Srirasthu Shubhamasthu;ನಿಧಿಗೆ ಮದುವೆ ಫಿಕ್ಸಾಯ್ತು :ಶೇಖರ್ ಮಾತು ಕೇಳಿದ ಮಾಧವ್ ಗೆ ಶಾಕ್ ಆಯ್ತು..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕದ್ದರೂ ಕೂಡ, ಒಂದೇ ದಿನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾನೆ. ಅಮ್ಮನಿಂದ ದೂರ ಇರಲಾಗದೇ, ಕೆಲಸ, ಸಂಬಳಕ್ಕಿಂತಲೂ ಅಮ್ಮನ ಸಾನಿಧ್ಯ ಮುಖ್ಯ ಎಂದು ಕೆಲಸ ಬಿಟ್ಟು ಬಂದಿದ್ದಾನೆ. ನಾನು ಡ್ರೈವರ್ ಆಗಿಯೇ ಇರುತ್ತೀನಿ ಎಂದು ಹೇಳಿದ್ದಾನೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸಮರ್ಥ್ ನಡೆದುಕೊಳ್ಳುತ್ತಿದ್ದು, ದತ್ತ ತಾತ ಸುಮ್ಮನಿದ್ದಾರೆ. ಮಾಧವ್ ಮತ್ತು ಅವಿ ಷರತ್ತು ಹಾಕಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ.
ನಿಧಿಯನ್ನು ನೋಡಲು ಬಂದ ಶೇಖರ್ ಕುಟುಂಬ
ಹೇಗಾದರೂ ಮಾಡಿ ಸಮರ್ಥ್ ತುಳಸಿ ಅವರನ್ನು ಅಮ್ಮ ಎಂದು ಕರೆಯುವಂತೆ ಮಾಡಬೇಕು ಎಂದು ಅವಿನಾಶ್ ಆಲೋಚಿಸುತ್ತಿದ್ದಾನೆ. ಹಾಗಾಗಿ ತುಳಸಿ ಜೊತೆಗೆ ಸದಾ ಇರುವ ಅವಿ, ಸಮರ್ಥ್ ಹೊಟ್ಟೆಯನ್ನು ಉರಿಸುತ್ತಿದ್ದಾನೆ. ಇನ್ನು ನಿಧಿಯನ್ನು ತಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಶೇಖರ್ ಕುಟುಂಬ ಒಪ್ಪಿದ್ದು, ಹುಡುಗಿ ನೋಡುವ ಶಾಸ್ತ್ರಕ್ಕಾಗಿ ಮಾಧವ್ ಮನೆಗೆ ಬಂದಿದ್ದಾರೆ. ಮಾಧವ್ ಮನೆಯಲ್ಲಿ ತುಳಸಿಯನ್ನು ನೋಡುತ್ತಿದ್ದಂತೆಯೇ ಶೇಖರ್ ಹಾಗೂ ಅವರ ಪತ್ನಿ ಮುಖದಲ್ಲಿ ತಾತ್ಸಾರ ಮೂಡಿದೆ. ಮಾಧವ್ ಗೆ ಇದು ಎರಡನೇ ಮದುವೆಯಾಗಿದ್ದರಿಂದ ಹೀಗೆ ನಡೆದುಕೊಂಡಿರಬಹುದು ಎಂದು ಕೊಂಡರೆ ಕಥೆಯೇ ಬೇರೆ ಇದೆ.

ಶಾಕಿಂಗ್ ಸುದ್ದಿ ಕೇಳಿದ ಮಾಧವ್
ನಿಧಿ ಮತ್ತು ಹುಡುಗ ಇಬ್ಬರೂ ಮಾತನಾಡಿದ್ದು, ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಹೇಶ ಮತ್ತು ಶಾರ್ವರಿಗೂ ಈ ಮದುವೆ ಖುಷಿ ಕೊಟ್ಟಿದೆ. ತನ್ನ ಮಗಳು ನಿಧಿ ಮದುವೆಯಾಗಿ ರಾಣಿಯಂತೆ ಮರೆಯಬೇಕು ಎಂದು ಶಾರ್ವರಿ ಬಯಸಿದ್ದಾಳೆ. ಇನ್ನು ಮದುವೆ ಮಾತುಕತೆಗೂ ಮುನ್ನವೇ ಮಾಧವ್ ಜೊತೆ ಶೇಖರ್ ವ್ಯೆಯಕ್ತಿಕವಾಗಿ ಮಾತನಾಡಿದ್ದಾರೆ. ಈ ಮದುವೆಗೆ ನಮಗೇನೂ ಅಭ್ಯಂತರವಿಲ್ಲ. ಆದರೆ, ಮದುವೆಗೆ ನಿಮ್ಮ ಶ್ರೀಮತಿ ಬಂದರೆ ಸಾಕು. ಅವರ ಮಕ್ಕಳು ಬರುವುದು ಬೇಡ. ಸಂಬಂಧಿಕರಿಗೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಹಣಕ್ಕಿಂತಲೂ ಮರ್ಯಾದೆ ಬಹಳ ಮುಖ್ಯ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮಾಧವ್ ದಿಗ್ಭ್ರಾಂತನಾಗಿದ್ದು, ಏನು ಹೇಳಬೇಕು ಎಂಬುದು ತಿಳಿಯದೇ ಮೌನವಾಗಿದ್ದಾನೆ. ತಾಂಬೂಲ ಬದಲಾಯಿಸಿಕೊಂಡಿದ್ದು, ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥ ಮಾಡಲು ತಯಾರಿ ನಡೆಸಿದ್ದಾರೆ.
ನಿಧಿಗಾಗಿ ಮಕ್ಕಳನ್ನು ಬಿಟ್ಟು ಕೊಟ್ಟ ತುಳಸಿ
ಮಾಧವ್ ತುಳಸಿಗೆ ಈ ವಿಚಾರವನ್ನು ಹೇಗೆ ಹೇಳುವುದು. ತಮ್ಮ ಮನೆಯ ಶುಭ ಕಾರ್ಯಕ್ಕೆ ಮಕ್ಕಳನ್ನು ಬರಬೇಡಿ ಎಂದು ಹೇಗೆ ತಡೆಯುವುದು ಎಂದು ಯೋಚಿಸುತ್ತಾ ಕುಳಿತಿರುತ್ತಾನೆ. ಮಾಧವ್ ನಲ್ಲಿ ಆಗುವ ಸಣ್ಣ ಬದಲಾವಣೆಯನ್ನು ಗುರುತಿಸುವ ತುಳಸಿ, ಏನಾಯ್ತು ಎಂದು ವಿಚಾರಿಸಿದ್ದಾಳೆ. ಮಾಧವ್ ಗೆ ಸತ್ಯ ಹೇಳಲಾಗದೇ ಸುಳ್ಳು ಹೇಳಿ ಸಂದರ್ಭವನ್ನು ನಿಭಾಯಿಸಲು ಯತ್ನಿಸಿದ್ದಾನೆ. ಇದರಿಂದ ತುಳಸಿಗೆ ಮಾಧವ್ ಏನೋ ಬಚ್ಚಿಡುತ್ತಿದ್ದಾರೆ ಎಂದು ತಿಳಿದು ಕೆದಕಿ ಕೇಳುತ್ತಾಳೆ. ಆಗ ಮಾಧವ್ ಸತ್ಯ ಹೇಳುತ್ತಾನೆ. ತುಳಸಿ, ನನ್ನ ಮಕ್ಕಳು ಬರದ ಹಾಗೆ ನಾನು ತಡೆಯುತ್ತೇನೆ. ಅವರಿಂದ ನಿಧಿ ಮದುವೆ ನಿಲ್ಲುವುದು ಬೇಡ ಎನ್ನುತ್ತಾಳೆ. ತುಳಸಿ ಮಾಧವ್ ಗೆ ಧೈರ್ಯ ತುಂಬುತ್ತಾಳೆ.

ಮೈಸೂರಿಗೆ ಹೊರಟಿರುವ ಜೋಡಿಗಳು
ತುಳಸಿ ಮಾತು ಕೇಳಿದ ಮಾಧವ್ ಮನಸ್ಸು ಕೊಂಚ ಹಗುರವಾಗಿದೆ. ಇನ್ನು ಇಬ್ಬರೂ ಕೂಡ ಮೈಸೂರಿಗೆ ಹೋಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ಇದೇ ವಿಚಾರವನ್ನು ಮನೆಯವರ ಬಳಿ ಹೇಳಿದ್ದಾರೆ. ಅವಿ ಮತ್ತು ಪೂರ್ಣಿಮಾ ಹನಿಮೂನ್ ಪ್ಲಾನ್ ಇರಬೇಕು ಎಂದು ತುಳಸಿ ಮತ್ತು ಮಾಧವ್ ನನ್ನು ರೇಗಿಸಿದ್ದಾರೆ.


Click it and Unblock the Notifications











