Srirastu Shubhamastu ; ಅವಮಾನವಾದರೂ ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿದ ಸಂಧ್ಯಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ತನ್ನ ದುರಾಸೆಗಾಗಿ ಬಹಳ ದೊಡ್ಡ ತಪ್ಪನ್ನು ಮಾಡಿದ್ದಾಳೆ. ತನ್ನ ಜೀವನ ಸುಖವಾಗಿ, ಐಷಾರಾಮಿ ಆಗಿ ಇರಬೇಕು ಎಂಬ ಒಂದೇ ಕಾರಣಕ್ಕೆ ಈಗಾಗಲೇ ತಮ್ಮ ಮನೆಯವರಿಗೆ ಬಹಳಷ್ಟು ಮೋಸವನ್ನು ಮಾಡಿದ್ದಾಳೆ. ಇದೀಗ ತಾನು ಗರ್ಭಿಣಿ ಎಂಬ ಹೆಸರಿನಲ್ಲಿ ಸೀಮಂತ ಮಾಡಿಕೊಳ್ಳಲು ಹೊರಟಿದ್ದಾಳೆ. ಆದರೆ, ಸಂಧ್ಯಾ ಹೊಟ್ಟೆಗೆ ದಿಂಬು ಕಟ್ಟಿಕೊಂಡಿರುವ ಸತ್ಯ ತಿಳಿದ ತುಳಸಿ ತಬ್ಬಿಬ್ಬಾಗಿದ್ದಾಳೆ. ದತ್ತ ತಾತನ ಬಳಿ ಸತ್ಯವನ್ನು ಹೇಳಿಕೊಂಡು ಮುಂದೇನು ಮಾಡಬೇಕು ಎಂಬುದನ್ನು ತಿಳಿಯದೆಯೇ ಒದ್ದಾಡುತ್ತಿದ್ದಾಳೆ. ತಾತನಿಗೆ ಸತ್ಯ ಕೇಳಿ ಶಾಕ್ ಆಗಿ ಬಿಟ್ಟಿದ್ದಾರೆ.
ದೀಪಿಕಾ ಪ್ಲಾನ್ ಆಯ್ತು ಸಕ್ಸಸ್
ದತ್ತ ತಾತ ಎಲ್ಲರ ಮುಂದೆಯೂ ಮಾನ ಹೋಗುವ ಮುನ್ನವೇ ಸಂಧ್ಯಾಳನ್ನು ಮನೆಯಿಂದ ಕರೆದುಕೊಂಡು ಹೋಗಬೇಕು. ಸೀಮಂತವನ್ನು ಅರ್ಧಕ್ಕೆ ನಿಲ್ಲಿಸಬೇಕು ಎಂದು ತೀರ್ಮಾನಿಸುತ್ತಾರೆ. ಆದರೆ. ಅಷ್ಟರಲ್ಲಿ ದೀಪಿಕಾ ತನ್ನ ಪ್ಲಾನ್ ನ ಎಕ್ಸಿಕ್ಯೂಟ್ ಮಾಡಿ ಬಿಟ್ಟಿದ್ದಾಳೆ. ಸಂಧ್ಯಾಳಿಗೋಸ್ಕರ ಹಾಲನ್ನು ತಂದಿದ್ದಾಳೆ. ಸುಸ್ತಾಗದೇ ಇರಲಿ ಎಂದು ಹಾಲು ಕುಡಿಸಲು ಮುಂದಾಗಿ ಹೊಟ್ಟೆಯ ಮೇಲೆ ಚೆಲ್ಲಿ ಬಿಡುತ್ತಾಳೆ. ಸಂಧ್ಯಾ ತಾನೇ ಕ್ಲೀನ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದರೂ ಕೇಳದ ದೀಪಿಕಾ ತಾನೇ ಕ್ಲೀನ್ ಮಾಡಿದ್ದಾಳೆ. ದಿಂಬನ್ನು ತೆಗೆದುಕೊಂಡು ಎಲ್ಲರಿಗೂ ತೋರಿಸಿದ್ದಾಳೆ.

ಅವಮಾನಕ್ಕೊಳಗಾದ ತುಳಸಿ
ಎಲ್ಲರಿಗೂ ಒಂದು ಕ್ಷಣ ಶಾಕ್ ಆಗಿ ಬಿಡುತ್ತದೆ. ಗರ್ಭಿಣಿಯೇ ಅಲ್ಲದಿದ್ದರೂ ಸೀಮಂತ ಮಾಡಿಸಿಕೊಳ್ಳಲು ಯಾಕಿಷ್ಟು ಹಠ ಮಾಡಿದ್ದು ಎಂದು ಪ್ರಶ್ನಿಸುತ್ತಾರೆ. ಅಲ್ಲದೇ, ಪೂರ್ಣಿಮಾಳಿಗೆ ಚುಚ್ಚಿ ಮಾತನಾಡಿದ್ದೇಕೆ ಎಂದೆಲ್ಲಾ ಕೇಳುತ್ತಾರೆ. ಸಂಧ್ಯಾ ಅಂತೂ ಏನೂ ಆಗಿಯೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾಳೆ. ಅರ್ಧಕ್ಕೆ ನಿಲ್ಲಿಸುವುದ್ಯಾಕೆ ಕಾರ್ಯಕ್ರಮವನ್ನು ಮುಂದುವರೆಸಿ. ನನ್ನ ಬರ್ತಡೇ ಅಂದುಕೊಂಡು ಮುಂದುವರೆಸೋಣ ಎನ್ನುತ್ತಾಳೆ. ಈ ಮಾತನ್ನು ಕೇಳಿದ ತುಳಸಿ ಹೊಡೆಯಲು ಹೋಗುತ್ತಾಳೆ. ಆಗ ದತ್ತ ತಾತ ಹಾಗೂ ಮಾಧವ ತಡೆಯುತ್ತಾರೆ. ದೀಪಿಕಾ ಬೇಕಂತಲೇ ಅಮ್ಮನಿಗಾದರೂ ಸತ್ಯ ಹೇಳಿರಬಾರದ ಎಂದು ಕೇಳುತ್ತಾಳೆ.
ನಿರ್ಲಕ್ಷ್ಯದಿಂದ ನಡೆದುಕೊಂಡ ಸಂಧ್ಯಾ
ಆಗ ಸಂಧ್ಯಾ ಅಯ್ಯೋ ಅಮ್ಮನಿಗೆ ಸತ್ಯ ಹೇಳಿದೀನಿ ಎಂದು ಹೇಳುತ್ತಾಳೆ. ಇದರಿಂದ ತುಳಸಿಗೆ ಅವಮಾನ ಆಗುತ್ತದೆ. ನನಗೆ ಹೇಳಿದ ಕೂಡಲೇ ನಾನು ಮಾವನಿಗೆ ಹೇಳಿದೆ. ಅಲ್ಲದೇ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದಳು ನನ್ನನ್ನು ಕ್ಷಮಿಸಿ ಎಂದು ಹೇಳುತ್ತಾಳೆ. ಎಲ್ಲರೂ ತುಳಸಿ ಹಾಗೂ ಸಂಧ್ಯಾ ಇಬ್ಬರಿಗೂ ಬೈಯುತ್ತಾರೆ. ತುಳಸಿಗೆ ತೀರಾ ಅವಮಾನವಾಗುತ್ತದೆ. ದತ್ತ ತಾತ ಇದರಲ್ಲಿ ತುಳಸಿಯ ತಪ್ಪೇನಿಲ್ಲ. ಅವಳನ್ನು ಏನೂ ಹೇಳಬೇಡಿ ಎಂದು ಹೇಳುತ್ತಾರೆ. ಅಭಿ ಇನ್ಯಾವತ್ತೂ ಸಂಧ್ಯಾ ನಮ್ಮ ಮನೆಗೆ ಬರಬಾರದು ಎಂದು ಕಂಡೀಷನ್ ಹಾಕುತ್ತಾರೆ. ದತ್ತ ತಾತ ಸಂಧ್ಯಾಳನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಬಳಿಕ ತುಳಸಿ ಎಲ್ಲರ ಬಳಿ ಕ್ಷಮೆ ಕೇಳುತ್ತಾಳೆ.

ಕಪಾಳಕ್ಕೆ ಬಾರಿಸಿದ ದತ್ತ ತಾತ
ಮನೆಗೆ ಹೋದ ಬಳಿಕ ದತ್ತ ತಾತ ಸಂಧ್ಯಾಳನ್ನು ಬಯ್ಯುತ್ತಾರೆ. ಆದರೆ, ಸಂಧ್ಯಾ ಇದರಿಂದ ಯಾರಿಗೇನೂ ಆಗಿಲ್ಲ. ಆದರೆ, ನೀವೆಲ್ಲಾ ಸುಮ್ಮನೆ ದೊಡ್ಡದು ಮಾಡುತ್ತಿದ್ದೀರಾ ಎಂದು ನಿರ್ಲಕ್ಷ್ಯದಿಂದ ಮಾತನಾಡುತ್ತಾಳೆ. ತಾತನಿಗೆ ಕೋಪ ಬಂದು ಸಂಧ್ಯಾಳ ಕೆನ್ನೆಗೆ ಭಾರಿಸುತ್ತಾರೆ. ಇವಳನ್ನು ಮನೆಯಿಂದ ಆಚೆಗೆ ಹಾಕಿ ಇಲ್ಲದಿದ್ದರೆ, ನಾನೇ ಕೊಂದು ಬಿಡುತ್ತೇನೆ ಎಂದು ಹೇಳುತ್ತಾರೆ. ಸಮರ್ಥ್ ಕೂಡ ಸಂಧ್ಯಾಳನ್ನು ಮನೆಯಿಂದ ಹೊರಗೆ ಹೋಗಲು ಹೇಳುತ್ತಾನೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











