Srirasthu Shubhamasthu: ಮಾಧವ್ ಸಹಾಯಕ್ಕೆ ನಿಂತ ಮಹಿಳಾ ಮಣಿಯರು: ದತ್ತ ತಾತನ ಕೈಯಲ್ಲಿ ಸಿಕ್ಕಿ ಬಿದ್ದ ಶಾರ್ವರಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಶಾರ್ವರಿ ಮತ್ತು ಜನಾರ್ಧನ್ ಇಬ್ಬರೂ ಜೊತೆ ಸೇರಿ ಮಾಧವನ ಮೇಲೆ ಯುದ್ಧ ಸಾರಿದ್ದಾರೆ. ಮಾಧವ್ ಮಗ ಇದೆಲ್ಲಾ ತಿಳಿಯದೆ ಅಪ್ಪನ ಕೆಫೆ ಮೇಲೆ ಕಣ್ಣು ಹಾಕಿದ್ದಾನೆ. ಮಾಧವನಿಗೆ ನೆಮ್ಮದಿ ಕೊಡುತ್ತಿರುವ ಕೆಫೆಯನ್ನು ಅಂತ್ಯಗೊಳಿಸಬೇಕು ಎಂದು ಅಲ್ಲಿ ಪಬ್ ಮಾಡುವಂತೆ ಜನಾರ್ಧನ್ ಅಭಿಗೆ ಐಡಿಯಾ ಕೊಟ್ಟಿದ್ದಾನೆ. ಅಭಿ ಅಲ್ಲಿ ಪಬ್ ತೆರೆಯಲು ಮುಂದಾಗಿದ್ದಾನೆ.
ಆದರೆ ಇದಕ್ಕೆ ಒಪ್ಪದ ಮಾಧವ್‌ಗೆ ಚಾಲೆಂಜ್ ಒಂದನ್ನು ಹಾಕಿದ್ದಾನೆ. ಜನಾರ್ಧನ್ ಪ್ರಕಾರ ಒಂದು ದಿನದಲ್ಲಿ 3 ಲಕ್ಷ ರೂಪಾಯಿ ವ್ಯಾಪಾರ ಮಾಡಿದರೆ ಅಲ್ಲಿ ಕೆಫೆ ಮುಂದುವರೆಯುತ್ತದೆ. ಇಲ್ಲದೇ ಹೋದಲ್ಲಿ ಪಬ್ ತೆರೆಯಲು ಬಿಡಬೇಕು ಎಂದು ಹೇಳಲಾಗಿದೆ. ಇದಕ್ಕೆ ಮಾಧವನೂ ಒಪ್ಪಿಕೊಂಡಿದ್ದು, ಈಗ ಕೆಫೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆಹಾರ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಐಡಿಯಾ ಕೂಡ ಅವಿ, ಪೂರ್ಣಿಮಾಗೆ ನೀಡಿದ್ದಾನೆ. ಈಗಾಗಲೇ ಎಲ್ಲಾ ಕಡೆ ಪ್ರೋಮೋ ಹೋಗಿದ್ದು, ಮಾಧವನಿಗೆ ಆಹಾರ ಮೇಳ ನಡೆಸಲು ಯಾರೂ ಕೆಲಸದವರೇ ಇಲ್ಲದಂತಾಗಿದೆ. ಜನಾರ್ಧನ್ ಬೇಕಂತಲೇ ಕೆಲಸದವರಿಗೆ ಹಣ ಕೊಟ್ಟು ಕೂಡಿ ಹಾಕಿಸಿದ್ದಾನೆ. ಮಾಧವ ಈ ಚಾಲೆಂಜ್‌ನಲ್ಲಿ ಸೋಲಬೇಕು ಎಂದು ಹೀಗೆ ಮಾಡಿದ್ದಾನೆ. ಆದರೆ, ಮಾಧವನ ಸಹಾಯಕ್ಕೆ ಅವನ ಸ್ನೇಹಿತರೇ ಸಾಥ್ ಕೊಟ್ಟಿದ್ದಾರೆ. ಸಿರಿ, ತುಳಸಿ ಹಾಗೂ ತುಳಸಿ ಕಡೆಯವರೆಲ್ಲರೂ ಅಡುಗೆ ಮಾಡಲು ಕೆಫೆಗೆ ಆಗಮಿಸಿದ್ದಾರೆ.
ಮಾಧವನಿಗೆ ಸಹಾಯ ಕೇಳದೇ, ಎಲ್ಲರೂ ಬಂದಿರುವುದು ಖುಷಿಯಾಗಿದೆ. ಸಿರಿ ಕೂಡ ಸೋಶಿಯಲ್ ಮೀಡಿಯಾ ಮೂಲಕ ಪ್ರಮೋಟ್ ಮಾಡುತ್ತಿದ್ದಾಳೆ. ಸೋಲುತ್ತೇವೆ ಎಂದುಕೊಂಡಿದ್ದ ಪೂರ್ಣಿ ಮತ್ತು ಮಾಧವ್‌ಗೆ ಈಗ ಗೆಲ್ಲುವ ಭರವಸೆ ಬಂದಿದೆ. ಇತ್ತ ಅವಿಗೆ ಜನಾರ್ಧನ್ ಮಾಡಿರುವ ಎಲ್ಲಾ ಕುತಂತ್ರ ಕೆಲಸವೂ ಗೊತ್ತಾಗಿದೆ. ತನಗೇ ಗೊತ್ತಿಲ್ಲದ ಹಾಗೆ ಅವಿ, ಮಾಧವ್‌ಗೆ ಸಹಾಯ ಮಾಡಲು ನಿಂತಿದ್ದಾನೆ. ಪೂರ್ಣಿಗೆ ಫೋನ್ ಮಾಡಿ ಏನಾದರೂ ಸಹಾಯ ಬೇಕಾ ಎಂದೆಲ್ಲಾ ವಿಚಾರಿಸಿಕೊಂಡಿದ್ದಾನೆ.

ಸರ್ವೇ ಮಾಡಲು ಯಾರು ಇಲ್ಲ ಎನ್ನುವುದನ್ನು ತಿಳಿದು, ಅವಿ ಏನಾದರೂ ಮಾಡೋಣ ಎಂದು ಹೇಳಿದ್ದಾನೆ. ಯಾವುದೇ ಕಾರಣಕ್ಕೂ ಜನಾರ್ಧನ್ ಗೆಲ್ಲಬಾರದು ಎಂದು ಮನದಲ್ಲೇ ತೀರ್ಮಾನ ಮಾಡಿದ್ದಾನೆ. ಇತ್ತ ತುಳಸಿ ಹಾಗೂ ತನ್ನ ಕಡೆಯವರೆಲ್ಲಾ ಪಿಜ್ಜಾ, ಬರ್ಗರ್ ಮಾಡಲು ಆಗದೇ, ಒದ್ದಾಡುತ್ತಿದ್ದಾರೆ. ತುಳಸಿ ನಮಗೆ ಬೇಡದ ಅಡುಗೆಯನ್ನು ಮಾಡುವುದು ಬೇಡ. ಗೊತ್ತಿರುವ ಅಡುಗೆಯನ್ನೇ ಮಾಡೋಣ ಎಂದು ಹೇಳಿದ್ದಾಳೆ. ಇದಕ್ಕೆ ಸಿರಿ ಕೂಡ ಒಪ್ಪಿಗೆ ನೀಡಿದ್ದಾಳೆ.
ಒಟ್ನಲ್ಲಿ ಎಲ್ಲರೂ ಸೇರಿ ಆಹಾರ ಮೇಳ ಸಕ್ಸಸ್ ಆಗಬೇಕು ಎಂದು ಒಟ್ಟಿಗೆ ಕೈ ಜೋಡಿಸಿದ್ದಾರೆ. ಶಾರ್ವರಿ, ಅಭಿ ಹಾಗೂ ಜನಾರ್ಧನ್ ಹೊರತು ಪಡಿಸಿ ಎಲ್ಲರೂ ಆಹಾರ ಮೇಳ ಗೆಲ್ಲಲಿ ಎಂದೇ ಬಯಸಿದ್ದಾರೆ. ಈ ನಡುವೆ ದತ್ತ ತಾತ ಟಿವಿಯಲ್ಲಿ ಮಕ್ಕಳ ಕಳ್ಳರ ಬಗ್ಗೆ ಕ್ರೈಂ ಸ್ಟೋರಿ ನೋಡಿದ್ದಾನೆ. ಇದೇ ವೇಳೆಗೆ ತುಳಸಿಯ ಬಗ್ಗೆ ತಿಳಿದುಕೊಳ್ಳಲು ಶಾರ್ವರಿ ಮನೆಗೆ ಬಂದಿದ್ದಾಳೆ. ದತ್ತ ತಾತನಿಗೆ ಅವಳು ಮಕ್ಕಳ ಕಳ್ಳಿ ಇರಬೇಕು ಎಂದು ಅನುಮಾನ ಬಂದಿದೆ.

ಶಾರ್ವರಿ ಸರ್ವೇ ಮಾಡುವ ನೆಪದಲ್ಲಿ ಬಂದಿದ್ದಾಳೆ. ಆದರೆ, ದತ್ತ ತಾತನಿಗೆ ಶಾರ್ವರಿ ಮೇಲೆ ನಂಬಿಕೆ ಬಂದಿಲ್ಲ. ಹೀಗಾಗಿ ಪೊಲೀಸರಿಗೆ ಹಿಡಿದುಕೊಡಲು ಪ್ಲ್ಯಾನ್ ಮಾಡಿದ್ದಾರೆ. ದತ್ತ ತಾತ, ಶಾರ್ವರಿಯನ್ನು ಪೊಲೀಸರಿಗೆ ಹಿಡಿದುಕೊಡುತ್ತಾನಾ..? ಮಾಧವ್‌ನನ್ನು ಎಲ್ಲರೂ ಸೇರಿ ಗೆಲ್ಲಿಸುತ್ತಾರಾ..? ಎಂದು ಕಾದು ನೋಡಬೇಕಿದೆ.


Click it and Unblock the Notifications











