Srirastu Shubhamastu; ಜನಾರ್ಧನ್ ಮಾಡಿದ ತಪ್ಪಿನಿಂದ ತನ್ನ ಸಂಪೂರ್ಣ ಆಸ್ತಿಯನ್ನು ಕಳೆದುಕೊಳ್ಳುತ್ತಾನಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾಳಿಗೆ ದೀಪಿಕಾ ಮಾತು ಮಾತಿಗೂ ಚುಚ್ಚುತ್ತಿದ್ದು, ಅವಳಿಗೆ ಕಾಟ ಕೊಡುತ್ತಿರುವ ವಿಚಾರ ಅವರ ತಾಯಿಗೂ ಗೊತ್ತಾಗಿದೆ. ದೇವಸ್ಥಾನದಲ್ಲಿ ಪೂರ್ಣಿಮಾಳನ್ನು ಭೇಟಿಯಾಗುವ ದೀಪಿಕಾ ತಾಯಿ ಅವಳ ಸಂಕಟಕ್ಕೆಲ್ಲಾ ಉತ್ತರವಾಗುತ್ತಾಳೆ. ನನ್ನ ಮಗಳ ಬುದ್ಧಿ ಸರಿಯಿಲ್ಲ. ಮನೆಯನ್ನು ಒಡಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಿನ್ನ ಮೇಲಿದೆ. ಆದಷ್ಟು ನನ್ನ ಮಗಳ ಕಾಟವನ್ನು ಸಹಿಸಿಕೋ. ನಾನು ನಿನ್ನ ತಾಯಿಯಂತೆ ಎನ್ನುತ್ತಾಳೆ. ಪೂರ್ಣಿಮಾಳಿಗೆ ಇದೆಲ್ಲವೂ ಸಮಾಧಾನವನ್ನು ತಂದು ಕೊಡುತ್ತದೆ. ಮನೆಗೆ ಬಂದ ಪೂರ್ಣಿಮಾ, ದೀಪಿಕಾ ಏನೇ ವ್ಯಂಗ್ಯ ಮಾಡಿದರೂ ನಗು ನಗುತ್ತಲೇ ಉತ್ತರಿಸುತ್ತಾಳೆ. ಇದು ದೀಪಿಕಾಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ.

ಶಾರ್ವರಿ ಆಟದಿಂದ ಬೇಸತ್ತ ಮಹೇಶ

ಇತ್ತ ಶಾರ್ವರಿ ಮಹೇಶನಿಗೆ ಕಾಲ್ ಮಾಡುತ್ತಾಳೆ. ನನ್ನ ಬಗ್ಗೆ ಮನೆಯ ಕೆಲಸದವರ ಬಳಿ ಎಲ್ಲಾ ವಿಚಾರಿಸುತ್ತಿದ್ದೀರಾ. ಹಾಗೆಲ್ಲಾ ಮಾಡಲು ಹೋಗಬೇಡಿ. ನಿಮಗೆ ಇನ್ನಷ್ಟು ತೊಂದರೆ ಆಗುತ್ತದೆಯೇ ಹೊರತು. ನನ್ನ ಮೂಲಗಳು ನಿಮಗೆ ಗೊತ್ತಾಗುವುದಿಲ್ಲ. ಅದೆಲ್ಲವೂ ನನ್ನ ಟಾಪ್ ಸೀಕ್ರೆಟ್ ಗಳು. ದೆಹಲಿಯಲ್ಲಿ ನನ್ನ ಕೆಲಸ ಇನ್ನೂ ಮುಗಿದಿಲ್ಲ. ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬರುತ್ತೀನಿ. ಬರುವಾಗ ನಿಮಗೊಂದು ಸರ್ಪ್ರೈಸ್ ತರುತ್ತೀನಿ. ಅಲ್ಲಿಯವರೆಗೂ ನನ್ನ ಬಗ್ಗೆಯೇ ಯೋಚಿಸುತ್ತಾ ವಿಲ ವಿಲನೇ ಒದ್ದಾಡುತ್ತಾ ಇರಿ. ನಾನು ಬಂದ ಮೇಲೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳುತ್ತಾಳೆ. ಇದು ಮಹೇಶನಿಗೆ ಸಿಟ್ಟು ತರಿಸುತ್ತದೆ.

srirasthu shubhamasthu serial 08 May episode written update

ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿ ಜನಾರ್ಧನ್

ಮತ್ತೆ ಮನೆಯ ಕೆಲಸದವರನ್ನು ಕರೆಸಿ ಅವರ ಮೊಬೈಲ್ ಚೆಕ್ ಮಾಡುತ್ತಾನೆ. ಯಾರಾದರೂ ಶಾರ್ವರಿಗೆ ಫೋನ್ ಮಾಡಿದ್ದರಾ ಎಂದು ತಿಳಿದುಕೊಳ್ಳಲು ಯತ್ನಿಸುತ್ತಾನೆ. ಆದರೆ, ಯಾವ ಪ್ರಯೋಜನವೂ ಆಗುವುದಿಲ್ಲ. ಬಳಿಕ ಮಾಧವ ಬಂದು ಶಾರ್ವರಿ ಬರುವುದು ಇನ್ನೆರಡು ದಿನ ತಡವಾಗುತ್ತೆ ಎಂದು ಹೇಳುತ್ತಾನೆ. ಇತ್ತ ಜನಾರ್ಧನ್ ಮನೆಗೆ ಲಾಯರ್ ಬರುತ್ತಾರೆ. ಇನ್ನು ಮೂರು ತಿಂಗಳ ಬಳಿಕ ನೀವು ಈ ಮನೆ ಬಿಟ್ಟು ಬೀದಿಯಲ್ಲಿ ನಿಲ್ಲಬೇಕು. ನಿಮ್ಮ ಮೊದಲ ಮಗುವನ್ನು ಅನಾಥಾಶ್ರಮಕ್ಕೆ ಬಿಟ್ಟಿದ್ದಕ್ಕೆ ಈ ಪರಿಸ್ಥಿತಿ ಬಂದಿದೆ. ಅವಳನ್ನು ಹುಡುಕಿಕೊಂಡು ಬಾರದೇ ಹೋದರೆ ಈ ಆಸ್ತಿಯೆಲ್ಲಾ ಅನಾಥಶ್ರಮಕ್ಕೆ ಸೇರುತ್ತದೆ ಎಂದು ಹೇಳುತ್ತಾನೆ.

ಜನಾರ್ಧನ್ ಮಗಳೇ ಪೂರ್ಣಿಮಾ

ಜನಾರ್ಧನ್ ತನಗೆ ಹುಟ್ಟಿದ ಮೊದಲ ಮಗುವನ್ನು ಅನಿಷ್ಠ ಎಂದು ತಿಳಿದಿರುತ್ತಾನೆ. ಮಗು ಹುಟ್ಟಿದಾಗ ತನ್ನ ಬಿಸಿನೆಸ್ ನಲ್ಲಿ ಲಾಸ್ ಆಗಿರುತ್ತದೆ. ಹಾಗಾಗಿ ಆ ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಬರುತ್ತಾನೆ. ಆದರೆ, ಆ ಮಗುವಿನಿಂದ ಜನಾರ್ಧನ್ ಮಾವನ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ. ಹಾಗಾಗಿ ಆ ಮಗುವಿಗೆ 25 ವರ್ಷ ತುಂಬುವ ಮುನ್ನ ಸಿಗದೇ ಹೋದರೆ, ಆ ಆಸ್ತಿಯನ್ನೆಲ್ಲಾ ಅನಾಥಾಶ್ರಮಕ್ಕೆ ನೀಡುವುದಾಗಿ ವಿಲ್ ಬರೆದಿರುತ್ತಾರೆ. ಈಗ ಜನಾರ್ಧನ್ ಆ ಮಗುವನ್ನು ಹುಡುಕಬೇಕಿದೆ. ಪೂರ್ಣಿಮಾಳೇ ಜನಾರ್ಧನ್ ಮಗಳು ಎಂಬುದು ಯಾವಾಗ ಗೊತ್ತಾಗುತ್ತದೋ ಕಾದು ನೋಡಬೇಕಿದೆ.

srirasthu shubhamasthu serial 08 May episode written update

ಪೂರ್ಣಿಮಾ ಆಸೆಗೆ ನೆರವಾದ ಅವಿನಾಶ್

ಇನ್ನು ಪೂರ್ಣಿಮಾ ಇತ್ತೀಚೆಗೆ ತನ್ನನ್ನು ತಾನು ಬ್ಯುಸಿಯಾಗಿ ಇಟ್ಟುಕೊಳ್ಳಲು ಡ್ಯಾನ್ಸ್ ಮಾಡುತ್ತಿರುತ್ತಾಳೆ. ಇವತ್ತು ಅವಿನಾಶ್ ಪೂರ್ನಿಮಾ ಭರತನಾಟ್ಯ ಮಾಡುವುದನ್ನು ನೋಡಿ ಖುಷಿ ಪಡುತ್ತಾನೆ. ನಿನಗೆ ಡ್ಯಾನ್ಸ್ ಬರುವುದು ನನಗೆ ಗೊತ್ತೇ ಇರಲಿಲ್ಲ ಎಂದಿದ್ದಕ್ಕೆ ಪೂರ್ಣಿಮಾ ತನಗೆ ಡ್ಯಾನ್ಸರ್ ಆಗುವ ಆಸೆ ಇತ್ತು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಅವಿ ಈಗಲೂ ಆಗು ನಾನು ನಿನಗೆ ಸಪೋರ್ಟ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಪೂರ್ಣಿಮಾಳಿಗೂ ಖುಷಿಯಾಗಿದೆ.

More from Filmibeat

English summary
Janardhan stucked in trouble and searching for child
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X