Srirasthu Shubhamasthu ; ಕಂಪನಿ ವಾರ್ಷಿಕೋತ್ಸವದ ಬಗ್ಗೆ ನಿರ್ಲಕ್ಷ್ಯ ತೋರಿದ ಅಭಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಈಗಾಗಲೇ ಪೂರ್ಣಿಮಾ ಅನಾಥೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇತ್ತೀಚೆಗೆ ಪೂರ್ಣಿಮಾ ಜನಾರ್ಧನ್ ಮತ್ತು ವನಜಾಳ ಮೊದಲ ಮಗು ಎಂದು ಹೇಳಲಾಗಿತ್ತು. ಆದರೆ, ಆಸ್ತಿ ವಿಚಾರವಾಗಿ ಜನಾರ್ಧನ್ ಸುಳ್ಳು ಕತೆ ಕಟ್ಟಿದ್ದ ಎಂಬ ಸತ್ಯ ತಿಳಿದು ಎಲ್ಲರಿಗೂ ಬೇಸರವಾಗಿದ್ದು, ಕೆಲ ದಿನಗಳ ಕಾಲ ತನ್ನ ತಂದೆ ತಾಯಿ ಜನಾರ್ಧನ್ ಮತ್ತು ವನಜಾ ಎಂದುಕೊಂಡಿದ್ದ ಪೂರ್ಣಿಮಾಳಿಗೂ ಸಂಕಷ್ಟ ಎದುರಾಗಿತ್ತು.ಹಣ, ಆಸ್ತಿಗೋಸ್ಕರ ತಂದೆ ತಾಯಿ ಪ್ರೀತಿ ಸಿಗುವುದು ನನಗೆ ಅವಶ್ಯಕತೆ ಇಲ್ಲ ಎಂದು ಪೂರ್ಣಿಮಾ ವಿರೋಧ ವ್ಯಕ್ತಪಡಿಸುತ್ತಾಳೆ. ಮಾಧವ್ ಮನೆಯವರು ಕೂಡ ಪೂರ್ಣಿಮಾ ನಿರ್ಧಾರವನ್ನು ಮೆಚ್ಚಿಕೊಳ್ಳುತ್ತಾರೆ.

ಪೂರ್ಣಿಮಾ ಹುಟ್ಟಿನ ಬಗ್ಗೆ ಹೊಸ ಸುಳಿವು

ಪೂರ್ಣಿಮಾಳಿಗೆ ಅಪ್ಪ ಅಮ್ಮ ಸಿಕ್ಕರು ಎಂದು ಖುಷಿ ಪಡುವ ಮುನ್ನವೇ ಆಘಾತ ಉಂಟಾಗಿತ್ತು. ಆದರೂ ಕೂಡ ಪೂರ್ಣಿಮಾ ತನಗೆ ಮಾಧವ್ ಹಾಗೂ ತುಳಸಿ ಅಮ್ಮನೇ ಸಾಕು ಎಂದು ಸಮಾಧಾನಪಟ್ಟುಕೊಂಡಿದ್ದಾಳೆ. ಆದರೆ, ತುಳಸಿಗೆ ಪೂರ್ಣಿಮಾ ಹುಟ್ಟಿನ ರಹಸ್ಯ ತಿಳಿಯುವ ಕುತೂಹಲ ಇನ್ನು ಕಡಿಮೆ ಆಗಿಲ್ಲ. ಹೀಗಾಗಿ ಆಗಾಗ ಪೂರ್ಣಿಮಾ ಬಗ್ಗೆ ಯೋಚಿಸುತ್ತಿರುತ್ತಾಳೆ. ಈಗ ಮಾಧವ್ ಗೆ ಆಶ್ರಮದಿಂದ ಕರೆ ಬಂದಿದ್ದು, ಇಬ್ಬರೂ ಆಶ್ರಮಕ್ಕೆ ಹೋಗುತ್ತಾರೆ. ಅಲ್ಲಿ ಅನ್ನಪೂರ್ಣೇಶ್ವರಿ ಅವರು ಪೂರ್ಣಿಮಾಳನ್ನು ಇಲ್ಲಿ ಬಿಟ್ಟು ಹೋದಾಗ ಅವಳ ಕೊರಳಲ್ಲಿ ಹವಳದ ಸರವಿತ್ತು. ಅದನ್ನು ನಾವು ಎತ್ತಿಟ್ಟಿದ್ದೆವು ಎಂದು ಹೇಳಿ ತುಳಸಿ ನೀಡುತ್ತಾರೆ. ತುಳಸಿ ಈ ಸರದ ಮೂಲಕವಾದರೂ ಪೂರ್ಣಿ ಪೋಷಕರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಬಯಸುತ್ತಾಳೆ. ಆದರೆ, ಮಾಧವ್ ಪೂರ್ಣಿಮಾಳಿಗೆ ಅವಳ ತಂದೆ ತಾಯಿಯ ಅವಶ್ಯಕತೆ ಇಲ್ಲ ಎಂದು ಹೇಳಿ ತುಳಸಿಗೆ ಪೂರ್ಣಿಮಾ ಬಗ್ಗೆಯ ಪರಿಸ್ಥಿತಿಯನ್ನು ವಿವರಿಸುತ್ತಾರೆ.

srirasthu-shubhamasthu-serial-08-june-episode-written-update


ಕಂಪನಿ ಆನಿವರ್ಸರಿ ಬಗ್ಗೆ ಚರ್ಚೆ

ಇನ್ನು ಮಾಧವ್ ಕಟ್ಟಿದ ಕಂಪನಿಗೆ ಈಗ 25 ವರ್ಷ ತುಂಬಿದ್ದು, ಆನಿವರ್ಸರಿ ಸೆಲಬ್ರೇಟ್ ಮಾಡಲು ಕಂಪನಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದೆ. ಸಮಾರಂಭದ ದಿನ ಮಾಧವ್ ಕುಟುಂಬದವರು ಡ್ಯಾನ್ಸ್ ಮಾಡಬೇಕು ಎಂದು ನೌಕರರು ಬಯಸಿದ್ದಾರೆ. ಈ ಮಾತನ್ನು ಕೇಳಿದಾಗ ಯಾರೂ ಒಪ್ಪುವುದಿಲ್ಲ. ಬಳಿಕ ಡ್ಯಾನ್ಸ್ ಮಾಡಲು ಒಪ್ಪುತ್ತಾರೆ. ನಿಧಿ ಡ್ಯಾನ್ಸ್ ಯಾರು ಯಾರು ಮಾಡಬೇಕು, ಹೇಗಿರಬೇಕು ಎಂದೆಲ್ಲಾ ಪ್ಲಾನ್ ಮಾಡಿಕೊಳ್ಳುತ್ತಾಳೆ.

ಅಭಿಗೆ ಸಮಾಧಾನವಾಗಿ ಮಾತನಾಡಿಸಿದ ಶಾರ್ವರಿ

ಅಭಿ ಈ ಚರ್ಚೆಯಲ್ಲಿ ಇದ್ದರೂ ಕೂಡ ತನಗೆ ಡ್ಯಾನ್ಸ್ ಮಾಡಲು ಇಷ್ಟವಿರುವುದಿಲ್ಲ. ಹೀಗಾಗಿ ನೀವೆಲ್ಲಾ ಮಾಡಿಕೊಳ್ಳಿ ಎಂದು ಕೂಗಾಡಿ ಹೋಗುತ್ತಾನೆ. ತುಳಸಿ ತಮನಗೆ ಡ್ಯಾನ್ಸ್ ಬರುವುದಿಲ್ಲ. ಹಾಗಾಗಿ ತಾನು ವೇದಿಕೆ ಮೇಲೆ ಬರೋದಿಲ್ಲ ಎಂದು ಹೇಳಿದ್ದಕ್ಕೆ ಮನೆಯವರು ತುಳಸಿ ಪರೀಸ್ಥಿತಿಯನ್ನು ಅರ್ತ ಮಾಡಿಕೊಳ್ಳುತ್ತಾರೆ.

srirasthu-shubhamasthu-serial-08-june-episode-written-update


ಡ್ಯಾನ್ಸ್ ಮಾಡಲು ಒಪ್ಪಿದ ಅಭಿ

ಶಾರ್ವರಿ ಎಲ್ಲರ ಎದುರು ಅಭಿಗೆ ಸಮಾಧಾನ ಮಾಡುತ್ತಾರೆ. ಇದು ಕಂಪನಿಯ ಆನಿವರ್ಸರಿ ವಿಚಾರ. ನೀನು ನೌಕರರ ಮುಂದೆ ಮನೆಯ ಮುನಿಸನ್ನು ತೋರಿಸಿದರೆ ಚೆನ್ನಾಗಿರೊಲ್ಲ. ಡ್ಯಾನ್ಸ್ ಮಾಡಲು ಒಪ್ಪಿಕೊ ಎಂದು ಹೇಳುತ್ತಾರೆ. ಅಭಿಯೂ ಕೂಡ ಒಪ್ಪಿಕೊಳ್ಳುತ್ತಾನೆ. ಮಹೇಶ ನೀನು ಕಂಪನಿ ಆನಿವರ್ಸರಿ ಆಗುವವರೆಗೂ ನಮ್ಮ ಜೊತೆಗೆ ಹೇಗಿರುತ್ತೀಯೋ ಅದೇ ರೀತಿ ಕಾರ್ಯಕ್ರಮ ಮುಗಿದ ಬಳಿಕ ಈ ಮನೆ ಭಾಗ ಮಾಡುತ್ತೇವೆ. ನಿನಗೆ ಬೇಕಾದ ರೀತಿಯಲ್ಲಿ ಭಾಗ ಮಾಡಿಕೊಡುತ್ತೇವೆ ಎಂದು ಅಭಿ ಮುಗಿಗೆ ತುಪ್ಪ ಸುರಿಯುತ್ತಾರೆ. ಅಭಿ ಈ ಡೀಲ್ ಓಕೆ ಎಂದು ಹೇಳಿ ಒಪ್ಪಿಕೊಳ್ಳುತ್ತಾನೆ.

More from Filmibeat

English summary
Abhi gets angry again for the company anniversary
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X