Srirasthu Shubhamasthu ; ಆಕ್ಸಿಡೆಂಟ್ ಮಾಡಿರುವುದು ಶಾರ್ವರಿ : ಶಾಕಿಂಗ್ ವಿಚಾರ ತಿಳಿದ ಸಿರಿ ಮಾಡಿದ್ದೇನು…?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಪರ ಹಾಗೂ ವಿರೋಧ ವಾದಗಳು ನಡೆದಿದೆ. ಸಾಕ್ಷಿ ಹೇಳಲು ಬಂದ ಎಲ್ಲರೂ ಸಮರ್ಥ್ ಪರ ಮಾತನಾಡಿದ್ದಾರೆ. ಆದರೆ, ದತ್ತ ತಾತ ಮತ್ತು ತುಳಸಿ ಇಬ್ಬರೂ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಇದನ್ನು ಕೇಳಿದ ಸಿರಿಗೆ ಶಾಕ್ ಆಗಿದೆ. ಎಲ್ಲರೂ ಮದುವೆ ಇದ್ದ ಕಾರಣ ಸಮರ್ಥ್ ನಮ್ಮ ಮನೆಯಲ್ಲೇ ಇದ್ದರು ಎಂದು ಅವಿ, ಅಭಿ, ಮಾಧವ್ ಹೇಳಿದ್ದಾರೆ.ಆದರೆ, ದತ್ತ ತಾತ ಸಮರ್ಥ್ ಹೇಳಿರುವ ಮಾತೇ ನಿಜವಿರಬಹುದು ಎಂದಿದ್ದು, ಇತ್ತ ತುಳಸಿ ರಾತ್ರಿ ಸಮರ್ಥ್ ನಮ್ಮ ಮನೆಯಲ್ಲಿದ್ದಿದ್ದು ನಿಜವೇ ಆದರೆ, 12 ಗಂಟೆ ಸುಮಾರಿಗೆ ನಾನು ಆತನನ್ನು ನೋಡಿಲ್ಲ ಎಂದು ಹೇಳಿದ್ದಾಳೆ.

ಸತ್ಯ ತಿಳಿದು ಕಣ್ಣೀರಿಟ್ಟ ಅಭಿ, ಅವಿ

ಈ ಮಾತನ್ನು ಕೇಳಿದ ಸಿರಿಗೆ ಬೇಸರವಾಗಿದ್ದು, ಸಮರ್ಥ್ ತುಳಸಿ ಅವರ ಮನೆಯಲ್ಲೇ ಇದ್ದರು. ನನ್ನ ಜೊತೆಗೆ ರಾತ್ರಿ ಆಕ್ಸಿಡೆಂಟ್ ಆದ ಸಮಯಕ್ಕೆ ಫೋನ್ ನಲ್ಲಿ ಮಾತನಾಡುತ್ತಿದ್ದರು ಎಂದು ಹೇಲಿದ್ದು, ಇನ್ನಷ್ಟು ಸಾಕ್ಷಿಗಳನ್ನು ನೀಡಲು ಸಮಯ ಬೇಕು ಎಂದು ಕೇಳಿದ್ದಾಳೆ. ಇತ್ತ ಕೋರ್ಟ್ ನಲ್ಲಿ ವಾದ ವಿವಾದಗಳು ಮುಗಿದ ಬಳಿಕ ಅಭಿ ಮತ್ತು ಅವಿ ತುಳಸಿಯನ್ನು ಪ್ರಶ್ನೆ ಮಾಡಿದ್ದಾರೆ. ನೀವು ಕೊಟ್ಟ ಹೇಲಿಕೆ ಎಷ್ಟು ಸರಿ ಎಂದು ಕೇಳಿದ್ದಾರೆ. ಆಗ ತುಳಸಿ ನಿಧಿ ಆಕ್ಸಿಡೆಂಟ್ ಮಾಡಿದ್ದು, ಹಾಗೂ ಅದರ ಆರೋಪವನ್ನು ಸಮರ್ಥ್ ಹೊತ್ತುಕೊಂಡ ಸತ್ಯವನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿದ ಅಭಿ ಮತ್ತು ಅವಿ ಇಬ್ಬರೂ ಕಣ್ಣೀರು ಹಾಕುತ್ತಾರೆ. ಅಲ್ಲದೇ, ಜೈಲಿಗೆ ಹೋಗಿ ಸಮರ್ಥ್ ನನ್ನು ಭೇಟಿ ಮಾಡುತ್ತಾರೆ. ನಮ್ಮೆಲ್ಲರಿಗಿಂತಲೂ ನೀನೇ ದೊಡ್ಡವನಾದೆ ಎಂದು ಹೆಮ್ಮೆಯಿಂದ ಹೇಳಿ ಬರುತ್ತಾರೆ.

srirasthu shubhamasthu serial 08 February episode written update

ತುಳಸಿಯನ್ನು ಪ್ರಶ್ನಿಸಿದ ಮಾಧವ್

ಇತ್ತ ಮನೆಗೆ ಬಂದ ತುಳಸಿಯನ್ನು ಮಾಧವ್ ಪ್ರಶ್ನೆ ಮಾಡುತ್ತಾನೆ. ನೀವು ಕೋರ್ಟ್ ನಲ್ಲಿ ಏಕೆ ಹಾಗೆ ಉತ್ತರ ಕೊಟ್ಟಿದ್ದು. ರಾತ್ರಿಯೆಲ್ಲಾ ಮನೆಯಲ್ಲಿ ಮದುವೆ ಕೆಲಸ ಮಾಡಿದ್ದ ಸಮರ್ಥ್ ಇಲ್ಲೇ ಮಲಗಿದ್ದ. ಅದು ನಿಮಗೂ ಗೊತ್ತು ಹಾಗಿರುವಾಗ ಅವನು ಮಧ್ಯರಾತ್ರಿ ಹೋಗಿ ಆಕ್ಸಿಡೆಂಟ್ ಮಾಡಿರಬಹುದು ಎಂಬಂತೆ ನೀವು ಮಾತನಾಡಿದ್ದು ತಪ್ಪು. ಅವನು ಎಷ್ಟೇ ಆದರೂ ನಿಮ್ಮ ಮಗನೇ ನೆನಪಿರಲಿ ಎಂದು ಬುದ್ಧಿ ಹೇಳಿದ್ದಾನೆ. ಅಲ್ಲದೇ, ನೀವು ನನ್ನಿಂದ ಯಾವುದೋ ಸತ್ಯವನ್ನು ಮುಚ್ಚಿಟ್ಟಿದ್ದೀರಾ ಎಂದು ಮಾಧವ್ ಎಷ್ಟು ಕೇಳಿದರೂ ತುಳಸಿ ಸತ್ಯವನ್ನು ಮಾತ್ರ ಬಾಯಿಬಿಟ್ಟು ಹೇಳುವುದಿಲ್ಲ.

ಸಾಕ್ಷಿ ಸಮೇತ ಸಿರಿ ಹೋಗಿದ್ದೆಲ್ಲಿಗೆ..?

ಈ ವಿಚಾರವಾಗಿ ಮಹೇಶ, ತುಳಸಿ, ನಿಧಿ, ಮಾಧವ್ ಎಲ್ಲರೂ ಮಾತನಾಡುವಾಗ ಶಾರ್ವರಿ ಮಧ್ಯದಲ್ಲಿ ಬಂದು ಸಮರ್ಥ್ ನದ್ದೇ ತಪ್ಪಿರಬಹುದು ಎಂಬಂತೆ ಮಾತನಾಡುತ್ತಾಳೆ. ಆಗ ಮಹೇಶ ಶಾರ್ವರಿಯೇ ಆಕ್ಸಿಡೆಂಟ್ ಮಾಡಿರಬಹುದು ಎಂಬಂತೆ ದೂರುತ್ತಾನೆ. ಆಗ ಶಾರ್ವರಿ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಗಾಬರಿಯಾಗುತ್ತಾಳೆ. ಅಲ್ಲಿಗೆ ಈ ಆಕ್ಸಿಡೆಂಟ್ ಅನ್ನು ಮಾಡಿರುವುದು ಶಾರ್ವರಿಯೇ ಎಂಬುದು ಪಕ್ಕಾ ಆಗಿದೆ. ಅವಳೇ ಆಕ್ಸಿಡೆಂಟ್ ಮಾಡಿ ಬಂದಿದ್ದಾಳೆ. ಆದರೆ, ಎಲ್ಲರಿಂದಲೂ ಸತ್ಯವನ್ನು ಮುಚ್ಚಿಟ್ಟಿದ್ದಾಳೆ.

ಆಕ್ಸಿಡೆಂಟ್ ಮಾಡಿದ್ದು ನಿಧಿ ಅಲ್ಲ ಶಾರ್ವರಿ

ಇತ್ತ ಅಪಘಾತವಾದ ಕಾರಿನ ಬಗ್ಗೆ ಸಿರಿ ಒಂದಷ್ಟು ಸಾಕ್ಷಿಗಳನ್ನು ಕಲೆ ಹಾಕಿದ್ದಾಳೆ. ಇದರಲ್ಲಿ ಕಾರು ಅಭಿ ಹೆಸರಿನಲ್ಲಿರುವುದು ಗೊತ್ತಾಗಿದೆ. ಮೊದಲೇ ಅಭಿಗೆ ಸಮರ್ಥ್ ಎಂದರೆ ಆಗುವುದಿಲ್ಲ. ಹಾಗಾಗಿ ತನಗೆ ಬೇಕಂತಲೇ ಅಭಿ ಆಕ್ಸಿಡೆಂಟ್ ಮಾಡಿ ಈಗ ಸಮರ್ಥ್ ಮೇಲೆ ಗೂಬೆ ಕೂರಿಸಿರಬೇಕು ಎಂದು ಸಿರಿ ಭಾವಿಸಿದ್ದಾಳೆ. ಸಂಧ್ಯಾ ಎಷ್ಟೇ ಬುದ್ಧಿ ಹೇಳಲು ಪ್ರಯತ್ನಿಸಿದರೂ ಸಿರಿ ಕೇಳದೇ ಸಾಕ್ಷಿಯನ್ನು ತೆಗೆದುಕೊಂಡು ಮನೆಯಿಂದ ಎಲ್ಲೋ ಹೋಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X