Don't Miss!
- News
ಆವಲಗುರ್ಕಿ: ಆದಿಯೋಗಿ ಮೂರ್ತಿ ನೋಡಲು ಬರುವ ಭಕ್ತರಿಂದ ಸುಂಕ ವಸೂಲಿ ಆರೋಪ, ಭುಗಿಲೆದ್ದ ಆಕ್ರೋಶ
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾಧವ್ ಮೆಚ್ಚಿಸಲು ನಂದಿನಿ ಮಾಡಿದ್ದ ಪುಳಿಯೊಗರೆ ಪ್ಲಾನ್ ಉಲ್ಟಾ ಆಗುತ್ತಾ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ಪ್ರತಿಯೊಂದು ವಿಚಾರಕ್ಕೂ ಏನಾದರೂ ಒಂದು ಕೊಂಕು ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅಲ್ಲದೇ, ಅವರು ಜೋಕ್ ಕೂಡ ಕ್ರ್ಯಾಕ್ ಮಾಡುತ್ತಿರುತ್ತಾರೆ.
ಮನೆಗೆ ಸೊಸೆಯಾಗಿ ಬಂದ ಸಿರಿ, ಅವರ ಅತ್ತೆಯ ಗುಣಗಳನ್ನು ಒಂದೊಂದಾಗಿ ಅರ್ಥ ಮಾಡಿಕೊಂಡು ಬದಲಾಯಿಸಲು ಪ್ರಯತ್ನಿಸುತ್ತಿದ್ದಾಳೆ. ಮನೆಯ ಹಾಲ್ ನಲ್ಲಿ ಮಲಗಿದ್ದ ಅವರ ಅತ್ತೆಯನ್ನು ರೂಮಿಗೆ ಕಳಿಸಿದ್ದಾಳೆ.
ರಾತ್ರಿ ವೇಳೆಯಲ್ಲಿ ದತ್ತ ತಾತ ಪದೇ ಪದೇ ಎಚ್ಚರಿಸುತ್ತಿದ್ದಾನೆ. ಕೆಮ್ಮು, ಮಂಡಿ ನೋವು ಎಂದು ತುಳಸಿಯನ್ನು ಕರೆಯುತ್ತಿದ್ದಾನೆ. ಆದರೆ ಸಿರಿ ತಾತನ ಸೇವೆ ಮಾಡಿದ್ದಾಳೆ. ಇದನ್ನು ನೋಡಿ ದತ್ತ ತಾತ ಸಿರಿ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದತ್ತ ತಾತನ ಸುಪ್ರಭಾತ
ಸಿರಿ ಅವರ ತಂದೆ ಮನೆಗೆ ಊಟಕ್ಕೆ ಬನ್ನಿ ಎಂದು ಎಲ್ಲರನ್ನೂ ಕರೆದಿದ್ದಾರೆ. ಹಾಗಾಗಿ ಸಿರಿ ಬೆಳಗ್ಗೆ ಬೇಗ ಎದ್ದು ರೆಡಿಯಾಗಿದ್ದಾಳೆ. ಆದರೆ ಸಮರ್ಥ್ ಇನ್ನೂ ಎದ್ದಿಲ್ಲ. ದತ್ತ ತಾತ ಪೂಜೆಗೆ ಅಣಿ ಮಾಡಿಕೊಂಡಿದ್ದು, ಸಮರ್ಥ್ ಇನ್ನೂ ಎದ್ದಿಲ್ಲ ಎಂದು ಬೈಗುಳ ಶುರು ಮಾಡಿದ್ದಾರೆ. ಸೂರ್ಯ ನೆತ್ತಿ ಮೇಲೆ ಬರುವವರೆಗೂ ಅವನು ಎದ್ದೇಳೋದಿಲ್ಲ. ದೇವರ ಪೂಜೆ ಮಾಡಬೇಕು ಎಂಬುದೆಲ್ಲಾ ಅವನಿಗಿಲ್ಲ ಎಂದು ಬೈಯ್ಯಲು ಶುರು ಮಾಡುತ್ತಾರೆ. ಸಿರಿ ಸಮರ್ಥ್ ಅನ್ನು ಎಚ್ಚರ ಮಾಡಿದರೂ ಏಳುವುದಿಲ್ಲ. ಆಗ ತಣ್ಣೀರನ್ನು ತಂದು ಮುಖಕ್ಕೆ ಹಾಕುತ್ತಾಳೆ. ಆಗ ಸಮರ್ಥ್ ಎದ್ದು ರೆಡಿಯಾಗುತ್ತಾನೆ.

ನಂದಿನಿ ಪುಳಿಯೊಗರೆ ಮಾಡುತ್ತಾಳಾ..?
ಮಾಧವ್ ತನ್ನ ಪ್ರೋಗ್ರಾಮಿಗೆ ಪ್ರೇಕ್ಷಕರ ಮನೆಗೆ ಹೋಗಿ ತಿಂಡಿ ಮಾಡುವುದನ್ನು ಶೂಟ್ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ, ಯಾರು ನೆನಪಿಗೆ ಬರುವುದಿಲ್ಲ. ಆಗ ಪುಳಿಯೋಗರೆ ತಿಂದ ನೆನಪಾಗಿ ನಂದಿನಿಗೆ ಫೋನ್ ಮಾಡುತ್ತಾನೆ. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ನಂದಿನಿ, ಬನ್ನಿ ಎಂದು ಹೇಳುತ್ತಾಳೆ. ಬಳಿಕ ತುಳಸಿ ಬಳಿ ಹೋಗಿ ತನ್ನ ಮನೆಗೆ ಸ್ನೇಹಿತರು ಬರುತ್ತಿದ್ದು ಅವರಿಗೆ ತುಳಸಿಯೇ ಪುಳಿಯೊಗರೆ ಮಾಡಿಕೊಡಬೇಕು ಎಂದು ಎಮೋಷನಲ್ ಆಗಿ ಕೇಳುತ್ತಾಳೆ. ತುಳಸಿಗೆ ಟೈಂ ಇಲ್ಲ ಎಂದರೂ ಕೂಡ ಪುಳಿಯೋಗರೆ ಮಾಡುತ್ತಾಳೆ. ಇದರ ರುಚಿ ನೋಡಿದ ಸಿರಿ, ಪುಳಿಯೋಗರೆಯನ್ನು ಎಂಜಾಯ್ ಮಾಡುತ್ತಾಳೆ.

ಮಾಧವನಿಗೆ ಸತ್ಯ ಗೊತ್ತಾಯ್ತಾ?
ತುಳಸಿ ಬಳಿ ಪುಳಿಯೊಗರೆ ಮಾಡಿಸಿ, ಕ್ಯಾಮರಾ ಮುಂದೆ ತಾನೇ ಪುಳಿಯೋಗರೆಯನ್ನು ಮಾಡಿದಂತೆ ತೋರಿಸುವಂತೆ ನಂದಿನಿ ಪ್ಲಾನ್ ಮಾಡಿಕೊಂಡಿರುತ್ತಾಳೆ. ಅಂಗೈ ಮೇಲೆ ಪುಳಿಯೋಗರೆ ಮಾಡುವುದು ಹೇಗೆ ಎಂದು ಬರೆದುಕೊಂಡಿರುತ್ತಾಳೆ. ಮಾಧವ್ ಮನೆಗೆ ಬಂದ ಮೇಲೆ ಪುಳಿಯೋಗರೆಯನ್ನು ಮಾಡುತ್ತಾಳೆ. ಆದರೆ, ಮಾಧವ್ ಇದು ನಾನು ಆವತ್ತು ಟೇಸ್ಟ್ ಮಾಡಿದ ರೀತಿ ಇಲ್ಲ ಎನ್ನುತ್ತಾನೆ. ಆಗ ನಂದಿನಿ ಅದಕ್ಕೊಂದು ಸೀಕ್ರೇಟ್ ಇಂಗ್ರೀಡಿಯನ್ಸ್ ಅನ್ನು ಆಡ್ ಮಾಡಬೇಕು. ಸೋ ನೀವು ಹೊರಗಿರಿ ಎಂದು ಕಳಿಸುತ್ತಾಳೆ. ತುಳಸಿ ಹಿಂದಿನ ಬಾಗಿಲಿನಿಂದ ಬಂದು ಪುಳಿಯೊಗರೆ ಕೊಡುವುದನ್ನು ಮಾಧವ್ ಅವರು ನೋಡಿ ಬಿಡುತ್ತಾರೆ.

ಪುಳಿಯೊಗರೆ ಗುಟ್ಟು ರಟ್ಟಾಗುತ್ತಾ?
ಇನ್ನು ತುಳಸಿ ಮನೆಯಲ್ಲಿ ಎಲ್ಲರೂ ಸಿರಿ ತಂದೆ ಮನೆಗೆ ಹೊರಟಿರುತ್ತಾರೆ. ತುಳಸಿ ಮನೆ ಬಾಗಿಲಿಗೆ ಬೀಗ ಹಾಕುತ್ತಿರುತ್ತಾಳೆ. ಈ ವೇಳೆಗೆ ಮಾಧವ್ ಕೂಡ ನಂದಿನಿ ಮನೆಯಿಂದ ಹೊರಡುತ್ತಾರೆ. ನಂದಿನಿ ಭಯ ಪಡುತ್ತಾಳೆ. ತುಳಸಿ ಈ ಕಡೆ ನೋಡದಿದ್ದರೆ ಸಾಕು ಎಂದು ಅಂದುಕೊಳ್ಳುತ್ತಾಳೆ. ಆದರೆ ಅಷ್ಟಕ್ಕೆ ಎಪಿಸೋಡ್ ಮುಗಿದಿದ್ದು, ಇಬ್ಬರೂ ಒಬ್ಬರನ್ನು ಒಬ್ಬರು ನೋಡಿದರೆ ನಂದಿನಿ ಪ್ಲಾನ್ ಉಲ್ಟಾ ಆಗುವುದಂತೂ ಪಕ್ಕಾ.