Srirasthu Shubhamasthu ; ಶಾರ್ವರಿ ಕಡೆಗೆ ಸಮರ್ಥ್ ಕೈ ತೋರಿಸಲು ಕಾರಣವೇನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ತನ್ನ ಮಾವನಿಂದ ಹಣವನ್ನು ವಸೂಲಿ ಮಾಡಬೇಕು ಎಂದುಕೊಂಡಿದ್ದಾಳೆ. ಆದರೆ, ಜುಗ್ಗ ಜಗನ್ನಾಥ ಎಲ್ಲೆಲ್ಲಿ ದುಡ್ಡು ಹೊಡೆಯಬಹುದು ಎಂದು ಲೆಕ್ಕಾಚಾರ ಹಾಕುತ್ತಿರುತ್ತಾನೆ. ಐದು ಲಕ್ಷ ಹಣವನ್ನು ತನ್ನ ಮಾವನೇ ಪಡೆದುಕೊಂಡಿದ್ದು, ಹೇಗಾದರೂ ಮಾಡಿ ಆ ಹಣವನ್ನು ತೆಗೆದುಕೊಂಡು ದೀಪಿಕಾಳಿಗೆ ವಾಪಸ್ ಮಾಡಬೇಕು ಎಂದು ಸಂಧ್ಯಾ ಅಂದುಕೊಂಡಿದ್ದಾಳೆ. ಆದರೆ ಅವರ ಮಾವ ತಲೆಕೆಳಗೆ ಮಾಡಿದರೂ ಕೂಡ ನಾನು ಒಂದು ರೂಪಾಯಿ ಹಣವನ್ನು ಬಿಚ್ಚಲಾರೆ ಎಂಬಂತಿದ್ದು, ಸಂಧ್ಯಾಳಿಗೆ ತಲೆ ಕಟ್ಟು ಹೋಗಿದೆ.
ಕೆಲಸದಲ್ಲಿ ಸಂಧ್ಯಾಳಿಗೆ ಹೊಸ ಜವಾಬ್ದಾರಿ
ಸಂಧ್ಯಾ ಕಷ್ಟಪಟ್ಟು ಕೆಲಸವನ್ನು ಹುಡುಕಿಕೊಂಡಿದ್ದಾಳೆ. ಇದರಿಂದ ಮನೆಯ ಸಾಲವನ್ನು ತೀರಿಸಿಕೊಳ್ಳುವುದರ ಜೊತೆಗೆ ಮನೆಗೆ ಸಹಾಯ ಮಾಡಬಹುದು ಎಂದು ಸಂಧ್ಯಾ ಸಮಾಧಾನ ಪಟ್ಟುಕೊಂಡಿದ್ದಾಳೆ. ಸೊಸೆಗೆ ಕೆಲಸ ಸಿಕ್ಕಿದೆ ಎಂದು ಜುಗ್ಗ ಜಗನ್ನಾಥ ಫುಲ್ ಸಾಫ್ಟ್ ಆಗಿ ನಡೆದುಕೊಳ್ಳುತ್ತಿದ್ದಾನೆ. ಆದರೆ, ಸಂಧ್ಯಾ ತನ್ನ ಮಾವನಿಗೆ ಕೇರ್ ಕೂಡ ಮಾಡುತ್ತಿಲ್ಲ. ಇನ್ನು ನವರಾತ್ರಿ ಹಿನ್ನೆಲೆ ಸಂಧ್ಯಾಳಿಗೆ ಆಫೀಸಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ. ಇವೆಂಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿರುವ ಸಂಧ್ಯಾ ಹೊಸ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಕೆಲಸ ಮಾಡಬೇಕು ಎಂದು ಆಸೆ ಪಟ್ಟಿದ್ದಾಳೆ.

ಸೊಸೆಯನ್ನು ಮನೆಗೆ ಕರೆತಂದ ಮಹೇಶ
ಪೂರ್ಣಿಮಾ ಬೇಸರ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿರುತ್ತಾಲೆ. ಅವಿ ಹುಡುಕಲು ಹೊರಟಾಗ ತುಳಸಿ ತಡೆಯುತ್ತಾಳೆ. ಮಹೇಶ ಪೂರ್ಣಿಮಾಳನ್ನು ಹುಡುಕಿಕೊಂಡು ಬರಲು ಹೋಗಿದ್ದಾನೆ. ಸಂಜೆಯಾದರೂ ಪೂರ್ಣಿಮಾ ಮನೆಗೆ ಬಂದಿರುವುದಿಲ್ಲ. ಮಹೇಶ ಪೂರ್ಣಿಯನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಪೂರ್ಣಿ ಏನನ್ನೂ ಮಾತನಾಡುವುದಿಲ್ಲ. ಮೌನವಾಗಿರುತ್ತಾಳೆ. ತುಳಸಿ, ಮಾಧವ್ ಎಲ್ಲರೂ ಪೂರ್ಣಿಗೆ ಬುದ್ಧಿವಾದ ಹೇಳುತ್ತಾರೆ. ಶಾರ್ವರಿ ಬೇಕಂತಲೇ ನಿನಗೇನಾದರೂ ಕಷ್ಟವಾದರೆ, ದೀಪಿಕಾ ಬಳಿ ಹೇಳಿಕೋ. ದೀಪಿಕಾ ನಿನ್ನ ತಂಗಿಯಂತೆ ಎಂದು ಹೇಳುತ್ತಾಳೆ. ದೀಪಿಕಾಳಿಗೆ ಈ ಮಾತು ಇಷ್ಟವಾಗುವುದಿಲ್ಲ.
ದೀಪಿಕಾಳನ್ನು ಪ್ರಶ್ನಿಸಿದ ತುಳಸಿ
ಶಾರ್ವರಿ ಅತ್ತೆ ಯಾಕೆ ನನ್ನನ್ನು ಸಿಕ್ಕಿಸುತ್ತಿದ್ದಾರೆ. ಮನೆಯಿಂದ ಹೋದವಳು ಯಾವತ್ತೂ ತಿರುಗಿ ಬರಲಾರಳು ಎಂದುಕೊಂಡಿದ್ದೆ. ಆದರೆ, ಮತ್ತೆ ಮನೆಗೆ ಬಂದಿದ್ದಾಳೆ. ಅದೇನೇ ಆಗಲೀ, ಪೂರ್ಣಿಮಾಳನ್ನು ದಿನ ನಿತ್ಯ ಚುಚ್ಚಿ ಚುಚ್ಚಿ ಮಾತನಾಡಿಯೇ ಈ ಮನೆಯಿಂದ ಓಡಿಸುತ್ತೇನೆ ಎಂದು ಒಬ್ಬಳೇ ಗೊಣಗುತ್ತಿರುತ್ತಾಳೆ. ತುಳಸಿ ಇದ್ದಕ್ಕಿದ್ದ ಹಾಗೆಯೇ ಬಂದು ದೀಪಿಕಾ ನೀನು ಪೂರ್ಣಿಮಾ ಬಳಿ ಬೇಸರವಾಗುವಂತೆ ಏನಾದರೂ ಮಾತನಾಡಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಈ ಪ್ರಶ್ನೆಯನ್ನು ಕೇಳಿದ ಕೂಡಲೇ ದೀಪಿಕಾಳಿಗೆ ಶಾಕ್ ಆಗುತ್ತದೆ. ಇಲ್ಲ. ಅತ್ತೆ ನಾನು ದೀಪಿಕಾ ಅವರ ಬಳಿ ಯಾವಾಗಲು ಪ್ರೀತಿಯಿಂದಲೇ ಮಾತನಾಡಿಸುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಮನಸಲ್ಲೇ ಇವರು ನನಗೇ ಯಾಕೆ ಹೀಗೆ ಹೇಳಿದರು ಎಂದು ಅನಿಸುತ್ತಿದೆ ಎಂದು ಅನುಮಾನಿಸುತ್ತಾಳೆ.
ಸಮರ್ಥ್ ಗೆ ಸತ್ಯ ಗೊತ್ತಾಯ್ತಾ..?
ಸಮರ್ಥ್ ಮತ್ತು ಅಭಿ ಇಬ್ಬರೂ ಸೈಟ್ ವಿಚಾರವಾಗಿ ಮಾತನಾಡಲು ಹೊರಗೆ ಹೋಗಿದ್ದರು. ಮನೆಗೆ ಲೇಟ್ ಆಗಿ ಬಂದರು. ಬಂದವರೇ ಯಾರೋ ಹಣ ಹೆಚ್ಚು ಕೊಟ್ಟು ಪಾರ್ಟಿ ಅನ್ನು ತಮ್ಮ ಕಡೆಗೆ ಮಾಡಿಕೊಂಡಿದ್ದಾರೆ ಎಂಬ ವಿಚಾರವನ್ನು ತಿಳಿಸುತ್ತಾರೆ. ಈ ವಿಚಾರವನ್ನು ಕೇಳಿದ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ಕೇಳಿದ್ದಕ್ಕೆ ಸಮರ್ಥ್ ಶಾರ್ವರಿ ಕಡೆಗೆ ಬೆರಳು ಮಾಡುತ್ತಾನೆ. ಶಾರ್ವರಿ ಶಾಕ್ ಆಗಿದ್ದಾಳೆ. ಅಭಿ ಮತ್ತು ಸಮರ್ಥ್ ಗೆ ಸತ್ಯ ಗೊತ್ತಾಗಿದೆಯಾ ಎಂದು ಗಾಬರಿಯಾಗಿದ್ದಾಳೆ. ನಿಜಕ್ಕೂ ಸಮರ್ಥ್ ಗೆ ಶಾರ್ವರಿ ಆಟ ಗೊತ್ತಾಗಿದೆಯಾ..?


Click it and Unblock the Notifications











