Srirasthu Shubhamasthu ; ಪೂರ್ಣಿಮಾಗೆ ಅವಮಾನಿಸಿದ ದೀಪಿಕಾ,ತಕ್ಕ ಉತ್ತರ ಕೊಡ್ತಾನಾ ಅಭಿ ?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಬಳಿ ತುಳಸಿ ಎಲ್ಲಾ ಸತ್ಯವನ್ನು ಹೇಳಿದ್ದಾಳೆ. ಶಾರ್ವರಿ ಮತ್ತು ಅವಳ ಅಕ್ಕನ ಫೋಟೋ ಕೊಟ್ಟು, ರಹಸ್ಯ ಬೇಧಿಸಲು ಹೇಳಿದ್ದಾಳೆ. ದತ್ತ ತಾತ ಸ್ಮಶಾನ ಮತ್ತು ಮಾಧವ್ ಓದಿದ ಕಾಲೇಜಿಗೆ ತೆರಳಿ ಮಾಹಿತಿಯನ್ನು ಪಡೆದಿದ್ದಾನೆ.ಇದೆಲ್ಲವನ್ನೂ ಜುಗ್ಗ ಜಗನ್ನಾಥ ಫಾಲೋ ಮಾಡಿ ತಿಳಿದುಕೊಂಡಿದ್ದಾನೆ. ಶಾರ್ವರಿಗೆ ಫೋನ್ ಮಾಡಿ ಫೋಟೋ ಸಮೇತ ಎಲ್ಲಾ ಮಾಹಿತಿಯನ್ನು ನೀಡಿದ್ದು, ಈಗ ಶಾರ್ವರಿ ಗಾಬರಿಯಾಗಿದ್ದಾಳೆ. ದತ್ತ ತಾತ ಮತ್ತು ತುಳಸಿ ಸೇರಿಕೊಂಡು ತನ್ನ ಜಾಲವನ್ನು ಕಂಡು ಹಿಡಿದರೆ ಕಷ್ಟವಾಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದಾಳೆ.

ತಂಗಿ ಮಾತು ಕೇಳಿ ಮೋಸ ಹೋಗುತ್ತಾಳಾ ಪೂರ್ಣಿ..?

ಪೂರ್ಣಿಮಾಳನ್ನು ಜನಾರ್ಧನ್ ಮತ್ತು ವನಜಾ ಮಗಳು ಎಂದು ಒಪ್ಪಿಕೊಂಡಿದ್ದು, ಆಸ್ತಿಯನ್ನೆಲ್ಲಾ ಅವಳ ಹೆಸರಿಗೆ ವರ್ಗಾಯಿಸಿ ವಿದೇಶಕ್ಕೆ ತೆರಳಿದ್ದಾರೆ. ಪೂರ್ಣಿಮಾಳನ್ನು ಭಾವನ ಹೆಂಡತಿ ಎಂಬ ವಿಚಾರಕ್ಕೇ ಸಿಡಿಮಿಡಿಗೊಳ್ಳುತ್ತಿದ್ದ ದೀಪಿಕಾಳಿಗೆ ಈಗ ಅವಳೇ ತನ್ನ ಸ್ವಂತ ಅಕ್ಕ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಪೂರ್ಣಿಮಾಳಿಗೆ ನೋವಾಗುವಂತೆ ಮಾಡಬೇಕು. ಅವಳನ್ನು ಮತ್ತೆ ಅವಮಾನಿಸಬೇಕು ಎಂದು ತೀರ್ಮಾನಿಸಿದ್ದಾಳೆ. ಹೀಗಾಗಿ ನಿಧಿಯ ಬ್ಯಾಚುಲರೇಟ್ ಪಾರ್ಟಿಗೆ ಸೀರೆ ತೆಗೆದುಕೊಂಡು ಬಂದಿರುವ ದೀಪಿಕಾ ಅಕ್ಕ ನಿಮಗೋಸ್ಕರ ಈ ಸೀರೆ ತಂದಿದ್ದೀನಿ. ಇವತ್ತು ಪಾರ್ಟಟಿಗೆ ಇದನ್ನೇ ಉಡಬೇಕು ಎಂದು ಸೆಂಟಿಮೆಂಟಲ್ ಆಗಿ ಮಾತನಾಡುತ್ತಾಳೆ. ಇದನ್ನು ನಂಬಿದ ಪೂರ್ಣಿಮಾ ಸೀರೆಯನ್ನು ಉಡುತ್ತಾಳೆ. ಆದರೆ, ದೀಪಿಕಾ ಮಾತಿಗೆ ಮಾರು ಹೋಗಿ ಮೋಸ ಹೋಗುತ್ತಾಳಾ ಪೂರ್ಣಿ ಎಂಬ ಕುತೂಹಲ ಮೂಡಿದೆ.

srirasthu shubhamasthu serial 08 January episode written update

ಮನೆಯಲ್ಲಿ ನಿಧಿ ಬ್ಯಾಚುಲರ್ ಪಾರ್ಟಿ

ಮನೆಯಲ್ಲಿ ನಿಧಿ ಮದುವೆಯ ಸಮಾರಂಭ ಜೋರಾಗಿ ನಡೆದಿದೆ. ನಿತ್ಯ ಒಂದೊಂದು ಶಾಸ್ತ್ರಗಳು ನಡೆಯುತ್ತಿದ್ದು, ಎಲ್ಲರೂ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ದತ್ತ ಮನೆಯವರು ನಿತ್ಯ ಆಗಮಿಸುತ್ತಿದ್ದಾರೆ. ಇನ್ನು ಸಮರ್ಥ್ ಮತ್ತು ಅಭಿ ಮಕ್ಕಳಂತೆ ಆಡುವ ಉದನ್ನು ನೊಡಿ ತುಳಸಿ ಕೂಡ ಖುಷಿ ಪಡುತ್ತಿದ್ದಾಳೆ. ಇನ್ನು ದತ್ತ ತಾತನಿಗೆ ತುಳಸಿ ಗರ್ಭಿಣಿ ಎಂಬ ವಿಚಾರವನ್ನು ತಿಳಿಸಿಲ್ಲ. ಸಮರ್ಥ್ ತಾತನಿಗೆ ವಿಚಾರ ಹೇಳೋಣ ಎಂದಿದ್ದು, ತುಳಸಿ ಗಾಬರಿಯಾಗಿದ್ದಾಳೆ.


ಪೂರ್ಣಿಮಾಳನ್ನು ಅವಮಾನಿಸಿದ ದೀಪಿಕಾ

ಪಾರ್ಟಿ ಶುರುವಾಗಿದ್ದು, ನಿಧೀ ಕೇಕ್ ಕಟ್ ಮಾಡಿದ್ದಾಳೆ. ನಿಧಿ ಸ್ನೇಹಿತೆಯರು ಕೂಡ ಪಾರ್ಟಿಗೆ ಆಗಮಿಸಿದ್ದಾರೆ. ಇನ್ನು ಪೂರ್ಣಿಮಾ ಉಟ್ಟಿರುವ ಸೀರೆ ಅಲ್ಲಿಗೆ ಊಟ ಸರ್ವ್ ಮಾಡುತ್ತಿರುವವರಂತೆಯೇ ಇದೆ. ಹೀಗಾಗಿ ಪಾರ್ಟಿಗೆ ಬಂದ ನಿಧಿ ಸ್ನೇಹಿತರು ಪೂರ್ಣಿಯನ್ನು ಕೇಟ್ರಿನ್ ಕಡೆಯವರು ಎಂದುಕೊಂಡು, ಊಟ ಬಡಿಸಲು ಹೇಳುತ್ತಾರೆ. ಬಡಿಸುವಾಗ ಕೈ ಜಾರಿ ಸೌಟ್ ಬಿದ್ದಿದ್ದಕ್ಕೆ ಅವಮಾನವಾಗುವಂತೆ ಮಾತನಾಡುತ್ತಾರೆ. ಇದರಿಂದ ಪೂರ್ಣಿಗೆ ಏನಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ. ಅದೇ ಸಮಯಕ್ಕೆ ಸರಿಯಾಗಿ ದೀಪಿಕಾ ಬಂದು ಇದೇ ನಿನ್ನ ಸ್ಥಾನ. ನೀನು ಉಟ್ಟಿರುವ ಸೀರೆಯನ್ನು ನೋಡಿಕೋ ಎಂದು ಅವಮಾನ ಮಾಡುತ್ತಾಳೆ. ಇದರಿಂದ ಪೂರ್ಣಿಮಾಳಿಗೆ ಬಹಳ ನೋವಾಗುತ್ತದೆ.


ಶಾರ್ವರಿಗೆ ವಾರ್ನಿಂಗ್ ಕೊಟ್ಟ ದತ್ತ ತಾತ

ಇದನ್ನು ಗಮನಿಸಿದ ತುಳಸಿ ಪೂರ್ಣಿಮಾಳಿಗೆ ಸಮಾಧಾನ ಮಾಡುತ್ತಾಳೆ. ದೀಪಿಕಾ ಈ ರೀತಿ ಮಾಡುವುದು ಇದೇ ಮೊದಲೇನಲ್ಲ. ನೀನು ಅಳಬೇಡ ಎಂದು ಸಮಾಧಾನ ಮಾಡುವುದನ್ನು ಕೇಳಿಸಿಕೊಂಡು ಬರುವ ಅಭಿ ಅತ್ತಿಗೆಗೆ ಸಪೋರ್ಟ್ ಮಾಡುತ್ತಾನೆ. ದೀಪಿಕಾಳ ವರ್ತನೆ ಈಗ ಅಭಿಗೂ ಗೊತ್ತಾಗಿದೆ. ಇತ್ತ ದತ್ತ ತಾತ ಪಾರ್ಟಿಗೆ ಬಂದಿದ್ದು, ಶಾರ್ವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ನಿನ್ನ ರಹಸ್ಯವೆಲ್ಲಾ ನನಗೆ ಗೊತ್ತಾಗಿದೆ ಎಂದು ಹೇಳಿದ್ದು, ಶಾರ್ವರಿ ಗಾಬರಿಯಾಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X