Srirasthu Shubhamasthu ; ಪೂರ್ಣಿಮಾಳನ್ನು ಕೆಣಕಿದ ದೀಪಿಕಾ ಕೊನೆಗೆ ತಾನೇ ಕ್ಷಮೆ ಕೇಳಿದ್ಯಾಕೆ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜುಗ್ಗ ಮಾವ ಹಾಗೂ ಸಂಧ್ಯ ಇಬ್ಬರು ಸೇರಿಕೊಂಡು ಹೊಸ ಪ್ಲಾನ್ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಕೆಲಸ ಮಾಡಲು ಲೆಕ್ಕಾಚಾರ ಹಾಕಿದ್ದಾರೆ. ದತ್ತ ತಾತ ಬದುಕಿರುವಾಗಲೇ ಅವರ ಡೆತ್ ಸರ್ಟಿಫಿಕೇಟ್ ಮಾಡಿಸಲು ಮುಂದಾಗಿದ್ದಾರೆ. ಡೆತ್ ಸರ್ಟಿಫಿಕೇಟ್ ಬಳಸಿಕೊಂಡು ಸಂಧ್ಯಾ ಹೆಸರಿಗೆ ಮನೆಯನ್ನು ಬರೆಸಬೇಕು. ಆ ನಂತರ ಅದರ ಮೂಲಕ ಮನೆ ಮೇಲೆ ಲೋನ್ ತೆಗೆದುಕೊಂಡು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಬೇಕು. ಲಾಭವನ್ನು ಗಳಿಸಿ ಬೇಗನೇ ಶ್ರೀಮಂತರಾಗೇಕು ಎಂದು ಕೊಂಡಿದ್ದಾರೆ.
ಮಹೇಶನ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಶಾರ್ವರಿ
ಮಹೇಶ ಇವತ್ತು ಶಾರ್ವರಿ ಬಾಯಿಂದಲೇ ತಾನೇ ಸುಮತಿ ಅತ್ತಿಗೆಯನ್ನು ಕೊಂದಿದ್ದು ಎಂಬ ಸತ್ಯ ಹೇಳಿಸಬೇಕು. ಅವಳನ್ನು ಈ ಮನೆಯಿಂದಲೇ ಹೊರಗೆ ಹಾಕಬೇಕು. ಶಾರ್ವರಿಯ ನಿಜವಾದ ಬಣ್ಣವನ್ನು ಮನೆಯವರಿಗೆಲ್ಲಾ ತೋರಿಸಬೇಕು ಎಂದುಕೊಂಡಿದ್ದ. ಆದರೆ, ಅವನ ಲೆಕ್ಕಾಚಾರವನ್ನೆಲ್ಲಾ ಶಾರ್ವರಿ ಉಲ್ಟಾ ಮಾಡಿದ್ದಾಳೆ. ತುಳಸಿಗೆ ಉಸಿರು ಕಟ್ಟುವಂತೆ ಮಾಡಿದ್ದಾಳೆ. ತುಳಸಿಗೆ ಸಮಸ್ಯೆ ಆದ್ದರಿಂದ ಮಾಧವ್ ದೆಹಲಿಗೆ ಹೋಗಲು ಆಗಲಿಲ್ಲ. ಶಾರ್ವರಿಯೇ ಈಗ ದೆಹಲಿಗೆ ಹೊರಟಿದ್ದಾಳೆ. ಹೊರಡುವ ಮುನ್ನ ಮಹೇಶನಿಗೆ ತನ್ನ ನಿಜವಾದ ಬಣ್ಣವನ್ನು ತೋರಿಸಿದ್ದಾಳೆ.

ಶಾರ್ವರಿ ಆಟ ಶುರು ಮಾಡಿದ್ದಾಯ್ತು..?
ಇದೆಲ್ಲವೂ ತಾನಾಗಿಯೇ ಆಗಿಲ್ಲ. ನಾನೇ ಬೇಕಂತಲೇ ಮಾಡಿದ್ದು, ನಿಮಗೆ ನಿಮ್ಮ ಅತ್ತಿಗೆ ತುಳಸಿ ಪ್ರಾಣ ಮುಖ್ಯ ಎಂದರೆ, ನನ್ನನ್ನು ನನ್ನ ಪಾಡಿಗೆ ಇರಲು ಬಿಟ್ಟು ಬಿಡಿ. ಇಲ್ಲದೇ ಹೋದರೆ ಈ ಮನೆ ಸ್ಮಶಾನ ಆಗುವುದರಲ್ಲಿ ಅನುಮಾನವಿಲ್ಲ. ನನ್ನನ್ನು ಅಷ್ಟು ಸುಲಭ ಎಂದು ಕೊಳ್ಳಬೇಡಿ. ನಾನು ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಕೂಗಾಡುತ್ತಾಳೆ. ನಂತರ ದೆಹಲಿಗೆ ಪ್ರಯಾಣ ಬೆಳೆಸುತ್ತಾಳೆ. ಶಾರ್ವರಿ ಹೋದ ಬಳಿಕ ಮಹೇಶನಿಗೆ ಶಾರ್ವರಿ ಯಾಕೆ ಹೀಗೆ ಮಾಡುತ್ತಿದ್ದಾಳೆ. ಅವಳ ಉದ್ದೇಶವೇನು ಎಂಬ ಅನುಮಾನ ಮೂಡಿದೆ. ಮನೆಯ ಕೆಲಸದವರನ್ನೆಲ್ಲಾ ಕರೆಸಿ ವಿಚಾರಣೆ ಮಾಡಿದ್ದಾನೆ. ಆದರೂ ಯಾವುದೇ ಉತ್ತರ ಸಿಕ್ಕಿಲ್ಲ.
ಮಾತನ್ನೇ ಬದಲಿಸಿದ ದೀಪಿಕಾ
ಇತ್ತ ದೀಪಿಕಾ ಬೇಕಂತಲೇ ಪೂರ್ಣಿಮಾಳನ್ನು ಮತ್ತೆ ಕೆಣಕಿದ್ದಾಳೆ. ಸುಮ್ಮನೆ ಕುಳಿತಿದ್ದ ಪೂರ್ಣಿಮಾ ಬಳಿ ಹೋಗಿ ತುಳಸಿ ಅಮ್ಮ ಜೊತೆಗೆ ಇದ್ದದ್ದು ನೀನೆ, ಅವರಿಗೆ ಏನಾಯ್ತು. ಈ ಮನೆಯನ್ನು ನಾಶ ಮಾಡಲು ಮುಂದಾಗಿದ್ದೀಯಾ. ನಿನ್ನಿಂದಲೇ ತುಳಸಿ ಅಮ್ಮನಿಗೆ ಸಮಸ್ಯೆ ಆಗಿದ್ದು, ನೀನು ನಕ್ಷತ್ರಾ, ಜಾತಕ ಗೊತ್ತಿಲ್ಲದ ಅನಾಥೆ. ನಿನ್ನ ದರಿದ್ರದಿಂದ ಈ ಮನೆಯಲ್ಲಿ ಇನ್ನೂ ಏನೇನು ನಡೆಯುತ್ತದೋ ಎಂದು ಹೇಳುತ್ತಾಳೆ. ಆಗ ಪೂರ್ಣಿಮಾ ತನ್ನ ತಾಳ್ಮೆಯನ್ನು ಕಳೆದುಕೊಂಡು ಕೂಗುತ್ತಾಳೆ. ಪೂರ್ಣಿಮಾ ಧ್ವನಿ ಕೇಳಿ ಅಭಿ ಹಾಗೂ ಅವಿಬರುತ್ತಾರೆ. ಆಗ ದೀಪಿಕಾ ಕಣ್ಣಿರು ಹಾಕಿಕೊಂಡು ಆರೋಪ ಮಾಡುತ್ತಾಳೆ. ಪೂರ್ಣಿಮಾಳ ಮೇಲೆ ಗೂಬೆ ಕೂರಿಸುತ್ತಾಳೆ. ಬಳಿಕ ತುಂಬು ಕುಟುಂಬದಿಂದ ಬಂದಿದ್ದರೆ ಗೊತ್ತಾಗುತ್ತಿತ್ತು ಎನ್ನುತ್ತಾಳೆ. ಈ ಮಾತಿನಿಂದ ಅಭಿ ದೀಪಿಕಾ ಮೇಲೆ ಕೂಗಾಡುತ್ತಾನೆ.

ಅಮ್ಮನ ಬಗ್ಗೆ ತಲೆ ಕೆಡಿಸಿಕೊಂಡ ಸಮರ್ಥ್
ಇನ್ನು ಅಮ್ಮನಿಗೆ ಹುಷಾರಿಲ್ಲ ಎಂದು ತಿಳಿದು ನೋಡಲು ಬಂದ ಸಮರ್ಥ್ ಗೆ ಶಾಕ್ ಕಾದಿತ್ತು. ಅವಿ ತುಳಸಿಗೆ ಊಟ ಮಾಡಿಸುವುದನ್ನು ನೋಡಿ ಆತಂಕ ಪಟ್ಟುಕೊಂಡ. ಅಷ್ಟೇ ಅಲ್ಲದೇ, ಶಾರ್ವರಿ ಬೇಕಂತಲೇ ತುಳಸಿ ಹಾಗೂ ಸಮರ್ಥ್ ನಡುವೆ ಕಿಚ್ಚು ಹತ್ತಿಸಿದ್ದಾಳೆ. ಇದರಿಂದ ಸಮರ್ಥ್ ತುಳಸಿ ಮೇಲೆ ಇನ್ನಷ್ಟು ಕೋಪ ಮಾಡಿಕೊಂಡಿದ್ದಾನೆ. ಇನ್ಮೇಲೆ ತುಳಸಿ ಅಮ್ಮ ನಿಜವಾಗಿಯೂ ತನಗೆ ಮೇಡಂ ಎಂದು ಮನೆಯಲ್ಲಿ ಕೂಗಾಡಿದ್ದಾನೆ


Click it and Unblock the Notifications











