Srirastu Shubhamastu ; ಗರ್ಭಿಣಿ ಅಲ್ಲದಿದ್ದರೂ ದುರಹಂಕಾರದ ಮಾತುಗಳನ್ನಾಡಿದ ಸಂಧ್ಯಾ, ಗ್ರಹಚಾರ ಬಿಡಿಸುತ್ತಾಳಾ ತುಳಸಿ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಅಂತೂ ಇಂತೂ ಹಠ ಮಾಡಿ ತನ್ನ ಕಾರ್ಯ ಸಾಧಿಸಿಕೊಂಡಿದ್ದಾಳೆ. ಮಾಧವ ಮನೆಯಲ್ಲೇ ಸಂಧ್ಯಾ ಸೀಮಂತವನ್ನು ಮಾಡಿಸಿಕೊಳ್ಳುತ್ತಿದ್ದಾಳೆ. ಆದರೆ, ಸೀರೆಯನ್ನು ಅವಳೇ ಉಟ್ಟುಕೊಂಡಿದ್ದು. ಹೊಟ್ಟೆಗೆ ಬಿಗಿಯಾಗಿ ಕಟ್ಟಿಕೊಂಡಿದ್ದಾಳೆ.
ಇದು ತುಳಸಿಗೆ ಗಾಬರಿ ಹುಟ್ಟಿಸಿದೆ. ಮಗುವಿಗೆ ತೊಂದರೆ ಆಗುತ್ತದೆ. ಎಂದರೂ ಮುಟ್ಟಿಸಿಕೊಳ್ಳುತ್ತಿಲ್ಲ. ಸಂಧ್ಯಾಳ ಈ ನಡವಳಿಕೆ ದೀಪಿಕಾಳಲ್ಲಿ ಅನುಮಾನವನ್ನು ಮೂಡಿಸಿದೆ. ಸಂಧ್ಯಾ ಬಳಿ ಏನೋ ಗುಟ್ಟಿದೆ ಎಂಬುದನ್ನು ಅರಿತು ಕದ್ದು ಮಾತು ಕೇಳಿಸಿಕೊಳ್ಳುತ್ತಿದ್ದಾಳೆ.

ಬತ್ತಿ ಹಚ್ಚಲು ಮುಂದಾದ ದೀಪಿಕಾ
ಸಂಧ್ಯಾ ಸೀರೆ ಸರಿ ಮಾಡಿಕೊಳ್ಳುವಾಗ ಬಲವಂತವಾಗಿ ಹೋಗುವ ತುಳಸಿಗೆ ಮಗಳು ಗರ್ಭಿಣಿಯೇ ಅಲ್ಲ ಎಂಬ ಸತ್ಯ ಗೊತ್ತಾಗಿದೆ. ಇದನ್ನು ಎಲ್ಲರಿಗೂ ಹೇಳುತ್ತೇನೆ ಎಂದಾಗ ಸಂಧ್ಯಾ ಭಾಷೆ ತೆಗೆದುಕೊಂಡಿದ್ದಾಳೆ. ಯಾರಿಗಾದರೂ ಹೇಳಿದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾಳೆ. ಇದರಿಂದ ತುಳಸಿ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಇದೇ ವಿಚಾರವನ್ನು ದೀಪಿಕಾ, ಶಾರ್ವರಿ ಬಳಿ ಹೋಗಿ ಹೇಳಿಕೊಂಡಿದ್ದಾಳೆ.
ಸಂಧ್ಯಾ ಗರ್ಭಿಣಿಯೇ ಅಲ್ಲ ಎಂಬ ಸತ್ಯವನ್ನು ತಿಳಿದ ಶಾರ್ವರಿ ತುಳಸಿ ಹಾಗೂ ಅವಳ ಮನೆಯವರಿಗೆ ಹೇಗೆ ಅವಮಾನ ಮಾಡಬೇಕು. ಯಾವಾಗ ಈ ಸತ್ಯವನ್ನು ಹೊರಗೆ ಹಾಕಬೇಕು ಎಂದು ಐಡಿಯಾ ಮಾಡಿ ದೀಪಿಕಾಳ ಬಳಿ ಮಾತನಾಡಿದ್ದಾಳೆ. ಈಗ ಶಾರ್ವರಿ ಮತ್ತು ದೀಪಿಕಾ ಸೇರಿ ತುಳಸಿ ಮಾನ ತೆಗೆಯಲು ಸಜ್ಜಾಗಿದ್ದಾರೆ.

ದುರಹಂಕಾರದ ಮಾತುಗಳನ್ನಾಡಿದ ಸಂಧ್ಯಾ
ಆದರೆ, ಸಂಧ್ಯಾ ಈಗ ತಾಯಿಯ ಬಾಯಿ ಮುಚ್ಚಿಸಿದ್ದು. ಸೀಮಂತವಾದ ಸ್ವಲ್ಪ ದಿನದಲ್ಲೇ ಅಬಾರ್ಷನ್ ಆಯ್ತು ಎಂದು ಸುಳ್ಳು ಹೇಳಿ ಮ್ಯಾನೇಜ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾಳೆ. ಸಂಧ್ಯಾಳಿಗೆ ತನ್ನ ಹೊಟ್ಟೆಯಲ್ಲಿ ಇಲ್ಲದ ಮಗುವಿನ ಮೇಲೆ ಅತೀಯಾದ ಕಾಳಜಿ ಇದ್ದು, ದುರಹಂಕಾರ ಮೆರೆದಿದ್ದಾಳೆ. ಸಂಧ್ಯಾಳಿಗೆ ಆರತಿ ಮಾಡಲು ಪೂರ್ಣಿಮಾ ಮುಂದಾಗಿದ್ದಕ್ಕೆ.
ಈಗಾಗಲೇ ಅಬಾರ್ಷನ್ ಆಗಿರುವ ಪೂರ್ಣಿಮಾ ನನಗೆ ಆರತಿ ಮಾಡಿದರೆ, ನನ್ನ ಮಗುವಿಗೆ ತೊಂದರೆ ಆಗಲ್ವಾ ಎಂದು ಎಲ್ಲರ ಮುಂದೆ ಪ್ರಶ್ನಿಸಿ ಪೂರ್ಣಿಮಾ ಮನಸ್ಸಿಗೆ ನೋವು ಮಾಡಿದ್ದಾಳೆ. ಇದರಿಂದ ಅವಿ, ಅಭಿ ಕೋಪಗೊಂಡು ಬೈಯುತ್ತಾರೆ. ಮಾಧವ ಎಲ್ಲರನ್ನೂ ಸಮಾಧಾನ ಮಾಡಿ ಸೀಮಂತ ಕಾರ್ಯ ನಡೆಸುತ್ತಾನೆ. ಸಂಧ್ಯಾಳಿಗೆ ಚಿನ್ನದ ಬಳೆಗಳನ್ನು ಉಡುಗೊರೆಯಗಿ ನೀಡಿದ್ದು, ಸಂಧ್ಯಾ ಸೀಮಂತದಲ್ಲಿ ಅರ್ಧ ಕೆಜಿ ಚಿನ್ನವನ್ನು ಗಿಫ್ಟ್ ಆಗಿ ಪಡೆಯುವ ಆಸೆ ಹೊಂದಿದ್ದಾಳೆ.

ದತ್ತ ತಾತನಿಗೆ ಸತ್ಯ ಹೇಳಿದ ತುಳಸಿ
ದತ್ತ ತಾತ ತುಳಸಿ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿದ್ದು. ಸಮಸ್ಯೆ ಬಗ್ಗೆ ಅರಿತುಕೊಂಡಿದ್ದಾನೆ. ತುಳಸಿ ಸಂಧ್ಯಾ ಮನೆಯವರಿಗೆಲ್ಲಾ ಮೋಸ ಮಾಡಿದ್ದಾಳೆ. ಸುಳ್ಳು ಹೇಳಿ ಸೀಮಂತ ಮಾಡಿಸಿಕೊಳ್ಳುತ್ತಿದ್ದಾಳೆ. ಅಸಲಿಗೆ ಸಂಧ್ಯಾ ಗರ್ಭಿಣಿಯೇ ಅಲ್ಲ ಎಂದು ಹೇಳುತ್ತಾಳೆ. ಈಗ ದತ್ತ ತಾತನಿಗೆ ಬೇಸರವಾಗಿದೆ. ಮೊಮ್ಮಗಳು ಸುಳ್ಳು ಹೇಳಿ ಎಲ್ಲರಿಗೂ ಮೋಸ ಮಾಡುತ್ತಿದ್ದಾಳೆ. ಗರ್ಭಿಣಿ ಅಲ್ಲದಿದ್ದರೂ ಹಠ ಮಾಡಿ ಸೀಮಂತ ಮಾಡಿಸಿಕೊಳ್ಳುತ್ತಿರುವುದಕ್ಕೆ ನೊಂದುಕೊಂಡಿದ್ದಾರೆ.
ಮೊಮ್ಮಗಳ ಆಟ ನೋಡಿದ ತಾತನಿಗೆ ಸಂಕಟ
ಮೊಮ್ಮಗಳ ಆಟ ಕಂಡ ದತ್ತ ತಾತನಿಗೆ ಸಂಕಟವಾಗಿದ್ದು, ಸೀಮಂತವನ್ನು ನಿಲ್ಲಿಸಬೇಕು ಎಂದು ತುಳಸಿ ಬಳಿ ಮಾತನಾಡಿದ್ದಾರೆ. ಆದರೆ, ದತ್ತ ತಾತ ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು. ತುಳಸಿ ಮಾನವನ್ನು ಕಾಪಾಡಬೇಕು ಎಂದು ಯೋಚಿಸಿದ್ದಾರೆ. ಆದರೆ, ದೀಪಿಕಾ ಮಾಡಿರುವ ಪ್ಲಾನ್ ಬೇರೆಯೇ ಇದೆ. ಈಗ ಮುಂದೇನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.


Click it and Unblock the Notifications











