ಮದುವೆ ಮನೆಯಿಂದ ಕಾಣೆಯಾದ ತುಳಸಿ ಮಾಧವನ ಮುಂದೆ ; ಭೇಟಿಯಾಗುತ್ತಾರಾ..? ದೂರವಾಗುತ್ತಾರಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮದುವೆ ಮನೆಯಿಂದ ಕಾಣೆಯಾಗಿದ್ದಾಳೆ. ಯಾರಿಗೂ ಹೇಳದಂತೆ ತುಳಸಿ ಎಲ್ಲರಿಂದ ದೂರ ಹೋಗಿದ್ದಾಳೆ. ಮನೆಯವರೆಲ್ಲರೂ ತುಳಸಿ ಕಾಣದೇ ಇರುವುದಕ್ಕೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಮರಳಿ ಮದುವೆ ನಡೆದ ಸ್ಥಳಕ್ಕೆ ಹೋಗಿ ಹುಡುಕಿದರೆ ಎಲ್ಲೂ ತುಳಸಿ ಕಾಣಿಸುತ್ತಿಲ್ಲ. ಅಲ್ಲದೇ, ತುಳಸಿ ಮದುವೆ ಮನೆಯಿಂದ ಒಬ್ಬಳೇ ಹೋದದ್ದನ್ನು ಕೆಲಸದವರು ನೋಡಿದ್ದು, ಇದನ್ನು ಎಲ್ಲರಿಗೂ ಹೇಳುತ್ತಾರೆ. ಈಗ ಸಮರ್ಥ್ ಮತ್ತು ಮಾಧವ್ ತುಳಸಿಯನ್ನು ಹುಡುಕುತ್ತಿದ್ದಾರೆ.

ಆತಂಕದಲ್ಲಿರುವ ಮನೆಯವರು

ಎಷ್ಟೊತ್ತಾದರೂ ತುಳಸಿ ಸಿಗದೇ ಇರುವುದಕ್ಕೆ ಎಲ್ಲರೂ ಗಾಬರಿಯಾಗಿದ್ದಾರೆ. ದತ್ತ ತಾತ ತಮ್ಮ ಮನೆಗೇನಾದರೂ ಬಂದಿರಬಹುದು ಎಂದು ಹೊರಡುತ್ತಾರೆ. ಅಲ್ಲೂ ಕೂಡ ತುಳಸಿ ಬಾರದೇ ಇರುವುದನ್ನು ಕಂಡು ದತ್ತ ತಾತನಿಗೆ ಚಿಂತೆ ಶುರುವಾಗುತ್ತದೆ. ತುಳಸಿ ಜೀವನ ಚೆನ್ನಾಗಿರಲಿ ಎಂದು ಈ ಮದುವೆ ಮಾಡಿದೆ. ಆದರೆ, ಈ ಮದುವೆ ಮಾಡಿ ತಪ್ಪು ಮಾಡಿದೆನಾ. ತುಳಸಿಗೆ ಅಲ್ಲಿ ಅಷ್ಟು ಕಷ್ಟವಾಗುತ್ತಿತ್ತಾ ಅದಕ್ಕೆ ಮನೆ ಬಿಟ್ಟು ಹೋದಳಾ ಎಂದು ಗಾಬರಿಯಾಗಿದ್ದಾರೆ. ಅಲ್ಲದೇ, ಸಮರ್ಥ್ ಬೇರೆ ತುಳಸಿ ಅಮ್ಮನ ಮೇಲೆ ಯಾರೋ ಸಂಚು ಮಾಡಿದ್ದಾರೆ. ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಅದರ ಬಗ್ಗೆ ಮಾತನಾಡಿರುವುದನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದು ಎಲ್ಲರ ಬಳಿ ಹೇಳಿದ್ದಾನೆ. ಇದೆಲ್ಲವೂ ಕೂಡ ಮನೆಯವರಲ್ಲಿನ ಆತಂಕವನ್ನ ಹೆಚ್ಚಿಸಿದೆ.

Srirasthu shubhamasthu serial 06 February episode written update

ಹಠ ಮಾಡುತ್ತಿರುವ ದೀಪಿಕಾ

ದೀಪಿಕಾ, ಮಾಧವ್ ಹಾಗೂ ತುಳಸಿ ಬದುಕಿನಲ್ಲಿ ಆಟವಾಡಲೆಂದೇ ಈ ಮದುವೆಯಾಗುತ್ತಿದ್ದೇನೆ ಎಂದು ಜನಾರ್ಧನ್ ಬಳಿ ತನ್ನ ದ್ವೇಷದ ಬಗ್ಗೆ ಹೇಳಿಕೊಂಡಿದ್ದಳು. ಈ ಮಾತನ್ನು ಕೇಳಿದ ಶಾರ್ವರಿಗೆ ಖುಷಿಯಾಗಿತ್ತು. ಆದರೆ, ಈಗ ದೀಪಿಕಾ, ತುಳಸಿ ಬರುವವರೆಗೂ ಮನೆಯ ಒಳಗಡೆ ಬರುವುದಿಲ್ಲ ಎಂದು ಹಠ ಮಾಡುತ್ತಿದ್ದಾಳೆ. ಊಟ ಮಾಡದೇ, ಜ್ಯೂಸ್ ಕೂಡ ಕುಡಿಯದೆಯೇ ತಾನು ತುಳಸಿ ಅಮ್ಮನನ್ನು ನೋಡಲೇ ಬೇಕು ಎಂದು ಕೊರಗುತ್ತಿದ್ದಾಳೆ. ದೀಪಿಕಾ ನಡೆದುಕೊಳ್ಳುತ್ತಿರುವುದನ್ನು ನೋಡಿದ ಶಾರ್ವರಿಗೆ ಅವಳ ಮೇಲೆ ಕೋಪ ಬರುತ್ತಿದೆ. ಆದರೂ ಏನೂ ಮಾಡಲಾಗದೇ ಸುಮ್ಮನೆ ಇದ್ದಾಳೆ.

ಅನುಮಾನಗೊಂಡ ಪೂರ್ಣಿಮಾ

ಶಾರ್ವರಿ ಮತ್ತು ಜನಾಧನ್ ಪದೇ ಪದೇ ಸೈಡ್ ಗೆ ಹೋಗಿ ಮಾತನಾಡುತ್ತಿದ್ದಾರೆ. ಇಬ್ಬರಿಗೂ ದೀಪಿಕಾ ಬಗ್ಗೆ ಅನುಮಾನ ಉಂಟಾಗಿದ್ದು, ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂಬುದು ಅರ್ಥವಾಗುತ್ತಿಲ್ಲ. ಮತ್ತೊಂದು ಕಡೆ ತಾವಿಬ್ಬರೂ ತುಳಸಿ ಬಗ್ಗೆ ಮಾತನಾಡಿರುವುದನ್ನು ಸಮರ್ಥ್ ಕೇಳಿಸಿಕೊಂಡಿದ್ದಾನೆ. ಇದರಿಂದ ಏನಾದರೂ ಅಪಾಯವಾಗಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಪೂರ್ಣಿಮಾ ಬಂದಿದ್ದಾಳೆ. ಪೂರ್ಣಿ ಅನ್ನು ನೋಡುತ್ತಿದ್ದಂತೆ ಶಾರ್ವರಿ ತನ್ನ ಮಾತನ್ನು ಬದಲಿಸಿದ್ದಾಳೆ. ಜನಾರ್ಧನ್ ಮತ್ತು ಶಾರ್ವರಿಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಪೂರ್ಣಿಗೆ ಅನುಮಾನ ಶುರುವಾಗಿದೆ. ಇವರಿಬ್ಬರೂ ಏನೋ ಮಾಡುತ್ತಿದ್ದಾರೆ. ಆದರೆ, ಅದು ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಮನದಲ್ಲಿಯೇ ಯೋಚಿಸುತ್ತಿದ್ದಾಳೆ.

Srirasthu shubhamasthu serial 06 February episode written update

ಪಕ್ಕದಲ್ಲೇ ಇರುವ ತುಳಸಿ ಸಿಗುತ್ತಾಳಾ..?

ಸಮರ್ಥ್ ಹಾಗೂ ಮಾಧವ್ ಒಟ್ಟಿಗೆ ತುಳಸಿಯನ್ನು ಹುಡುಕುತ್ತಿದ್ದು, ಇತ್ತ ಅವಿ ಕೂಡ ಹುಡುಕಲು ಆಗಮಿಸಿದ್ದಾನೆ. ಮಾಧವ್ ಗೆ ಪೊಲೀಸರು ಫೊನ್ ಮಾಡಿ ತುಳಸಿ ದೇವಸ್ಥಾನದ ಕಡೆಗೆ ಹೋಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಈ ವಿಚಾರ ತಿಳಿದ ಮಾಧವ್ ದೇವಸ್ಥಾನಕ್ಕೆ ಹೋಗಿದ್ದು, ತುಳಸಿ ಫೋಟೋ ತೋರಿಸಿ, ನಾಲ್ಕಾರು ಜನರನ್ನು ವಿಚಾರಿಸಿದ್ದಾಳೆ. ಎಲ್ಲರೂ ತುಳಸಿ ದೇವಸ್ಥಾನದಲ್ಲಿರುವುದನ್ನು ಖಚಿತಪಡಿಸಿದ್ದಾರೆ. ತುಳಸಿ ಮತ್ತು ಮಾಧವ್ ಗೋಪುರದ ಹಿಂದೆ ಮುಂದೆಯೇ ಇದ್ದು, ತುಳಸಿ ಮಾಧವ್‌ನನ್ನು ಗಮನಿಸಿದ್ದಾಳೆ. ಮಾಧವ್ ತುಳಸಿಯನ್ನು ನೋಡಿ ಮನೆಗೆ ಕರೆದುಕೊಂಡು ಹೋಗುತ್ತಾನಾ..? ಇಲ್ಲವೇ ತುಳಸಿ ಮಾಧವ್ ಮನೆಯವರ ಖುಷಿಗಾಗಿ ಅಲ್ಲಿಂದ ದೂರ ಹೋಗುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
madhav comes to temple. Will he sees tulasi and takes her back home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X