್ಳು ಹೇಳಿ ನಂಬಿಸಿದ್ದಕ್ಕೆ ತನಗೆ ಗೊತ್ತಿಲ್ಲದೇ ಕ್ಷಮೆಯಾಚಿಸಿದ್ದಾನೆ. ಅಲ್ಲದೇ, ಪೂರ್ಣಿಮಾ ಮಾಡಿದ ಅಡುಗೆಯನ್ನು ಸವಿದು ಜನಾರ್ಧನ್ ಖುಷಿ ಪಟ್ಟಿದ್ದು, ಊಟ ಮಾಡುವಾಗ ನೆತ್ತಿಗೇರಿದ್ದಕ್ಕೆ ಪೂರ್ಣಿಮಾ ನೀರು ಕುಡಿಸಿದ್ದಾಳೆ. ಇದೆಲ್ಲವನ್ನು ಕಂಡ ದೀಪಿಕಾಳ ಕೋಪ ಹೆಚ್ಚಾಗಿದೆ. ತನಗೆ ಪೂರ್ಣಿಮಾ ಪೈಪೋಟಿ ಕೊಡುತ್ತಿದ್ದಾಳೆ ಎಂದು ಸಿಟ್ಟಾಗಿದ್ದಾಳೆ. ಆದರೆ, ಪೂರ್ಣಿಮಾ ಮತ್ತು ಜನಾರ್ಧನ್ ನನ್ನು ಕಂಡ ತುಳಸಿ ಹಾಗೂ ವನಜಾ ಎಷ್ಟೇ ಆದರೂ ಕರುಳ ಬಳ್ಳಿಯ ಸಂಬಂಧ ಎಂದು ಮನದಲ್ಲೇ ಭಾವಿಸಿದ್ದಾರೆ.

ಇಂದಲ್ಲ ನಾಳೆ ಸತ್ಯ ಗೊತ್ತಾಗುತ್ತಾ..?

ಇನ್ನು ದೀಪಿಕಾ ಬೇಕಂತಲೇ ತನಗೆ ತವರು ಮನೆ ಇದೆ. ಹಾಗಾಗಿ ಅವರೆಲ್ಲಾ ಬಂದು ಹಬ್ಬಕ್ಕೆ ಮನೆಗೆ ಕರೆಯುತ್ತಿದ್ದಾರೆ. ಹೊಸ ಬಟ್ಟೆ ಕೊಡಿಸಿದ್ದಾರೆ. ಆದರೆ, ನಿನಗೆ ಯಾರೂ ಗತಿ ಇಲ್ಲ ಎಂದು ಹೀಯಾಳಿಸಿದ್ದಾಳೆ. ಇದರಿಂದ ಪೂರ್ಣಿಮಾಳಿಗೆ ಬೇಸರವಾಗದಿದ್ದರೂ, ತನಗೂ ತನ್ನವರೆಂದು ಇರಬೇಕಿತ್ತು ಎಂದು ಮನದಲ್ಲೇ ಭಾವಿಸಿದ್ದಾಳೆ. ಪೂರ್ಣಿಮಾಳ ತಳಮಳಗಳನ್ನು ಅರ್ಥ ಮಾಡಿಕೊಂಡ ವನಜಾ ಮನದಲ್ಲೇ ನೊಂದುಕೊಂಡಿದ್ದು, ಈ ಸತ್ಯ ಯಾವಾಗ ಬಯಲಾಗುತ್ತೋ ಗೊತ್ತಿಲ್ಲ. ಆದರೆ, ಜನಾರ್ಧನ್ ಮತ್ತು ದೀಪಿಕಾಳಿಗೆ ಈ ಸತ್ಯ ತಿಳಿದರೆ ಇಬ್ಬರೂ ಒಪ್ಪಿಕೊಳ್ಳುತ್ತಾರಾ ಇಲ್ಲ ಬೇರೆ ಆಟ ಹೂಡುತ್ತಾರಾ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X