Srirasthu Shubhamasthu ; ಸಂಧ್ಯಾ ಮಾಡಿದ ಕೆಲಸ ಗೊತ್ತಾಗಿ ಮಂಕಾದ ದತ್ತ ತಾತ; ಗ್ರಹಚಾರ ಬಿಡಿಸಿದ ತುಳಸಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿಯನ್ನು ಸಂಜಯ್ ಒಪ್ಪಿಕೊಂಡಿದ್ದಾನೆ. ಇನ್ನೇನಿದ್ದರೂ ಮಾಧವನ ಮನೆಯಲ್ಲಿ ಮದುವೆಯ ಸಂಭ್ರಮ ಆರಂಭವಾಗಬೇಕಿದೆ ಅಷ್ಟೇ. ನಿಧಿ ಈಗ ಸಂಜಯ್ ಜೊತೆಗೆ ಬ್ಯುಸಿಯಾಗಿದ್ದಾಳೆ. ಮೆಸೇಜ್, ಫೋನ್ ಕಾಲ್ ನಲ್ಲೇ ಇರುತ್ತಾಳೆ. ಆದರೆ, ಈಗ ಸಂಝಯ್ ಡಿನ್ನರ್ ಗೆ ಕರೆದಿದ್ದು, ನಿಧಿ ಶಾರ್ವರಿ ಬಳಿ ಪರ್ಮಿಷನ್ ಕೇಳಿದ್ದಾಳೆ. ಶಾರ್ವರಿ ಸಮರ್ಥ್ ಜೊತೆಗೆ ಹೋಗುವುದಾದರೆ ಹೋಗಿ ಬಾ. ಇಲ್ಲದಿದ್ದರೆ ಬೇಡ. ಸಮರ್ಥ್ ಏನೇ ಮಾತನಾಡಿದರೂ ಕೂಡ ಅವನು ಮನೆಯವರ ಬಗ್ಗೆ ಕಾಳಜಿ ಇಟ್ಟಿರುತ್ತಾನೆ ಎಂದು ಒಪ್ಪಿಸುತ್ತಾಳೆ.

ದತ್ತ ತಾತನಿಗೆ ಸತ್ಯ ಗೊತ್ತಾಯ್ತು

ಇನ್ನು ದತ್ತ ತಾತನಿಗೆ ಕಳೆದ ಎರಡು ತಿಂಗಳಿನಿಂದ ಮಾಸಾಶನ ಬಂದಿರುವುದಿಲ್ಲ. ಹೀಗಾಗಿ ಈ ಬಗ್ಗೆ ವಿಚಾರಿಸಲು ದತ್ತ ತಾತ ಆಫೀಸಿಗೆ ಹೋಗಿದ್ದಾರೆ. ಅಲ್ಲಿ ಹೋದರೆ, ಆಫೀಸರ್, ಚೆಕ್ ಮಾಡಿದ್ದು, ನೀವು ಸತ್ತಿದ್ದೀರಾ ಎಂದು ಸರ್ಟಿಫಿಕೇಟ್ ಬಂದಿತ್ತು. ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೇವೆ ಅಷ್ಟೇ. ಹಾಗಾಗಿ ನಿಮಗೆ ಹಣ ಬಂದಿಲ್ಲ ಎನ್ನುತ್ತಾರೆ. ಆಗ ದತ್ತ ತಾತ ಕೋಪ ಮಾಡಿಕೊಂಡು ನಾನು ಬದುಕೇ ಇದ್ದೀನಿ. ಅದು ಹೇಗೆ ಸತ್ತಿದ್ದೀನಿ ಎಂದು ಹೇಳುತ್ತೀರಾ ಅಂತ ಕೇಳುತ್ತಾರೆ. ಆಗ ನಿಮ್ಮ ಮೊಮ್ಮಗಳೇ ಬಂದು ಡೆತ್ ಸರ್ಟಿಫಿಕೇಟ್ ಕೊಟ್ಟು ಹೋದಳು ಎಂದು ಹೇಳುತ್ತಾರೆ. ಆಗ ದತ್ತ ತಾತನಿಗೆ ಶಾಕ್ ಆಗುತ್ತದೆ.

srirasthu-shubhamasthu-serial-09-july-episode-written-update

ಸಂಧ್ಯಾ ಮಾಡಿದ ಮೋಸ ತಿಳಿದ ತುಳಸಿ

ಅದೇ ಶಾಕ್ ನಲ್ಲಿ ದತ್ತ ತಾತ ಮನೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಸುಸ್ತಾಗಿ ದಾರಿ ಮಧ್ಯೆ ಕುಳಿತಿದ್ದಾಗ ತುಳಸಿ ಗಮನಿಸುತ್ತಾಳೆ. ಏನಾಯ್ತು ಎಂದು ವಿಚಾರಿಸಿದ್ದಕ್ಕೆ ಸಂಧ್ಯಾ ಮಾಡಿದ ಕೆಲಸವನ್ನು ಹೇಳುತ್ತಾರೆ. ಆಗ ತುಳಸಿ ದತ್ತ ತಾತನನನ್ನು ತಮ್ಮ ಕಾರಿನಲ್ಲಿ ಮನೆಗೆ ಕರೆದುಕೊಂಡು ಬರುತ್ತಾಳೆ. ಸಂಧ್ಯಾಳಿಗೆ ಗ್ರಹಚಾರ ಬಿಡಿಸಲು ಮುಂದಾಗುತ್ತಾರೆ. ಏನೂ ತಿಳಿಯದ ಸಂಧ್ಯಾ ಇವತ್ತೇನೋ ತನ್ನ ತಾಯಿ ತನ್ನನ್ನು ನೆನಪಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡುತ್ತಾಳೆ.

ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿದ ತುಳಸಿ

ಆದರೆ, ಸಂಧ್ಯಾಳಿಗೆ ತುಳಸಿ ರಪ್ ಅಂತ ಕಪಾಳಕ್ಕೆ ಬಾರಿಸುತ್ತಾಳೆ. ದತ್ತ ತಾತ ಈ ಮನೆಯ ದೇವರು. ಈ ಮನೆ ಅವರಿರುವುದಕ್ಕೆ ದೇವಸ್ಥಾನವಾಗಿದೆ. ಅಂತಹ ಪುಣ್ಯಾತ್ಮನನ್ನು ಬದುಕಿರುವಾಗಲೇ ಸಾಯಿಸಿದ್ದೀಯಾ. ನನ್ನ ಹೊಟ್ಟೆಯಲ್ಲಿ ಹುಟ್ಟಿದವಳು ನೀನು ಯಾಕೆ ಇಂತಹ ಬುದ್ಧಿಯನ್ನು ಹೊಂದಿದ್ದೀಯಾ ಎಂದು ಬೈಯುತ್ತಾರೆ. ಮನೆಯವರಿಗೆಲ್ಲಾ ಸಂಧ್ಯಾ ಏನು ಮಾಡಿದ್ದಾಳೆ ಎಂಬುದು ಅರ್ಥವಾಗುವುದಿಲ್ಲ. ಆಗ ತುಳಸಿ ಸಂಧ್ಯಾ ದತ್ತ ತಾತನ ಡೆತ್ ಸರ್ಟಿಫಿಕೇಟ್ ಮಾಡಿಸಿರುವ ಬಗ್ಗೆ ಹೇಳುತ್ತಾಳೆ. ಎಲ್ಲರೂ ಸಂಧ್ಯಾ ಮೇಲೆ ಕೋಪ ಮಾಡಿಕೊಳ್ಳುತ್ತಾರೆ.

srirasthu-shubhamasthu-serial-09-july-episode-written-update

ಮನೆಯವರಿಗೆ ಸತ್ಯ ಹೇಳಿದ ಸಂಧ್ಯಾ

ಸಮರ್ಥ್ ಸಂಧ್ಯಾಳನ್ನು ಈ ಕೂಡಲೇ ಮನೆಯಿಂದ ಹೋಗುವಂತೆ ಹೇಳುತ್ತಾನೆ. ತಾತ ಇರುವುದಕ್ಕೆ ನಾವೆಲ್ಲರೂ ಅನ್ನ ತಿನ್ನುತ್ತಿದ್ದೇವೆ. ನಿನಗೆ ಈ ಮನೆಯಲ್ಲಿ ಆಶ್ರಯ ಸಿಕ್ಕಿದೆ ಎಂದು ಬೈಯುತ್ತಾರೆ. ಗಾಬರಿಯಾದ ಸಂಧ್ಯಾ ಅಳುತ್ತಾ ತುಳಸಿ ಮತ್ತು ದತ್ತ ತಾತನ ಕಾಲನ್ನು ಹಿಡಿದುಕೊಳ್ಳುತ್ತಾಳೆ. ಇನ್ಯಾವತ್ತೂ ಇಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳುತ್ತಾಳೆ. ಇದೊಂದು ಬಾರಿ ಕ್ಷಮಿಸಿ ಎಂದು ಕೇಳುತ್ತಾಳೆ. ಬಳಿಕ ಈ ಐಡಿಯಾ ಎಲ್ಲಾ ಕೊಟ್ಟಿದ್ದು ತನ್ನ ಜುಗ್ಗ ಜನಾರ್ಧನ್ ಮಾವ ಎಂದು ಹೇಳುತ್ತಾಳೆ. ಈ ಜುಗ್ಗನ ಕೆಲಸ ಇದು ಎಂಬುದು ಮನೆಯವರಿಗೆ ಗೊತ್ತಾಗಿದೆ. ಎಲ್ಲರೂ ಜನಾರ್ಧನ್ ಗೆ ಮನೆಯಿಂದ ಗೇಟ್ ಪಾಸ್ ಕೊಡುತ್ತಾರಾ ಇಲ್ಲ ಬೇರೆ ಯಾವ ರೀತಿಯಲ್ಲಿ ಶಿಕ್ಷೆ ನೀಡಬಹುದು ಎಂಬುದನ್ನು ಕಾದು ನೋಡಬೇಕಿದೆ.x

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X