Srirasthu Shubhamasthu ; ಪೂರ್ಣಿಮಾ ತಂದೆ ತಾಯಿ ಬಗ್ಗೆ ತುಳಸಿಗೆ ಸತ್ಯಗೊತ್ತಿದ್ದರೂ ಮುಚ್ಚಿಟ್ಟಿದ್ಯಾಕೆ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಭೀಮನ ಅಮಾವಾಸ್ಯೆ ಅನ್ನು ಎರಡೂ ಮನೆಗಳಲ್ಲಿ ನಿಯಮ ನಿಷ್ಠೆಯಿಂದ ಮಾಡಲಾಯ್ತು. ಆದರೆ, ದೀಪಿಕಾ ಬೇಕಂತಲೇ ಸಮಸ್ಯೆ ಅನ್ನು ಸೃಷ್ಟಿಸಿದ್ದಾಳೆ. ತಾನು ಆರತಿ ಮಾಡುವಾಗ ಪೂರ್ಣಿಮಾ ಕೈ ತಗುಲಿಸಿ ತನ್ನನ್ನು ಬೇಕಂತಲೇ ಬೀಳಿಸಿದಳು ಎಂಬಂತೆ ನಟಿಸುತ್ತಾಳೆ. ಇದರಿಂದ ದೀಪಾ ದೀಪಿಕಾ ಅಭಿಗಾಗಿ ತಂದ ಬಟ್ಟೆಯ ಮೇಲೆ ಬೀಳಿಸುತ್ತಾಳೆ. ಬಟ್ಟೆ ಸುಡುವಾಗ ಕೈಯಿಂದ ಆರಿಸಿ, ಕೈಗೆ ಗಾಯವಾಗುವಂತೆ ಮಾಡಿಕೊಳ್ಳುತ್ತಾಳೆ. ಬಳಿಕ ಪೂರ್ಣಿಮಾ ತನ್ನ ಮೇಲಿನ ಹೊಟ್ಟೆ ಉರಿಗೆ ಹಾಗೇ ಮಾಡಿದಳು ಎಂದು ದೂರುತ್ತಾಳೆ.


ಮತ್ತೆ ಅಭಿಗೆ ಕೋಪ ಬರಿಸಿದ ಅವಿನಾಶ್

ಆದರೆ, ಪೂರ್ಣಿಮಾಗೆ ಇದೆಲ್ಲಾ ಹೇಗಾಯ್ತು ಎಂಬುದೇ ಗೊತ್ತಾಗುವುದಿಲ್ಲ. ದೀಪಿಕಾ ಮಾತನ್ನು ನಂಬಿದ ಅಭಿ ಪೂರ್ಣಿಗೆ ಬೈಯುತ್ತಾನೆ. ನಿಮಗೆಲ್ಲಾ ನಾವಿಬ್ಬರು ಇರುವುದು ಇಷ್ಟವಿಲ್ಲ ಎಂದರೆ ಹೇಳಿಬಿಡಿ. ಹೀಗೆಲ್ಲಾ ಮಾಡಬೇಡಿ ಎಂದು ಬೈದು ದೀಪಿಕಾಳನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಎಲ್ಲರೂ ಅಕಸ್ಮಾತ್ ಆಗಿ ಆಗಿರಬಹುದು ಎಂದು ತಿಳಿದು ಕೊಂಚ ಎಚ್ಚರವಾಗಿರು ಎಂದು ಪೂರ್ಣಿಮಾಳಿಗೆ ಬುದ್ಧಿ ಹೇಳುತ್ತಾರೆ. ಇದರಿಂದ ಪೂರ್ಣಿಮಾಳಿಗೆ ಬಹಳ ನೋವಾಗುತ್ತದೆ. ಅಭಿ ಊಟ ಮಾಡದೇ ಆಫೀಸಿಗೆ ಹೋಗಿದ್ದಕ್ಕೆ ತುಳಸಿ ಬಾಕ್ಸ್ ಕೊಟ್ಟು ಕಳಿಸುತ್ತಾಳೆ. ದೀಪಿಕಾ ಊಟ ಕಳಿಸಿರಬೇಕು ಎಂದು ಅಭಿ ಊಟ ಮಾಡುತ್ತಾನೆ. ಬಳಿಕ ಅದನ್ನು ತುಳಸಿ ಕಳಿಸಿದ್ದು ಎಂದು ತಿಳಿದು ಕೋಪ ಮಾಡಿಕೊಳ್ಳುತ್ತಾನೆ. ಅವಿ ರೇಗಿಸಲು ಹೋಗಿ ಅಭಿ ಕೈಯಲ್ಲಿ ಬೈಯಿಸಿಕೊಳ್ಳುತ್ತಾನೆ.

srirasthu-shubhamasthu-serial-08-august-episode-written-update

ಮಗಳಿಗಾಗಿ ಜನಾರ್ಧನ್ ಹುಡುಕಾಟ

ಇತ್ತ ಜನಾರ್ಧನ್ ಹೇಗಾದರೂ ಮಾಡಿ ಆಸ್ತಿಯನ್ನು ಉಳಿಸಿಕೊಳ್ಳಲೇಬೇಕು ಎಂದು ಶತಪ್ರಯತ್ನ ಮಾಡುತ್ತಿದ್ದಾನೆ. ಆದರೆ, ಯಾವ ಆಶ್ರಮದಲ್ಲೇ ಹುಡುಕಿಸಿದರೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಗಂಡನ ದುರಾಸೆಯಿಂದ ಬೇಸತ್ತಿರುವ ವನಜಾ ಬೀಗರ ಮನೆಗೆ ಬರುತ್ತಾಳೆ. ಅಲ್ಲಿ ಪೂರ್ಣಿಮಾಳನ್ನೇ ತನ್ನ ಮೊದಲ ಮಗಳು ಎಂದು ತಿಳಿದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿರುತ್ತಾಳೆ. ವನಜಾ ಮನಸ್ಸಿನಲ್ಲಿ ದುಃಖ ಇರುವುದನ್ನು ಕಂಡ ತುಳಸಿ ಏನಾಯ್ತು ನನ್ನ ಬಳಿ ಹೇಳಿಕೊಳ್ಳಿ ಎಂದು ಕೇಳುತ್ತಾಳೆ. ವನಜಾ ಆಗ ಜನಾರ್ಧನ್ ಮಾಡುತ್ತಿರುವ ನೀಚ ಕೆಲಸವನ್ನು ಹೇಳುತ್ತಾಳೆ.

ಪೂರ್ಣಿಮಾ ಬಗ್ಗೆ ಮುಚ್ಚಿಟ್ಟ ಗುಟ್ಟು

ನನ್ನ ಮೊದಲ ಮಗಳನ್ನು ಕರೆದುಕೊಂಡು ಬಂದು ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಮಾಡಿಕೊಂಡ ಮೇಲೆ ಮತ್ತೆ ಮಗಳನ್ನು ಅನಾಥೆ ಮಾಡಲು ಮುಂದಾಗಿದ್ದಾರೆ ಎಂದು ನೊಂದುಕೊಳ್ಳುತ್ತಾಳೆ. ತುಳಸಿಗೆ ತನ್ನ ಮಗಳ ಫೋಟೋವನ್ನು ತೋರಿಸುತ್ತಾಳೆ. ಫೋಟೋ ನೋಡಿದ ತುಳಸಿ ಮಗುವಿನ ಕುತ್ತಿಗೆ ತನಗೆ ಆಶ್ರಮದವರು ನೀಡಿದ ಬಂಗಾರದ ಸರವನ್ನು ನೋಡುತ್ತಾಳೆ. ಇದನ್ನು ನೋಡುತ್ತಿದ್ದಂತೆಯೇ ಪೂರ್ಣಿಯೇ ವನಜಾ ಮಗು ಎಂಬುದು ಖಚಿತವಾಗುತ್ತದೆ. ತುಳಸಿ ಇದನ್ನು ವನಜಾ ಬಳಿ ಹೇಳಲು ಮುಂದಾದಾಗ ಮಾಧವ್ ತುಳಸಿಯನ್ನು ಕರೆದು ಸದ್ಯಕ್ಕೆ ಈ ವಿಚಾರವನ್ನು ಮಾತನಾಡಬೇಡಿ ಎಂದು ಹೇಳುತ್ತಾನೆ. ತುಳಸಿ ಕೂಡ ಮಾಧವ್ ಮಾತಿಗೆ ಬೆಲೆ ಕೊಟ್ಟು ಸುಮ್ಮನಿರುತ್ತಾಳೆ.

srirasthu-shubhamasthu-serial-08-august-episode-written-update

ಅನಿವಾರ್ಯವಾಗಿ ಮಾತುಕೊಟ್ಟ ತುಳಸಿ

ವನಜಾ ಮನೆಯಿಂದ ಹೊರಟ ಬಳಿಕ ತುಳಸಿ ಅಮ್ಮ-ಮಗಳನ್ನು ಒ ಂದು ಮಾಡುವುದು ಪುನ್ಯದ ಕೆಲಸ. ನಮಗೆ ಸತ್ಯ ಗೊತ್ತಿದ್ದಾಗಲೂ ಯಾಕೆ ಮುಚ್ಚಿಡಬೇಕು ಎಂದು ಕೇಳುತ್ತಾಳೆ. ಅದಕ್ಕೆ ಮಾಧವ್ ಈಗಾಗಲೇ ಒಂದು ಬಾರಿ ವೀಚಾರದಿಂದ ದೊಡ್ಡ ಸಮಸ್ಯೆ ಉಂಟಾಗಿತ್ತು. ಈಗ ಮತ್ತೆ ಯಾಕೆ ಇಲ್ಲದ ಸಮಸ್ಯೆ ಅನ್ನು ತಂದುಕೊಳ್ಳುವುದು ಎಂದು ಹೇಳುತ್ತಾನೆ. ತಂದೆ-ತಾಯಿ ಬಗ್ಗೆ ಎಲ್ಲವನ್ನು ಮರೆತಿರುವ ಪೂರ್ಣಿಮಾಳನ್ನು ಇರುವ ಹಾಗೆ ಇರಲು ಬಿಡಿ. ಈ ಸತ್ಯವನ್ನು ಯಾರಿಗೂ ಹೇಳಬೇಡಿ ಎಂದು ಹೇಳಿದ್ದು, ಅನಿವಾರ್ಯವಾಗಿ ಮಾಧವ್ ಗೆ ತುಳಸಿ ಮಾತು ಕೊಟ್ಟಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X