Srirasthu Shubhamasthu ; ಅಭಿಯನ್ನು ಸಮಾಧಾನ ಪಡಿಸಿದ ಶಾರ್ವರಿ : ಚಿಕ್ಕಿ ಮಾತನ್ನು ಕೇಳಿದ ಮಗ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮನೆಯವರ ಯಾರ ಮಾತನ್ನು ಕೇಳುತ್ತಿಲ್ಲ. ತುಳಸಿಗಂತೂ ಮನೆ ಬಿಟ್ಟು ಹೋಗಿ, ನಿಮ್ಮಿಂದಲೇ ನಮ್ಮ ಸಂಸಾರ ಹಾಳಾಗಿದ್ದು ಎಂದಿದ್ದಾನೆ.ಅಭಿ ಮಾತನ್ನು ಕೇಳಿದ ತುಳಸಿಗೆ ದಿಕ್ಕೇ ತೋಷದಂತಾಗಿದೆ. ಏನು ಮಾಡಬೇಕು ಎಂಬುದು ಅರ್ಥವಾಗದೇ ದತ್ತ ಮಾವನಿಗೆ ಫೋನ್ ಮಾಡಿದ್ದಾಳೆ.ನನಗೆ ನಿಮ್ಮ ಮನೆಯಲ್ಲಿ ಇರಲು ಅವಕಾಶ ಇದೆಯಾ ಎಂದು ಕೇಳಿದ್ದಾಳೆ.ಸತ್ಯ ಅರಿಯದ ದತ್ತ ತಾತ ಬಾ ನಾಲ್ಕು ದಿನ ಇದ್ದು ಹೋಗು, ಇದು ನಿನ್ನ ತವರು ಮನೆ ಎಂದಿದ್ದಾರೆ.

ಮಾವನ ಬಳಿ ದುಃಖ ಹೇಳಿಕೊಂಡ ತುಳಸಿ

ಆದರೆ, ಮನೆಗೆ ಬಂದ ಸಮರ್ಥ್ ದತ್ತ ತಾತನ ಬಳಿ ಅಭಿ ನಡೆದುಕೊಳ್ಳುತ್ತಿರುವ ವಿಚಾರವನ್ನು ಹೇಳಿದ್ದಾನೆ. ಆ ಮನೆಯನ್ನು ಭಾಗ ಮಾಡಲು ಅಭಿ ಹೊರಟಿದ್ದಾನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ದತ್ತ ತಾತನಿಗೆ ಬೇಸರವಾಗುತ್ತದೆ. ಕೂಡಲೇ ತುಳಸಿಗೆ ಫೋನ್ ಮಾಡಿ ವಿಚಾರಿಸುತ್ತಾನೆ. ಆಗ ತುಳಸಿ ಹೌದು ಎಂದು ಸತ್ಯ ಒಪ್ಪಿಕೊಳ್ಳುತ್ತಾಳೆ. ದತ್ತ ತಾತ ಅವನಿಗೆ ಇನ್ನೂ ಬುದ್ಧಿ ಇಲ್ಲ. ಸ್ವಲ್ಪ ದಿನ ಎಲ್ಲವೂ ಸರಿ ಹೋಗುತ್ತೆ.ನೀನು ಬೇಸರ ಮಾಡಿಕೊಳ್ಳಬೇಡ ಎಂದು ಸಮಾಧಾನ ಹೇಳುತ್ತಾರೆ. ತುಳಸಿಗೂ ಮಾವನ ಸಮಾಧಾನದ ಮಾತುಗಳು ಕೊಂಚ ನೆಮ್ಮದಿಯನ್ನು ತಂದುಕೊಡುತ್ತದೆ.

srirasthu-shubhamasthu-serial-07-june-episode-written-update

ಅಭಿಗೆ ಸಮಾಧಾನ ಮಾಡಲು ಯತ್ನಿಸಿದ ಮಾಧವ್

ಮಾಧವ್ ಮತ್ತು ತುಳಸಿ ಇಬ್ಬರೂ ಸೇರಿ ಅಭಿಗೆ ಹೇಗಾದರೂ ಮಾಡಿ ಸಮಾಧಾನ ಮಾಡಬೇಕು. ಮನೆ ಎರಡು ಭಾಗ ಆಗದಂತೆ ನೋಡಿಕೊಳ್ಳಬೇಕು ಎಂದು ಅಭಿ ಬಳಿ ಮಾತನಾಡಲು ಯತ್ನಿಸುತ್ತಾರೆ. ಆದರೆ, ಮಾಧವ್ ಮತ್ತು ತುಳಸಿಗೆ ಮಾತನಾಡಲು ಅಭಿ ಅವಕಾಶವನ್ನೇ ಕೊಡುವುದಿಲ್ಲ. ಮನೆ ಭಾಗ ಕೇಳಿದ್ದಕ್ಕೆ ಹಿಂದೆ ಕೋಪ ಮಾಡಿಕೊಳ್ಳುತ್ತಾನೆ.

ಅಭಿ ನಿರ್ಧಾರದ ಬಗ್ಗೆ ಭರವಸೆ ಕೊಟ್ಟ ಶಾರ್ವರಿ

ಅಭಿ ನೇರವಾಗಿ ಶಾರ್ವರಿ ಬಳಿ ಹೋಗಿ ಕೇಳುತ್ತಾನೆ. ಚಿಕ್ಕಮ್ಮ ನಾನು ಮಾಡಿರುವ ನಿರ್ಧಾರದಲ್ಲಿ ತಪ್ಪೇನಿದೆ ಎಂದು ಹೇಳಿ,ಎಲ್ಲರೂ ಮಾತನಾಡುತ್ತಿರುವುದನ್ನು ಕೇಳಿದರೆ,ನನ್ನ ನಿರ್ಧಾರ ತಪ್ಪು ಎನಿಸುತ್ತಿದೆ.ಮನೆ ಭಾಗವಾದರೆ,ದೊಡ್ಡ ಸಮಸ್ಯೆ ಆಗುತ್ತದೆ ಎನಿಸುತ್ತಿದೆ ಎಂದು ಕೇಳುತ್ತಾನೆ. ಶಾರ್ವರಿ ನಯವಾಗಿ ಭೇಕಂತಲೇ ನಿನ್ನ ನಿರ್ಧಾರ ಸರಿ ಇದೆ. ಅವರೆಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ಮೂಗಿಗೆ ತುಪ್ಪ ಸವರುತ್ತಿರುತ್ತಾಳೆ ಆ ವೇಳೆಗೆ ಮಾಧವ್ ಮತ್ತು ತುಳಸಿ ಅಲ್ಲಿಗೆ ಬರುತ್ತಾರೆ. ಸದ್ಯ ಇಬ್ಬರೂ ಶಾರ್ವರಿ ಮಾತನ್ನು ಕೇಳಿಸಿಕೊಂಡಿರುವುದಿಲ್ಲ. ಅಭಿ ಅಲ್ಲಿಂದಲೂ ಹೊರಟು ಬಿಡುತ್ತಾನೆ.

srirasthu-shubhamasthu-serial-07-june-episode-written-update

ಚಿಕ್ಕಮ್ಮನ ಮಾತು ಕೇಳಿದ ಅಭಿಲಾಶ್

ಆಗ ಮಾಧವ್ ಮತ್ತು ತುಳಸಿ ಅಭಿಗೆ ನೀವೇ ಬುದ್ಧಿ ಹೇಳಬೇಕು ಶಾರ್ವರಿ. ಅವನು ನಿಮ್ಮ ಮಾತನ್ನು ಕೇಳುತ್ತಾನೆ ಎಂದು ಹೇಳುತ್ತಾರೆ. ಈ ನಡುವೆ ತನ್ನದೂ ಒಂದು ಮಾತಿರಲಿ ಎಂದು ದೀಪಿಕಾ ನನಗೂ ಮನೆ ಭಾಗ ಆಗುವುದು ಇಷ್ಟವಿಲ್ಲ. ಅತ್ತೆ ನಿಮ್ಮ ಮಾತನ್ನು ಕೇಳುತ್ತಾರೆ ಎಂದು ಶಾರ್ವರಿಗೆ ಹೇಳಿ ಅಭಿಯನ್ನು ಕರೆತರುತ್ತಾಳೆ. ಅಭಿಯನ್ನು ಕರೆದುಕೊಂಡು ಬರುವಾಗ ಶಾರ್ವರಿ ಅತ್ತೆ ಸದ್ಯ ಮನೆಯವರ ಪರ ಮಾತನಾಡುತ್ತಾರೆ ಎಂದು ಬುದ್ಧಿ ಹೇಳಿ ಕರೆದುಕೊಂಡು ಬರುತ್ತಾಳೆ. ಆಗ ಶಾರ್ವರಿ ಅಭಿಗೆ ಬುದ್ಧಿ ಹೇಳುತ್ತಾಳೆ. ಮಾಧವ್ ಕೂಡ ಕಂಪನಿ ಆನಿವರ್ಸರಿ ಮುಗಿಯುವವರೆಗೂ ಸುಮ್ಮನಿರರರು ಎಂದು ಹೇಳುತ್ತಾರೆ. ಅಭಿ ಅದಕ್ಕೆ ಒಪ್ಪುತ್ತಾನೆ.

More from Filmibeat

English summary
Everyone consoles Abhi not to share property until company anniversary gets over
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X